ಕ್ರೈಂ ನ್ಯೂಸ್
ಆಕಸ್ಮಿಕ ಬೆಂಕಿ-ಮನೆಯ ವಸ್ತುವೆಲ್ಲಾ ಕರಕಲು
ಸುದ್ದಿಲೈವ್/ಶಿವಮೊಗ್ಗ
ನಗರದ ಬವೇಶ್ವರ ನಗರದ ಅಮೀರ್ಅಹಮದ್ ಕಾಲೋನಿಯಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದಿದ್ದು ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಕರಕಲಾಗಿದೆ.
ಅಮೀರ್ ಅಹಮದ್ ಕಾಲೋನಿಯಲ್ಲಿ ನದೀಮ್ ಎಂಬುವರ ಹೆಂಚಿನ ಮನೆಗೆ ಬೆಂಕಿ ಬಿದ್ದಿದೆ. ಬೆಂಕಿಗೆ ಬೀರು, ಮಂಚ, ಟಿವಿ, ಮರದ ಡಕಾಸು, ರೀಪು, ಟೈಲರಿಂಗ್ ಮಿಷಿನ್ ಸೇರಿ ಮೊದಲಾದ ವಸ್ತುಗಳು ಸುಟ್ಟು ಕರಕಲಾಗಿದೆ.
ಸುಮಾರು 3.5 ಲಕ್ಷದ ಮೌಲ್ಯದ ವಸ್ತುಗಳು ಕರಕಲಾಗಿದೆ. ನಗರದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.