ರಾಜಕೀಯ ಸುದ್ದಿಗಳು

ಜನವರಿಯಲ್ಲಿ ವಿದ್ಯಾನಗರ ರೈಲ್ವೆ ಓವರ್ ಬ್ರಿಡ್ಡ್ ಉದ್ಘಾಟನೆ-ಬಿವೈಆರ್

ಸುದ್ದಿಲೈವ್/ಶಿವಮೊಗ್ಗ

ಸೋಮವಾರದ ನಂತರ ಕೇಂದ್ರ ಸಚಿವ ಗಡ್ಕರಿ‌ ಅವರನ್ನು ಭೇಟಿ ಮಾಡಲಿದ್ದು, ಶಿವಮೊಗ್ಗದ ವಿದ್ಯಾನಗರದ ಫ್ಲೈ ಓವರ್ ಉದ್ಘಾಟನೆಗೆ ಆಹ್ವಾನ ಮಾಡ್ತೇನೆ ಎಂದು ಸಂಸದ ರಾಘವೇಂದ್ರ ತಿಳಿಸಿದರು.

ಮಾಧ್ಯಮಗಳಿಗೆ ಮಾತನಾಡಿದ ಅವರು,  ಜನವರಿ‌‌ ಮೊದಲ ವಾರದಲ್ಲಿ ಕರೆದುಕೊಂಡು ಬರುತ್ತೇನೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ ಎಂದು ಹೇಳಿದರು. ಇದರಿಂದ ಲೋಕಸಭಾ ಚುನಾವಣೆಗೆ ಸಂಸದರು ಸಿದ್ಧತೆಗೆ ತಯಾರಿಯಾಗಿರುವುದು ಘೋಚರಿಸಿದೆ.

ಬರ ಪರಿಹಾರ ವಿಚಾರ

ಬರಗಾಲದ ಸಂದರ್ಭದಲ್ಲಿ ರೈತರ ಅಕೌಂಟ್ ಗೆ ಮುಖ್ಯಮಂತ್ರಿಗಳು ಒಂದೊಂದು ಸಾವಿರ ಕೊಡ್ತೀನಿ ಅಂದಿದ್ದಾರೆ. ಬಿಡಿಗಾಸಿನಿಂದ ರೈತರ ಸಂಕಷ್ಟ ಅಳಿಸಲು ಸಾಧ್ಯವಿಲ್ಲ. ಸಾಕಷ್ಟು ಸಮಸ್ಯೆಯಲ್ಲಿದ್ದಾರೆ.ರಾಜ್ಯ ಸರಕಾರದ ಪಾಲನ್ನು ಬೇಗ ಕೊಡಿ ಎಂದರು. ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಸ್ಪಷ್ಟವಾಗಿ ಉತ್ತರ ಕೊಟ್ಟು ಹಣ ಬಿಡುಗಡೆ ಮಾಡಿ ಎಂದರು.

ಇದನ್ನೂ ಓದಿ-https://suddilive.in/archives/4403

Related Articles

Leave a Reply

Your email address will not be published. Required fields are marked *

Back to top button