ರಾಜಕೀಯ ಸುದ್ದಿಗಳು

ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ರಾಜ್ಯದಹಣ ಲೂಟಿ ಮಾಡ್ತಿದ್ದಾರೆ-ಈಶ್ವರಪ್ಪ ಗಂಭೀರ ಆರೋಪ

ಸುದ್ದಿಲೈವ್/ಶಿವಮೊಗ್ಗ

ರಕ್ಷಣೆ ಕೊಡಬೇಕಾದ ಪೊಲೀಸರೇ ಗೂಂಡಾಗಳಿಂದ ತಪ್ಪಿಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ.‌ ಪರಮೇಶ್ವರ್ ಅವರು‌ ರಾಗಿಗುಡ್ಡ ಗಲಭೆ ಸಣ್ಣ ಘಟನೆ ಎಂದಿದ್ರು, ಈ ಕೂಡಲೇ ಪರಮೇಶ್ವರ್ ಅವರು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಈಶ್ವರಪ್ಪ ಗುಡುಗಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಅಮಾಯಕ ಹಿಂದೂ ಯುವಕರ ಬಂಧನ ಆಗಿದೆ. ಅಮಾಯಕ ಹಿಂದು ಯುವಕರನ್ನು ಬೇಕು ಅಂತಾನೆ ರಾಷ್ಟ್ರದ್ರೋಹಿಗಳು ಸಿಕ್ಕಿಸಿದ್ದಾರೆ. ಶಿವಮೊಗ್ಗ ಭಯೋತ್ಪಾದಕರ ತಾಣ ಆಗ್ತಿದೆ. ಮುಖ್ಯಮಂತ್ರಿ ಮಗನ ಕೊಲೆಯಾದರೆ, ಡಿಸಿಎಂ ತಮ್ಮನ ಕೊಲೆಯಾದರೆ ಏನಾಗ್ತದೆ?ಮುಖ್ಯಮಂತ್ರಿ ಮತ್ತು  ಡಿಸಿಎಂ ಮನೆಯಲ್ಲಿ ಇಂತಹ ಘಟನೆ ಆಗಬಾರದು  ಎಂದು ಬಯಸುವವನು ನಾನು. ಆದರೆ ಸಂಭವಿಸಿದರೆ ಸುಮ್ಮನಿರ್ತೀರಾ ಎಂದು ಗುಡುಗಿದರು.

ಭಯೋತ್ಪಾದಕ ಚಟುವಟಿಕೆಯಲ್ಲಿ ಇರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಈ ಸರಕಾರ ಬಂದ ನಂತರ ನಕ್ಸಲ್ ವಾದದ ಚಟುವಟಿಕೆ ಹೆಚ್ಚಾಗಿದೆ. ಸರಕಾರ ಈ ಬಗ್ಗೆಯೂ‌ ಕ್ರಮ ಕೈಗೊಳ್ಳಬೇಕು. ವರ್ಗಾವಣೆ ದಂಧೆ, ಗ್ಯಾರಂಟಿ ಯೋಜನೆ ಜಾರಿಯಲ್ಲಿ ಸರ್ಕಾರ ತೊಡಗಿಕೊಂಡಿದೆ. ಹೀಗಾಗಿ ಬೇರೆ ವಿಷಯದ ಕಡೆ ಗಮನ ಹರಿಸಲು ಸಾಧ್ಯವಾಗ್ತಿಲ್ಲ ಎಂದು ಆರೋಪಿಸಿದರು.‌

ಡಿಕೆಶಿ, ಸಿದ್ದರಾಮಯ್ಯ ರಾಜ್ಯದ ಹಣವನ್ನು ಲೂಟಿ‌ ಮಾಡ್ತಿದ್ದಾರೆ

ಡಿಕೆಶಿ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದ ಈಶ್ವರಪ್ಪ, ಇವರಿಬ್ಬರಿಂದಲೇ  ಹಣ ಲೂಟಿ ಅಗ್ತಿದೆ.  ಅವರ ಪಕ್ಷದ ಶಾಸಕರೇ ಅಸಮಾಧಾನ ಹೊರ ಹಾಕಿದ್ದಾರೆ. ಈ ಸರಕಾರ ಬಂದಿರೋದೆ ಸಿದ್ದರಾಮಯ್ಯ, ಡಿಕೆಶಿ ಅವರಿಬ್ಬರಿಗೆ ಮಾತ್ರ ಎಂಬ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಗಡಿ‌ ಭಾಗಗಳಲ್ಲಿ ‌ನಕ್ಸಲ್ ಚಟುವಟಿಕೆ ಇದೆಈ ಬಗ್ಗೆ ಗೃಹ ಸಚಿವರು ಇಲ್ಲ ಅಂತಾ ಹೇಳಿ ಬಿಡಲಿ. ಮತ್ತೆ ನಕ್ಸಲ್ ವಾದ ತಲೆ ಎತ್ತುತ್ತಿದೆ ಎಂದು ಆರೋಪಿಸಿದರು.

ಎನ್ಐಎ ಗೆ ವಹಿಸಿ

ಶಿವಮೊಗ್ಗ ನಗರದಲ್ಲಿ ನಡೆದ ಈದ್ ಮೆರವಣಿಗೆ ಸಂಪೂರ್ಣ ಪೂರ್ವ ನಿಯೋಜಿತ ಮೆರವಣಿಗೆಯಾಗಿದೆ. ಇದನ್ನು ಎನ್ ಐಎ ತನಿಖೆಗೆ ವಹಿಸಬೇಕು. ಈಗಾಗಲೇ ಪಿಎಫ್ ಐ ಬ್ಯಾನ್ ಆಗಿದೆ. ಆ ಸಂಘಟನೆಯ ಏಳು ಜನ ಪ್ರಮುಖರು ಇದರಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಮೂರು ಜನರನ್ನು ‌ಪೊಲೀಸರು ಬಂಧಿಸಿದ್ದಾರೆ.

ಅನ್ವರ್, ಇದಾಯತ್, ಮುಬಾರಕ್ ಬಂಧಿತರಾಗಿದ್ದಾರೆ. ಇಮ್ರಾನ್, ಇರ್ಫಾನ್, ನಬಿ, ಅಬ್ದುಲ್ಲಾ ತಪ್ಪಿಸಿಕೊಂಡಿದ್ದಾರೆ. ಈ ವರದಿ ಗುಪ್ತಚರ ಇಲಾಖೆ ಮೂಲಕ ಕೇಂದ್ರಕ್ಕೆ ಹೋಗಿದೆ. ಎಸ್ ಪಿ ಅವರು ತಕ್ಷಣ ಚಾರ್ಜ್ ಶೀಟ್ ಹಾಕಿ ಉಳಿದವರನ್ನು ಬಂಧಿಸಬೇಕು. ರಾಜ್ಯ ಸರಕಾರ ಎನ್ ಐಎ ತನಿಖೆಗೆ ವಹಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ರಾಜ್ಯ ಸರಕಾರದ ಕುಮ್ಮಕ್ಕು ಇದೆಯೇನೋ ಎಂಬ ಅನುಮಾನ ‌ಕಾಡ್ತಿದೆ ಎಂದು ಆರೋಪಿಸಿದರು.

ಪೊಲೀಸರ ಮೇಲೆಯೂ ಹಲ್ಲೆ ನಡೆದಿದೆ. ಒಂದಿಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಬಿಜೆಪಿ ತಂಡ ಆಸ್ಪತ್ರೆಗೆ ತೆರಳುವ ಮೊದಲೇ ಪೊಲೀಸರು ಡಿಸ್ಚಾರ್ಜ್ ಆಗಿ ಹೋಗಿದ್ದರು ಎಂದರು.

ಪ್ರಪಂಚಕ್ಕೆ ಮೈಸೂರು ದಸರಾ ವಿಶೇಷವಾದ ಕಾರ್ಯಕ್ರಮ

ಹಿಂದೂ ಹಬ್ಬ, ಸಾಂಸ್ಕೃತಿಕ ಹಬ್ಬವಾಗಿದೆ. ಚಾಮುಂಡೇಶ್ವರಿ ಪೂಜೆ ಮಾಡ್ತಾರೆ. ಯಾವನೋ ತಲೆಹರಟೆ ಮಹಿಷಾಸುರ ಹಬ್ಬ ಮಾಡ್ತಿವಿ ಅಂದಾಗ ಒದ್ದು ಒಳಗೆ ಹಾಕೋ ಬದಲು, ಚಾಮುಂಡಿ ಬೆಟ್ಟಕ್ಕೆ ನಿರ್ಬಂಧ ಹಾಕುವ ಬದಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಈಶ್ವರಪ್ಪ ವಾಗ್ದಾಳಿ ಮುಂದು ವರೆಸಿದರು‌

ಅರಸರ ಕಾಲದಿಂದ ವಿಜಯದಶಮಿ ನಡೆದುಕೊಂಡು ಬಂದಿದೆ. ಮಹಿಷ ದಸರಾ ನಡೆಸಲು ಹೊರಟವರನ್ನ ಪ್ರೆಸ್ ಮೀಟ್ ನಲ್ಲೇ ಅರೆಸ್ಟ್ ಮಾಡಬೇಕಿತ್ತು. ಅವರು‌ ಹೋರಾಟ ಗಾರರು ಅಲ್ಲ. ಕಲಾವಿದರ ಬಳಿ ಪರ್ಸಂಟೇಜ್ ಕೇಳ್ತಾರೆ ಅಂದ್ರೆ ನಂಬಲು ಆಗ್ತಿಲ್ಲ.ಕಲಾವಿದರು ಈಡಿ ಜೀವನವನ್ನು ‌ಕಲೆಗೆ ಮುಡಿಪಾಗಿಟ್ಟವರು. ಅವರ ಹತ್ತಿರನೂ ಬಳಿ ಇವರು ಲಂಚ ಕೇಳ್ತಾರೆ ಅಂದ್ರೆ ಲಕ್ವಾ ಹೊಡೆಯುತ್ತದೆ ಎಂದು ಶಾಪ ಹಾಕಿದರು.

ಸಿಕ್ಕ ಹಣ ಸಿಬಿಐ ತನಿಖೆಯಾಗಬೇಕು

ಸಿಎಂ ಸಿದ್ದರಾಮಯ್ಯ ಅವರ ಮಗ ತಿಂದಿದ್ದು, ಡಿಕೆಶಿ ಅವರ ತಮ್ಮ ತಿಂದಿರುವ ಬಗ್ಗೆ ನಿವೃತ್ತ ನ್ಯಾಯಾಂಗ ತನಿಖೆ ಆಗಬೇಕು.  ಮುಖಾಂತರ ರಾಷ್ಟ್ರ ದ್ರೋಹಿ ಚಟುವಟಿಕೆ ಆರಂಭವಾಗ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ದೇಶದಲ್ಲೇ ರಾಜ್ಯಕ್ಕೆ ಕಪ್ಪು ಚುಕ್ಕೆ ಬಂದಿದೆ.

ಇತಿಹಾಸದಲ್ಲಿ ದೊಡ್ಡ ಮಟ್ಟದ ಹಣ ಮಾಜಿ ಕಾರ್ಪೊರೇಟರ್ ಮನೆಯಲ್ಲಿ ಸಿಕ್ಕಿದೆ. ಕಾಂಗ್ರೆಸ್ ಇರೋ ಕಡೆ ಏಕೆ ಐಟಿ ರೇಡ್ ಮಾಡ್ತಾರೆ ಅಂತಾರೆ. 42 ಕೋಟಿ ಹೇಗೆ ಸಿಕ್ತು. ಬಿಬಿಎಂಪಿ‌ 600 ಕೋಟಿ ಬಿಲ್ ಪಾಸ್ ಮಾಡ್ತು 7 ಪರ್ಸೆಂಟೇಜ್ ಕಮೀಷನ್ ಎಂದರೆ 42 ಕೋಟಿ ಸಿಕ್ಕಿದೆ. ಈ ದುಡ್ಡು ಮುಖ್ಯಮಂತ್ರಿ ಮೂಲಕ ಹೋಗದು. ಅಂದರೆ ಈ  ದುಡ್ಡು ಡಿಕೆಶಿಗೆ ಸಂಬಂಧಿಸಿದ್ದಾ ಎಂದು ದೂರಿದರು.

ಈ ದುಡ್ಡಿನ ಬಗ್ಗೆ ಕೆಂಪಣ್ಣ ಬಾಯಿ ಬಿಡ್ತಾ ಇಲ್ಲ. ಕಾಂಗ್ರೆಸ್ ಏಜೆಂಟ್ ಕೆಂಪಣ್ಣ ಎಂದ ಈಶ್ವರಪ್ಪ, ಇದನ್ನು ಸಿಬಿಐ ತನಿಖೆಗೆ ವಹಿಸಿ. ಸಿಬಿಐ ತನಿಖೆಗೆ ವಹಿಸಿದರೆ ಈ ಹಣ ಯಾರದ್ದು ಅಂತಾ ಹೊರಗೆ ಬರುತ್ತದೆ. ರಾಜ್ಯ ಸರಕಾರ ಕೆಂಪಣ್ಣನ ಅರೆಸ್ಟ್ ಮಾಡಿ ವಿಚಾರಣೆ ಮಾಡಬೇಕು ಎಂದು ಗುಡುಗಿದರು.‌

ಅಂಬಿಕಾಪತಿ ಕಂಟ್ರಾಕ್ಟ್ ಮಾಡ್ತಿಲ್ಲ ಅಂತಾರೆ

ಅಂಬಿಕಾಪತಿ ಕಂಟ್ರಾಕ್ಟ್ ಮಾಡ್ತಿಲ್ಲ ಎನ್ನುವುದಾದರೆ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನನ್ನಾಗಿ ಏಕೆ ಮಾಡಿಕೊಂಡ್ರಿ?ಈ ಹಣ ಯಾರದ್ದು, ಇನ್ನು ಯಾವ ಯಾವ ಇಲಾಖೆಗೆ ವಸೂಲಿ ಮಾಡಲು ಹೊರಟ್ಟಿದ್ದರು?ಎಲ್ಲಾ ಹೊರಗೆ ಬರಬೇಕು ಅಂದ್ರೆ ಸಿಬಿಐ ತನಿಖೆ ಆಗಬೇಕು ಎಂದು ಈಶ್ವರಪ್ಪ ಪುನರುಚ್ಚರಿಸಿದರು.‌

ಇದನ್ನೂ ಓದಿ-https://suddilive.in/archives/1261

Related Articles

Leave a Reply

Your email address will not be published. Required fields are marked *

Back to top button