ಸುದ್ದಿಲೈವ್/ಸೊರಬ
ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಇಬ್ಬರು ವಾಹನ ಚಾಲಕರಿಗೆ ಮಂಗಳವಾರ ಪ್ರತ್ಯೇಕ ಪ್ರಕರಣದಲ್ಲಿ ಜೆಎಂಎಫ್ ನ್ಯಾಯಾಲಯ ತಲಾ ಹತ್ತು ಸಾವಿರ ದಂಡ ವಿಧಿಸಿದೆ.
ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುಮಾರಿನಲ್ಲಿ ಸೊರಬ ಪಿಎಸ್ಐ ನಾಗರಾಜ ನೇತೃತ್ವದ ತಂಡ ವಾಹನಗಳ ತಪಾಸಣೆ ವೇಳೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್ ನ್ಯಾಯಾಲಯ ವಿಜೇತ ಹಾಗೂ ಸುರೇಶ ಎಂಬುವವರಿಗೆ ತಲಾ ಹತ್ತು ಸಾವಿರ ದಂಡ ವಿಧಿಸಿದೆ.
ಈ ಮೂಲಕ ಮದ್ಯ ಸೇವಿಸಿ ವಾಹನ ಚಲಾಯಿಸುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದಂತಾಗಿದೆ.
ಇದನ್ನೂ ಓದಿ-https://suddilive.in/archives/16710
Tags:
ಸ್ಥಳೀಯ ಸುದ್ದಿಗಳು