ಕ್ರೈಂ ನ್ಯೂಸ್

ಪಾಲಿಕೆ ಆವರಣದಲ್ಲಿ ನೋಂದಣಿ ಆಗದ ಆಟೋ ಪತ್ತೆ-ವಶಕ್ಕೆ ಪಡೆದ ಎಂಸಿಸಿ

ಸುದ್ದಿಲೈವ್/ಶಿವಮೊಗ್ಗ

ಪಾಲಿಕೆಯ ಚುನಾವಣೆ ಶಾಖೆಯ ಆವರಣದಲ್ಲಿ ಆರ್ ಟಿಒ ನೋಂದಣಿಯಗದ ಆಟೋವೊಂದು ಪತ್ತಡಯಾಗಿದೆ. ಪತ್ತೆಯಾದ ಆಟೋದಲ್ಲಿ  ಚುನಾವಣೆಗೆ ಸಂಬಂಧಿಸಿದ ಪತ್ರಗಳು ಮತ್ತು ಹಲವಾರು ಕಡತವಗಳು ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ.

ಪಾಲಿಕೆಯ ಆವರಣದ ಚುನಾವಣೆ ಶಾಖೆಯ ಎದುರುಗಡೆ ಅನಧಿಕೃತವಾಗಿ ರಿಜಿಸ್ಟರ್ ಆಗದಿರುವ ಆಟೋವನ್ನು ನಿಲ್ಲಿಸಲಾಗಿತ್ತು.  ಇಂದು ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಪರಿವೀಕ್ಷಿಸಿದ ಸಂದರ್ಭದಲ್ಲಿ ಕುತೂಹಲಕಾರಿ ದಾಖಲಾತಿ ಮತ್ತು ಚುನಾವಣೆಗರ ಸಂಬಂಧ ದಖಲಾತಿ ಪತ್ತೆಯಾಗಿವೆ.‌

ವಿವಿಧ ವಿಚಾರವಾಗಿ ಹಲವಾರು ಕಡತಗಳು / ಪತ್ರಗಳು ದೊರೆತಿರುತ್ತವೆ. ಹಾಗೂ RTO ಅಧಿಕಾರಿಗಳನ್ನು ಸಂಪರ್ಕಿಸಿ ಚುನಾವಣಾ ನೀತಿ ಸಂಹಿತೆ ಅನುಸಾರ ಕ್ರಮಕೈಗೊಳ್ಳುವಂತೆ MCC Nodel Officer ರವರಿಗೆ ಹಸ್ತಾಂತರಿಸಲಾಗಿದೆ.

ಇಲ್ಲಿ ಕಂದಾಯ ಇಲಾಖೆಯಲ್ಲಿ ದಲ್ಲಾಳಿಗಳ‌ ಹಾವಳಿಗಳು ಇರುವುದರಿಂದ‌ ದಲ್ಲಾಳಿಗಳ‌ಇಗೆ ಈ ಆಟೋ ಸೇರಿರಬಹುದಾ ಎಂಬ ಅಂಶದ ಮೇಲೂ ತನಿಖೆಯಾಗಬೇಕಿದೆ.

ಇದನ್ನೂ ಓದಿ-https://suddilive.in/archives/11465

Related Articles

Leave a Reply

Your email address will not be published. Required fields are marked *

Back to top button