ರಾಜಕೀಯ ಸುದ್ದಿಗಳು

ಪಿಎಂಗೆ ಲೆಟರ್ ಬರೆಯೋಕೆ ಮುಖ್ಯಮಂತ್ರಿಗಳಿಗೆ ಏನು ಅಧಿಕಾರವಿದೆ?ಆರಗ

ಸುದ್ದಿಲೈವ್/ಶಿವಮೊಗ್ಗ

ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹರಿಹಾಯ್ದಿದ್ದಾರೆ. ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಅಮಾನುಷ, ಯಾರೂ ಒಪ್ಪಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ‌ ಪ್ರಕರಣವನ್ನ SIT ಗೆ  ಒಪ್ಪಿಸಲಾಗಿದೆ.  ಆದರೆ ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕಾರಣ ಮಾಡ್ತಾ ಇದೆ. ಇದು ಸಮಾಜದಲ್ಲಿ ಹೇಸಿಕೆ ಹುಟ್ಟಿಸಿದೆ. SIT ಸ್ವತಂತ್ರ ನಿರ್ವಹಣೆ ಮಾಡೋದಕ್ಕೆ ಬಿಡ್ತಿಲ್ಲ ಎಂದು ದೂರಿದರು.

ಕಾಂಗ್ರೆಸ್ ನವರು ಹೇಳಿದವರನ್ನ ಅರೆಸ್ಟ್ ಮಾಡ್ತಾ ಇದ್ದಾರೆ. ತನಿಖೆ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಹೇಳಿಕೆ ನೋಡಿದ್ದೇನೆ. ಪಿಎಂಗೆ ಎರಡು ಲೆಟರ್ ಬರೆದಿದ್ದೇನೆಂದು ಹೇಳಿದ್ದಾರೆ. ಇಲ್ಯಾರೂ ಹೆಬ್ಬೆಟ್ಟಿನವರು ಅಧಿಕಾರದಲ್ಲಿಲ್ಲ. ನಾನು ಗೃಹ ಸಚಿವನಾಗಿದ್ದವ, ಪತ್ರ ಮೂಲಕ ಪಾಸ್ ಪೋರ್ಟ್ ರದ್ಧತಿ ಹೇಳಿಕೆ ಬಾಲಿಶವಾದುದ್ದು ಎಂದು ಹೌಹಾರಿದ್ದಾರೆ.

ಅಮಿತ್ ಶಾ, ಮೋದಿಗೆ ಲೆಟರ್ ಬರೆಯೋದಲ್ಲ. SIT ನೇ ಪತ್ರ ವ್ಯವಹಾರ ಮಾಡಬೇಕು. ಇವರು ಕಾಗದ ಬರೆಯಬೇಕು, ಸೆಂಟ್ರಲ್ ಉತ್ತರ ನೀಡಬೇಕು. ಪ್ರಚಾರ ಪಡೆಯಲು ಪ್ರಕರವನ್ನೇ ಅನ್ಯಾಯದ ದಿಕ್ಕಿಗೆ ಒಯ್ತುತ್ತಿದ್ದಾರೆ. ಇಳಿವಯಸ್ಸಿನ ದೇವೆಗೌಡರಿಗೆ ಚುಡಾಯಿಸೋದು ಸರಿ ಅಲ್ಲ ಎಂದು ದೂರಿದ್ದರು.

ಅವರೇ ಕಳಿಸಿದ್ದಾರೆಂಬ ದಾಖಲೆ ಇದ್ದರೆ ಗೌಡ್ರು ಮೇಲೆ ಪ್ರಕರಣ ದಾಖಲಿಸಲಿ. ಪ್ರಕರಣವನ್ನ ರಾಜಕಾರಣಕ್ಕೆ ಚೆನ್ನಾಗಿ ಉಪಯೋಗಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಲೆಟರ್ ಬರೆಯೋದಕ್ಕೆ ಯಾರು? SIT ಲೆಟರ್ ಬರೆಯಬೇಕು ಎಂದು ಗುಡುಗಿದ್ದಾರೆ.

ಇದನ್ನೂ ಓದಿ-https://suddilive.in/archives/15434

Related Articles

Leave a Reply

Your email address will not be published. Required fields are marked *

Back to top button