ಸ್ಥಳೀಯ ಸುದ್ದಿಗಳು

ಅಡ್ಡಗೋಡೆ ಮೇಲೆ ದೀಪ ಇಟ್ರಾ ಈಶ್ವರಪ್ಪ?

ಸುದ್ದಿಲೈವ್/ಶಿವಮೊಗ್ಗ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಡಿಸಿಎಂ ಈಶ್ವರಪ್ಪನವರು ಬಂಡಾಯ ಏಳಲಿದ್ದಾರೆ ಎಂಬ ಕೂಗು ಕೇಳಿ ಬಂದ ಹಿನ್ನಲೆಯಲ್ಲಿ ಇಂದು ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಈ ಸಂಬಂಧ ಹಿತೈಷಿಗಳ ಜೊತೆ ಶುಕ್ರವಾರ ಸಭೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯ ಹಲವು ತಪ್ಪುಗಳಿಂದ ಸೋತಿದ್ವಿ.  ಅದು ಸರಿಯಾಗಬೇಕು. ನಮ್ಮ ಪಕ್ಷದಲ್ಲಿ ನಾವೇ ಮಾಡಿಕೊಂಡ ತಪ್ಪುಗಳಿವೆ ಅದು ಸರಿಯಾಗಬೇಕು. ಪಾರ್ಟಿ ಸರಿಯಾಗಬೇಕು ಎಂದು ಹಿತೈಷಿಗಳು ತಿಳಿಸಿದ್ದಾರೆ. ಹಾಗಾಗಿ ಶುಕ್ರವಾರ ಬೆಂಬಲಿಗರೊಂದಿಗೆ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಬಂಜಾರ ಕನ್ವೆಷನ್ ನಲ್ಲಿ ಸಂಜೆ ಸಭೆ ನಡೆಸಲಿದ್ದೇವೆ. ಚಿಂತನೆ, ಚರ್ಚೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಆದರೆ ಯಾವುದೇ ಬಂಡಾಯದ ಬಗ್ಗೆ ಮಾತನಾಡದ ಈಶ್ವರಪ್ಪ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವುದರಲ್ಲಿ ವಿಫಲರಾಗಿದ್ದಾರೆ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಎಂದು ಯಡಿಯೂರಪ್ಪ ಮತ್ತು ಮಗ ರಾಘವೇಂದ್ರರ ಫೊಟೊ ಮತ್ತು ಈಶ್ವರಪ್ಪ ಹಾಗೂ ಕಾಂತೇಶ್ ರ ಫೋಟೊ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ ಎಂಬ ಪ್ರಶ್ನೆಗೂ ಈ ಬಗ್ಗೆಯೂ ಶುಕ್ರವಾರ ಹಿತೈಷಿಗಳ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದರು.

ಅದರಲ್ಲೂ ಬಂಡಾಯ ಏಳುವ ಬಗ್ಗೆ ಸ್ಪಷ್ಟತೆ ಇಲ್ಲದ ಈಶ್ವರಪ್ಪನವರು ಪಕ್ಷದ ಅಂಕುಡೊಂಕಿದೆ. ಈ ಹಿಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸೋತೊರುವ ಬಗ್ಗೆ ಹಿತೈಷಿಗಳು ಮಾತನಾಡುತ್ತಿದ್ದಾರೆ. ಅದರ ಸರಿಪಡಿಸಲು ಸಭೆಗೆ ನಡೆಸಲಾಗುವುದು ಎಂದಿದ್ದಾರೆ.

ಹಾವೇರಿಯಿಂದ ನಿಮಗೆ ಟಿಕೇಟ್ ಕೊಟ್ಟರೆ ಸ್ಪರ್ಧಿಸುತ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಈ ಹಿಂದೆ ಬಿಎಸ್ ವೈ ಕಾಂತೇಶ್ ಗೆ ಟಿಕೇಟ್ ಕೊಡಿಸುವುದಾಗಿ ಹೇಳಿದ್ದರು. ನಾವಾಗಿಯೇ ಹಾವೇರಿಗೆ ಹೋಗಿದ್ದಲ್ಲ ಎಂದಿರುವ ಈಶ್ವರಪ್ಪ, ವಿಧಾನಸಭೆ ಚುನಾವಣೆಯ ವೇಳೆ ರಾಜಕೀಯ ನಿವೃತ್ತಿ ಘೋಷಿಸಿದ್ದೀರಿ ಇವತ್ತು ಮತ್ತೆ ಸ್ಪರ್ಧಿಸುತ್ತೀರ ಎಂಬ ಪ್ರಶ್ನೆಗೂ ಸ್ಪಷ್ಟತೆ ನೀಡದ ಈಶ್ವರಪ್ಪ ಅಗತ್ಯೆ ಬಿದ್ದರೆ ಸ್ಪರ್ಧೆ ಎಂದು ಮಾತ್ರ ಹೇಳಿದ್ದಾರೆ.

ಇದರಿಂದ ಯಾವುದೇ ಸ್ಪಷ್ಟತೆ‌ಇಲ್ಲದ ಮಾಜಿ ಡಿಸಿಎಂ ನ ನಡೆ ಇನ್ನೂ ಕುತೂಹಲದಲ್ಲಿಯೇ ಮುಂದುವರೆದಿದೆ. ಚುನಾವಣೆಯ ದಿನಾಂಕವೂ ಘೋಷಣೆ ಯಾಗದಿದ್ದರೂ ಬಿಜೆಪಿಯಲ್ಲಿ ಕಲಿಗಳ ಗರಿ ಬಿಚ್ಚುವಿಕೆ ಜೋರಾಗಿದೆ. ಈಶ್ವರಪ್ಪನವರ ನಡೆ ಮತ್ತೆ ಶುಕ್ರವಾರದ ವರೆಗೆ ಕಾದು ನೋಡಬೇಕಿದೆ.

ಕೊಲ್ಲೂರಿನಲ್ಲಿ ಮಾಧ್ಯಮದಲ್ಲಿ ಎರಡನೇ ಮಗನ ಮದುವೆ ಎಂದು ಬರೆಯಲಾಗಿದೆ. ಅದು ತಪ್ಪು ನನ್ನ ಮೊಮ್ಮಗನಿಗೆ ಮದುವೆಯಾಗಬೇಕಿದೆ ಎಂದು ಸ್ಪಷ್ಟಪಡಿಸಿದರು. ಕೊಲ್ಲೂರಿನಲ್ಲಿ ಒಬ್ಬನಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ಬೇಕಿದೆ ಮತ್ತು ಎರಡನೇ ಮೊಮ್ಮಗ ಎಂದು ಉಲ್ಲೇಖವಾಗಬೇಕಿದ್ದ ಜಾಗದಲ್ಲಿ ಮಗ ಎಂದು ಬರೆದಿರುವುದು ಚರ್ಚೆಗೆ ಕಾರಣವಾಗಿತ್ತು. ಅದನ್ನ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಮೇಲೆ ಬೆರಳು ತೋರಿಸಿ ಜಾರಿಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/10607

Related Articles

Leave a Reply

Your email address will not be published. Required fields are marked *

Back to top button