ರಾಮನವಮಿ ರೀತಿಯಲ್ಲಿ ಬಸವ ಜಯಂತಿ ಆಚರಣೆ-ಬೆನಕಪ್ಪ

ಸುದ್ದಿಲೈವ್/ಶಿವಮೊಗ್ಗ

ಬಸವ ಜಯಂತಿಯನ್ನ ನಗರದ ವೆಂಕಟೇಶ್ ನಗರದಲ್ಲಿರುವ ಬಸವಕೇಂದ್ರದಲ್ಲಿ ಸಡಗರ ನತ್ತು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಶರಣ ಬೆನಕಪ್ಪ, ಬಸವಣ್ಣನನ್ನ ಕರ್ನಾಟಕ ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವ ಹಿನ್ಬಲೆಯಲ್ಲಿ ಬಸವ ಜಯಂತಿಯನ್ನ ಈ ಬಾರಿ ಸಡಗರ ಮತ್ತು ಸಂಭ್ರಮದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದರು.

ಮೇ 10 ರ ಬೆಳಿಗ್ಗೆ 8 ಗಂಟೆಗೆ ಬಸವಣ್ಣನವರ ಹಾಗೂ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ನಡೆಯಲಿದ್ದು ಉತ್ಸವದ ಮೆರವಣಿಗೆ ಬಸವಕೇಂದ್ರದಿಂದ ಹೊರಟು ವೆಂಕಟೇಶ್ ನಗರದ 5 ನೇ ಅಡ್ಡರಸ್ತೆ, ಅನಕೃ ಅಡ್ಡರಸ್ತೆ ಮೂಲಕ ಬಸವಕೇಂದ್ರ ತಲುಪಲಿದೆ.

ಬಸವಣ್ಣನ ಪೂಜೆಯ ನಂತರ, ಅಂಬಲಿ ದಾಸೋಹ ಶಿವದಾನ ನೆರೆಯುವ ಕಾರ್ಯ ನಡೆಯಲಿದೆ. ನಗರದ 15 ಸ್ಥಳಗಳಲ್ಲಿ ಅಂಬಲಿ ದಾಸೋಹ ಜರುಗಲಿದೆ. ಬಸವ ಜಯಂತಿಯನ್ನ ರಾಮನವಮಿ ರೀತಿ ಆಚರಿಸುವುದಾಗಿ ಅವರು ತಿಳಿಸಿದರು.

ಇದನ್ನೂ ಓದಿ-https://suddilive.in/archives/14428

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close