ಎರಡು ಓಮಿನಿ ಗಳಲ್ಲಿ ಬಂದವರಿಂದ ನಡೆಯಿತಾ ಗಲಾಟೆ?

ಸುದ್ದಿಲೈವ್/ಶಿವಮೊಗ್ಗ

ಪ್ರೀ ಪ್ಲಾನ್ಸಡ್ ಆಗಿ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ನಡೆದಿದೆಯಾ ಎಂಬ ಕಾರಣಕ್ಕೆ ಈ ಸಿಸಿ ಟಿವಿ ದೃಶ್ಯ ಸಾಕ್ಷಿಯಾಗಿದೆ.
ಓಮಿನಿ ಗಾಡಿಯಿಂದ ಬಂದು ಕಲ್ಲು ತೂರಾಟ ನಡೆಸಿದ್ರಾ ಕಿಡಿಗೇಡಿಗಳು ಎಂಬ ಅನುಮಾನಕ್ಕೆ ಸಿಸಿಟಿ ಫ್ಯೂಟೇಜ್ ಎಡೆಮಾಡಿಕೊಟ್ಟಿದೆ. ಈ ಅನುಮಾನವನ್ನ ಶಾಸಕ ಚೆನ್ನಬಸಪ್ಪ ನಿನ್ನೆನೇ ವ್ಯಕ್ತಪಡಿಸಿದ್ದರು.ಯುಪಿ ಪಾಸಿಂಗ್ ಮತ್ತು ಮಂಗಳೂರು ಪಾಸಿಂಗ್ ವಾಹನ ಬಂದಿದ್ದೇಕೆ ಎಂದು ಕೇಳಿದ್ರು
ಅದರಂತೆ KA – 20 ಪಾಸಿಂಗ್ ಇರೋ ಓಮಿನಿ ಗಾಡಿಯಲ್ಲಿ ಯುವಕರು ಬಂದಿರುವ ದೃಶ್ಯ ಸಿಸಿ ಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಓಮಿನಿ ಕಾರಿನಲ್ಲಿ ಇಳಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾಗಿಗುಡ್ಡ ಶನೇಶ್ವರ ದೇವಾಲಯದ ಹತ್ತಿರ ಓಮಿನಿ ವಾಹನ ನಿಲ್ಲಸಲಾಗಿತ್ತು. ಎರಡು ಒಮಿನಿಯಿಂದ ಇಳಿದ 15 ಕ್ಕೂ ಹೆಚ್ವು ಯುವಕರು ವಾಹನದಲ್ಲಿ ಬಂದು ಇಳಿದಿದ್ದಾರೆ. ಅ ಓಮಿನಿ ವಾಹನಗಳಲ್ಲಿ ಬಂದ ಕೆಲವೇ ನಿಮಿಷಗಳಲ್ಲಿ ಕಲ್ಲು ತೂರಲಾಗಿದೆ.
ಕಲ್ಲು ತೂರಾಟವಾದ ನಂತರ ಅದೇ ಯುವಕರು ಗುಂಪಿನ ಜೊತೆ ಓಡಿಹೋಗುತ್ತಿರುವ ದೃಶ್ಯ ಕೂಡ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ. ಮುಖಕ್ಕೆ ಹಸಿರು ಬಣ್ಣದ ಬಟ್ಟೆ ಕಟ್ಟಿಕೊಂಡು ಗುಂಪಿನ ಜೊತೆ ಓಡಿಹೋದ ಯುವಕರ ದೃಶ್ಯ ಸೆರೆಯಾಗಿರುವುದು ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ-https://suddilive.in/2023/10/02/ಪಾಲಿಕೆಯಿಂದ-ತೆರವು-ಕಾರ್ಯಾಚ/
