ತಮಿಳರು ಕನ್ನಡ ನಾಡಿನ ವೈಚಾರಿಕ ಮತ್ತು ರಾಜಕೀಯ ಮೌಲ್ಯವನ್ನು ಉಳಿಸಲು ಕೋಮುವಾದಿ ಬಿಜೆಪಿಯನ್ನ ತಿರಸ್ಕರಿಸಿ-ಮಯೂರ್ ಜಯಕುಮಾರ್

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿನ ತಮಿಳರು ಕನ್ನಡ ನಾಡಿನ ವೈಚಾರಿಕ ಮತ್ತು ರಾಜಕೀಯ ಮೌಲ್ಯವನ್ನು ಉಳಿಸಲು ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸಬೇಕು ಎಂದು ಕಾಂಗ್ರೇಸ್ ನಾಯಕ, ಎಐಸಿಸಿ ಕಾರ್ಯದರ್ಶಿ ( ಕರ್ನಾಟಕ ಉಸ್ತುವಾರಿ) ಮಯೂರ್ ಜಯಕುಮಾರ್ ಕರೆ ನೀಡಿದರು.

ಶಿವಮೊಗ್ಗದಲ್ಲಿ ತಮಿಳು ಸಮುದಾಯದ ಸ್ನೇಹಕೂಟ ಸಭೆಯಲ್ಲಿ ಮಾತಾನಾಡಿದ ಅವರು ತಮಿಳರು ಮತ್ತು ಕನ್ನಡಿಗರು ದ್ರಾವಿಡ ಬಂಧುತ್ವವನ್ನು ಹೊಂದಿದ್ದಾರೆ. ದ್ರಾವಿಡ ಅಸ್ಮಿತೆ ಎಂದರೆ ಅದು ಪ್ರಗತಿಪರ, ಸೌಹಾರ್ದ ಬದುಕಿನ ಪರಂಪರೆಯೇ ಆಗಿದೆ‌. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಸುಳ್ಳು, ಕೋಮುವಾದ,ವಿಭಜನಾ ಸಿದ್ದಾಂತಗಳಿಂದ ದೇಶವನ್ನು ಒಡೆಯುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದಂತೆ ಎಚ್ಚರವಾಗಿರಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ತಮಿಳು ಸಮುದಾಯಕ್ಕೆ ಕೊಟ್ಟ ಕೊಡುಗೆಗಳು ಅನನ್ಯ, ಶಿವಮೊಗ್ಗದಲ್ಲಿ ತಮಿಳು ಸಮುದಾಯ ಭವನಕ್ಕೆ ನಿವೇಶನ ಕೊಡುವ ಮೂಲಕ ತಮಿಳು ಸಮುದಾಯದ ಏಳಿಗೆಗೆ ಬುನಾದಿ‌ಹಾಕಿದವರು. ಭಾಷೆ,ಜಾತ ಮತ ಭೇಧವಿಲ್ಲದೆ ಬಡವರ ಪಾಲಿನ ಧೀಮಂತನಾಯಕರಾಗಿದ್ದವರು. ಅವರ ಮಗಳು ಇಂದು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಅವರನ್ನು ತಮಿಳು ಸಮುದಾಯ ಬೆಂಬಲಿಸುವ ಮೂಲಕ ಬಂಗಾರಪ್ಪ ಅವರಿಗೆ ಗೌರವ ಸಲ್ಲಿಸಬೇಕು. ತಮಿಳು ನಾಡಿನಲ್ಲಿ ಬಿಜೆಪಿ ಯನ್ನು ತಿರಸ್ಕರಿದಂತೆ ಕರ್ನಾಟಕದಲ್ಲೂ ತಮಿಳು ಬಾಂಧವರು ಕೋಮುವಾದಿ ಬಿಜೆಪಿಯನ್ನು ತಿರಸ್ಕರಿಸಬೇಕೆಂದರು.

ಖ್ಯಾತ ನಟ ಶಿವರಾಜಕುಮಾರ್ ಮಾತನಾಡಿದ ತಮ್ಮ ಪತ್ನಿ ಪರ ಮತಯಾಚಿಸಿದರು.

ಕಾಂಗ್ರೇಸ್ ಹಿರಿಯ ಮುಖಂಡ ಎಂ.ಶ್ರೀಕಾಂತ್ ಮಾತನಾಡಿ ತಮಿಳು ಸಮುದಾಯದ ಕಲ್ಯಾಣಕ್ಕೆ ಕಾಂಗ್ರೇಸ್ ಪಕ್ಷ ಬದ್ದವಾಗಿದ್ದು. ಗೀತಾಶಿವರಾಜಕುಮಾರ್ ಅವರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್ ರಮೇಶ್, ಮುಖಂಡರಾದ ಹೆಚ್ ಸಿ ಯೋಗೀಶ್ , ಮಾಜಿ ಮೇಯರ್ ನಾಗರಾಜಕಂಕಾರಿ, ದೇವೇಂದ್ರಪ್ಪ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/14060

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket