ರಾಗಿಗುಡ್ಡದ ಜನತೆ ಧನ್ಯೋಸ್ಮಿ…!

ಸುದ್ದಿಲೈವ್/ ಶಿವಮೊಗ್ಗ

ಅ.1 ರಂದು ರಾಗಿಗುಡ್ಡದಲ್ಲಿ 18 ಮನೆಗಳ ಮೇಲೆ ದಾಳಿ ನಡೆದಿದ್ದು, ಹಾನಿಗೊಳಗಾಗಿದ್ದವು. ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಲು ಮೂರು ಲಕ್ಷ ರೂ. ಬೇಕಿದ್ದು ಇದನ್ನ ಪಿಡಬ್ಲೂಡಿ ಇಂಜಿನಿಯರ್ ಅಙದಾಜು ವೆಚ್ಚ ಲೆಕ್ಕಹಾಕಿದ್ದರು. ಈ ಬಗ್ಗೆ ಪಾಲಿಕೆ ಸದಸ್ಯ ಧೀರಾಜ್ ಮಾತನಾಡಿ ಪಾಲಿಕೆ ಈ ಹಣ ಪಾವತಿಸಲಿ ಎಂದು ವಿಷಯ ಪ್ರಸ್ತಾಪಿಸಿದರು.
ಆದರೆ ಈ ವಿಷಯ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ರಾಜಕೀಯ ಬೆರೆತಿದೆ. ಪಾಲಿಕೆ ಬಿಜೆಪಿ ಸದಸ್ಯರು ಸರ್ಕಾರವೇ ಹಣ ನೀಡಿದರೆ, ಪಾಲಿಕೆ ಹಣ ನೀಡುವಂತೆ ಪ್ರಸ್ತಾಪಿಸಿದರೆ ಸರ್ಕಾರದ ಬಳಿ ಗ್ಯಾರೆಂಟಿ ಜಾರಿ ಹಿನ್ನಲೆಯಲ್ಲಿ ಹಣವಿಲ್ಲ ಎಂದು ವ್ಯಂಗ್ಯವಾಡಿದರು.
ಆದರೆ ಪಾಲಿಕೆನೇ ನೀಡಲಿ ಎಂದು ಹೆಚ್ ಸಿ ಯೋಗೀಶ್ ಮತ್ತು ನಾಗರಾಜ್ ಕಂಕಾರಿ ಆಗ್ರಹಿಸಿದರು. ಆದರೆ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಮಾತನಾಡಿ ಹಣ ನೀಡಲು ಪಾಲಿಕೆಗೆ ಅಧಿಕಾರವಿದೆ. ಆದರೆ ಸರ್ಕಾರದ ಅನುಮತಿ ಪಡೆದು ವ್ಯಯಮಾಡಬೇಕಿದೆ ಎಂದರು.
ಈ ವಿಷಯ ರಾಜಕೀಯವಾಗಿದೆ. ರಾಗಿಗುಡ್ಡದಲ್ಲಿ ಹಿಂದೂ ಮನೆಗಳ ಮೇಲೆ ಹೆಚ್ಚು ಹಾನಿಯಾಗಿದೆ ಅವರಿಗೆ ಆಧ್ಯತೆ ಮೇಲೆ ನೀಡಿ ಎಂದು ಶಾಸಕ ಚೆನ್ನಿ ಮಾತನಾಡಿದರು. ಆದರೆ ಕಾಂಗ್ರೆಸ್ ಸದಸ್ಯರಾದ ಯೋಗೀಶ್ ಮತ್ತು ನಾಗರಾಜ್ ಆಕ್ಷೇಪಿಸಿದರು. ಇದು ಸಭೆಯಲ್ಲಿ ಗೊಂದಲ ಉಂಟಾಗಿತ್ತು.
500 ರೂ. ನೋಟು ಹಿಡಿದ ಯೋಗೀಶ್ ಸರ್ಕಾರದ ಬಳಿ ಹಣವಿದೆ ಎಂದು ಸಭೆಗೆ ಪ್ರದರ್ಶಿಸಿದರು. ಪಾಲಿಕೆಯ ಕೊನೆಯ ಸಭೆ ಒಟ್ಟಿನಲ್ಲಿ ಫಿಶ್ ಮಾರ್ಕೆಟ್ ಆಗಿ ಪರಿಣಮಿಸಿತ್ತು. ಆದರೆ ಕಣ್ಣೀರಿಟ್ಟ ರಾಗಿಗುಡ್ಡದ ಜನತೆ ಪರಿಹಾರ ಪಡೆಯಲು ಸಹ ರಾಜಕಾರಣ ಎದಯರಿಸಬೇಕಾಗಿದ್ದು ಜನತೆ ದೌರ್ಭಾಗ್ಯವಾಗಿದೆ.
ಇದನ್ನೂ ಓದಿ-https://suddilive.in/archives/3360
