ಕ್ರೈಂ ನ್ಯೂಸ್

ವ್ಯಕ್ತಿಗೆ ಚಾಕುವನಿಂದ ಇರಿತ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ದ ರಾಯಲ್ ಆರ್ಕೇಡ್ ಹಿಂಭಾಗ ರಸ್ತೆಯಲ್ಲಿ ಕಾರ್ತಿಕ್ ಎಂಬುವನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಕಾರ್ತಿಕ್ (48) ಎನ್ನುವ ವ್ಯಕ್ತಿಗೆ ಇಬ್ಬರು ಅಪರಿಚಿತರು ಚಾಉವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆ ಬಳಿಕ ದಾಳಿ ಮಾಡಿದ ವ್ಯಕ್ತಿಗಳು ಎಸ್ಕೇಪ ಆಗಿದ್ದಾರೆ. ಕಾರ್ತಿಕ ಮೇಲಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ.

ಕೈಗೆ ಚಾಕು ಇರಿತ ಹಿನ್ನಲೆ ತೀವ್ರತರನಾದ ರಕ್ತಸ್ರಾವವಾಗಿದೆ. ಅವರನ್ಬ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಕು ಇರಿತಕ್ಕೊಳಗಾದ ವ್ಯಕ್ತಿ ಶಿವಮೊಗ್ಗದ ಮಿಳಘಟ್ಟ ಬಡಾವಣೆ ನಿವಾಸಿ ಎಂದು ತಿಳಿದು ಬಂದಿದೆ. ಇರಿತಕ್ಕೆ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

ಇದನ್ನೂ ಓದಿ-https://suddilive.in/archives/10113

Related Articles

Leave a Reply

Your email address will not be published. Required fields are marked *

Back to top button