ಅಡಿಕೆ ಗಿಡ ನಾಶ

ಸುದ್ದಿಲೈವ್/ಶಿವಮೊಗ್ಗ

ಅಡಿಕೆ ಗಿಡಗಳನ್ನ ನಾಶಪಡಿಸಿರುವ ಘಟನೆ ಮಲವಗೊಪ್ಪದ ಚನ್ನಬಸವೇಶ್ವರ ದೇವಸ್ಥಾನ ಹಿಂಭಾಗದಲ್ಲಿರುವ ತೋಟದಲ್ಲಿ ನಡೆದಿದೆ.

ಮುತ್ಯಾ ನಾಯ್ಕ ಮತ್ತು ಸೇವಾನಾಯ್ಕ ಎಂಬುವರ. ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಫಸಲಿಗೆ ಬಂದ 41 ಗಿಡಗಳನ್ನ ಕಡಿದು ಹಾಕಿದ್ದಾರೆ. ಈ ಘಟನೆ ನಿನ್ನೆ ರಾತ್ರಿ ನಡೆದಿದೆ ಎಂದು ಮಾಲೀಕರು ತಿಳಿಸಿದ್ದಾರೆ.

ಚಾನೆಲ್ ಏರಿಯಾದ ಮೂಲಕ ನಮ್ಮ ತೋಟ ತಲುಪಲು ದಾರಿ ಇದ್ದು ಇಲ್ಲಿ ಅಡಿಕೆ ಸುಲಿಯುವವರ ಮನೆಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳಿವೆ. ಅಲ್ಲಿ ದುಷ್ಕರ್ಮಿಗಳ ಚಲನವಲನಗಳು ಪತ್ತೆಯಾಗಬಲ್ಲದು ಎಂದು ಮಾಲೀಕರು ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.

ಈಗಾಗಲೇ ತುಂಗ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಮಾಲೀಕರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ-https://suddilive.in/archives/14469

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close