ರಾಷ್ಟ್ರೀಯ ಸುದ್ದಿಗಳು

ಸುದ್ದಿಲೈವ್ ಫಲಶೃತಿ-ವರದಿ ಕೇಳಿದ ಸಚಿವಾಲಯ

ಸುದ್ದಿಲೈವ್/ಶಿವಮಗ್ಗ

ಲಯನ್ ಸಫಾರಿ ಬಳಿ ಅನಧಿಕೃತ ಕ್ರಶರ್, ಲೇಔಟ್ ನಿರ್ಮಾಣದ ಕುರಿತು ಎರಡು ವರೆ ತಿಂಗಳ ಹಿಂದೆ ಸುದ್ದಿಲೈವ್ ಸುದ್ದಿ ಮಾಡಿತ್ತು.‌ ಈ ಸುದ್ದಿಗೆ ಅರಣ್ಯ ಇಲಾಖೆ ಸ್ಪಂಧಿಸಿದೆ.

ಸಾಗರ ರಸ್ತೆಯಲ್ಲಿ ಬರುವ ಲಯನ್ ಸಫಾರಿ ಪಕ್ಕದಲ್ಲಿಯೇ ಖಾಸಗಿ ಲೇಔಟ್ ನಿರ್ಮಾಣವಾಗಿತ್ತು. ಮರಗಳನ್ನ ಕಡಿದು ಲೇಔಟ್ ನಿರ್ಮಾಣ ಮಾಡುತ್ತಿದ್ದರು. ಅರಣ್ಯ ಇಲಾಖೆ ಕಣ್ಣುಮುಚ್ಚಿಕೊಂಡಿದೆ ಎಂಬ ತಲೆಬರಹದಲ್ಲಿ ಸುದ್ದಿ ಮಾಡಲಾಗಿತ್ತು.

ಸಫಾರಿ ಲೇಔಟ್

ಸಫಾರಿಯ ಮುಂಭಾಗದಲ್ಲಿಯೇ ಎರಡು ಮೂರು ಕಡೆ ಕ್ರಶರ್ ನ್ನ ಅನಧಿಕೃತವಾಗಿ ನಿರ್ಮಿಸಲಾಗಿದೆ ಎಂಬ ಎರಡು ಅಂಶದ ಮೇಲೆ ಸುದ್ದಿ ಮಾಡಲಾಗಿತ್ತು. ಈ ಎರಡೂ ಅಂಶದ ಮೇಲೆ ಅರಣ್ಯ ಇಲಾಖೆ ಸಚಿವಾಲಯ ಶಿವಮೊಗ್ಗದ ಮುಖ್ಯ ಮತ್ತು ಉಪ-ಅರಣ್ಯ ಇಲಾಖೆಗೆ ವರದಿ ಸಲ್ಲಿಸಲು ಸೂಚಿಸಿದೆ.

ಬಫರ್ ಝನ್ ನಲ್ಲಿ ಲೇಔಟ್ ನಿರ್ಮಿಸಲು ಅನುಮತಿ ನೀಡಲಾಗಿದೆಯೇ? ಲೇ ಔಟ್ ಬಫರ್ ಜೋನ್ ಗೆ ಬರಲಿದೆಯೇ, ಪರಿಸರ ಸೂಕ್ಷ್ಮ ವಲಯ ಸಮಿತಿ ಸಭೆಯನ್ನೇ ರದ್ದು ಮಾಡಲಾಗಿದೆಯೇ ಕ್ರಶರ್ ಬಗ್ಗೆಯೂ ಜೂ.19 ರೊಳಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆ ಸಚಿವಾಲಯ ಶಿವಮೊಗ್ಗ ಮುಖ್ಯ ಅರಣ್ಯಸಂರಕ್ಷಣಾಧಿಕಾರಿಗಳಿಗೆ ಮತ್ತು ಉಪ-ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಇದನ್ನೂ ಓದಿ-https://suddilive.in/archives/16703

Related Articles

Leave a Reply

Your email address will not be published. Required fields are marked *

Back to top button