ಸ್ಥಳೀಯ ಸುದ್ದಿಗಳು

ಅದ್ಧೂರಿ ಮೆರವಣಿಗೆಯಲ್ಲಿ ಬಂದ ಎಂ ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದ ಎಂ.ಶ್ರೀಕಾಂತ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಇಂದು ಶುಭ ಮಂಗಳದಿಂದ ಹೊರಟ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇರ್ಪಡೆಯಾಗಿದ್ದಾರೆ.

ಶುಭಮಂಗಳ, ವಿನೋಬ ನಗರ ಚೌಕಿ,  ಲಕ್ಷ್ಮೀ ಚಲನಚಿತ್ರ ಮಂದಿರ ಜೈಲ್ ರಸ್ತೆ, ದುರ್ಗಿಗುಡಿ, ಗೋಪಿ ವೃತ್ತ, ಬಾಲರಾಜ ಅರಸ್ ರಸ್ತೆ ಮೂಲಕ ಕಾಂಗ್ರೆಸ್ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿದರು. ಜಿಲ್ಲಾ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.  

ಸಚಿವ ಮಧು ಬಂಗಾರಪ್ಪ ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಮಧು ಅವರು ತಡವಾಗಿ‌ ಕಾರ್ಯಕ್ರಮಕ್ಕೆ ಆಗಮಿಸಿದರು. ಜಿಲ್ಲಾ ಕಾಂಗ್ರೆಸ್‌ಅಧ್ಯಕ್ಷ‌ ಹೆಚ್ ಎಸ್ ಸುಂದರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಎಂಎಲ್ ಸಿ ಆರ್ ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ‌ ಆರ್.ಎಂ ಮಂಜುನಾಥ್ ಗೌಡ  ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್ ಪಾಲಿಕೆ ಸದಸ್ಯ ಹೆಚ್ ಸಿ ಯೋಗೇಶ್ಮೊದಲಾದವರು ಭಾಗಿಯಾಗಿದ್ದರು.

ಪಟಾಕಿ ವಾದ್ಯಗಳ ನ್ನ ಬಾರಿಸುವ ಮೂಲಕ ಮೆರವಣಿಗೆ ಸಾಗಿದೆ. ಕಚೇರಿಯ ತಿರುವಿನ ಬಳಿ ಜೆಸಿಬಿ ಮೂಲಕ ಸೇಬು, ಹಾಗೂ ಹೂವಿನ ಹಾರವನ್ನ ಶ್ರೀಕಾಂತ್ ಗೆ ಅಭಿಮಾನಿಗಳು ಹಾಕಿದ್ದಾರೆ. ನಂತರ ವೇದಿಕೆ ಮೇಲೆ ನಡೆದಕಾರ್ಯಕ್ರಮದಲ್ಲಿ ಶ್ರೀಕಾಂತ್ ಅವರನ್ನ  ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಅಧ್ಯಕ್ಷ ಸುಂದರೇಶ್ ಮಾತನಾಡಿ, ಲೋಕ ಸಭಾ ಚುನಾವಣೆ ಗೆಲುವು ಮುಖ್ಯವಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ದುರ್ಬಲಗೊಳ್ಳುತ್ತಿದೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಸಿಎಂ‌ಅಭ್ಯರ್ಥಿಗಳಿಲ್ಲ. ಈ ಬಾರಿ ಪಿಎಂ ಮೋದಿಯಾಗಲ್ಲ ಎಂದರು

ಇದನ್ನೂ ಓದಿ –https://suddilive.in/archives/2428

Related Articles

Leave a Reply

Your email address will not be published. Required fields are marked *

Back to top button