ಸ್ಥಳೀಯ ಸುದ್ದಿಗಳು

ಹೈಕಮಾಂಡ್ ರಿಂದ ಮುಂದುವರೆದ ಸಂಧಾನದ ಯತ್ನ-ಜಗ್ಗದ ಈಶ್ವರಪ್ಪ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ಈಶ್ವರಪ್ಪನವರ ಬಂಡಾಯ ಸ್ಪರ್ಧೆ ಬಹುತೇಕ ಖಚಿತವಾದ ಬೆನ್ನಲ್ಲೇ ಸಂಧಾನಕ್ಕೆ ಹೈಕಮಾಂಡ್ ಮುಂದಾಗಿದೆ. ಈಗಾಗಲೇ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಬೆಳಿಗ್ಗೆನೇ ಬಂದು ಮಾತುಕತೆ ನಡೆಸಿದ್ದಾರೆ.

ಅದರಂತೆ ಎರಡನೇ ಸುತ್ತಿನ ಮಾತುಕತೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಧಾರಾಮ್ ಮೋಹನ್ ದಾಸ್ ಅಗರ್ ವಾಲ್ ಈಶ್ವರಪ್ಪನವರ ಮನೆಗೆ ಭೇಟಿ ನೀಡಿದ್ದಾರೆ. ಅಗರ್ ವಾಲ್ ಗೆ ಡಿ.ಎಸ್.ಅರುಣ್ ಮತ್ತು ಮುಂತಾದವರು‌ ಭೇಟಿ ನೀಡಿದ್ದಾರೆ. ಮಾತುಕತೆಯ ಮಧ್ಯೆಯೇ ಈಶ್ವರಪ್ಪ ಸಭೆಯಿಂದ ಹೊರಬಂದು ಬೇರೆ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಇದರಿಂದ ಸಭೆ ಏನಾಗಲಿದೆ ಎಂಬ ಕುತೂಹಲ ಮುಂದುವರೆದಿದೆ.

ಇದರ ಮಧ್ಯೆ ಆನಂದ್ ಗುರೂಜಿ ಸಹ ಈಶ್ವರಪ್ಪನವರ‌ಮನೆಗೆ ಭೇಟಿಯಾಗಿ ಈಶ್ವರಪ್ಪನವರಿಗೆ ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ಮಾಧ್ಯಮಕ್ಕೆ ಮಾತನಾಡಿದ ಆನಂದ ಗುರೂಜಿ,ಈಶ್ವರಪ್ಪ ಧರ್ಮದ ಪರವಾಗಿ ಹೋರಾಟ ಮಾಡಿದವರು. ಅಂತಹ ನಾಯಕತ್ವ ಅಗತ್ಯ ಇದೆ ಎಂದಿದ್ದಾರೆ.

ಅಂತಹವರು ರಾಜಕಾರಣದಲ್ಲಿ ಇರಬೇಕು.‌
ಈಶ್ವರಪ್ಪ ಅವರಿಗೆ ಅನ್ಯಾಯ ಆಗಬಾರದು.
ನಮ್ಮೆಲ್ಲಾ ಮಠಾಧೀಶರ ಬೆಂಬಲ ಈಶ್ವರಪ್ಪ ಅವರಿಗಿದೆ. ಈಶ್ವರಪ್ಪ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಗೆಲ್ಲಬೇಕು ಎಂದರು.

ಸ್ಪರ್ಧೆ ಖಚಿತ ಎಂದ ಈಶ್ವರಪ್ಪ

ರಾಧಾರಾಮ್ ಅವರು ಬರುವ ಮುಂಚೆ ಮಾಧ್ಯಮಗಳಿಗೆ ಮಾತನಾಡಿದ ಈಶ್ವರಪ್ಪ ನನ್ನ ಮನವೊಲಿಸಲು ಜ್ಞಾನೇಂದ್ರ ರವಿಕುಮಾರ್, ಅರುಣ್ ಬಂದಿದ್ದರು. ಮೊನ್ನೆ ಶಿವಮೊಗ್ಗದ ಕಾರ್ಯಕರ್ತರು ಹಿತೈಷಿಗಳು ಸಭೆ ಮಾಡಿ ಅಭಿಪ್ರಾಯ ಹೇಳಿದ್ದಾರೆ. ಅಷ್ಟು ಜ‌ನ ಸೇರುತ್ತಾರೆ ಅಂತಾ ನಾನು ಅಂದುಕೊಂಡಿರಲಿಲ್ಲ ಎಂದರು.

ನಾನು ಈಗಾಗಲೇ ಘೋಷಣೆ ಮಾಡಿದ್ದೇನೆ. ಚುನಾವಣೆಗೆ ಸ್ಪರ್ಧೆ ಮಾಡಿಯೇ ಮಾಡ್ತೇನೆ. ಹಿಂದುತ್ವದ ಪರವಾಗಿ ಕೆಲಸ ಮಾಡಿದವರಿಗೆ ಮೋಸ ಮಾಡಿದ್ದಾರೆ. ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಪಕ್ಷ ಇದ್ದು ಒದ್ದಾಡುತ್ತಿದೆ. ಯಡಿಯೂರಪ್ಪ ಲಿಂಗಾಯ್ತ ನಾಯಕರು ವರಿಷ್ಠರು ಅವರನ್ನು ನಂಬಿದ್ದಾರೆ. ನಾನು ಚುನಾವಣೆಗೆ ಏಕೆ ಸ್ಪರ್ಧೆ ಮಾಡ್ತಿದ್ದೇನೆ ಎಂಬುದನ್ನು ಅವರ ಗಮನಕ್ಕೆ ತಂದಿದ್ದೇನೆ. ರಾಜ್ಯದ ಬಿಜೆಪಿಯ ಹಲವು ನಾಯಕರಿಗೆ ಮೋಸ ಮಾಡಿದ್ದಾರೆ ಎಂದು ತಿಳಿಸಿರುವುದಾಗಿ ಹೇಳಿದರು.

ಯಡಿಯೂರಪ್ಪನವರ ನಾಯಕತ್ವ ಏನು ಅಂತ ಗೊತ್ತು

ಲಿಂಗಾಯತ ನಾಯಕರು ಬೇಕು ಅಂದ್ರೆ ಯತ್ನಾಳ್ ಅಧ್ಯಕ್ಷರನ್ನು ಮಾಡಬಹುದಿತ್ತು. ಯಡಿಯೂರಪ್ಪ ಹಠ ಹಿಡಿದು ತಮ್ಮ ಮಗನ ಮಾಡಿದ್ರು, ಯಡಿಯೂರಪ್ಪ ಕೆಜೆಪಿ ಕಟ್ಟಿದ್ದಾಗ ಪಡೆದಿದ್ದು 6 ಸೀಟ್ ಮಾತ್ರ. ಇದು ಯಡಿಯೂರಪ್ಪ ಅವರ ನಾಯಕತ್ವ

ಒಕ್ಕಲಿಗರ‌ನ್ನು ರಾಜ್ಯಧ್ಯಕ್ಷ ಮಾಡುವುದಾದರೆ ಸಿ.ಟಿ.ರವಿ ಮಾಡಬಹುದಿತ್ತು. ಹಿಂದುಳಿದ ವರ್ಗದ ನಾಯಕನನ್ನು ಅಧ್ಯಕ್ಷರಾಗಿ ಮಾಡುವುದಾದರೆ‌ ನನ್ನ ಏಕೆ ಮಾಡಲಿಲ್ಲ. ನಾನು ಯಾವುದರಲ್ಲಿ ಕಡಿಮೆ ಇದ್ದೆ.
ನಾನು ಯಾವಾಗ ಪಕ್ಷ ತೊರೆದು ಹೊರಗೆ ಹೋಗಿದ್ದೆ.
ಪಕ್ಷ ಹೇಳಿದಾಗಲೆಲ್ಲಾ ನಾನು ಅಧಿಕಾರದಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ವಿವರಿಸಿದರು.

ಸಿಟಿ ರವಿ ಏನುಕ್ಕೂ ಕಡಿಮೆ ಇರಲಿಲ್ಲ

ಸಿ.ಟಿ.ರವಿ ಯಾವುದರಲ್ಲಿ ಕಡಿಮೆ ಆಗಿದ್ದರು
ಅವರಿಗೆ ಏಕೆ ಟಿಕೇಟ್ ತಪ್ಪಿಸಿದರು. ನೊಂದ ಕಾರ್ಯಕರ್ತರ ಧ್ವನಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡ್ತಿದ್ದೇನೆ. ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯಬೇಡಿ ಅಂತಾ ರಾಜ್ಯದಿಂದ ಹಲವರು ಪೋನ್ ಮಾಡ್ತಿದ್ದಾರೆ. ಅವರ ಎಲ್ಲರ ಒತ್ತಾಯಕ್ಕಾಗಿ ಸ್ಪರ್ಧೆ ಮಾಡ್ತಿದ್ದೇನೆ. ಯಾರು ಮನವೊಲಿಸಿದರು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.

ಯಡಿಯೂರಪ್ಪ ವಿಜಯೇಂದ್ರ ತಾಯಿಯಂತಿರುವ ಪಕ್ಷದ ಕುತ್ತಿಗೆ ಹಿಸುಕುತ್ತಿದ್ದಾರೆ. ಆ ಪಕ್ಷ ರಕ್ಷಣೆಗೆ ನಾನು ಸ್ಪರ್ಧೆ ಮಾಡ್ತಿದ್ದೇನೆ. ಯಡಿಯೂರಪ್ಪ ಹಾಗು ಕುಟುಂಬದಿಂದ ಪಕ್ಷವನ್ನ ರಕ್ಷಣೆ ಆಗಬೇಕಿದೆ. ಇದಕ್ಕಾಗಿ ನನ್ನ ಸ್ಪರ್ಧೆ, ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಳೆ ಮೋದಿ ಕಾರ್ಯಕ್ರಮಕ್ಕೆ ಹೇಗೆ ಹೋಗಲು ಸಾಧ್ಯ? ಎಂದು ಪ್ರಶ್ನೆಗೆ ಉತ್ತರಿಸಿದ ಮಾಜಿ ಡಿಸಿಎಂ
ಮೋದಿ ನನ್ನ ದೇವರು. ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗ್ತಿಲ್ಲ ಅಂತಾ ನೋವು ಆಗ್ತಿದೆ. ನಾನು ಮೋದಿ ಅವರನ್ನು ಭೇಟಿ ಮಾಡುತ್ತಿಲ್ಲ ಎಂದರು.

ಇದನ್ನೂ ಓದಿ-https://suddilive.in/archives/10886

Related Articles

Leave a Reply

Your email address will not be published. Required fields are marked *

Back to top button