ರಾಜಕೀಯ ಸುದ್ದಿಗಳು

ಬಿಜೆಪಿ ಎಷ್ಟು ಅಸಹಯಕ ಸ್ಥಿತಿಯಲ್ಲಿದೆ ಎಂದರೆ ಸದಾನಂದ ಗೌಡರ ಹೇಳಿಕೆಯೇ ಬೆಸ್ಟ್ ಉದಾಹರಣೆ-ಆಯನೂರು

ಸುದ್ದಿಲೈವ್/ಶಿವಮೊಗ್ಗ

ಬಿಜೆಪಿ ಎಷ್ಟೊಂದು ಅಸಹಾಯಕ ಸ್ಥಿತಿಯಲ್ಲಿದೆ ಎಂಬುದನ್ನು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರೇ ಸಂದರ್ಶನವೊಂದೇ ಮುಖ್ಯ ಉದಾಹರಣೆಯೆಂದು ನೂತನ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕರ ಜೊತೆ ನೇರವಾಗಿ ‌ಮಾತನಾಡುವ ವ್ಯವಸ್ಥೆ ಬಿಜೆಪಿಯಲ್ಲಿ ಇಲ್ಲ, ಶಕ್ತಿ ಇಲ್ಲ ಎಂದಿದ್ದಾರೆ. ಚುನಾವಣೆ ಆಗಿ ಐದು ತಿಂಗಳಾಯ್ತು, ವಿಪಕ್ಷ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಶಾಸಕರ ನಿಯಂತ್ರಿಸುವ ಗುಂಪು ನೇಮಕ ಮಾಡಲು ಸಾಧ್ಯವಾಗಿಲ್ಲ. ಚುನಾವಣೆಗು ಮೊದಲೇ ಪಕ್ಷ ಆಂತರಿಕ ಗುದ್ದಾಟದಲ್ಲಿ ಮುಳುಗಿತ್ತು. ಜನ ಪಾಠ‌ ಕಲಿಸಿದ ಮೇಲೂ ತಿದ್ದಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಕ್ಷ ಇಷ್ಟೊಂದು ಶಿಥಿಲವಾಗ್ತಿದೆ, ಅನಾಯಕತ್ವ ಎದುರಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಸ್ವಲ್ಪ ದಿನದಲ್ಲಿ ಸರಕಾರ ಬಿದ್ದೋಗುತ್ತದೆ ಎಂದು ಬಿಜೆಪಿ ನಾಯಕರು ಮಾತನಾಡ್ತಿದ್ದಾರೆ.ಯಡಿಯೂರಪ್ಪ ಅವರನ್ನು ಮೂಲೆಗೆ ಕೂರಿಸಿದ್ದಾರೆ. ಯಡಿಯೂರಪ್ಪ ಮೂಲೆಗೆ ಸೇರಿದ ಮೇಲೆ ಆ ಪಕ್ಷಕ್ಕೆ ನಾಯಕರೇ ಇಲ್ಲವಾಗಿದೆ ಎಂದು ಆರೋಪಿಸಿದರು.

ಹೀಗಿದ್ದರೂ ಕಾಂಗ್ರೆಸ್ ಬಗ್ಗೆ ಇಲ್ಲಸಲ್ಲದ ಆರೋಪವನ್ನ ಬಿಜೆಪಿ ಮಾಡ್ತಿದೆ. ಈಶ್ವರಪ್ಪ ನೀರಾವರಿ ಸಚಿವರಾಗಿದ್ದರು. ಸಚಿವರಾಗಿದ್ದಾಗ ಯಾವಾಗಲೂ ನೀರಾವರಿ ವಿಷಯ ಮಾತನಾಡಲಿಲ್ಲ. ಅವರು ಮಾತನಾಡಿದ್ದು ಯಾವಾಗಲು ಶಿವಮೊಗ್ಗಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು ಎಂದು ದೂರಿದರು.

ಸಂಸದರು ಕಾವೇರಿ ವಿಷಯದಲ್ಲಿ ಮಾತನಾಡ್ತಿಲ್ಲ. ರಾಜ್ಯದ ಹಿತಕಾಯುವ ಸಣ್ಣ ಪ್ರಯತ್ನ ಮಾಡ್ತಿಲ್ಲ. ಶಿವಮೊಗ್ಗದ ಮೂಲೆಯೋಳಗೆ ಸಣ್ಣ ಘಟನೆ ನಡೆದರೆ ಅದರ ಲಾಭ ಪಡೆಯುವ ಕೆಲಸ ಮಾಡ್ತಿದ್ದಾರೆ. ಶಾಂತವಾಗಿರುವ ಶಿವಮೊಗ್ಗದ ಶಾಂತಿಯನ್ನು ಇನ್ನು ಕದಡುವ ಕೆಲಸ ಮಾಡ್ತಿದ್ದಾರೆ. ಅದೇ ವಿಷಯ ಇಟ್ಟುಕೊಂಡು ಮತ್ತೆ ಮತ್ತೆ ಮಾತನಾಡೋದು ನೋಡಿದ್ರೆ, ಇದು ಬಹಳ ಬೇಗ ತಣ್ಣಗಾಗಿ ಹೋಗಿದ್ದು ಈಶ್ವರಪ್ಪ ಅವರಿಗೆ ಸಮಾಧಾನ ಇಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.‌

ಇಷ್ಟು ವರ್ಷದ ನಾಯಕತ್ವ ಹಿರಿತನದ ಅನುಭವ ಎಲ್ಲಿ ಹೋಯ್ತು ಈಶ್ವರಪ್ಪ ಅವರೇ ಎಂದು ಪ್ರಶ್ನಿಸಿದ ಆಯನೂರು, ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಲಿ. ಕಾವೇರಿ‌ ವಿಷಯ ಪರಿಹರಿಸಲು ಪ್ರಯತ್ನಿಸಲಿ. ರಾಜ್ಯಕ್ಕೆ ಹೆಚ್ಚಿನ ಅನುದಾನ, ಪರಿಹಾರ ಕೊಡಿಸಲು ಪ್ರಯತ್ನಿಸಲಿ ಎಂದು ತಿವಿದಿದ್ದಾರೆ.

ಈಶ್ವರಪ್ಪ ಅವರು ಸರಕಾರದ ಸವಲತ್ತನ್ನು ಅರ್ಹತೆ ಇಲ್ಲದಿದ್ದರೂ ಪಡೆದಿದ್ದಾರೆ. ಪೈಲಟ್ ಇಟ್ಟುಕೊಂಡು ‌ಓಡಾಡ್ತಿದ್ದಾರೆ. ಅಧಿಕಾರದ ಅಮಲಿನಿಂದ ಅವರು‌ ಇನ್ನು ಇಳಿದಿಲ್ಲ ಎಂದು ವಂಗ್ಯವಾಡಿದರು.

ಐಟಿ ದಾಳಿ ವಿಚಾರ

ರಾಜ್ಯದಲ್ಲಿ ನಡೆದ ಐಟಿ ದಾಳಿ ತನಿಖೆಯಾಗಲಿ, ತಪ್ಪಿತಸ್ಥರು ಯಾರೇ ಇದ್ದರೂ ತಪ್ಪಿತಸ್ಥರೇ.ತಪ್ಪು ಮಾಡಿದ್ದವರು ಶಿಕ್ಷೆ ಅನುಭವಿಸುತ್ತಾರೆ. ತನಿಖೆ ಆಗುವವರೆಗೆ ಸ್ವಲ್ಪ ದಿನ ಕಾಯಿರಿ ಎಂದು ಬುದ್ದಿ ಹೇಳಿದರು.

ಬಿಜೆಪಿಯವರು ಒಂದಷ್ಟು ಜನ‌ ಕಾಂಗ್ರೆಸ್ ಶಾಸಕರ ಮನೆಗೆ ಹೋಗಿದ್ದಾರೆ. ಕಾಂಗ್ರೆಸ್ ಶಾಸಕರು ಬೈದು ಕಳುಹಿಸಿದ್ದಾರೆ. ಬಿಜೆಪಿ ಜೆಡಿಎಸ್ ಬಿಟ್ಟು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಬರುವವರಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ-https://suddilive.in/archives/1254

Related Articles

Leave a Reply

Your email address will not be published. Required fields are marked *

Back to top button