ಕ್ರೈಂ ನ್ಯೂಸ್

ಗಮನಿಸಿ, ಜೂ .1 ರಿಂದ 4 ರ ವರೆಗೆ ‘ಎಣ್ಣೆ’ ಸಿಗೊಲ್ಲ

ಸುದ್ದಿಲೈವ್/ಶಿವಮೊಗ್ಗ

ಮದ್ಯ ಪ್ರಿಯರೇ ಗಮನಿಸಿ, ಮುಂದಿನ ವಾರ ಶಿವಮೊಗ್ಗದಲ್ಲೂ ಸಹ ಮದ್ಯ ಮಾರಾಟ ನಿರಂತರವಾಗಿ ನಾಲ್ಕು ದಿನಗಳ ಕಾಲ ನಿಷೇಧಿಸಲಾಗಿದೆ.

ವಿಧಾನ ಪರಿಷತ್​ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಮತ ಎಣಿಕೆ ಇರುವುದರಿಂದ ಜೂನ್​​ 1 ರಿಂದ 4ರ ವರೆಗೆ ಮದ್ಯ ಮಾರಾಟವನ್ನು (Liquor Sale Ban) ನಿಷೇಧಿಸಲಾಗಿದೆ. ಈ ಕುರಿತು ಶಿವಮೊಗ್ಗ ಅಬಕಾರಿ ಡಿಸಿ ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.

ಜೂ.1 ರ ಸಂಜೆ 4 ಗಂಟೆಗೆ ಎಲ್ಲಾ ರೀತಿಯ ಮದ್ಯ ಮಾರಾಟ ನಿಷೇಧಗೊಳ್ಳಲಿದೆ. ಜೂ.1 ರಿಂದ ಜೂ.3 ರ ಸಂಜೆ 4 ಗಂಟೆಯ ವರೆಗೆ ಮದ್ಯ ಮಾರಾಟ ಬಂದ್ ಆಗಲಿದ್ದು, ಮದ್ಯಾಹ್ನ 4 ರಿಂದ ಮದ್ಯರಾತ್ರಿ 12 ರವರೆಗೆ ಮಾರಾಟಕ್ಕೆ ಅವಕಾಶವಿದೆ.

ನಂತರ ಜೂ.4 ರ ಮದ್ಯರಾತ್ರಿ 12 ಗಂಟೆಯಿಂದ ಪೂರ್ತಿ ಮದ್ಯ ನಿಷೇಧವಾಗಲಿದೆ. ಜೂ.4 ರ 12 ರಿಂದ ಜೂ.5ರ ಬೆಳಗ್ಗಿನ ಜಾವದ ವರೆಗೆ ನಿಷೇಧವಾಗಲಿದೆ. ನಂತರ 5 ಮತ್ತು 6 ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಎಲ್ಲಿ ಇದೆಯೋ ಅಲ್ಲಿ ಮದ್ಯ ನಿಷೇಧವಾಗಲಿದೆ. ಶಿವಮೊಗ್ಗದಲ್ಲಿ ಮತ ಎಣಿಕೆ ಇಲ್ಲವಾದುದರಿಂದ ನಿರಂತರ 4 ದಿನಗಳ ಕಾಲ ಮದ್ಯ ನಿಷೇಧವಾಗಲಿದೆ.

ಬೆಂಗಳೂರಿನಲ್ಲಿ ಜೂ.1 ರಿಂದ ಜೂ.6 ರವರೆಗೆ ಮದ್ಯ ಮಾರಾಟ ಬಂದ್ ಆಗಲಿದೆ.

ಇದನ್ನೂ ಓದಿ-https://suddilive.in/archives/15449

Related Articles

Leave a Reply

Your email address will not be published. Required fields are marked *

Back to top button