ಕ್ರೈಂ ನ್ಯೂಸ್

ಅಕ್ರಮ ಕಸಾಯಿ ಖಾನೆಗಳ ಮೇಲೆ ಪೊಲೀಸರ ದಾಳಿ-ಮಾಹಿತಿ ನೀಡುವಲ್ಲಿ ಹಿಂದೇಟು?

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯ ಅನ್ವರ್ ಕಾಲೋನಿಯಲ್ಲಿ ಅಕ್ರಮ ಕಸಾಯಿ ಖಾನೆಯ ಮೇಲೆ ಓಲ್ಡ್ ಟೌನ್ ಪೊಲೀಸರು ದಾಳಿ ನಡೆಸಿ ಗೋಮಾಂಸವನ್ನ ವಶಪಡಿಸಿಕೊಂಡಿದ್ದಾರೆ.

ಆದರೆ ಗಮನಸೆಳೆಯುವ ಅಂಶವೆಂದರೆ ಗೋಮಾಂಸ ದಾಳಿಯ ಕುರಿತು‌ ಓಲ್ಡ್ ಟೌನ್ ಠಾಣೆಯ ಪಿಎಸ್ ಐ ಶಿವಕುಮರ್ ಅವರ ಮೊಬೈಲ್ ನ್ನ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬೆಳಿಗ್ಗೆಯಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವರ ವೈಯುಕ್ತಿಕ ನಂಬರ್ ಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಕುತೂಹಲ ಮೂಡಿಸಿದೆ.

ಈ ಬಗ್ಗೆ ಸಿಪಿಐಗೆ ಕರೆ ಮಾಡಿದರೆ ಪಿಎಸ್ ಐಗೆ ಕೇಳಿ ಅಂತಾರೆ. ಪಿಎಸ್ ಐ ಕರೆ ಸ್ವೀಕರಿಸದೆ ಇರುವುದು‌ಈ ಎಲ್ಲಾ ಸುದ್ದಿಗಳಿಗೆ ಮೂಲವಾಗಿದೆ. ಭದ್ರಾವತಿಯಲ್ಲಿ ಹಿಂದೂ ಸಂಘನೆಗಳು ಬೆನ್ನುಬಿಡದೆ ದಾಳಿ ನಡೆಸುವಂತೆ ಮಾಡುತ್ತಿರುವುದು ಪೊಲೀಸರ‌ ನಿದ್ದೆ ಕೆಡೆಸಿದೆ. ಜಿಲ್ಲೆಯ ಯಾವುದೇ ಮೂಲೆಯಲ್ಲಿ ಇಲ್ಲದ ಕಸಾಯಿ ಖಾನೆಗಳ ದಾಳಿ ಭದ್ರಾವತಿಯಲ್ಲಿ ನಡೆಸುವಂತಾಗಿದೆ. ಆನ್ ಲೈನ್ ದೂರಿನಿಂದ ಪೊಲೀಸರಿಗೆ ನಿದ್ದೆ ಕಟ್ಟಿರುವುದಂತೂ ಗ್ಯಾರೆಂಟಿಯಾಗಿದೆ.

ಈ ಹಿನ್ನಲೆಯಲ್ಲಿ ಏನೋ ಪೊಲೀಸರು ಡಿಜಿಟಲ್ ಮೀಡಿಯಾಗಳ ಕರೆಯನ್ನ ಸ್ವೀಕರಿಸದೆ ಸರ್ಕಾರಿ ಸಿಮ್ ನ್ನ ಸ್ವಿಚ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಿಂದೂ ಜಾಗರಣವೇದಿಕೆ ಫೆ.29 ರಂದು ಅಕ್ರಮ ಗೋಸಾಗಾಟ, ಅಕ್ರಮ ಗೋಹತ್ಯೆ, ಕಾಸಾಯಿ ಖಾನೆಯ ವಿರುದ್ಧ ಜನಾಂದೋಲನವನ್ನೇ ಸಾರಿದೆ. ಜನಾಂದೋಲನ ಭದ್ರಾವತಿಯ ಅಂಡರ್ ಬ್ರಿಡ್ಜ್ ಬಳಿಯಿಂದ ತಾಲೂಕು ಕಚೇರಿಯವರೆಗೆ ಬೃಹತ್ ಕಾಲ್ನಡಿಗೆ ಜಾಥ ನಡೆಯಲಿದೆ.

ಇದನ್ನೂ ಓದಿ-https://suddilive.in/archives/9395

Related Articles

Leave a Reply

Your email address will not be published. Required fields are marked *

Back to top button