ಸ್ಥಳೀಯ ಸುದ್ದಿಗಳು

ಈಶ್ವರಪ್ಪನವರ ಮನೆಗೆ ಆರಗ ತಂಡ ಭೇಟಿ-ಕುತೂಹಲ ಮೂಡಿಸಿದ ಮಾತುಕತೆ

ಸುದ್ದಿಲೈವ್/ಶಿವಮೊಗ್ಗ

ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪನವರನ್ನ ಅಹ್ವಾನಿಸಲು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಎಂಎಲ್ ಸಿ ರವಿಕುಮಾರ್ ಎಂಟ್ರಿಯಾಗಿದ್ದು, ಸಂಧಾನದ ಬಗ್ಗೆ ಕುತೂಹಲ ಮೂಡಿಸಿದೆ.

ಇಂದು ಬೆಳಿಗ್ಗೆ ಸುಮಾರು 7-30 ಗಂಟೆಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರ ತಂಡ ಈಶ್ವರಪ್ಪನವರ ಮನೆಗೆ ಭೇಟಿ ನೀಡಿ ಸುಮಾರು ಒಂದು ಗಂಟೆಯ ವರೆಗೆ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಗ್ಗೆ ಕುತೂಹಲ ಮುಂದು ವರೆದಿದೆ.

ಈ ವರದಿ ಸಲ್ಲಿಸಲು ಜ್ಞಾನೇಂದ್ರ ಒಬ್ಬರೆ ಯಡಿಯೂರಪ್ಪನವರ ಮನೆಗೆ ಭೇಟಿ ನೀಡಿದ್ದು ಬಿಎಸ್ ವೈ ಜೊತೆ ಮಾತುಕತೆ ನಡೆಸಿದ್ದಾರೆ. ಕಾಂತೇಶ್ ಗೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಟಿಕೇಟ್ ಸಿಗದ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಬಂಡಾಯ ಎದ್ದಿರುವ ಈಶ್ವರಪ್ಪನವರ ಮುನಿಸು ಮುಂದುವರೆದಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ,ಎಂಎಲ್ ಸಿ ರವಿಕುಮಾರ್, ಅರುಣ ಮತ್ತು ನಾನು ಇಂದು ಈಧ್ರಪ್ಪನವರ ಮನೆಗೆ ಭೇಟಿ ನೀಡಿದ್ವಿ, ಮಾತುಕತೆಯ ವೇಳೆ ಅನೇಕ ಸಂಗತಿಯನ್ನ ಈಶ್ವರಪ್ಪನವರು ಹಂಚಿಕೊಂಡಿದ್ದಾರೆ. ಈಶ್ವರಪ್ಪನವರ ಜೊತೆ ಬೆಳೆದಿದ್ದೇವೆ. ಅವರಿಗೆ ಸಿಟ್ಟು ಮತ್ತು ಆಘಾತ ಉಂಟಾಗಿದೆ. ಯಾವುದೇ ಕಾರಣಕ್ಕೂ ಸಂಘಟನೆಯಿಂದ ವಿಮುಖರಾಗಬಾರದು ಎಂದು ಹೇಳಿದ್ದೇವೆ. ಅವರು ಸಹ ಅನೇಕ ಸಂಗತಿಗಳನ್ನ ಹಂಚಿಕೊಂಡಿದ್ದಾರೆ.

ನಾಳೆ ಶಿವಮೊಗ್ಗದಲ್ಲಿ ನಡೆಯುವ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಈಶ್ವರಪ್ಪನವರಿಗೆ ಆಹ್ವಾನಿಸಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅವರು ಕಾರ್ಯಕ್ರಮಕ್ಕೆ ಬರ್ತಾರೋ ಅಥವಾ ಬರೊಲ್ವೋ ಎಂಬುದ ಬಗ್ಗೆ ಮಾಹಿತಿ ತಿಳಿಸಲಿಲ್ಲ. ಈಶ್ವರಪ್ಪ ಆಪ್ತ ವಲಯದ ಮೂಲಗಳ ಪ್ರಕಾರ ನಾಳೆ‌ ಬಿಜೆಪಿಯ ಕಾರ್ಯಕ್ರಮಕ್ಕೆ ಈಶ್ವರಪ್ಪ ಹಾಜರು ಇರುವುದು ಬಹುತೇಕ ಡೌಟ್ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ-https://suddilive.in/archives/10878

Related Articles

Leave a Reply

Your email address will not be published. Required fields are marked *

Back to top button