ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಗಲಾಟೆ

ಸುದ್ದಿಲೈವ್/ಶಿವಮೊಗ್ಗ

ಗಾರ್ಡನ್ ಏರಿಯಾದ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಗಲಾಟೆ ನಡೆದಿದ್ದು, ದೂರು ಪ್ರತಿದೂರು ದಾಖಲಾಗಿದೆ. ವೇಟರ್ ಮೊಸರು ತರುವುದಾಗಿ ಹೇಳಿ ನಂತರ ಕಿಚನ್ ಕ್ಲೋಸ್ ಆಗಿದೆ ಎಂದು ತಿಳಿಸಿದ ವಿಚಾರವಾಗಿ ಗಲಾಟೆಯಾಗಿದ್ದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾರ್ ಅಂಡ್ ರೆಸ್ಟೋರೆಂಟ್ ಗೆ ಮುರುಡೇಶ್ವರ, ಹರೀಶ, ಚಕ್ರವರ್ತಿ ಎಂಬುವವರು ಊಟ ಮತ್ತು ಮದ್ಯಪಾನ ಮಾಡಲು ಬಂದಿದ್ದು, ಸುಮಾರು 9-30 ಕ್ಕೆ ಬಂದವರು, 10-30 ಕ್ಕೆ ಊಟ ಮಾಡುವ ವೇಳೆ ಮೊಸರು ಕೇಳಿದ್ದಾರೆ.

ಮೊಸರು ತರುವುದಾಗಿ ಹೇಳಿದ್ದ ವೇಟರ್ ನಂತರ ಕಿಚನ್ ಕ್ಲೋಸ್ ಮೊಸರು ಸಿಗುವುದಿಲ್ಲ ಎಂದಿದ್ದಾರೆ. ಈ ನಡುವೆ ಮಾತಿಗೆ ಮಾತು ಬೆಳೆದಿದೆ. ಗಲಾಟೆಯಾಗಿದೆ. ಈ ಮಧ್ಯೆ ಮುರುಡೇಶ್ವರರನ್ನ ಕೆಳಗೆ ಕರೆದುಕೊಂಡು ಬರುವವಾಗ ಗಾಯವಾಗಿದೆ.

ನಂತರ ಕೆಳಗೆ ಇಳಿದ ನಂತರ ಹರೀಶ, ಶ್ರೀಧರ, ಶಿವಕುಮಾರ 02 ಜನ ಹೆಣ್ಣು ಮಕ್ಕಳು ಸೇರಿ 08 ರಿಂದ 10 ಜನ ಬಾರ್ ನ ಕೆಳಗೆ ಒಳಗೆ ಬಂದು ಮಚ್ಚು ಹಿಡಿದು ಜೀವಬೆದರಿಕೆ ಹಾಕಿರುವುದಾಗಿವೇಟರ್ ಸಂಜಯ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರತಿದೂರಾಗಿ ಮುರುಡೇಶ್ವರ್ ರವರು ವೇಟರ್ ಗಳೇ ಮೊಸರಿನ ವಿಚಾರದಲ್ಲಿ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ. ಬಾರ್ ನ 5-6 ಜನ ಹುಡುಗರು ಬಿಯರ್ ಬಾಟಲಿಂದ ಹಲ್ಲೆ ಮಾಡಿದ್ದಾರೆ. ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ-https://suddilive.in/archives/15253

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close