ಕ್ರೈಂ ನ್ಯೂಸ್

ಶಾಸಕ ಬೇಳೂರು ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ತೆಜೋವಧೆ-ದೂರು ದಾಖಲು

ಸುದ್ದಿಲೈವ್/ಶಿವಮೊಗ್ಗ

ಸಾಗರ ಕ್ಷೇತ್ರದ ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣ ರ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ತೆಜೋವಧೆ ಮಾಡಿದವರ ವಿರುದ್ಧ  ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ C M. ಚಿನ್ಮಯ್  ಅವರಿಂದ ಸಾಗರ ಪೇಟೆ ಪೋಲಿಸ್ ಠಾಣೆಗೆ ದೂರು ದಾಖಲಾಗಿದೆ.

ಸಾಗರ:ಕರ್ನಾಟಕ ರಾಜ್ಯ ಅರಣ್ಯ ಮತ್ತು ಕೈಗಾರಿಕೆ ನಿಗಮದ ಅಧ್ಯಕ್ಷರೂ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ರವರು ಶಾಸಕರು ಇತ್ತೀಚೆಗೆ ಸಾಗರದ ಶಿವಮೊಗ್ಗ ರಸ್ತೆಯಲ್ಲಿರುವ ಪ್ರಥಮ ದರ್ಜೆ ಕಾಲೇಜು ಮುಂಭಾಗದ ಅಂಗಡಿಯಲ್ಲಿ ಗುಟ್ಕಾ ಹಾಗೂ ಸಿಗರೇಟು, ಮೊದಲಾದ ತಂಬಾಕು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ಕತ್ತಾಗಿ ವೈರಲ್ ಆಗಿತ್ತು.

ಅದೇ ವಿಡಿಯೋವನ್ನು ದುರುಪಯೋಗ ಪಡಿಸಿಕೊಂಡ ಅಪರಿಚಿತನೊಬ್ಬ ಜನಪ್ರಿಯ ಶಾಸಕ ಗೋಪಾಲಕೃಷ್ಣ ಬೇಳೂರುರ ವಿರುದ್ಧ ಇನಸ್ಟಾಗ್ರಾಂ ನಲ್ಲಿ ಆಪಪ್ರಚಾರ ಮಾಡುವ ಉದ್ದೇಶದಿಂದ ಆರೋಪಿಯು ಇನ್ಸ್ಟ್ರಾಗ್ರಾಮ್ ನಲ್ಲಿ “khadeema_congress” ಎಂಬ  ಖಾತೆಯಿಂದ ವೀಡಿಯೋ ಒಂದನ್ನು ಹರಿಬಿಟ್ಟಿದ್ದನು.

ಆರೋಪಿಯು  ಶಾಸಕರಿಗೆ ತೋಜೋವಧೆ ಮಾಡುವ ಮತ್ತು ಆಗೌರವವನ್ನು ತೋರಿಸುವ ಪ್ರಯತ್ನವನ್ನು ಮಾಡಿದ್ದಾನೆ ಎಂದು ಆರೋಪಿಸಿ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ಸಿ.ಎಂ ಸಾಗರ ಪೇಟೆ ಠಾಣೆಗೆ ದೂರು ನೀಡಿದ್ದಾರೆ.

ಸಧ್ಯಕ್ಕೆ ಪೊಲೀಸರು ಎನ್ ಸಿ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಜರುಗಿಸುವ ಬಗ್ಗೆ ಚಿನ್ಮಯ್ ವಿಶ್ಬಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/15383

Related Articles

Leave a Reply

Your email address will not be published. Required fields are marked *

Back to top button