ವಾಟಾರ್ ಬಾಟಲ್ ಗಾಗಿ ಮತದಾರರನ್ನ ವಾಪಾಸ್ ಕಳುಹಿಸಿದ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ರಾಹುಲ್ ಗಾಂಧಿ ಕಾರ್ಯಕ್ರಕ್ಕೆ ಆಗಮಿಸುತ್ತಿರುವ ಕಾರ್ಯಕರ್ತರನ್ನ, ಸಾರ್ವಜನಿಕರನ್ನ ಪ್ರವೇಶ ದ್ವಾರದಲ್ಲಿ ತಡೆಹಿಡಿಯುತ್ತಿರುವ ಭದ್ರತಾ ಪಡೆಯ ವಿರುದ್ಧ ಜನ ಜಗಳಕ್ಕೆ ಬಿದ್ದಿರುವ ದೃಶ್ಯಗಳು ಲಭ್ಯವಾಗಿದೆ.

ಶಿವಮೊಗ್ಗ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತ ಶಿವರಾಜ್ ಕುಮಾರ್ ಪರ ಚುನಾವಣೆ ಪ್ರಚಾರಕ್ಕಾಗಿ ಇಂದು ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮೊದಲಾದ ಘಟಾನುಘಟಿಗಳು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ಫ್ರೀಡಂ ಪಾರ್ಕ್ ನಲ್ಲಿ ಬಹಿರಂಗ ಸಭೆ ನಡೆಸಲಿದೆ.

ಈ ಬಹಿರಂಗ ಸಭೆಗೆ ಆಗಮಿಸುತ್ತಿರುವ ಸಾರ್ವಜನಿಕರಿಗೆ ಜೈಲ್ ನ ಪ್ರವೇಶ ದ್ವಾರದ ಬಳಿ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆಯ ವೇಳೆ ಬೀಡಿ, ಬೆಂಕಿಪಟ್ಟಣ, ವಾಟರ್ ಬಾಟಲ, ಟೋಪಿಗಳನ್ನೂ ಭದ್ರತಾ ಪಡೆಯವರು ವಶಕ್ಕೆ ಪಡೆದು ಕಾರಗಯ ಪಡೆಯುತ್ತಿದ್ದಾರೆ‌.

ಓರ್ವ ಕಾರ್ಯಕರ್ತನ ವಾಟರ್ ಬಾಟಲ್ ನ್ನ ಭದ್ರತಾ ಪಡೆಯವರು ಕಸಿದುಕೊಂಡಿದ್ದು ಇದರಿಂದ ಕೋಪಗೊಂಡ ಜಾರ್ಯಕರ್ತ ನಾನು ಹಣಕೊಟ್ಟು ತಂದಿದ್ದು ನಿಮಗೆ ಒಪ್ಪಿಸಿ ಹೋಗಲು ಅಲ್ಲ ಎಂದು ಜಗಳಕ್ಕೆ ನಿಂತಿದ್ದಾನೆ.

ಜನಸಾಮಾನ್ಯನ ಜೊತೆ ಎನ್ನುವ ಕಾಂಗ್ರೆಸ್ ಇಂತಹ ದೃಶ್ಯಗಳಿಂದ ಏನು ಸಾಧಿಸಲಿದೆ ಎಂಬ ಆಕ್ಷೇಪಗಳು ಕೇಳಿ ಬರುತ್ತಿದೆ. ಕಾರ್ಯಕ್ರಮದಲ್ಲಿ ಸೆಖೆಯ ಭಾಧೆ ಹೆಚ್ಚಾಗಿದೆ. ವಾಟರ್ ಬಾಟಲ್ ನ್ನ ಕಸಿದು ಕಳುಹಿಸುತ್ತಾರೆ ಎಂದರೆ ಇನ್ನು ಏನು ಹೇಳಬೇಕು.

ಇದನ್ನೂ ಓದಿ-https://suddilive.in/archives/14030

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket