ಸಾವು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಾವು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಸೆಪ್ಟೆಂಬರ್ 18, 2024

ಮರಳಿಗಾಗಿ ಚಾಕು ಇರಿತ-ಓರ್ವ ಸಾವು, ಓರ್ವ ಮೆಗ್ಗಾನ್‌ಗೆ ದಾಖಲು



ಸುದ್ದಿಲೈವ್/ದಾವಣಗೆರೆ


ಮರಳಿನ‌ ವಿಚಾರಕ್ಕೆ ಎರಡು ಗ್ರಾಮಗಳ ಗ್ರಾಮಸ್ಥರ ನಡುವೆ ಘರ್ಷಣೆ ಉಂಟಾಗಿದೆ. ಇಬ್ಬರಿಗೆ ಚಾಕು ಇರಿತ ಉಂಟಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿ ಹಾಗೂ ಕಡಕಟ್ಟೆ ಗ್ರಾಮಗಳಲ್ಲಿ ನಡೆದಿದೆ. 


ಶಿವರಾಜ್ (33) ಎಂಬ ವ್ಯಕ್ತಿ ಸಾವು ಕಂಡಿದ್ದು, ಇನ್ನೊಬ್ಬ ಭರತ್ ಗೆ ತೀವ್ರಗಾಯ ಉಂಟಾಗಿದೆ. ಗಾಯಾಳನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಗೆ ದಾಖಲಿಸಲಾಗಿದೆ.


ಮರಿಗೊಂಡನಹಳ್ಳಿ ಹಾಗೂ ಕಡದಕಟ್ಟೆ ಗ್ರಾಮಸ್ಥರ ನಡುವೆ ಘರ್ಷಣೆ ಉಂಟಾಗಿದೆ. ಎರಡು ಗ್ರಾಮಗಳ ವ್ಯಾಪ್ತಿಯಲ್ಲಿನ  ತುಂಗಭದ್ರ ನದಿ‌ಪಾತ್ರದ ಮರಳಿಗಾಗಿ ಘರ್ಷಣೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಸ್ಥಳಕ್ಕೆ ಹೊನ್ನಾಳಿ  ಮತ್ತು ನ್ಯಾಮತಿ ಪೊಲೀಸರ ಭೇಟಿ ನೀಡಿದ್ದಾರೆ. 

ಗುರುವಾರ, ಸೆಪ್ಟೆಂಬರ್ 5, 2024

ಮರ್ಮಾಂಗಕ್ಕೆ ಹೊಡೆತ ಬಿದ್ದು ಪ.ಬಂಗಾಳದ ಕೂಲಿ ಕಾರ್ಮಿಕ ಸಾವು

 


ಸುದ್ದಿಲೈವ್/ಶಿವಮೊಗ್ಗ


ತೋಟದಲ್ಲಿ ಕೆಲಸ ಮಾಡುವಾಗ ಜೆಸಿಬಿ ವಾಹನ ಚಾಲಕ ಮಾಡಿದ್ದ ನಿರ್ಲಕ್ಷತನದಚಾಲನೆಯಿಂದಾಗಿ ಪಶ್ಚಿಮ ಬಂಗಾಳದಿಂದ ಬದುಕು ಕಟ್ಟಿಕೊಳ್ಳಲು ಬಂದಿದ್ದ 41 ವರ್ಷದ ಮದ್ಯವಯಸ್ಕನೋರ್ವ ಅಸು ನೀಗಿದ್ದಾನೆ.


ಪಶ್ಚಿಮ ಬಂಗಾಳದಿಂದ ಶಿವಮೊಗ್ಗದ ಚೇತನ್ ಕುಮಾರ್ ಅವರ ಅಡಿಕೆ ತೋಟ ಮತ್ತು ಅವರ ಪುಷ್ಪ ಕ್ರಶರ್ ನಲ್ಲಿ ಕೆಲಸಕ್ಕೆ ಬಂದಿದ್ದ ಅಜಿತ್ ಕುಮ್ರಿ, ಜಿತನ್ ಕುಮ್ರಿ ಮತ್ತು ಸುಬಾಲ್ ಕುಮ್ರಿ ಎರಡು ವರ್ಷದ ಕೆಳಗೆ ಕೆಲಸಕ್ಕೆ ಬಂದಿರುತ್ತಾರೆ. ತಾಲೂಕಿನ ಇಂದಿರಾ ನಗರದ ಸರ್ವೆ ನಂಬರ್ 112 ರಲ್ಲಿ ತೋಟ ಮಾಡಿಕೊಂಡಿದ್ದರು.


ಸೆ. 3 ರಂದು ತೋಟದಲ್ಲಿ ಅಜಿತ್ ಕುಮ್ರಿ, ಫಕೀರಪ್ಪ ತೋಟದಲ್ಲಿ ಕೆಲಸ ಮಾಡುವಾಗ ಜೆಸಿಬಿ ತೋಟದಲ್ಲಿ ಕೆಎ 16 ಎಂ 8331 ಕ್ರಮ ಸಂಖ್ಯೆಯ ಜೆಸಿಬಿಯನ್ನ ಚಲಾಯಿಸುತ್ತಿದ್ದ ವಿಜಯಕಾಂತ್ ಎಂಬಾತನು ಚಲಾಯಿಸುತ್ತಿದ್ದನು.


ಮರದ ಬಳಿ ನಿಂತಿದ್ದ ಅಜಿತ್ ಕುಮ್ರಿಗೆ ಹಿಂದಿನಿಂದ ಅಜಾಗರೂಕತೆಯಿಂದ ಜೆಸಿಬಿಯನ್ನ ವಿಜಯ ಕಾಂತ್  ಚಲಾಯಿಸಿದ ಪರಿಣಾಮ ಜೆಸಿಬಿಯ ಬಕೆಟ್ ತಗುಲಿದೆ. ಜೆಸಿಬಿಯ ಬಕೆಟ್ ತಗುಲಿದ ಪರಿಣಾಮ ಅಮಿತ್ ಕುಮ್ರಿಯ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದಿದೆ.


ಉಸಿರುಗಟ್ಟಿ ಒದ್ದಾಡುತ್ತಿದ್ದ ಕುಮ್ರಿಯನ್ನ ಬೈಕ್ ನಲ್ಲಿ ಕೂರಿಸಿಕೊಂಡು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದ ಕಾರಣ ಅಜಿತ್ ಅಸು ನೀಗಿದ್ದಾನೆ. ಜೆಸಿಬಿ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ಕುಟುಂಬ ತುಂಗ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ. 

ಶನಿವಾರ, ಆಗಸ್ಟ್ 24, 2024

ನಾಯಿ ಕಡಿತ-ಮಹಿಳೆ ಸಾವು



ಸುದ್ದಿಲೈವ್/ಶಿವಮೊಗ್ಗ


ಬೀದಿನಾಯಿಯ ಕಡಿತಕ್ಕೊಳಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋರ್ವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಆ. 23 ರಂದು ನಡೆದಿದೆ.


ಹೊಸನಗರ ಪಟ್ಟಣದ  ಎಂ ಗುಡ್ಡೇಕೊಪ್ಪದ ನಿವಾಸಿ ಸಂಗೀತ (38) ಎಂಬುವರೇ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಕೆಲ ವರ್ಷಗಳ ಹಿಂದೆ ಇವರ ಪತಿ ಮೃತರಾಗಿದ್ದರು. ಇವರಿಗೆ ಓರ್ವ ಪುತ್ರ ಹಾಗೂ ಪುತ್ರಿಯಿದ್ದಾರೆ.


ಕಳೆದ ಸರಿಸುಮಾರು 2 ತಿಂಗಳ ಹಿಂದೆ ಇವರು ತೋಟಕ್ಕೆ ಹೋಗಿ ಬರುವಾಗ, ಬೀದಿ ನಾಯಿಯೊಂದು (stray dog) ಕಚ್ಚಿದೆ . ನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಸೂಕ್ತ ಚಿಕಿತ್ಸೆ ಪಡೆದುಕೊಂಡಿರಲಿಲ್ಲ ಎನ್ನಲಾಗಿದೆ.


ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿತ್ತು. ಹೊಸನಗರ ಆಸ್ಪತ್ರೆಗೆ (hosanagara govt hospital) ದಾಖಲಿಸಿದ್ದು, ಈ ವೇಳೆ ನಾಯಿ ಕಡಿತದಿಂದ ರೇಬೀಸ್(rabies) ಉಲ್ಬಣಿಸಿರುವುದು ಪತ್ತೆಯಾಗಿತ್ತು.


ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.