ನಗರ‌ ಸುದ್ದಿಗಳು

ಸೊರಬದಲ್ಲಿ ನಡೆದ ಸಂಗ್ಯಬಾಳ್ಯ ನಾಟಕ

ಸದ್ದಿಲೈವ್/ಸೊರಬ

ಎರಡು ದಶಕಗಳಿಗಿಂತಲೂ ಹಿಂದೆ ಅಪಾರ ಜನಾಕರ್ಷಣೆ ಪಡೆದು ಸಾಗರ ಭಾರತಿ ಕಲಾವಿದರನ್ನು ಮುನ್ನೆಲೆಗೆ ತಂದು ೧೫೦ಕ್ಕೂ ಹೆಚ್ಚು ಪ್ರದರ್ಶನ ನಡೆಸಿದ ಸಂಗ್ಯಾಬಾಳ್ಯ ಜನಪದ ನಾಟಕ ಪುನಃ ಸೊರಬದ ಕಲಾವಿದ ಗೆಳೆಯರಿಂದ ಅನಾವರಣಗೊಂಡಿದ್ದು, ಮೊದಲ ಪ್ರದರ್ಶನ ತಾಲ್ಲೂಕಿನ ಹುನವಳ್ಳಿಯಲ್ಲಿ ನಡೆದಿದ್ದು, ಸ್ವಾಗತಾರ್ಹವೆನಿಸಿತು.

ಬಯಲು ಸೀಮೆಯ ಕಥಾನಕ ಮಲೆನಾಡಿನ ಜನತೆಯ ಗಮನಸೆಳೆದಿದ್ದು ಸೊರಬದ ಕಲಾವಿದರು ಹಿನ್ನೆಲೆ ಗಾಯನಕ್ಕೆ ಅಭಿನಯಿಸಿದ ಪರಿ ಆಶಾದಾಯಕ, ಇನ್ನಷ್ಟು ಪ್ರದರ್ಶನದ ಮೂಲಕ ಪ್ರಹಸನ ಇನ್ನಷ್ಟು ಗಟ್ಡಿಗೊಳ್ಳಲಿ ಎಂದು ಸಮಾಜ ಚಿಂತಕ ನಾಟಕ ನಿರ್ದೇಶಕ ದೇವೇಂದ್ರ ಬೆಳೆಯೂರು ಪ್ರದರ್ಶನದ ಕುರಿತು ಮಾತನಾಡಿದರು.

ಮೊಟ್ಟಮೊದಲು ರಂಗಪ್ರವೇಶಿಸಿದ ಕೆಲಗಂಟೆಕಾಲವಷ್ಟೆ ತಾಲೀಮು ನಡೆಸಿ ಗಂಗೆಯ ಪಾತ್ರಕ್ಕೆ ಜೀವ ತುಂಬಿದ ಅಂಗನವಾಡಿ ಕಾರ್ಯಕರ್ತೆ ಕಪ್ಪಗಳಲೆ ರೇಣುಕಮ್ಮ ಸೈ ಎನಿಸಿಕೊಂಡರು.

ಸಂಗ್ಯಾನ ಪಾತ್ರದಲ್ಲಿ ಸಾಹಿತಿ ಬಿದರಗೆರೆ ರೇವಣಪ್ಪ, ಬಾಳ್ಯನ ಪಾತ್ರದಲ್ಲಿ ಹರ್ಷಹೆಗಡೆ, ಈರ್ಯ ಮತ್ತು ಮಾರ್ವಾಡಿ ಪಾತ್ರದಲ್ಲಿ ಸುಬ್ರಹ್ಮಣ್ಯ ಗುಡಿಗಾರ್, ಇರುಪಾಕ್ಷಿಯಾಗಿ ವಿ.ಲಕ್ಷ್ಮಣ, ಬಸವಂತನಾಗಿ ವಕೀಲ ಡಾಕಪ್ಪ, ಸಂದೇಶ ಮಳಲಗದ್ದೆ, ಪೂಜಾರಿಯಾಗಿ ವಕೀಲ ಗೋಪಾಲ್, ಪಾರಮ್ಮಳಾಗಿ ಸುಶೀಲಮ್ಮ,

ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಶಾಂತ ಹುಣವಳ್ಳಿ, ಸಾವಿತ್ರಿ, ಕೃತ್ತಿಕಾ, ಶಶಿಕಲಾ, ಕೋಮಲ, ಕ್ಯಾಷಿಯೋ ವಾದಕರಾಗಿ ಈರಪ್ಪ ಶಿಕ್ಷಕರು, ತಬಲಾ ವಾದಕರಾಗಿ ಷಣ್ಮುಖ ನಿರ್ವಹಿಸಿದರು.

ಪ್ರಮುಖರಾದ ಎಚ್ ಎಸ್ ಮಂಜಪ್ಪ,
ಡಾ ಜ್ಞಾನೇಶ್, ಕಟ್ಟಿನಕೆರೆ ಸೀತಾರಾಮಯ್ಯ,
ದಿವಾಕರ ಭಾವೆ, ಷಣ್ಮುಖಾಚಾರ್,
ಮಲ್ಲಪ್ಪ ಅರಣ್ಯಾಧಿಕಾರಿ, ಬಿಎನ್ ಸಿ ರಾವ್
ವೇಣುಗೋಪಾಲ್, ವಾಮನ ಭಟ್ ಭಾವೆ, ಭಾರ್ಗವ ಉಳವಿ, ಸಾಗರ ಭಾರತಿ ಕಲಾವಿದರು, ಗ್ರಾಮಸ್ಥರು, ರಂಗಕಲಾಸಕ್ತರು ಇದ್ದರು.

ಇದನ್ನೂ ಓದಿ-https://suddilive.in/archives/11909

Related Articles

Leave a Reply

Your email address will not be published. Required fields are marked *

Back to top button