ಶೈಕ್ಷಣಿಕ ಸುದ್ದಿಗಳು

ಅ.23 ರಿಂದ ಮೊಟ್ಟೆಯ ರೀತಿಯಲ್ಲಿಯೇ ಮತ್ತೊಂದು ಪೋಷ್ಠಿಕ ವಸ್ತು ನೀಡಲು ಸರ್ಕಾರ ಸಜ್ಜು

ಸುದ್ದಿಲೈವ್/ಶಿವಮೊಗ್ಗ

ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಮಾಧ್ಯಮಗಳಿಗೆ ಮಾತನಾಡಿ, ಶಿರಾಳಕೊಪ್ಪ, ಸೊರಬ ಮತ್ತು ಸಾಗರವನ್ನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಡೆಸಲಾಗುತ್ತಿದೆ. ಕುಡಿಯುವ ನೀರಿದೆ. ಪ್ರಿಯಾಂಕ ಖರ್ಗೆ ಮತ್ತು ಬಿ.ಎಸ್. ಸುರೇಶ್ ಅವರ ಇಲಾಖೆ 351 ಹಳ್ಳಿಗಳಲ್ಲಿ ಕುಡಿಯುವ ನೀರು ಸೌಲಭ್ಯ ದೊರೆಯುತ್ತದೆ ಎಂದು ತಿಳಿಸಿದರು.

ನಿರಂತರ ವಿದ್ಯುತ್ ಸರಬರಾಜು

ಇಂಧನ ಸಚಿವ ಜಾರ್ಜ್ ಬರಬೇಕಿತ್ತು. ವಿದ್ಯುತ್ ಸರಬ ರಾಜು ಕುರಿತಂತೆ ಸಭೆ ನಡೆಯಬೇಕಿತ್ತು. ಆದರೆ ಅಧಿಕಾರಿ ವರಘದವರೊಂದಿಗೆ ನಾನೆ ಚರ್ಚಿಸಿ ನಿರ್ದೇಶಿಸಿದ್ದೇನೆ. ಬರಗಾಲವಿರುವುದರಿಂದ ಐದು ಗಂಟೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ಅಡೆತಡೆಯಾಗದಿದ್ದ ಹಾಗೆ ಐದು ಗಂಟೆ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದರು.

ದೊಡ್ಡಮಟ್ಟದ ತನಿಖೆಗೆ ಸೂಚನೆ

ಸ್ಮಾರ್ಟ್ ಸಿಟಿ ಕಾಮಗಾರಿ ಯೋಜನೆಯ ಸಮಸ್ಯೆ ದೊಡ್ಡಮಟ್ಟದಲ್ಲಿ ಕಂಡು ಬಂದಿದೆ. ಈ ಬಗ್ಗೆ ಮೀಟಿಂಗ್ ನಡೆಸಲಾಗಿತ್ತು. ಸಭೆಯಲ್ಲಿ 1500 ಕ್ಕೂ ಹೆಚ್ಚು ಸಮಸ್ಯೆ ಕಂಡು ಬಂದಿದೆ. ಅಂದರೆ ಸಮಸ್ಯೆ ಬಹಳ ದೊಡ್ಡಮಟ್ಟಕ್ಕೆ ಕಂಡುಬಂದಿದೆ. ಇದನ್ನ ದೊಡ್ಡಮಟ್ಟಕ್ಕೆ ತನಿಖೆಯಾಗಿಸುವುದಾಗಿ ಸಚಿವರು ತಿಳಿಸಿದರು.

ಯಾರು ತಪ್ಪಿತಸ್ಥಿರಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಕಾಮಗಾರಿ ಮುಗಿದಿದೆ ಎಂದು ಗುತ್ತಿಗೆದಾರರು ಅರ್ದಂಬರ್ಧ ಮುಗಿಸಿ ಹೋಗಿದ್ದಾರೆ. ಅವರನ್ನ ವಾಪಾಸ್ ಕರೆಯಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಸಾವಿರ ಸಾವಿರ ಶಿಕ್ಷಕರ ನೇಮಕಾತಿ

ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರು ಸೌತ್ ಹೊರತು ಪಡಿಸಿ ಮತ್ತೆ 9 ಸಾವಿರ ಜನ ಶಿಕ್ಷಕರನ್ನ‌ ನೇಮಕಾತಿ ಮಾಡಿಕೊಳ್ಳಲು ಗ್ರೀನ್ ಸಿಗ್ನಲ್ ಬಂದಿದೆ. ಇನ್ನೂ 4 ಸಾವಿರ ಜನ ಶಿಕ್ಷಕರನ್ನ ನೇಮಕಾತಿ ಮಾಡಲಾಗುತ್ತಿದೆ. ಅ.30 ಕ್ಕೆ ಈ ಕೇಸು ನಡೆಯಲಿದ್ದು ಕೋರ್ಟ್ ತೀರ್ಮಾನ ಕೈಗೊಳ್ಳುವ ಭರವಸೆ ಇದೆ ಎಂದರು.

ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಮುಂದಿನ ವರ್ಷ 10 ಸಾವಿರ  ಪ್ಲಸ್ 5 ಸಾವಿರ ಶಿಕ್ಷಕರನ್ನ ನೇಮಿಸಿಕೊಳ್ಳಲಾಗುತ್ತಿದೆ. ಕ್ವಾಲಿಟಿ ಕ್ವಾಂಟಿಟಿ ಮತ್ತು ಅಕ್ಸೆಸೆಬಿಲಿಟಿ ಕಾಪಾಡಿಕೊಂಡು ಶಿಕ್ಷಣ ನೀಡಲಾಗುತ್ತಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಬೇಕು. ಶಿಕ್ಷಕರಿಗೆ ತರಬೇತಿ ನೀಡಲು ಅಜಿಜ್ ಪ್ರೇಮ್ ಜೀ ಮತ್ತು ಇತರೆಖಾಸಗಿ ಸಂಸ್ಥೆಯೊಂದಿಗೆ ತರಬೇತಿ ಕೊಡಿಸಿ ಶಾಲೆಯ ಗುಣಮಟ್ಟವನ್ನ ಮೇಲ್ದರ್ಜೆಗೆ ಕೊಂಡಯ್ಯಲು ಯೋಜನೆ ರೂಪಿಸಲಾಗಿದೆ ಎಂದರು.

ಪೋಷ್ಠಿಕ ವಸ್ತು ನೀಡಲಾಗುವುದು

ಅ.23 ರಿಂದ ಮತ್ತೆ ಮಕ್ಕಳಲ್ಲಿ ಬಿಸಿಯೂಟದಲ್ಲಿ  ಪೋಷ್ಠಿಕ ಅಂಶವಿರುವ ಬಗ್ಗೆ ಯೋಜಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ಇದನ್ನ ಪ್ರಯೋಗಿಸಲಾಗುತ್ತಿದೆ. ಮೊಟ್ಟೆಯನ್ನ ಹೇಗೆ ಕೊಟ್ಟಿದ್ದೀವಿಯೋ ಹಾಗೆ ಮತ್ತೊಂದು ಪೋಷ್ಠಿಕಾಂಶದ ವಸ್ತುವನ್ನ ಮಕ್ಕಳಿಗೆ ಕೊಡಲಾಗುವುದು ಎಂದು ಹೇಳಿದ ಸಚಿವರು ಆ ಪೋಷ್ಟಿಕಾಂಶ ಯಾವುದು ಎಂಬುದನ್ನ‌ ಬಹಿರಂಗ ಪಡಿಸಲಿಲ್ಲ.

ಹಾಗಾಗಿ ಇದು ವೆಜ್ ಅಥವಾ ನಾನ್ ವೆಜಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಪೋಷ್ಠಿಕಾಂಶವಾಗಿರುತ್ತದೆ. ವೆಜ್ ಅಥವಾ ನಾನ್ ವೆಜ್ ಅಂತ ಅಲ್ಲ. ಪೋಷ್ಠಿಕತೆಯ ವಸ್ತುವಾಗಿರುತ್ತದೆ. ಇಂತಹ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಪುಸ್ತಕದ ಸೈಜ್ ನ್ನೂ ಕಡಿಮೆ ಮಾಡುವ ಚಿಂತನೆಯಲ್ಲಿ ಸರ್ಕಾರ ಇದೆ.

ಸ್ವಚ್ಛತೆಗೂ ಗಮನ ಕೊಡಲಾಗಿದೆ

ನೋಟ್ ಬುಕ್ ಸಹ ಕಡಿಮೆ ಮಾಡಲಾಗುತ್ತದೆ. ಮುಂದಿನ ವರ್ಷ ಇವೆಲ್ಲವೂ ಜಾರಿಯಲ್ಲಿ ಬರುತ್ತದೆ ಎಂಬ ವಿಶ್ವಾಸದಿಂದ ಸಚಿವರು ಮಾತನಾಡಿದರು. ಮಕ್ಕಳನ್ನೇ ಶಾಲೆಯ ಶೌಚಾಲಯದ ಸ್ವಚ್ಚತೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಇದನ್ನ‌ನಿಲ್ಲಿಸಬೇಕಾಗಿದೆ. ಐವತ್ತು ಮಕ್ಕಳಿರುವ ಶಾಲೆಗೆ ವರ್ಷಕ್ಕೆ ಶೌಚಾಲಯದ ಸ್ವಚ್ಚತೆಗೆ 10 ಸಾವಿರ ರೂ ತೆಗೆದಿಸಲಾಗಿದೆ.

ಸಿದ್ದರಾಮಯ್ಯನವರ ಸರ್ಕಾರ 20 ಸಾವಿರಕ್ಕೆ ಏರಿಸಲಾಗಿದೆ. ಈಗ ಮತ್ತೆ ಅದನ್ನೇ ಹೆಚ್ಚಿಸಲಾಗುವುದು. ಹೆಚ್ಚಿಸಿ ಹೊರಗುತ್ತಿಗೆ ಆಧಾರದ ಮೇರೆಗೆ ಕ್ಲೀನಿಂಗ್ ಮಾಡಿಸುವ ಚಿಂತನೆಯೂ ಸಹ ಸರ್ಕಾರದಲ್ಲಿದೆ. ಇದನ್ನ ಹಂತ ಹಂತವಾಗಿ ಕೆಲಸ ಮಾಡಲಾಗುವುದು ಸಮಯ ಬೇಕಿದೆ ಎಂದರು.

ಇದನ್ನೂ ಓದಿ-https://suddilive.in/archives/1918

Related Articles

Leave a Reply

Your email address will not be published. Required fields are marked *

Back to top button