ಸ್ಥಳೀಯ ಸುದ್ದಿಗಳು

ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಗೆ ನಾಲ್ಕು ಪದಕ

ಸುದ್ದಿಲೈವ್/ಶಿವಮೊಗ್ಗ

ಅಕ್ಟೋಬರ್ 31ರಂದು ಬೆಳಗಾವಿಯ ಕ್ರೀಡಾ ವಸತಿ ನಿಲಯ ನೆಹರು ನಗರ ದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ 19 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟುಗಳಾದ ಪೃಥ್ವಿಲ್ ವಿಜ್ಞಾನ್ ಪಿ ಯು ಕಾಲೇಜ್ ಸಾಗರ 62-64 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಯೋಗಾನಂದ ರಾಷ್ಟ್ರೀಯ ಪದವಿಪೂರ್ವ ಕಾಲೇಜು 89-95 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದೆ.

ತುಷಾರ್ ಮಂದಾರ ಪದವಿ ಪೂರ್ವ ಕಾಲೇಜು -48 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಶಶಾಂಕ್ ಸೆಕ್ರೆಟ್ ಹಾರ್ಟ್ ಪದವಿ ಪೂರ್ವ ಕಾಲೇಜು -75 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದು ಶಿವಮೊಗ್ಗ ಜಿಲ್ಲೆಯಿಂದ ಪದವಿ ಪೂರ್ವ ಕಾಲೇಜುಗಳ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಇದೆ ಮೊದಲ ಬಾರಿಗೆ ಪದಕಗಳನ್ನು ಪಡೆದಿದ್ದು ವಿಶೇಷವಾಗಿದ್ದು ಈ ವರ್ಷ ಜಿಲ್ಲಾ ಮಟ್ಟದಲ್ಲಿ ಬಾಕ್ಸಿಂಗ್ ಆಯ್ಕೆ ಪ್ರಕ್ರಿಯೆಯನ್ನು ಶಿವಮೊಗ್ಗ ಪದವಿ ಪೂರ್ವ ಶಿಕ್ಷಣ ಇಲಾಖೆ ಮೊದಲ ಬಾರಿಗೆ ನಡೆಸಿದೆ.

ಜಿಲ್ಲೆಯ ಕ್ರೀಡಾಪಟುಗಳನ್ನು ರಾಜ್ಯಮಟ್ಟಕ್ಕೆ ಕಳುಹಿಸಿತ್ತು ಇದಕ್ಕೆ ಕಾರಣೀಕರ್ತರಾದ ಶ್ರೀ ಕೃಷ್ಣಪ್ಪ ಉಪ ನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ನಾಗೇಂದ್ರ ಪ್ರಸಾದ್ ಕ್ರೀಡಾ ಸಂಚಾಲಕರು ಪದವಿ ಪೂರ್ವ ಶಿಕ್ಷಣ ಇಲಾಖೆ ರವರಿಗೆ ಹಾಗೂ ವಿಜೇತ ಕ್ರೀಡಾಪಟುಗಳ ಕೋಚ್ ಶ್ರೇಯಸ್ ಹಾಗೂ ಹರ್ಷಿತ್ ರವರಿಗೆ ಶಿವಮೊಗ್ಗ ಜಿಲ್ಲಾ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಹೃತ್ಪೂರ್ವಕ ವಂದನೆಗಳು ಹಾಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ

ಇದನ್ನೂ ಓದಿ-https://suddilive.in/archives/2221

Related Articles

Leave a Reply

Your email address will not be published. Required fields are marked *

Back to top button