ಸುದ್ದಿಲೈವ್/ಶಿವಮೊಗ್ಗ
ಶಿವಮೊಗ್ಗ ಜಿಲ್ಲೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಚೆನ್ನಳ್ಳಿ ಗ್ರಾಮದಲ್ಲಿ ಇಬ್ಬರು ಕೃಷಿ ಹೊಂಡಕ್ಕೆ ಬಿದ್ದು ಸಾವುಕಂಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಚೆನ್ನಳ್ಳಿಯಲ್ಲಿ ಕಾಲು ತೊಳೆಯಲು ಹೋದ ಒಬ್ಬ ಬಾಲಕನನ್ನ ರಕ್ಷಿಸಲು ಯೋದ ಯುವನೋರ್ವನು ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮಾಲತೇಶ್(28) ಹಾಗೂ ಮಹೇಶ್ ಪುತ್ರ ಅಭಯ್ (16) ಸಾವಿಗೀಡಾದ ದುರ್ಧೈವಿಗಳಾಗಿದ್ದಾರೆ.
ಅಶೋಕ್ ಎಂಬುವರ ಜಮೀನಿನಲ್ಲಿದ್ದ 10 ಅಡಿ ಆಳದ ಕೃಷಿ ಹೊಂಡದಲ್ಲಿ ಕಾಲು ತೊಳೆಯಲು ಹೋದಾಗ ಘಟನೆ ಸಂಭವಿಸಿದೆ. ಮೃತ ಅಭಯ್ ಅವರ ಜಮೀನಿನಲ್ಲಿ ಟ್ರಾಕ್ಟರ್ ನಿಂದ ನೆಗಿಲು ಹೊಡೆಯಲು ಮಾಲ್ತೇಶ್ ಜೊತೆ ಹೋಗಿದ್ದನು.
ಮಾಲ್ತೇಶ್ ಟ್ರಾಕ್ಟರ್ ಮಾಲೀಕ ಮತ್ತು ಡ್ರೈವರ್ ಆಗಿದ್ದಾರೆ. ಜಮೀನು ಹೂಡುವ ಜಾಗ ತೋರಿಸಲು ಅಭಯ್ ಜೊತೆಗೆ ತೆರಳಿದ್ದನು.ಅಭಯ್ ಶಿವಮೊಗ್ಗದ ಗಿರಿದೀಪಂ ಶಾಲೆಯ 9 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ಕಾಲು ತೊಳೆಯಲು ಹೋದ ಅಭಯ್ ನ ಕಾಲು ಜಾರಿದೆ. ಟ್ರ್ಯಾಕ್ಟರ್ ಮೇಲಿದ್ದ ಮಾಲ್ತೇಶ್ ಅಭಯ್ ನನ್ನ ರಕ್ಷಣೆ ಮಾಡಲು ಮುಂದಾಗಿದ್ದಾನೆ. ಕೃಷಿ ಹೊಂಡದಿಂದ ಮೇಲೆ ಬರಲು ಆಗದೇ ಹೊಂಡದಲ್ಲೇ ಇಬ್ವರೂ ಕೊನೆ ಉಸಿರು ಎಳೆದಿದ್ದಾರೆ. ಮಾಲತೇಶ್ ಗೆ ಮದುವೆ ಆಗಿ ಕೇವಲ ಎಂಟು ತಿಂಗಳುಗಳು ಕಳೆದಿತ್ತು.
ಸಾರ್ವಜನಿಕರ ಸಹಾಯದಿಂದ ಇಬ್ಬರ ಮೃತದೇಹವನ್ನ ಪೊಲೀಸರು ಹೊರತೆಗೆದಿದ್ದಾರೆ. ಮೃತದೇಹದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ರಾವಾನಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-https://suddilive.in/archives/15386