ರಾಜಕೀಯ ಸುದ್ದಿಗಳು

ಶೆಟ್ಟರ್ ಬಿಜೆಪಿ ಸೇರ್ಪಡೆ-ಇಂಟಲಿಜೆನ್ಸಿ ಫೇಲ್ಯೂರಾ-ವಿಜೇಂದ್ರ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಜ. 22 ರಂದು ಅಯೋಧ್ಯಯಲ್ಲಿ ರಾಮ ಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾನ ಪ್ರಾಣ ಪ್ರತಿಷ್ಣಟಾನ‌ ಕಾರ್ಯಕ್ರಮ ಜನರಲ್ಲಿ ಐಕ್ಯತಾ ಮನೋಭಾವನೆಯನ್ನ ಹೆಚ್ಚಿಸಿದೆ. ಆದರೆ ಕಾಂಗ್ರೆಸ್ ಮಾತ್ರ ಧ್ವಂಧ್ವ ನಿಲುವು ಮುಂದುವರೆದಿದೆ ಎಂದು ಬಿಜೆಒಇ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಅಯೋಧ್ಯಗೆ ತೆರಳಿದರೆ ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ತರುತ್ತದೆ ಎಂದು ಕಾಂಗ್ರೆಸ್ ಯೋಚಿಸಿತ್ತು. ಈ ರೀತಿಯ ಭಾವನೆಯಿಂದಲೇ ಅವರು ಅಧಿಕಾರ ಕಳೆದುಕೊಳ್ಳಲು ಕಾರಣವಾಗಿತ್ತು ಎಂದು ದೂರಿದರು.

ಪಂಚ ರಾಜ್ಯದಲ್ಲಿ ಬಿಜೆಪಿ ಮೂರು ರಾಜ್ಯವನನ್ನ‌ ಗೆದ್ದಿದೆ. ಸ್ವಾತಂತ್ರ್ಯ ಬಂದಾಗಿನಿಂದ ಭಾರತ ಎಂದರೆ ಭ್ರಷ್ಠಾಚಾರ ಎಂಬ ಮನೋಭಾವನೆಯಲ್ಲಿ ಜನ ಮುಳುಗಿದ್ದರು. ಭ್ರಮ‌ನಿರಸನ ಗೊಂಡಿದ್ದರು. ನರೇಂದ್ರ ಮೋದಿ ಪ್ರಧಾನಿ ಆದ ನಂತರ ಭ್ರಷ್ಠಾಚಾರದ ಸಣ್ಣ ಕುರುಹೂ ಸಹ ಸಿಗ್ತಾ ಇಲ್ಲ. ದೇಶವನ್ನ ಅಭಿವೃದ್ಧಿ ಮಾಡುತ್ತಿದ್ದಾರೆ.

ಮೋದಿ ನಾಯಕತ್ವವನ್ನ ಒಪ್ಪಿದ್ದಾರೆ. ಹಾಗಾಗಿ ಕೇಂದ್ರದಲ್ಲಿ ಮೋದಿ ಮತ್ತೊಮ್ಮೆ ಪ್ರಧಾನಿಆಗಲಿದ್ದಾರೆ. ರಾಜ್ಯದ ಕಾಂಗ್ರೆಸ್ ಗ್ಯಾರೆಂಟಿ ನಂಬಿಕೊಂಡು ಕುಳಿತಿದೆ. ಸಿಎಂ ಸಿದ್ದರಾಮಯ್ಯ ಬಡವರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ರೈತರ ಪಂಪ್ ಸೆಟ್ ಅಳವಡಿಕೆಗೆ ರೈತನೇ ಪೂರ್ಣ ಹಣ ಕಟ್ಟುವಂತೆ ಆಗಿದೆ. ಈ ಹಿಂದೆ ಬಿಜೆಪಿ ರೈತನ ಕೈ ಎಟಕುವಷ್ಟು ಹಣ ಭರಿಸಿಕೊಂಡು ವಿದ್ಯುತ್ ನೀಡಲಾಗುತ್ತಿತ್ತು. ಆದರೆ ಈಗ ರೈತನಿಗೆ ಹಣ ಭರಿಸಲು ಸಾಧ್ಯವಾಗದಂತೆ ಮಾಡಿದೆ. ಬರ ಪರಿಹಾರದಲ್ಲಿ ಪ್ರಧಾನಿ ಕಡೆ ಬೆರಳು ತೋರಿಸಲಾಗುತ್ತಿದೆ. ಹಾಗಾದರೆ ನೀವೇನು ಮಾಡ್ತೀರ ಎಂದು ವಿಜೇಂದ್ರ ಪ್ರಶ್ನಿಸಿದರು.

ರೈತರಿಗೆ ಬಿಜೆಪಿ ಸರ್ಕಾರ25 ಸಾವಿರ ರೂ ನೀಡಲಾಗುತ್ತಿತ್ತು. ರಾಜ್ಯದ ಆರ್ಥಿಕ‌ಸ್ಥಿತಿ ಡೋಲಾಯಮಾನವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದರು ಒಂದು ಅಭಿವೃದ್ಧಿ ಆಗಿಲ್ಲ. ಅನುಭವಿ ಸಿಎಂಗೆ ರಾಜ್ಯದ ಆರ್ಥಿಕ ಸ್ಥಿತಿ ಸರಿದೂಗಿಸಲು ಆಗುತ್ತಿಲ್ಲ. ಕೇವಲ ಅಲ್ಪಸಂಖ್ಯಾತರನ್ನ ತೃಪ್ತಿಪಡಿಸಲು ಸಾಗುವ ಸರ್ಕಾರವಾಗಿದೆ ದಲಿತ ಮತ್ತು ಅಭಿವೃದ್ಧಿ ವಿರುದ್ಧದ ಸರ್ಕಾರವಾಗಿದೆ ಎಂದರು‌.

ಶೆಟ್ಟರ್ ಆಯಿತು ಇನ್ನು ಯಾರು ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರ ನೀಡಿದ ವಿಜೇಂದ್ರ ಸವದಿ ಕಾಂಗ್ರೆಸ್ ನಲ್ಲಿದ್ದರು‌ ಮನಸ್ಸು ಬಿಜೆಪಿಯಲ್ಲಿದೆ. ನಾವು ಯಾರ ಬೆನ್ನು ಬಿದ್ದಿಲ್ಲ. ರಾಷ್ಟ್ರದ ಹಿತದೃಷ್ಠಿಯಿಂದ ಯಾರು ಬಂದರೂ ಸ್ವಾಗತ ಎಂದರು. ಚುನಾವಣೆ ನಂತರ ಕಾಂಗ್ರೆಸ್ ಬಿಜೆಪಿಯಿಂದ ಅನೇಕರು ಪಕ್ಷಕ್ಕೆ ಬರುತ್ತಾರೆ ಎಂದು ಹೇಳುತ್ತಿತ್ತು. ಆದರೆ ಈಗ ಇರೋರನ್ನ ಕಾಂಗ್ರೆಸ್ ಉಳಿಸಿಕೊಳ್ಳಲಿ ಎಂದು ಸವಾಲು ಎಸೆದರು.

ಶೆಟ್ಟರ್ ಮೇಲೆ ಒತ್ತಡದಿಂದ ಕರೆತರುತ್ತಿರುವುದಾಗಿ ಸಚಿವ ಮಧು ಬಂಗಾರಪ್ಪನವರ ಪ್ರತಿಕ್ರಿಯೆಗೆ ಉತ್ತರಿಸಿದ ವಿಜೇಂದ್ರ ಅವರ ಮಾತುಗಳಿಗೆ ಲೋಕಸಭಾ ಚುನಾವಣೆ ಉತ್ತರಿ ಸಿಗಲಿದೆ. ಅವರ ಎಲ್ಲಾ ನಡೆಯನ್ನ ಗಮನಿಸಲಾಗುತ್ತಿದೆ. ಅವರ ಪ್ರತಿಕ್ರಿಯೆಗೆ ಉತ್ತರಿಸೊಲ್ಲ ಎಂದ ವಿಜೇಂದ್ರ ಶೆಟ್ಟರ್ ಬಿಜೆಪಿ ಸೇರ್ಪಡೆಯ್ನ‌ಪರೋಕ್ಷವಾಗಿ ಗುಪ್ತಚರ ಇಲಾಖೆಯ ವೈಫಲ್ಯದ ಬಗ್ಗೆ ಬೆಟ್ಟು‌ಮಾಡಿದ್ದಾರೆ. ಕಾಂಗ್ರೆಸ್ ಭ್ರಮೆಯಲ್ಲಿತ್ತು. ಶೆಟ್ಟರ್ ಬಿಜೆಪಿ ಸೇರ್ಪಡೆಇಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದರೆ. ಈ ಬೆಳವಣಿಗೆ ಕಾಂಗ್ರೆಸ್ ಇಂಟಲಿಜೆನ್ಸಿ ಫೆಲ್ಯೂರ್ ಆಯಿತಾ ಎಂಬ ಶಾಕ್ ನಲ್ಲಿದೆ ಎಂದರು.‌

ಯಾವ ಭರವಸೆ ಅಥವಾ ಕಂಡೀಷನ್ ಇಲ್ಲದೆ ಶೆಟ್ಟರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಲೋಕಸಭಾ ಚುನಾವಣೆಗಾಗಿ ಪ್ರವಾಸ ಕೈಗೊಂಡಿದ್ದೇನೆ. ಮಾಜಿ ಸಚಿವ ಕುಮಾರ್ ಬಿಜೆಪಿಯಲ್ಲಿದ್ದಾರೆ. ಮನಸ್ಸಿಗೆ ಘಾಸಿಯಾಗಿದ್ದರಿಂದ ಅವರ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ-https://suddilive.in/archives/7745

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373