ರಾಷ್ಟ್ರೀಯ ಸುದ್ದಿಗಳು

ನಾಳೆಯಿಂದ ಭದ್ರ ಎಡದಂಡೆಗೆ ನೀರು ಬಿಡುಗಡೆ

ನಾಳೆಯಿಂದ ಎಡದಂಡೆ ನಾಲೆಗೆ ಭದ್ರ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.‌ ಮುದಿನ 70 ದಿನಗಳಿಗೆ ಮತ್ತು ಬಲದಂಡೆ ನಾಲೆಗಳಿಗೆ  53 ದಿನಗಳಿಗೆ ಆನ್ ಅಂಡ್ ಆಫ್ ವ್ಯವಸ್ಥೆಯಲ್ಲಿ ಹರಿಸಲಾಗುತ್ತಿದೆ

ಸುದ್ದಿಲೈವ್/ಶಿವಮೊಗ್ಗ

ಭದ್ರ ಅಚ್ಚುಕಟ್ಟು ಪ್ರಾಧಿಕಾರದಲ್ಲಿ ಜ.6 ರಂದು ನಡೆದ ಸಭೆಯ ನಿರ್ಣಯದಂತೆ ನಾಳೆಯಿಂದ ಜಲಾಶಯ ಎಡ ನಾಲೆಗೆ ನೀರು ಹರಿಸಲಾಗುತ್ತಿದೆ. ಆನ್ ಅಂಡ್ ಆಫ್ ಮಾದರಿಯಲ್ಲಿ ಎರಡು ನಾಲೆಗೆ ನೀರು ಹರಿಸಲು ತೀರ್ಮಾನಿಸಿದಂತೆ ಕ್ರಮ ಜರುಗಿಸಲಾಗುತ್ತಿದೆ.

ಎಡದಂಡೆ ನಾಲೆಗೆ 70 ದಿನಗಳಿಗೆ ನೀರು ಹರಿಸಿದರೆ ಬಲದಂಡೆ ನಾಲೆಗಳಿಗೆ 53 ದಿನಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ಈ ತೀರ್ಮಾನದಲ್ಲಿ ಕೆಲ ಸೂಚನೆಗಳನ್ನೂ ನೀಡಲಾಗಿದೆ.

ಬೆಳೆದು ನಿಂತಿರವ ಬೆಳೆಗಳಿಗೆ ಮತ್ತು ಜಾನುವಾರುಗಳಿಗೆ ಈ ನೀರನ್ನ ಬಳಸಬೇಕಿದೆ. ನೀರಿನ ಕೊರತೆಯಿಂದ ಬೆಳೆ ನಷ್ಟವುಂಟಾದರೆ ಇಲಾಖೆ ಜವಬ್ದಾರಿಯಲ್ಲ, ಭದ್ರಾ ಕಾಲುವೆಗಳಲ್ಲಿ ಹರಿದು ಬರುವ ನೀರನಲ್ಲಿ ಹಳ್ಳಿಗಳು ಕುಡಿಯುವ ನೀರನ್ನೂ ಹಿಡಿದಿಟ್ಟುಕೊಳ್ಳಲು ಸೂಚಿಸಲಾಗಿದೆ.

ಒಟ್ಟು 47 ದಿನಗಳು ಕಾಲುವೆಯಲ್ಲಿ ಹರಿಸಲು ನೀರಿದೆ.‌ ಈ ನೀರನ್ನ‌ ಎಡದಂಡೆಗೆ 70 ದಿನಗಳು ಮತ್ತು ಬಲದಂಡೆಗೆ 53 ದಿನಗಳು ನೀರು ಹರಿಸಲಾಗುವುದು. ಇದರ ಮಧ್ಯೆ ಮಳೆ ನಿರೀಕ್ಷೆಯ ಮಟ್ಟದಲ್ಲಿ ಆಗದಿದ್ದಲ್ಲಿ ಕೊನೆಯ ಸರಿದಿಯಲ್ಲಿರುವ ಗ್ರಾಮಗಳಿಗೆ ಕುಡಿಯುವ ನೀರು ಹೊರತು ಪಡಿಸಿ ನೀರಾವರಿಗಾಗಿ ಲಭ್ಯವಿರುವ ನೀರನ್ನ ಬರುವಷ್ಟು ದಿನಗಳಿಗೆ ಮಾತ್ರ ಹರಿಸಲಾಗುವುದು.

ಅದರಂತೆ ಬಲದಂಡೆ ನಾಲೆಗೆ ಜ.15 ರಿಂದ 12, 13, 14 ದಿನಗಳಿಗೆ ಹರಿಸಲಾಗುವುದು.

ಇದನ್ನೂ ಓದಿ-https://suddilive.in/archives/6483

Related Articles

Leave a Reply

Your email address will not be published. Required fields are marked *

Back to top button