ಸುದ್ದಿಲೈವ್/ಶಿವಮೊಗ್ಗ
ಬಾಲರಾಜ್ ಅರಸ್ ರಸ್ತೆಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ದ್ವಿಚಕ್ರ ವಾಹನ ಸವಾರ ಮತ್ತು ಆಟೋದವರ ನಡುವೆ ನಡೆದ ಗಲಾಟೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೆಟ್ರೋಲ್ ಬಂಕ್ ಬಳಿ 04 ಜನರು ಸೇರಿ, ಅವಾಚ್ಯ ಶಬ್ದಗಳಿಂದ ಬೈದಾಡಿಕೊಳ್ಳುತ್ತ ಕೈ ಕೈ ಮಿಲಾಯಿಸುತ್ತಿದ್ದು, 02 ಗುಂಪಿನವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ನಂತರ ವಿಚಾರಣೆ ನಡೆಸಿದ್ದಾರೆ.
ಜಬೀರ್ ಮತ್ತು ಮುಬಾರಕ್ ನವರು ಆಟೊದಲ್ಲಿ ಬಾಲರಾಜ್ ಅರಸ್ ರಸ್ತೆಯಲ್ಲಿ ಹೋಗುತ್ತಿರುವಾಗ ಡಿವೈಡರ್ ಹತ್ತಿರ ನಿಂತಿದ್ದ ಮಂಜುನಾಥ್ ಮತ್ತು ಬಸವಲಿಂಗೇಶ್ ಪಾಟೀಲ್ ಕೈ ತೋರಿಸಿ ಅವಾಚ್ಯವಾಗಿ ಬೈದಿದ್ದಾರೆ. ಯೂಟರ್ನ ಮಾಡಿಕೊಂಡು ಬಂದ ಆಟೋ ಸವಾರರು ಬೈಕ್ ಮುಂದೆ ಆಟೋ ನಿಲ್ಲಿಸಿ, ಪರಸ್ಪರ ಕೈ ಕೈ ಮಿಲಾಯಿಸಿ ಜಗಳ ಮಾಡಿಕೊಂಡಿದ್ದಾರೆ,
ಈ ವೇಳೆ ಬಸವಲಿಂಗೇಶ್ ಪಾಟೀಲ್ ರವರ ಪ್ಯಾಂಟ್ ಜೇಬಿನಲ್ಲಿದ್ದ ಗನ್ ನ್ನು ಅಟೋದವರು ನೋಡಿದ್ದಾಗಿ, ನಂತರ ಸಾರ್ವಜನಿಕರು ಠಾಣೆಗೆ ಮಾಹಿತಿ ನೀಡಿದ್ದರಿಂದ ವಿಚಾರ ಮಾಡಿದಾಗ ಅವರ ಬಳಿ ಇದ್ದಿದ್ದು ಏರ್ ಗನ್ ಎಂದು ತಿಳಿದು ಬಂದಿದೆ.
ಬಸವಲಿಂಗೇಶ ಪಾಟೀಲ್ ಬಿನ್ ಮಲ್ಲಿಕಾರ್ಜುನ ಪಾಟೀಲ್, ಮಂಜುನಾಥ ಪಿ,ಕೆ ಬಿನ್ ಪರಮೇಶ್ವರಪ್ಪ, ಹಾಗೂ ಜಬೀರ್ ಬಿನ್ ಜಬೀವುಲ್ಲಾ, ಮುಬಾರಕ್ ಬಿನ್ ಇನಾಯತ್ ವುಲ್ಲಾ ರವರ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/15456