ಕ್ರೈಂ ನ್ಯೂಸ್

ಎಮ್ಮೆಗೆ ಡಿಕ್ಕಿ ಬೈಕ್ ಹಿಂಬದಿಯ ಮಹಿಳಾ ಸವಾರರು ಸಾವು

ಸುದ್ದಿಲೈವ್/ಹೊಳೆಹೊನ್ನೂರು

ಬೈಕ್ ಗೆ ಅಡ್ಡಬಂದ ಎಮ್ಮೆಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಮಹಿಳಾ ಸವಾರರಿಗೆ ತಲೆಗೆ ಬಲವಾದ ಪೆಟ್ಟುಬಿದ್ದಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿರುವ ಘಟನೆ ವರದಿಯಾಗಿದೆ.

ಸಂತೆ ಮುಗಿಸಿಕೊಂಡು ಅಮ್ಮ‌ಮತ್ತು ಮಗ ಬೈಕ್ ನಲ್ಲಿ ಹೋಗುವಾಗ ರಾತ್ರಿಯ ವೇಳೆ ಅಡ್ಡಬಂದ ಎಮ್ಮೆಯನ್ನ ತಪ್ಪಿಸಲು ಸಾಧ್ಯವಾಗದೆ ಡಿಕ್ಕಿಹೊಡೆದ ಪರಿಣಾಮ ಬೈಕ್ ನ ಹಿಂಬದಿ ಕುಳಿತಿದ್ದ ಲಕ್ಷ್ಮೀ ಎಂಬುವರು ಕೆಳಗೆ ಬಿದ್ದಿದ್ದಾರೆ.

ತಕ್ಷಣವೇ ಗಾಯಾಳು ಲಕ್ಷ್ಮೀರನ್ನ ಹೊಳೆಹೊನ್ಬೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಮೃತರನ್ನ ಲಕ್ಷ್ಮೀ ಕೆ.ಹೆಚ್(47) ಎಂದು  ಗುರುತಿಸಲಾಗಿದೆ.

ಲಕ್ಷ್ಮೀ ಕೆ.ಹೆಚ್ ಮತ್ತು ಮಗ ಪವನ್ ಎಂಬುವರು ಹೊಳೆಹೊನ್ಬೂರಿನ ಸಂತೆ ಮುಗಿಸಿ ಕೆಎ-05-ಹೆಚ್ ಹೆಚ್ 6123 ಕ್ರಮ ಸಂಖ್ಯೆಯ ಬೈಕ್ ನಲ್ಲಿ ಸಿದ್ಲೀಪುರಹೊಸೂರು ಗ್ರಾಮಕ್ಕೆ ವಾಪಾಸ್ ಹೋಗುವಾಗ ರಾತ್ರಿ 9 ಗಂಟೆಯ ವೇಳೆಗೆ ನಾಗರಾಜ್ ಅವರ ಇಟ್ಟಿಗೆ ಗುಮ್ಮಿಯ ಬಳಿ ಅಡ್ಡಬಂದ ಎಮ್ಮೆಗೆ ಗುದ್ದಿದ್ದಾರೆ. ಕೆಳಗೆ ಬಿದ್ದ ಲಕ್ಷ್ಮೀ ರವರನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

ರಸ್ತೆಯ ಮೇಲೆಯೇ ಸಾಕು ಪ್ರಾಣಿಗಳು ಮತ್ತು ಇತರೆ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳು, ಸಾರ್ವಜನಿಕರು ಈ ಬಗ್ಗೆ ಜಾಗೃತರಾಗುವ ಅವಶ್ಯಕತೆ ಇದೆ.

ಇದನ್ನೂ ಓದಿ-https://suddilive.in/archives/5423

Related Articles

Leave a Reply

Your email address will not be published. Required fields are marked *

Back to top button