ರಾಜಕೀಯ ಸುದ್ದಿಗಳು

ನಾಳೆಯಿಂದ ಕೆಲ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ

ಸುದ್ದಿಲೈವ್/ಶಿವಮೊಗ್ಗ

ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ 314 ರೈಲುಗಳ ವೇಳಾಪಟ್ಟಿಯಲ್ಲಿ (TIME TABLE) ಬದಲಾವಣೆ ಮಾಡಲಾಗಿದೆ. ಅ.1ರಿಂದ ಹೊಸ ಸಮಯ ಜಾರಿಗೆ ಬರಲಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ರೈಲುಗಳ ಸಮಯದಲ್ಲಿಯು ಬದಲಾವಣೆಯಾಗಿದೆ.

ಸಮಯ ಬದಲಾದ ರೈಲುಗಳು

ತಾಳಗುಪ್ಪ -‌ ಮೈಸೂರು ಇಂಟರ್‌ಸಿಟಿ (ರೈಲು ಸಂಖ್ಯೆ 16205)ಈವರೆಗು ಮಧ್ಯಾಹ್ನ 3 ಗಂಟೆಗೆ ತಾಳಗುಪ್ಪದಿಂದ ಹೊರಡುತಿದ್ದ ರೈಲು ಇನ್ಮುಂದೆ ಮಧ್ಯಾಹ್ನ 2.50ಕ್ಕೆ ಪ್ರಯಾಣ ಶುರು ಮಾಡಲಿದೆ. ಸಾಗರ ಜಂಬಗಾರು ಮಧ್ಯಾಹ್ನ 3.07ಕ್ಕೆ ಆಗಮಿಸಿ, ಮಧ್ಯಾಹ್ನ 3.09ಕ್ಕೆ ತೆರಳಲಿದೆ. ಆನಂದಪುರಂಗೆ ಮಧ್ಯಾಹ್ನ 3.37ಕ್ಕೆ ಆಗಮಿಸಿ, ಮಧ್ಯಾಹ್ನ 3.38ಕ್ಕೆ ಹೊರಡಲಿದೆ. ಈವರೆಗು ರಾತ್ರಿ 10.15ಕ್ಕೆ ಮೈಸೂರು ನಿಲ್ದಾಣ ತಲುಪುತ್ತಿದ್ದ ರೈಲು ಇನ್ಮುಂದೆ 10.30ಕ್ಕೆ ತಲುಪಲಿದೆ.

ತಾಳಗುಪ್ಪ – ಶಿವಮೊಗ್ಗ ಟೌನ್‌ ಪ್ಯಾಸೆಂಜರ್‌ ಸ್ಪೆಷಲ್ (ರೈಲು ಸಂಖ್ಯೆ 07349)

ತಾಳಗುಪ್ಪದಿಂದ ಬೆಳಗ್ಗೆ 11.15ಕ್ಕೆ ಹೊರಡುತ್ತಿದ್ದ 07349 ಕ್ರಮ ಸಂಖ್ಯೆಯ ರೈಲು ಇನ್ಮುಂದೆ ಬೆಳಗ್ಗೆ 11.20ಕ್ಕೆ ಹೊರಡಲಿದೆ. ಸಾಗರ ಜಂಬಗಾರು ಬೆಳಗ್ಗೆ 11.37ಕ್ಕೆ ತಲುಪಲಿದೆ, ಅಡ್ಡೇರಿಗೆ ಬೆಳಗ್ಗೆ 11.53, ಆನಂದಪುರಂ ಮಧ್ಯಾಹ್ನ 12.10, ಕೆಂಚನಾಲ ಮಧ್ಯಾಹ್ನ 12.21, ಅರಸಾಳು ಮಧ್ಯಾಹ್ನ 12.27, ಕುಂಸಿ ಮಧ್ಯಾಹ್ನ 12.44, ಹಾರನಹಳ್ಳಿ ಮಧ್ಯಾಹ್ನ 12.52, ಕೊನಗವಳ್ಳಿ ಮಧ್ಯಾಹ್ನ 1 ಗಂಟೆ, ಶಿವಮೊಗ್ಗ ನಿಲ್ದಾಣಕ್ಕೆ ಮಧ್ಯಾಹ್ನ 1.45ಕ್ಕೆ ತಲುಪಲಿದೆ.

ಶಿವಮೊಗ್ಗ ಟೌನ್‌ – ತಾಳಗುಪ್ಪ ಪ್ಯಾಸೆಂಜರ್‌ (ರೈಲು ಸಂಖ್ಯೆ 07350)

ಶಿವಮೊಗ್ಗದಿಂದ ಈವರೆಗೂ ಮಧ್ಯಾಹ್ನ 2.40ಕ್ಕೆ ಹೊರಡುತ್ತಿದ್ದ 07350 ರೈಲು. ಇನ್ಮುಂದೆ ಮಧ್ಯಾಹ್ನ 2.35ಕ್ಕೆ ಹೊರಡಲಿದೆ. ಕೊನಗವಳ್ಳಿಗೆ ಮಧ್ಯಾಹ್ನ 2.55ಕ್ಕೆ ತಲುಪಲಿದೆ. ಹಾರನಹಳ್ಳಿ ಮಧ್ಯಾಹ್ನ 2.55ಕ್ಕೆ, ಕುಂಸಿ ಮಧ್ಯಾಹ್ನ 3.02ಕ್ಕೆ, ಅರಸಾಳು ಮಧ್ಯಾಹ್ನ 3.19ಕ್ಕೆ, ಕೆಂಚನಾಲ ಮಧ್ಯಾಹ್ನ 3.24, ಆನಂದಪುರಂ ಮಧ್ಯಾಹ್ನ 3.36ಕ್ಕೆ, ಅಡ್ಡೇರಿಗೆ ಮಧ್ಯಾಹ್ನ 3.52ಕ್ಕೆ, ಸಾಗರ ಜಂಬಗಾರು ಸಂಜೆ 4.14ಕ್ಕೆ ತಾಳಗುಪ್ಪಕ್ಕೆ ಸಂಜೆ 4.55ಕ್ಕೆ ತಲುಪಲಿದೆ.

ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ (ರೈಲು 16228)

ಕೆಂಗೇರಿಗೆ ಈವರೆಗು ಬೆಳಗ್ಗೆ 5.24ಕ್ಕೆ ತಲುಪುತ್ತಿದ್ದ 16228 ಕ್ರಮ ಸಂಖ್ಯೆ ರೈಲು ಇನ್ಮುಂದೆ ಬೆಳಗ್ಗೆ 5.23ಕ್ಕೆ ತಲುಪಲಿದೆ. ಬಿಡದಿ ಬೆಳಗ್ಗೆ 5.39, ರಾಮನಗರಂ ಬೆಳಗ್ಗೆ 5.50, ಚನ್ನಪಟ್ಟಣ ಬೆಳಗ್ಗೆ 6.01, ಮದ್ದೂರು ಬೆಳಗ್ಗೆ 6.18, ಹಣಕೆರೆ ಬೆಳಗ್ಗೆ 6.28, ಮಂಡ್ಯ ಬೆಳಗ್ಗೆ 6.38, ಎಳಿಯೂರು ಬೆಳಗ್ಗೆ 6.47ಕ್ಕೆ ತಲುಪಲಿದೆ

ಮೈಸೂರು – ತಾಳಗುಪ್ಪ ಕುವೆಂಪು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16227)

ಈವರೆಗೂ ರಾತ್ರಿ 11.21ಕ್ಕೆ ಮಲ್ಲೇಶ್ವರಂ ತಲುಪುತ್ತಿದ್ದ 16227 ಕ್ರಮ ಸಂಖ್ಯೆ ರೈಲು ಇನ್ಮುಂದೆ ರಾತ್ರಿ 11.20ಕ್ಕೆ ತಲುಪಲಿದ್ದು ರಾತ್ರಿ 11.21ಕ್ಕೆ ಹೊರಡಲಿದೆ. ಯಶವಂತಪುರಕ್ಕೆ ರಾತ್ರಿ 11.26 ತಲುಪಲಿದೆ.  ರಾತ್ರಿ 11.28ಕ್ಕೆ ಹೊರಡಲಿದೆ.

ಶಿವಮೊಗ್ಗ ತುಮಕೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16568)

ಹೆಗ್ಗೇರಿಗೆ ಈವರೆಗೂ ಬೆಳಗ್ಗೆ 8.38ಕ್ಕೆ ತಲುಪಿ, ಬೆಳಗ್ಗೆ 8.39ಕ್ಕೆ ಹೊರಡುತ್ತಿದ್ದ ರೈಲು ಸಂಖ್ಯೆ 16568 ರೈಲು. ಇನ್ಮುಂದೆ ಬೆಳಗ್ಗೆ 8.37ಕ್ಕೆ ತಲುಪಿ, ಬೆಳಗ್ಗೆ 8.38ಕ್ಕೆ ಹೊರಡಲಿದೆ.

ಶಿವಮೊಗ್ಗ ಟೌನ್‌ – ತುಮಕೂರು ಮೆಮು (ರೈಲು ಸಂಖ್ಯೆ 06514)

ನಿಟ್ಟೂರಿಗೆ ಸಂಜೆ 4.39ಕ್ಕೆ ತಲುಪುತ್ತಿದ್ದ ರೈಲು ಸಂಖ್ಯೆ 06514 ರೈಲು. ಇನ್ಮುಂದೆ ಸಂಜೆ 4.34ಕ್ಕೆ ತಲುಪಲಿದೆ. ಮಲ್ಲಸಂದ್ರಕ್ಕೆ ಸಂಜೆ 4.53ಕ್ಕೆ, ಹೆಗ್ಗೇರಿಗೆ ಸಂಜೆ 4.57ಕ್ಕೆ ತಲುಪಲಿದೆ.

ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16580)

ಈವರೆಗೂ ತುಮಕೂರು ನಿಲ್ದಾಣಕ್ಕೆ ಸಂಜೆ 6.30ಕ್ಕೆ ತಲುಪುತ್ತಿದ್ದ 16580 ಕ್ರಮ ಸಂಖ್ಯೆ ರೈಲು . ಇನ್ಮುಂದೆ ಸಂಜೆ 6.40ಕ್ಕೆ ತಲುಪಲಿದೆ.

ನಿಲುಗಡೆಗೆ ಗಡುವು ಫಿಕ್ಸ್

ತಾಳಗುಪ್ಪ – ಮೈಸೂರು (ರೈಲು ಸಂಖ್ಯೆ 16227 / 16228) – ಅರಸಾಳು ರೈಲು ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 2024ರ ಫೆ.23ರವರೆಗೆ ರೈಲು ಈ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತದೆ. ಮೈಸೂರು ತಾಳುಗಪ್ಪ ಎಕ್ಸ್‌ ಪ್ರೆಸ್‌ (ರೈಲು ಸಂಖ್ಯೆ 16205 / 16206) – ಕುಂಸಿ ಮತ್ತು ಅರಸಾಳು ನಿಲ್ದಾಣಗಳಲ್ಲ

ಮೈಸೂರು ತಾಳುಗಪ್ಪ ಎಕ್ಸ್‌ ಪ್ರೆಸ್‌ (ರೈಲು ಸಂಖ್ಯೆ 16205 / 16206) – ಕುಂಸಿ ಮತ್ತು ಅರಸಾಳು ನಿಲ್ದಾಣಗಳಿಲ್ಲ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. 2024ರ ಫೆ.23ರವರೆಗೆ ಇಲ್ಲಿ ರೈಲುಗಳು ನಿಲ್ಲಿಸಲಾಗುತ್ತದೆ.‌

ಇದನ್ನೂ ಓದಿ-https://suddilive.in/2023/09/30/ಒಗಟು-ಒಗಟಾಗಿಯೇ-ಮುಗಿದ-ಆರ್-ಎ/

Related Articles

Leave a Reply

Your email address will not be published. Required fields are marked *

Back to top button