ಸ್ಥಳೀಯ ಸುದ್ದಿಗಳು

ಈದ್ ಮಿಲಾದ್ ಮೆರವಣಿಗೆ : ವಾಹನಗಳ ಮಾರ್ಗ ಬದಲಾವಣೆ ಅಧಿಸೂಚನೆ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಅ.01 ರಂದು ಮೆರವಣಿಗೆಯು ನಗರದ ವಿವಿಧ ಭಾಗದಲ್ಲಿ ಸಾಗಲಿದ್ದು ಈ ಸಂದರ್ಭದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸಂಚಾರ ಸುಗಮಗೊಳಿಸುವ ಸಲುವಾಗಿ ಕೆಳಕಂಡ ಸ್ಥಳಗಳಲ್ಲಿ ವಾಹನ ಸಂಚಾರ ನಿಷೇಧ, ನಿಲುಗಡೆ ಮತ್ತು ವಾಹನಗಳ ಮಾರ್ಗ ಬದಲಾವಣೆ ಮಾಡಲು ತಾತ್ಕಾಲಿಕ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ಹೊರಡಿಸಿರುತ್ತಾರೆ.

ಮೆರವಣಿಗೆಯು ಶಿವಮೊಗ್ಗ ನಗರದ ಗಾಂಧಿ ಬಜಾರ್ ಜಾಮೀಯ ಮಸೀದಿಯಿಂದ ಪ್ರಾರಂಭಗೊಂಡು ಗಾಂಧಿ ಬಜಾರ್ 2ನೇ ಕ್ರಾಸ್ ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ ಮುಖಾಂತರ ಓಲ್ಡ್ ಬಾರ್ ಲೈನ್ ರಸ್ತೆ, ಪೆನ್ಷನ್ ಮೊಹಲ್ಲಾ, ಬಿ.ಹೆಚ್ ರಸ್ತೆ, ಮೀನಾಕ್ಷಿ ಭವನ್, ಟ್ಯಾಂಕ್ ಬಾಂಡ್ ರಸ್ತೆ, ಬಾಪೂಜಿ ನಗರ ಮುಖ್ಯ ರಸ್ತೆ, ಟ್ಯಾಂಕ್ ಮೊಹಲ್ಲಾ ಬಾಲ್‍ರಾಜ್ ಅರಸ್ ರಸ್ತೆ, ಮಹಾವೀರ ಸರ್ಕಲ್, ಗೋಪಿ ಸರ್ಕಲ್, ನೆಹರೂ ರಸ್ತೆ ಮುಖಾಂತರವಾಗಿ ಅಮೀರ್ ಅಹಮ್ಮದ್ ಸರ್ಕಲ್, ಬಿ.ಹೆಚ್ ರಸ್ತೆ, ಅಶೋಕ ಸರ್ಕಲ್, ಎನ್.ಟಿ ರಸ್ತೆ, ಗುರುದೇವ ರಸ್ತೆ ಕ್ಲಾರ್ಕ್ ಪೇಟೆ, ನೂರಾನಿ ಮಸೀದಿ, ಕೆ.ಆರ್.ಪುರಂ ರಸ್ತೆ ಮಾರ್ಗವಾಗಿ ಅಮೀರ್ ಅಹಮ್ಮದ್ ಸರ್ಕಲ್ ತಲುಪುತ್ತದೆ.

  • ಮೇಲ್ಕಂಡ ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತ-ಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಿದೆ.
  • ಲಷ್ಕರ್ ಮೊಹಲ್ಲಾ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡುವುದು.
  • ಭದ್ರಾವತಿ, ಬೆಂಗಳೂರು ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ, ಎಲ್ಲಾ ಬಸ್‍ಗಳು ಎಂ.ಆರ್.ಎಸ್, ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
  • ಚಿತ್ರದುರ್ಗ, ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್‍ಗಳು ಹೊಳೆಹೊನ್ನೂರು ಸರ್ಕಲ್, ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
  • ಹೊನ್ನಾಳಿ, ದಾವಣಗೆರೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಬಸ್‍ಗಳು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಶಂಕರಮಠ ಸರ್ಕಲ್, ವಿದ್ಯಾನಗರ, ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರವಾಗಿ ಹೋಗುವುದು.
  • ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಹರಿಹರ, ದಾವಣಗೆರೆಗೆ ಹೋಗುವ ಎಲ್ಲಾ ಬಸ್‍ಗಳು ಮತ್ತು ಭಾರೀ ಸರಕು ವಾಹನಗಳು ಬೈಪಾಸ್ ಮುಖಾಂತರವಾಗಿ ಎಂ.ಆರ್.ಎಸ್ ಸರ್ಕಲ್, ವಿದ್ಯಾನಗರ, ಶಂಕರಮಠ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ಹೋಗುವುದು.
  • ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆಯ ಮುಖಾಂತರ ಎಂಆರ್‍ಎಸ್ ಸರ್ಕಲ್ ಕಡೆಗೆ ಹೋಗುವುದು.
  • ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಆಂಬುಲೆನ್ಸ್ ಹಾಗೂ ಮೂಲಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರಪಡಿಸಿರುತ್ತದೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button