ಸೂಡಾ ಶೆಡ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸೂಡಾ ಶೆಡ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಆಗಸ್ಟ್ 30, 2024

ಸೂಡಾ ಶೆಡ್ ಅಧ್ಯಕ್ಷರ ಅಂಗಳಕ್ಕೆ?


ಸುದ್ದಿಲೈವ್/ಶಿವಮೊಗ್ಗ


ಸೂಡಾ ಕಚೇರಿ ಮುಂದೆ ಸೂಡಾ ಶೆಡ್ ತೆರವುಗೊಳಿಸಿ ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆ ನಡೆಸುತ್ತಿದ್ದ ಪ್ರತಿಭಟನೆ ಇಂದಿಗೆ ನಿಲ್ಲಿಸಿದೆ. ನಿನ್ನೆ ಶಾಸಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ವೇದಿಕೆಯ ವಸಂತ್ ಕುಮರ್ ವಾಟ್ಸಪ್ ಮೆಸೇಜ್ ವೊಂದನ್ನ ಹಾಕಿದ್ದು ಧನ್ಯವಾದ ತಿಳಿಸಿದ್ದಾರೆ. 


ಈ ಕುರಿತು ಸೂಡಾ ಆಯುಕ್ತರೊಂದಿಗೆ ಬೆಳಿಗ್ಗೆ ಮಾತನಾಡಿಸಲಾಯಿತು. ಮಾಸ್ಟರ್ ಪ್ಲಾನ್ ನಲ್ಲಿ ತಪ್ಪಾಗಿದೆ. ಆದರೆ ಈ ಸೂಡಾ ಜಾಗದಲ್ಲಿ ದ್ವಿಚಕ್ರ ವಾಹನ ಓಡಾಡಲು ಅವಕಾಶ ನೀಡಲಾಗಿದೆ. 


ನಮ್ಮ ದಾಖಲಾತಿ ಪ್ರಕಾರ ಅದು ನಮ್ಮ ಜಾಗನೇ. ಮಾಸ್ಟರ್ ಪ್ಲಾನ್ ನಲ್ಲಿ ತಪ್ಪಾಗಿದೆ. ಅದಕ್ಕಾಗಿ ನಿನ್ನೆ ಪಾಲಿಕೆ ಮತ್ತು ಸೂಡ ಅಧಿಕಾರಿಗಳಿಂದ ಜಂಟಿ ಸರ್ವೆ ನಡೆಸಲಾಗಿದೆ. ಪಾಲಿಕೆ ಜಾಗವೆಂದು ವರದಿ ಬಂದರೆ ಜಾಗ ಬಿಟ್ಟುಕೊಡುತ್ತೇವೆ. ಆದರೆ ನಾನು ಒಬ್ಬನೇ ಇಲ್ಲ. ಸೂಡಾ ಅಧ್ಯಕ್ಷರೂ ಇದ್ದಾರೆ. ಅವರ ನಿರ್ಣಯಕ್ಕೆ ಬಿಡಲಾಗಿದೆ ಎಂದರು. 




ಇದರಿಂದ ಇತ್ಯಾರ್ಥ್ಯ ಬಗೆಹರಿಯಿತು ಎನ್ನುವುದಕ್ಕಿಂತ ಸೂಡ ಅಧ್ಯಕ್ಷರ ಅಂಗಳಕ್ಕೆ ಈ ಪ್ರಕರಣ ಬಿದ್ದಿದೆ. ಜಂಟಿ ಸರ್ವೆ ಏನೇ ಬಂದರೂ ಸೂಡಾ ಅಧ್ಯಕ್ಷರ ಅಂಗಳಕ್ಕೆ  ಹೋಗುವುದರಿಂದ ಏನಾಗಲಿದೆ ಎಂಬುದು ಕುತೂಹಲ ಮೂಡಿಸಿದೆ. 


ಬುಧವಾರ, ಆಗಸ್ಟ್ 28, 2024

ಸೂಡಾ ಶೆಡ್ ಪರ ವಿರುದ್ಧದ ಹೋರಾಟ

 


ಸುದ್ದಿಲೈವ್/ಶಿವಮೊಗ್ಗ


ಚಿತ್ರದುರ್ಗದ ರೇಣುಕಾಚಾರ್ಯರ ಹತ್ಯೆ ಪ್ರಕರಣದಲ್ಲಿ ಶೆಡ್ ನ ವಿಷಯ ಕರ್ನಾಟದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದರೆ ವಿನೋಬ ನಗರದ ಸೂಡ ಕಚೇರಿಯಲ್ಲಿನ ಶೆಡ್ ಈಗ ಎರಡು ಸಂಘಟನೆಯ ಪ್ರತಿಭಟನೆ ಕಾರಣವಾಗಿದೆ.


ಇಂದು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆಗಳ ಒಕ್ಕೂಟ ರಸ್ತೆಯ ಮೇಲೆ ಸೂಡದವರು ಕಚೇರಿ ನೌಕರರ ವಾಹನ ನಿಲುಗಡೆಗೆ ನಿರ್ಮಿಸಿರುವ ಅನಧಿಕೃತ ಶೆಡ್ ತರವಿಗೆ ಅಹೋ ರಾತ್ರಿ ಧರಣಿಗೆ ಮುಂದಾಗಿದ್ದಾರೆ.


ತಕ್ಷಣವೇ ರಸ್ತೆಯಲ್ಲಿರುವ ಶೆಡ್ ತೆರವುಗೊಳಿಸಬೇಕು. ಸಾರ್ವಜನೊಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಕಾನೂನು ಬಾಹಿರವಾಗಿ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಸೂಡ ಆಯುಕ್ತ ವಿಶ್ವನಾಥ್ ಮುತ್ತಜ್ಜಿ, ನಗರ ಯೋಜನೆ ಸದಸ್ಯೆ ರೂಪ, ಸಹಾಯಕ ಇಂಜಿನಿಯರ್ ಬಸವರಾಜುಮತ್ತು ಗಂಗಾಧರ್ ಸ್ವಾಮಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವೇದಿಕೆ ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದೆ.


ಆದರೆ ಇದರ ವಿರುದ್ಧವಾಗಿ ಭಗತ್ ಸಿಂಗ್ ಕನ್ನಡ ಯುವಕ ಸಂಘ ಶೆಡ್ ತೆರವುಗೊಳಿಸಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದೆ. ಭಗತ್ ಸಿಂಗ್ ಕನ್ನಡ ಯುವಕ ಸಂಘದ ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.


ಶೆಡ್ ನ್ನ ನಿರ್ಮಾಣ ಪ್ರಾಧಿಕಾರದ ಕಟ್ಟಡ ನಕ್ಷೆಯಂತೆಯೇ ಪಾರ್ಕಿಂಗ್ ಜಾಗದಲ್ಲಿ ನಿರ್ಮಿಸಿರುವುದು ಸರಿಯಿದೆ. ಸೂಡಾ ಮತ್ತು ಪಾಲಿಕೆ ಜಂಟಿ ಕಾರ್ಯಾಚರಣೆ ನಡೆಸಿ ವರದಿ ಸಲ್ಲಿಸಿದ ಮೇಲೆ ಮುಂದಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ. ಸೂಡಾ ಶೆಡ್ ನ ತೆರವಿನ ಹೋರಾಟದ ಹಿಂದೆ ವೇದಿಕೆಯು ಬೇರೆಂದು ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡಲು ಹೊರಟಿದೆ ಎಂದು ಕನ್ನಡ ಯುವಕರ ಸಂಘ ದೂರಿದೆ.


ಒಟ್ಟಿನಲ್ಲಿ ಎರಡೂ ಸಂಘಟನೆಗಳ ಹೋರಾಟ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕಾದು ನೋಡಬೇಕಿದೆ.