ಮಹಾನಗರ ಪಾಲಿಕೆ ಸ್ವೀಪ್ ಸಮಿತಿಯಿಂದ‌ ಏನೇನು‌ ಮಾದರಿ ಮತಗಟ್ಟೆಗಳನ್ನ ನಿರ್ಮಿಸಲಾಗಿದೆ?

ಸುದ್ದಿಲೈವ್/ಶಿವಮೊಗ್ಗ

ಇಷ್ಟು ದಿನ ಮತದಾನ ಜಾಗೃತಿ ಮೂಡಿಸುತ್ತಿದ್ದ ಶಿವಮೊಗ್ಗದ ಮಹಾನಗರ ಪಾಲಿಕೆ ಸ್ವೀಪ್ ಸಮಿತಿ ಮತಗಟ್ಟೆಯಲ್ಲಿ ಅದ್ಭುತ ಮಾದರಿಗಳನ್ನ ನಿರ್ಮಿಸಿ ಮತದಾರರ ಗಮನ ಸೆಳೆಯುವಂತೆ ಮಾಡಿದೆ.

ಸೈನ್ಸ್ ಮೈದಾನದಲ್ಲಿ ಅದ್ಬುತವಾದ ಸ್ಮಾರ್ಟ್ ಸಿಟಿಯ ಮಾಡೆಲ್ ವೊಂದನ್ನ ನಿರ್ಮಿಸಿ ಪ್ರದರ್ಶನಕ್ಕೆ ಇಟ್ಟಿದೆ. ಈ ಪ್ರದರ್ಶನವನ್ನ‌ ಮತ ಹಾಕಲು ಬಂದಿದ್ದ ಈಶ್ವರಪ್ಪ ಮತ್ತು ಕುಟುಂಬ ವೀಕ್ಷಿಸಿದ್ದಾರೆ. ಅದರಂತೆ ದ್ರುಪದಮ್ಮ ವೃತ್ತದ ಬಳಿ ಗಾಜನೂರು ಡ್ಯಾಂ ಮತ್ತು ಸಿಂಹಧಾಮದ ಮಾಡೆಲ್ ಗಳನ್ನ‌ ಪ್ರದರ್ಶಿಸಿದ್ದಾರೆ.

ಪಾಲಿಕೆಯ ಸ್ವೀಪ್ ವತಿಯಿಂದ ಚುನಾವಣೆಯ ವಿಶೇಷ ಬೂತ್ ಗಳೆಂದರೆ ಸಖಿ ಬೂತ್ ಗಳ ಸೆಲ್ಪಿ ಪಾಯಿಂಟ್ ನಿರ್ಮಿಸಲಾಗಿದೆ. ಬೂತ್ ಸಂಖ್ಯೆ 54 ರ ರವೀಂದ್ರನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕನವರ ಸೆಲ್ಸಿ ಪಾಯಿಂಟ್ ಮಾಡಲಾಗಿದೆ.

ಬೂತ್ ಸಂಖ್ಯೆ: 98 ರ ಕಾಶಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧತೆಯಲ್ಲಿ ಏಕತೆ (ಭಾರತ ದೇಶದ ವಿವಿಧ ಸ್ಥಳಗಳ ಮಹಿಳಾ ಸಾಂಸ್ಕೃತಿಕ ಉಡುಗೆ) ಸೆಲ್ಸಿ ಪಾಯಿಂಟ್ ನಿರ್ಮಿಸಲಾಗಿದೆ. ಬೂತ್ ಸಂಖ್ಯೆ 186 ರ R.M.L.ನಗರದ ಅಲ್ ಮಹಮ್ಮದ್ ಬಿಎಡ್ ಕಾಲೇಜ್ ನಲ್ಲಿ ನೀರನ್ನ ಮಿತವಾಗಿ ಬಳಸಿ ಬಗ್ಗೆ ಮಾಡಲ್ ನಿರ್ಮಿಸಲಾಗಿದೆ.

ಬೂತ್ ಸಂಖ್ಯೆ 86 ರ ವೀಣಾ ಶಾರದ ಸ್ವತಂತ್ರ ಪದವಿ ಪೂರ್ವಕಾಲೇಜ್ ಹೊಸಮನೆಯಲ್ಲಿ ಮಹಿಳಾ ಸಬಲೀಕರಣ ಅಡಿಯಲ್ಲಿ ಅನಕ್ಷರತೆಯಿಂದ ಅಕ್ಷರತೆಯ ಮಾಡಲ್ ಮಾಡಲಾಗಿದೆ.

ಬೂತ್ ಸಂಖ್ಯೆ: 131 ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜೋಸೆಫ್ ನಗರದಲ್ಲಿ ದೇಸಿ ಕ್ರೀಡೆಗಳ ಮಾಡಲ್ ಮಾಡಲಾಗಿದೆ.

ವಿಶೇಷ ಚೇತನರ ಮಾಡಲ್ ಬೂತ್ ಗಳು

ಬೂತ್ ಸಂಖ್ಯೆ: 281 ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹರಕೆರೆಯಲ್ಲಿ ಕರ್ನಾಟಕದ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ವಿಶೇಷ ಚೇತನರ ಪ್ಲೆಕ್ಸ್ ಅಳವಡಿಸುವುದು ಮತ್ತು ವಿಕಲ ಚೇತನ ಸ್ನೇಹಿ ಗೋಡೆ ಬರಹ.

ಯುವ ಮತದಾರರ ಮತಗಟ್ಟೆಯೆಂದು ಬೂತ್ ಸಂಖ್ಯೆ 158 ರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಮದಾರಿಪಾಳ್ಯ ಊರಗಡೂರ್ ನಲ್ಲಿ ಬಿದರೆಯಿಂದ ನಿರ್ಮಿಸಿರುವ (ಬ್ಯಾಂಬೂ ಆರ್ಟ್) ಸೆಲ್ಟಿ ಪಾಯಿಂಟ್ ನಿರ್ಮಿಸಲಾಗಿದೆ.

ಮಾಡಲ್ ಬೂತ್

ಮಾಡಲ್ ಬೂತ್ ಗಳನ್ನಾಗಿ ಬೂತ್ ಸಂಖ್ಯೆ 165, 166, 167 ರ ಸರ್ಕಾರಿ ಪದವಿ ಪೂರ್ವಕಾಲೇಜ್ ಸೈನ್ಸ್ ಮೈದಾನದ, ಶಿವಮೊಗ್ಗ ನಗರದಲ್ಲಿ ತುಂಗಾ ರಿವರ್ ಫ್ರಂಟ್ ಮಾಡಲ್ ನಿರ್ಮಾಣ ಮಾಡಲಾಗಿದೆ.

ಸಾಂಸ್ಕೃತಿಕ ಮತಗಟ್ಟೆ

ಬೂತ್ ಸಂಖ್ಯೆ: 56, 57, 58, 59, 60, 61, ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಟ್ಯಾಂಕ್ ಮೊಹಲ್ಲಾ, ವಿನಾಯಕ ಪಾರ್ಕ್,ನಲ್ಲಿ ಯಕ್ಷಗಾನ, ಭರತನಾಟ್ಯ, ಮಾಡಲ್ ಮತ್ತು ದೊಡ್ಡ ರಂಗೋಲಿಗಳು ಬಿಡಿಸುವ ಮೂಲಕ ಮತದಾರರನ್ನ ಸೆಳೆಯುವ ಪ್ರಯತ್ನ ಮಾಡಲಾಗಿದೆ.

ಇದನ್ನೂ ಓದಿ-https://suddilive.in/archives/14409

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close