ರಾಜಕೀಯ ಸುದ್ದಿಗಳು

ಈಶ್ವರಪ್ಪ ಚದುರಂಗ ಆಟದ ಪಗಡೆ ಆಗ್ತಾ ಇದ್ದಾರೆ-ಪ್ರಸನ್ನ ಕುಮಾರ್, ಅವರ ಹುಡ್ಗನೇ ನಾನು-ಚೆನ್ನಬಸಪ್ಪ

ಸುದ್ದಿಲೈವ್/ಶಿವಮೊಗ್ಗ

ಲೋಕಸಭಾ ಚುನಾವಣೆ ಯಶಸ್ವಿಯಾಗಿಸಲು ಸಾಕಷ್ಟು ಸಂಗತಿಗಳು ಜೆಡಿಎಸ್ ಮತ್ತುಬಿಜೆಪಿ ಪಕ್ಷದಿಂದ ನಡೆದಿದೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಿಜೆಪಿಯ ಅಭ್ಯರ್ಥಿ ಗೆಲವು ನಿಶ್ಚಿತ ಎಂದು ಶಾಸಕ. ಚೆನ್ನಬಸಪ್ಪ ತಿಳಿಸಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ಧಾನಿ ದೇವೇಗೌಡರು, ನಾಜಿ ಸಿಎಂ ಕುನಾರ ಸ್ವಾಮಿ ಮತ್ತು ಜಿಲ್ಲೆಯ ಕಡಿದಾಳ್ ಗೋಪಾಲ್ ಮತ್ತು ಜೆಡಿಎಸ್ಉಪಾಧ್ಯಕ್ಷ ಪ್ರಸನ್ನ ಕುಮಾರ್ ಅವರ ಅಭಿಲಾಷೆಯಂತೆ ಎನ್ ಡಿಎ ಅಭ್ಯರ್ಥಿ ರಾಘವೇಂದರ ಸ್ಪರ್ಧಿಸಿದ್ವಿ ಎಂದರು.

1983 ರಲ್ಲಿ ಜನತಾದಳ ಮತ್ತು ಬಿಜೆಪಿ ಒಟ್ಟಿಗೆ ಸ್ಪರ್ಧಿಸಿ 18 ಸ್ಥಾನವನ್ನ ಮೈತ್ರಿ ಪಡೆದಿತ್ತು. ಸಮನ್ವಯ ಸಮಿತಿ ಗ್ರಾಮೀಣ ಭಾಗದಲ್ಲಿತ್ತು. ಈಗ ನಗರ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಎನ್ ಡಿ ಎ ಅಭ್ಯರ್ಥಿಯನ್ನ ಗೆಲ್ಲಿಸುವುದು ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ತುರ್ತು ಪರಿಸ್ಥಿತಿಯ ವೇಳೆ ಸ್ವಾತಂತ್ರ್ಯ ಹರಣವಾಗಬಾರದು ಎಂಬ ಕಾರಣಕ್ಕೆ ದೇಶ ಮೊದಲು ಎಂದು ಜನಸಂಘ ಹೊರ
ಹೊಮ್ಮಿತ್ತು. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಲಿದೆ. ಗೆಲವು ನಮ್ಮದು ನಿಶ್ಚಿತ ಎಂದರು.

1,10,000 ಭದ್ರಾವತಿ, 1,25000-150000 ಲಕ್ಷ ಮತಗಳು ಶಿವಮೊಗ್ಗದಿಂದ ಎನ್ ಡಿಎ ಅಭ್ಯರ್ಥಿಗೆ ಲಭಿಸಲಿದೆ. ಮೊದಲು ಸ್ಪಷ್ಟತೆ ಇರಲಿಲ್ಲ. ಈಗ ಜೆಡಿಎಸ್ ಜೊತೆ ಬಿಜೆಪಿ ಒಟ್ಟಿಗೆ ಹೊರಟಿದ್ದೇವೆ. ಎರಡೂ ಪಕ್ಷ ಒಟ್ಟಾಗಿರುವುದು ದೇಶಕ್ಕಾಗಿ. ಬಿರುಕು ಬಾರದಂತೆ ನಡೆಸಿಕೊಂಡು ಹೋಗುತ್ತೇವೆ ಎಂದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, ನಾಗರೀಕರ ಹಿತ ಕಾಪಾಡುವದೃಷ್ಠಿಯಿಂದ ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕೆಂದು. ಜೆಡಿಎಸ್ ವರಿಷ್ಠರ ತೀರ್ಮಾನದಂತೆ ಬೇಷರತ್ ಆಗಿ ಬಿಜೆಪಿಯ ಅಭ್ಯರ್ಥಿ ರಾಘವೇಂದ್ರರ ಗೆಲುವಿಗೆ ನಾವು ಕಾರಣೀಕರ್ತರಾಗುತ್ತೇವೆ ಎಂದರು.

ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಿಗೆ ಹೋಲಿಸಿದರೆ ಬಿಜೆಪಿ ಅಭ್ಯರ್ಥಿ ಶಿವಮೊಗ್ಗದಲ್ಲಿ ಅತಿಹೆಚ್ಚುಮತ ಗೆಲ್ಲಲಿದ್ದಾರೆ. ಬಿಜೆಪಿ ನತ್ತು ಜೆಡಿಎಸ್ ಪಕ್ಷದ ಮುಖಂಡರ ಸಭೆ ನಡೆದಿದೆ. ಮೈತ್ರಿ ಪಕ್ಷದ ಅಭ್ಯರ್ಥಿ ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ. ಚುನಾವಣೆ ವೇಳೆ ಗೊಂದಲ ಸಾಮಾನ್ಯ ಆದರೆ ಮೋದಿ ಪ್ರಧಾನಿ ಮಾಡುವ ನಿಟ್ಟಿನಲ್ಲಿ ಶಿವಮೊಗ್ಗದ ಅಭ್ಯರ್ಥಿ ಗೆಲ್ಲುತ್ತಾರೆ ಎಂದರು.

ಈಶ್ವರಪ್ಪನವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮತ ಪಡೆಯುತ್ತಾರೆ ಎನ್ನುತ್ತಿರುವ ಬಗ್ಗೆ ಮಾಧ್ಯನದ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈಶ್ವರಪ್ಪ ಹೇಳ್ತಿದ್ದಾರೆ. ಕಾರಗಯಕರ್ತರ ಆಧಾರಿತ ಪಕ್ಷವಾಗಿದೆ. ಜನರ ಅಭಿಮತ ಬಿಜೆಪಿ ಅಭ್ಯರ್ಥಿ ಎನ್ನುತ್ತಿದ್ದಾರೆ. ಏಕಾಏಕಿ ಪಕ್ಷ ಗೆದ್ದು ಬಂದ ಪಕ್ಷ ಅಲ್ಲ.  ಠೇವಣಿ ಕಳೆದುಕೊಂಡು ಗೆಲ್ಲುತ್ತಿದ್ದೇವ ಎಂದರು.

ಮಾಜಿ ಶಾಸಕ ಪ್ರಸನ್ನ ಕುಮಾರ್ ಮತ್ತು ದೀಪಕ್ ಸಿಂಗ್ ಅವರು ಮೂಲತ ಕಾಂಗ್ರೆಸ್ ನವರು ಅವರು ಕಾಂಗ್ರೆಸ್ ಗೆ ಬರ್ತಾರೆ ಅಥವಾಬೆಂಬಲಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಸನ್ನ ಕುಮಾರ್, ಕಾಂಗ್ರೆಸ್ ಗೆ ಹೋಗುವುದಾದರೆ ಬೂತ್ ಮಟ್ಟದ ಸಭೆ ನಡೆಸುತ್ತಿರಲಿಲ್ಲ. ಜೆಡಿಎಸ್ ನ್ನ ಬೇರು ಮಟ್ಟದಿಂದ ಗೆಲ್ತಿವಿ. ಈಶ್ವರಪ್ಪನವರ ಹೇಳಿಕೆಯಲ್ಲಿ ಸತ್ಯವಿಲ್ಲ ಎಂದರು.

ಈಶ್ವರಪ್ಪ ಪಗಡೆ ಆಗ್ತಾ ಇದ್ದಾರೆ

ಹಿರಿಯ ಈಶ್ವರಪ್ಪ ಚದುರಂಗ ಆಟದ ಪಗಡೆ ಆಗ್ತಾ ಇದ್ದಾರೆ ಎಂಬುದು ನನಗೆ ವೈಯುಕ್ತಿಕವಾಗಿ ಅನಿಸುತ್ತಿದೆ ಎಂದು ತಿಳಿಸಿದ ಪ್ರಸನ್ನ ಕುಮಾರ್ ಪಗಡೆಯನ್ನಾಗಿ ಮಾಡುವವರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುವೆ.

ಅವರಿಗೆ ಸ್ಪರ್ಧೆ ಬೇಡ ಎಂದು ಹೇಳಿದ್ದೆ

ಜೆಡಿಎಸ್  ಪಕ್ಷದ ಜಿಲ್ಲಾಧ್ಯಕ್ಷರಾದ ಕಡಿದಾಳ್ ಗೋಪಲ್ ಮಾತನಾಡಿ, ನನಗೆ ಈಶ್ವರಪ್ಲ ದೂರವಾಣಿ ಕರೆ ಮಾಡಿದ್ರು. ಅವರಿಗೆ ನಾನು ಸ್ಪರ್ಧೆ ಬೇಡ ಎಂದಿದ್ದೆ ಎಂದರು.

ಅವರ ಹುಡುಗನೆ ನಾನು

ಶಾಸಕ ಚೆನ್ನಬಸಪ್ಪ ಮಾತನಾಡಿ ಅವರ ಹುಡುಗನೆ ನಾನು, ಈಶ್ವರಪ್ಪನವರ ಜೊತೆ ಬೆಳೆದಿದ್ದೇನೆ. ಅವರನ್ನ ಕರೆತರುವ ಬಗ್ಗೆ ಪ್ರಯತ್ನ ನಡೆದಿದೆ. ಬಹಳ ಸಂತೋಷದಿಂದ ಅಲ್ಲಿ  ಇದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಪಕ್ಷಶುದ್ಧೀಕರಣದ ಬಗ್ಗೆ ಮಾತನಾಡಿದ್ದಾರೆ. ಅದರ ಬಗ್ಗೆ ಮುಂದಿನ ದಿನಗಳಲ್ಲಿ ಹೇಳುವೆ ಎಂದರು.

ಇದನ್ನೂ ಓದಿ-https://suddilive.in/archives/12325

Related Articles

Leave a Reply

Your email address will not be published. Required fields are marked *

Back to top button