ತೆಂಗಿನ ಕಾಯಿ ಬಿದ್ದು ಗಂಭೀರವಾಗಿದ್ದ ಬಾಲಕ ಈಗ ಹೇಗಿದ್ದಾನೆ?

ಸುದ್ದಿಲೈವ್/ಶಿವಮೊಗ್ಗ

ರಾಷ್ಟ್ರೀಯ ಹೆದ್ದಾರಿಗೆ ವಾಲಿರುವ ತೆಂಗಿನ‌ಮರದಿಂದ ತೆಂಗಿನ‌ಕಾಯಿಯೊಂದು ಬಾಲಕನ‌ಮೇಲೆ ಬಿದ್ದ ಪ್ರಕರಣದಲ್ಲಿ ಬಾಲಕ ಈಗ ಚೇತರಿಸಿಕೊಂಡಿರುವ ಘಟನೆ ವರದಿಯಾಗಿದೆ.

ಗಾಜನೂರಿನಲ್ಲಿ ಮಹಾಬಲೇಶ್ವರ ಶೆಟ್ಟಿ ಅವರಿಗೆ ಸೇರಿದ ತೋಟದ ತೆಂಗಿನ ಮರವೊಂದು ರಾಷ್ಟ್ರೀಯ ಹೆದ್ದಾರಿಗೆ ವಾಲಿದ್ದು ಮೊನ್ನೆ 16 ವರ್ಷದ ಅಪ್ರಾಪ್ತನ ಮೇಲೆ ಬಿದ್ದ ಪರಿಣಾಮ ಗಂಭಿರ ಸ್ಥಿತಿಗೆ ತಲುಪಿದ್ದನು.

ಗಾಜನೂರಿನ ವೆಕ್ ಪೋಸ್ಟ್ ಬಳಿ ಅಣ್ಣಪ್ಪನವರ ಜೊತೆ ಈ ಬಾಲಕ ಬರುವ ವೇಳೆ ಮಳೆ ಗಾಳಿಗೆ ತೆಂಗಿನ‌ಮರದ ತೆಂಗಿನ ಕಾಯಿ ಬಾಲಕನ‌ಮೇಲೆ ಬಿದ್ದಿತ್ತು. ಗಂಭೀರ ಸ್ಥಿತಿಗೆ ತಲುಪಿದ್ದ ಬಾಲಕನಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿದೆ.

ಇದರಿಂದಾಗಿ ಆತ ಈಗ ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ. ತೋಟದ ಮಾಲೀಕರಿಗೆ ಅಪಾಯದ ಬಗ್ಗೆ ಗೊತ್ತಿದ್ದರೂ ಮರ ತೆರವುಗೊಳಿಸಲ್ಲವೆಂದು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷದ ವಿರುದ್ಧ ತುಂಗನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಮಕ್ಕೆ ತಲುಪಿದ್ದ ಬಾಲಕ ಈಗ ಚೇತರಿಸಿಕೊಂಡಿದ್ದಾನೆ. ಆತನನ್ನ ಪೋಷಕರು ಮನೆಗೆ ಕರೆದೊಯ್ದಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಮೊದಲು ದಾಖಲಾಗಿದ್ದನಂತರ ಹೆಚ್ಚಿನ‌ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತರಿಕೆಗೊಂಡ ಹಿನ್ನಲೆಯಲ್ಲಿ ಮನೆಯಲ್ಲೇ ಆರೈಕೆ ಮಾಡಲಾಗುತ್ತಿರುವುದಾಗಿ ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/15440

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close