ಸಧ್ಯಕ್ಕೆ ರಾಗಿಗುಡ್ಡದಲ್ಲಿ ಪರಿಸ್ಥಿತಿ ನಿಯಂತ್ರಣ-ಸಿಟಿಗೂ 144 ಸೆಕ್ಷನ್ ಪ್ರತಿಬಂಧಕಾಜ್ಞೆ ಜಾರಿ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿನ್ನೆ ನಡೆದ ಗಲಾಟೆ ಪ್ರಕರಣ ಸಧ್ಯಕ್ಕ ನಿಯಂತ್ರಣದಲ್ಲಿದೆ. ಗಲಾಟೆ ನಿಯಂತ್ರಣಕ್ಕೆ 144 ಸೆಕ್ಷನ್ ನ್ನ ನಗರಕ್ಕೂ ವಿಸ್ತರಿಸಲಾಗಿದ್ದು ನಿಬಂಧನೆಗಳನ್ನ ಹಾಕಲಾಗಿದೆ.
ನಿನ್ನೆನೇ ಗಲಭೆಗೆ ಕಾರಣರಾದವರನ್ನ ಸಿಸಿ ಟಿವಿ ಫೂಟೇಜ್ ವೀಕ್ಷಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟ ನಂತರದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಅಲ್ಲದೆ ರಾಗಿಗುಡ್ಡದಲ್ಲಿ ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನಿನ್ನೆನೇ ರಾಗಿಗುಡ್ಡಕ್ಕೆ ಹೊರಗಿಂದ ಒಳಗಡೆ ಬರುವವರನ್ನ ಮತ್ತು ಒಳಗಡೆಯಿಂದ ಹೊರಗಡೆ ಬರುವವರನ್ನ ನಿಯಂತ್ರಿಸಲಾಗಿದೆ. ಸದ್ಯ ರಾಗಿಗುಡ್ಡದಲ್ಲಿ ಶಾಂತಿ ನೆಲೆಸಿರುವುದು ಕಂಡು ಬಂದಿದೆ. ನಿನ್ನೆ ಸಂಜೆಯ ವೇಳೆಗೆ ನಡೆದ ಗಲಭೆಯಲ್ಲಿ ಗಾಯಗೊಂಡವರನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ.
ನಿನ್ನೆಯಿಂದ ಇದುವರೆಗೂ 12 ಜನರು ಗಾಯಗೊಂಡಿದ್ದು ಇವರೆಲ್ಲಾ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಶಕ್ಕೆ ಪಡೆದವರ ಸಂಖ್ಯೆ 35 ಕ್ಕೇರಿದೆ ಎಂದು ಅಂದಾಜಿಸಲಾಗಿದೆ. ರಾಗಿಗುಡ್ಡದಲ್ಲಿ ಸಧ್ಯ ಶಾಂತಿಯುತವಾಗಿದ್ದರೂ ಸೆಕ್ಷನ್ ನ್ನ ಅನಿರ್ದಿಷ್ಠಾವಧಿಯ ವರೆಗೆ ಜಾರಿಗೊಳಿಸಲಾಗಿದೆ. ನಿನ್ನೆನೇ ಐಜಿಪಿ ತ್ಯಾಗರಾಜನ್ ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ನಗರದಲ್ಲಿ 144 ಸೆಕ್ಷನ್ ನನ್ನ ಜಾರಿಗೊಳಿಸಿದ್ದು ನಿಬಂಧನೆಗಳನ್ನ ಹಾಕಲಾಗಿದೆ. ಬಿಗಿ ಬಂದೋಬಸ್ತ್ ನಡುವೆಯೂ ಬೆಳಿಗ್ಗೆ ಅಗತ್ಯ ವಸ್ತುಗಳನ್ನ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಅಂಗಡಿ ಮುಂಗಟ್ಟುಗಳು ತೆರದು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ-https://suddilive.in/2023/10/01/ರಾಗಿಗುಡ್ಡದಲ್ಲಿ-ನಡೆದ-ಗಲಭೆ/
