ಸಂಸದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಂಸದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಸೆಪ್ಟೆಂಬರ್ 12, 2024

ಆಸ್ಪತ್ರೆ ಜಾಗ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ಆಯನೂರು ಆರೋಪಕ್ಕೆ ಸಂಸದರಿಂದ ಸ್ಪಷ್ಟನೆ




ಸುದ್ದಿಲೈವ್/ಶಿವಮೊಗ್ಗ


ಕಾಂಗ್ರಸ್ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ  ಬಂದು ಒಂದುವರೆ ವರ್ಷ ಕಳೆದಿದೆ ಜನ ಸರ್ಕಾರವನ್ನ ಯಾಕೆ ತಂದವಿ ಎಂದು ಶಾಪಹಾಕುತ್ತಿದ್ದಾರೆ ಎಂದು ಸಂಸದ ರಾಘವೇಂದ್ರ ದೂರಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಡ ಹಗರಣದ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಇಡಿ ಸಚಿವ ನಾಗೇಂದ್ರರವರ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ. ಆದರೆ ಎಸ್ಐಟಿಯು ಸಚಿವರ ಮೇಲೆ ಒಂದೂ ಆರೋಪನೂ ಮಾಡದೆ ಇರುವುದನ್ನ ಜನ ಗಮನಿಸುತ್ತಿದ್ದಾರೆ. ರಾಜ್ಯದ ತನಿಖಾ ಸಂಸ್ಥೆಯನ್ನ ರಾಜ್ಯ ಸರ್ಕಾರ ಎಲ್ಲಿಗೆ ತಂದು ನಿಲ್ಲಿಸಿದೆ ಎಂದು ದೂರಿದರು. 


ಈ ವಿಚಾರವನ್ನ ಡೈವರ್ಟ್ ಮಾಡಬೇಕು ಎಂದು ದೂರಾಲೋಚನೆಯಿಂದ ನಮ್ಮ ಕುಟುಂಬದ ಮೇಲೆ ಕಾಂಗ್ರೆಸ್ ಕೆಪಿಸಿಸಿ ವಕ್ತಾರ ಮೂಲಕ ಆರೋಪ ಮಾಡುತ್ತಿದೆ. ಜನ ನನಗೆ ನಾಲ್ಕು ಬಾರಿ ಆಶೀರ್ವಾದಿಸಿದ್ದಾರೆ. ಕಾಂಗ್ರೆಸ್ ವಕ್ತಾರರು ಶಿವಮೊಗ್ಗದಲ್ಲಿ ಎರಡು ಬಾರಿ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ. ಈ ಆರೋಪಗಳಿಗೆ ಚುನಾವಣೆಯಲ್ಲಿ ಉತ್ತರ ಕೊಡಲಾಗಿದೆ ಎಂದರು. 


ಆರೋಪಗಳ ಬಗ್ಗೆ ತಲೆ ಕೆಡೆಸಿಕೊಳ್ಳಲ್ಲ. ಆದರೆ ಸುಳ್ಳನ್ನ ನೂರು ಬಾರಿ ಹೇಳುವ ಮೂಲಕ ಸತ್ಯ ಮಾಡಲು ಹೊರಟಿದ್ದಾರೆ. ಆಸ್ಪತ್ರೆ ನಿರ್ಮಾಣದ ವೇಳೆ ಕೆಐಡಿಬಿ ದುರ್ಬಳಕೆ ಆಗಿದೆ ಎಂದು ದೂರಲಾಗಿದೆ. ಏಕಕೋಶದ ಅಡಿ ಐದು ಎಕರೆಯಲ್ಲಿ ಖರೀದಿಯಾಗಿದೆ. ಸಂಬಂಧಿಕರ ಜಾಗವನ್ನ ಕೆಐಡಿಬಿ ಮೂಲಕ ಖರೀದಿಸಿ ನಂತರ ನಾವು ಖರೀದಿಸಿದ್ದೇವೆ.‌


ಈ ರೀತಿ ಏಕೆಂದರೆ ಹಲವಾರು ಇಲಾಖೆಗಳಿಂದ ಎನ್ ಒಸಿ ಪಡೆಯುವುದನ್ನ ತಪ್ಪಿಸಲು ಈ ರೀತಿಯ ಖರೀದಿ ಮಾಡಲಾಗಿತ್ತು. ಈ ರೀತಿ ಖರೀದಿಸಲು ಕೆಐಡಿಬಿಯಲ್ಲಿ ಅವಕಾಶವಿದೆ. ಇದರಲ್ಲಿ ಯಾವ ತಂತ್ರಗಾರಿಕೆಯೂ ಅಡಗಿಲ್ಲ ಎಂದು ಸ್ಪಷ್ಟಪಡಿಸಿದರು. 


10‌ಲಕ್ಷಕ್ಕೆ ಖರೀದಿಸಿದ ಕೆಐಡಿಬಿ 14 ಲಕ್ಷಕ್ಕೆ  ಮಾರಾಟ ಮಾಡಿದೆ.  ಇತರೆ ಇಲಾಖೆಗಳಿಂದ ಎನ್ ಒಸಿ ಪಡೆಯುವ ಗೋಜು ತಪ್ಪಿದೆ. ಇಲ್ಲಿ ದುರುಪಯೋಗ ಪಡಿಸಿಕೊಂಡಿಲ್ಲ. ಬೇನಾಮಿ ಆಸ್ತಿ ಎಂದು ದೂರಲಾಗಿದೆ. 


ಆಯನೂರು ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮೌನವಾಗಿದ್ದರು. ಅವರ ವಿರುದ್ಧವೇ ಆಯನೂರು ನಮ್ಮ ಪಕ್ಷದಲ್ಲಿದ್ದಾಗ ಆರೋಪಿಸಿದ್ದರು. ಈ ಹಿಂದೆ  ಮಧು ಬಂಗಾರಪ್ಪನವರ ಜೂಲ್ ನಾಯಿಗೆ ಹೋಲಿಸಿದ್ದರು. ಗೀತ ಶಿವರಾಜ್ ಕುಮಾರ್ ವಿರುದ್ಧ ಕರಡಿ ಕುಣಿತ ಎಂದು ದೂರಿದ್ದರು. ಇಲ್ಲಿದ್ದಾಗ ಆ ಪಕ್ಷಕ್ಕೆ, ಆ ಪಕ್ಷಕ್ಕೆ ಹೋದಾಗ ನಮ್ಮ ಪಕ್ಷದ ವಿರುದ್ಧ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.


ಅವರ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಅದನ್ನ ಡೈವರ್ಟ್ ಮಾಡಲು ಯತ್ನಿಸಲಾಗಿದೆ. ತಂತ್ರಗಾರಿಕೆ ಎಂದು ದೂರಿದ್ದಾರೆ. ಅದು ಸರ್ಕಾರಿ ಭೂಮಿ ಅಲ್ಲ. ಸಿಂಗಲ್ ವಿಂಡೋದಲ್ಲಿ ಖರೀದಿಸಲಾಗಿದೆ. ಮಿನಿ ಮೂಡ ಹಗರ ಎನ್ನುತ್ತಾರೆ. ಸಿದ್ದರಾಮಯ್ಯ ಪ್ರಕರಣ ಡಿನೋಟಿ ಫೈ ಲ್ಯಾಂಡ್ ಮಾಡಿಕೊಂಡು ಬೇರೆಯವರಿಗೆ ಮಾರಲಾಗಿದೆ. ಇದನ್ನ ನಮ್ಮ ಆಸ್ಪತ್ರೆ ಲ್ಯಾಂಡ್ ಗೆ ಹೋಲಿಸಿ ಮಾತನಾಡಿದ್ದಾರೆ. ಇದು ಅವರಿಗೆ ಶೋಭ ತರಲ್ಲ ಎಂದರು.


ಗಣಪತಿ ಹಬ್ಬ ಬಂದರೆ ಗೃಹ ಇಲಾಖೆಗೆ ಟೆನ್ಷನ್ ಆಗುತ್ತೆ. ಹಬ್ಬ ಆಚರಣೆಗೆ ನೂರಾರು ಕಂಡೀಷನ್ ಹಾಕುತ್ತರೆ. ಪುಣೇದಹಳ್ಳಿಯಲ್ಲಿಯಲ್ಲೂ 7 ಗಂಟೆ ಒಳಗೆ ಗಣಪತಿ ವಿಸರ್ಜಿಸುವಂತೆ ನಿರ್ಬಂಧಿಸಲಾಗಿದೆ. ಪರಮೇಶ್ವರ್ ಅವರು ನೆಲಮಂಗಲ ಘಟನೆಯನ್ನ ಸಣ್ಣ ಘಟನೆ ಎಂದಿದ್ದಾರೆ. ಸಣ್ಣದು ದೊಡ್ಡದಾಗದಂತೆ ತಡೆಯಲಿ ಹಾಗಂತ ಗಣಪತಿ ಮೆರವಣಿಗೆಯನ್ನೇ ತಡೆಯುವ ಕೆಲಸ ಆಗಬಾರದು ಎಂದರು. 

ಮಂಗಳವಾರ, ಸೆಪ್ಟೆಂಬರ್ 10, 2024

ಸಂಸದರಿಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತ್ತೆ ಆಯನೂರು ಟಕ್ಕರ್


ಸುದ್ದಿಲೈವ್/ಶಿವಮೊಗ್ಗ


ನಾನು ಕ್ಷಮೆ ಕೇಳಲ್ಲ‌ ಯಡಿಯೂರಪ್ಪನವರ ಹೆಸರು ಕೆಡೆಸುತ್ತಿರುವುದೇ  ಅವರ ಮಕ್ಕಳಿಂದ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ,  ಉಪಾಧ್ಯಕ್ಷ ಹರತಾಳು ಹಾಲಪ್ಪ, ಸಂಸದ ರಾಘವೇಂದ್ರ ಹಾಗೂ ಮಾಜಿ ಎಂಎಲ್‌ಸಿ ರಯದ್ರೇಗೌಡರಿಗೆ ನೇರವಾಗಿ ತಾಕೀತು ಮಾಡಿದ್ದಾರೆ.  


ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಕೆಐಡಿಬಿ ಭೂಮಿ, ಪತ್ರಕರ್ತರ ಸೈಟು, ಟೋಲು ಬಗ್ಗೆ  ಬಿಜೆಪಿ ರಾಜ್ಯಾಧ್ಯಕ್ಷ ವಿಜೇಂದ್ರ ಮತ್ತು ರಾಘವೇಂದ್ರ ಅವರ ವಿರುದ್ಧ ಆರೋಪ ಮಾಡಿದ್ದೆ. ಅದನ್ನ ಗಮನಿಸದೆ ಮಾಜಿ ಶಾಸಕರಾದ ಹಾಲಪ್ಪ, ರುದ್ರೇಗೌಡರು ಸುದ್ದಿಗೋಷ್ಠಿ ನಡೆಸಿ ನಾನೇ ಯಡಿಯೂರಪ್ಪನವರ ಜೊತೆ ಇದ್ದುಕೊಂಡು ಈಗ ಹೊರಬಂದು ಆರೋಪಮಾಡಿದ್ದಾರೆ. ನಾನು ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ನನ್ನ ಪ್ರಶ್ನೆನೆ ಅರ್ಥೈಸಿಕೊಳ್ಳದೆ ಕ್ಷಮೆ ಕೇಳಬೇಕು ಎಂದು ಮಾಜಿ ಶಾಸಕರ ಹೇಳಿಕೆ ದಿಕ್ಕುತಪ್ಪಿಸುವ ಯತ್ನವಾಗಿದೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದರು. 



ಯಾವತ್ತೂ ಯಡಿಯೂರಪ್ಪನವರ ಪರವಾಗಿ ನಿಲುವು ತಾಳದ ಹರತಾಳು ಹಾಲಪ್ಪನವರು ನಾನು ಕ್ಷಮೆ ಕೇಳಬೇಕು ಎಂದಿದ್ದಾರೆ. ಬಿಎಸ್ ವೈ ವಿರುದ್ಧ ವಾಗ್ದಾಳಿ ನಡೆಸಿದಾಗ, ನಾನು ಮತ್ತು ರೇಣುಕಾಚಾರ್ಯ ಬಿಟ್ಟರೆ ಯಾವ ನಾಯಕರು ಮಾತನಾಡಲಿಲ್ಲ ಎಂದರು. 


ರಾಘವೇಂದ್ರ ಮತ್ತು ವಿಜೇಂದ್ರ ಅವರ ಭ್ರಷ್ಠಾಚಾರದ ಬಗ್ಗೆ ಮಾತನಾಡಿದರೆ ಸಮಂಜಸವಾದ ಉತ್ತರ ನೀಡಲಿಲ್ಲ. ಹಾಲಪ್ಪನವರು ಬಂಗಾರಪ್ಪನವರನ್ನ‌ಬಿಟ್ಟು ಬಂದು ಬಂಗಾರಪ್ಪನವರ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ.  ಸರಿ ಒಪ್ಪಿಕೊಳ್ಳುವೆ ಬಂಗಾರಪ್ಪನ ಬಗ್ಗೆ ಅವರು ಮಾತನಾಡಿಲ್ಲ. ಆದರೆ ಆಗ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪನವರ ವಿರುದ್ಧ ಮಾತನಾಡಿಲ್ವಾ? ಹಾಗೆ ನಾನು ಸಹ ರಾಘವೇಂದ್ರ ಮತ್ತು ವಿಜೇಂದ್ರರವರ ಬಗ್ಗೆ ಮಾತನಾಡಿದ್ದೀನಿ. 


ಯಡಿಯೂರಪ್ಪನವರು ರಾಜವಂಶಸ್ಥರ ಕುಟುಂಬಕ್ಕೆ ಸಮಾನ. 35.34  ಎಕರೆ ಜನೀನಿನಲ್ಲಿ ನಾಲ್ಕು ಎಕರೆ ಮಾತ್ರ ಕೆಐಡಿಬಿ ಜಾಗ ವಿಜೇಂದ್ರರಿಗೆ ರಿಜಿಸ್ಟ್ರರ್ ಆಗಿದೆ. ಈ ನಾಲ್ಕು ಎಕರೆ ಯಾರದ್ದು? ಗದಗಿನ ಸಂಗಮೇಶ್ ಪರಪ್ಪ ಗದಗ ಹೆಸರಿನಲ್ಲಿದೆ. ಈ ಸಂಗಮೇಶ್ ಯಾರು? ಸಂಸದ ರಾಘವೇಂದ್ರ ಅವರ ಶ್ರೀಮತಿಯ ಸಹೋದರ ಇವರು. ಅಷ್ಟೇ ಆಸ್ತಿ ಕೆಐಡಿಬಿಗೆ ಯಾಕೆ ಖರೀದಿ ಮಾಡುತ್ತೆ?  ನಂತರ ಕೆಐಡಿಬಿಯಿಂದ ಖರೀದಿ ಮಾಡಿದ್ದ ತಂತ್ರಗಾರಿಕೆ ಏನು ಎಂದು ಕೇಳಿದ್ದೆ.


ನಾನು ಭದ್ರಾವತಿಯ ಜಂಕ್ಷನ್ ನ 70 ಎಕರೆ ಜಾಗ ಯಾರದ್ದು? ಶಿಕಾರಿಪುರದಲ್ಲಿ ಶಿವಮೊಗ್ಗದಲ್ಲಿ ಖರೀದಿ ಮಾಡಿದ ಖಾಸಗಿ ಜಾಗದ ಬಗ್ಗೆ ನಾನು ಪ್ರಶ್ನಿಸಿಲ್ಲ. ಹಾಗಾಗಿ ಯಾಕೆ ಕ್ಷಮೆ ಕೇಳಬೇಕು? ಬಿಎಸ್ ವೈ ಜೊತೆ ಇದ್ದಾಗ ನಾನು ಫೋರ್ಜರಿ ಸಹಿ ಮಾಡಿಲ್ಲ, ಸಿಎಂ ಸ್ಥಾನದಿಂದ ಇಳಿಸಿಲ್ಲ‌.  ವರ್ಗಾವಣೆ ದಂಧೆ ಮಾಡಿಲ್ಲ ಬಿಎಸ್ ವೈಗೆ ಕೆಟ್ಟದ್ದು ಬಯಸಿಲ್ಲ.  ಹಾಗಾಗಿ ನಾನೇಕೆ  ಕ್ಷಮೆ ಕೇಳಬೇಕು ಕೇಳಬೇಕು ಎಂದು ಪ್ರಶ್ನಿಸಿದರು. 


ರಾಜವಂಶಸ್ಥರ ಋಣ ತಿಂದಿಲ್ಲ. ನನ್ನನ್ನ ಕ್ಷಮೆ ಕೇಳಿ ಎಂದಾಗ ಬಿಜೆಪಿ ನಾಯಕರು ಯೋಚಿಸಬೇಕಿತ್ತು. ನಾನು ಆಯನೂರನ್ನ  ಹೆಂಗೆ ಬೆಳೆಸಿದ್ರು ಎಂಬುದನ್ನ ನನಗೆ ಗೊತ್ತು. ಜೈಲುವಾಸ,  ಲಾಠಿ ಏಟು ತಿಂದು ಬಂದು ಸಂಸದನಾಗಿದ್ದೆ. ಬಳ್ಳಾರಿ, ಗುಲ್ಬರ್ಗ, ಬೆಂಗಳೂರು ಕೇಂದ್ರ ಕಾರಾಗ್ರಹದಲ್ಲಿದ್ದವನು ನಾನು. ಪಕ್ಷ ಕಟ್ಟುವ ಯತ್ನದಲ್ಲಿ ನನ್ನ‌ಶ್ರಮವಿತ್ತು.  ಅದಕ್ಕೆ ಬಿಎಸ್ ವೈ ಸಹಕಾರವಿದೆ. ಗ್ರಾಪಂ ಸದಸ್ಯನಿಂದ ಏಕಾಏಕಿ ಲೋಕಸಭೆ ಸದಸ್ಯನಾಗಿಲ್ಲ ಎಂದು ತಿಳಿಸಿದರು.


ನಾನು ಸಂಸದನಾದಾಗ ನನ್ನ ವಿರುದ್ಧ ರುದ್ರೇಗೌಡರನ್ನ ಹೇಗೆ ಎದುರು ತಂದರು? ನಂತರ ರುದ್ರೇಗೌಡರನ್ನ ಸರಿಸಿ ಮಗನನ್ನ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಸಯಿತು ಎಂಬುದನ್ನ ಮುಂದಿನ ದಿನಗಳಲ್ಲಿ ಹೇಳುವೆ. ಸಿದ್ದರಾಮಯ್ಯನ ಹೆಂಡತಿಗೆ ಕೊಟ್ಟಿದ್ದು ಅಪರಾಧವಾಗುತ್ತೆ ಅನ್ನೋದಾದ್ರೆ, ಇಲ್ಲಿ ಶ್ರೀಮತಿಯ ಸಹೋದರನ ಹೆಸರಿನಿಂದಕೈಡಿಬಿಗೆ ಕೊಡ್ಸಿ ನಂತರ ಖರೀದಿ ಮಾಡಿದ್ದು ತಪ್ಪಾಗಲ್ವಾ? ಎಂದು ಪ್ರಶ್ನಿಸಿದರು. 


ಪತ್ರಕರ್ತರ ಸೈಟನ್ನ ತಮ್ಮವರಿಗೆ ಬರೆಯಿಸಿ ನಂತರ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ್ರಲ್ಲ. ಟೋಲ್ ಬಿಜೆಪಿಯ ಕಾಲದಲ್ಲಿ ನಡೆದಿದೆ ಎಂದರೆ ಆಣೆ ಮಾಡೋಣ ಬನ್ನಿ ಅಂತ ಕರೆಯುತ್ತಾರೆ. ನನಗೆ ಆಣೆ ಬಗ್ಗೆ ನಂಬಿಕೆ ಇಲ್ಲ. ಆಣೆ ಬರಲು ಸಿದ್ದ ಆದರೆ ಸಂಸದರು ವರ್ಗಾವಣೆ ಮಾಡಿಲ್ಲ, ಬೇನಾಮಿ ಆಸ್ತಿ ಮಾಡಿಲ್ಲ, ಅಂತ ಆಣೆ ಮಾಡಲು ಸಿದ್ದನಾ ಎಂದು ಸವಾಲು ಎಸೆದರು. 


ಬಿಎಸ್‌ವೈ ಬಗ್ಗೆ ಗೌರವವಿದೆ, ರಾಘವೇಂದ್ರ ವಿಜೇಂದ್ರರ ಬಗ್ಗೆ ಸದಾಭಿಪ್ರಾಯವಿದೆ. ನಾನು ಬಿಎಸ್ ವೈ ಕ್ಷಮೆ ಕೇಳಲ್ಲ‌. ಯಡಿಯೂರಪ್ಪನವರ ಹೆಸರು ಕೆಡೆಸುತ್ತಿರುವುದೇ  ಅವರ ಮಕ್ಕಳು, ನನಿಗೆ ಎಂಪಿ ಸ್ಥಾನ ತಪ್ಪಿಸಿರುವ ಬಗ್ಗೆ ರುದ್ರೇಗೌಡರಿಗೆ ಗೊತ್ತು ಎಂದು ವಿವರಿಸಿದರು. 

ಮಂಗಳವಾರ, ಆಗಸ್ಟ್ 27, 2024

ಸದಸ್ಯತಾ ಅಭಿಯಾನವನ್ನ 7 ಟಿ ಆಧಾರದ ಮೇರೆಗೆ ನಡೆಸಲು ಮಂಗಳೂರು ಸಂಸದ ಕರೆ


ಸುದ್ದಿಲೈವ್/ಶಿವಮೊಗ್ಗ


ಪಾಠ ಮಾಡಲು ಬಂದಿಲ್ಲ. ಬಿಜೆಪಿಯ ಭದ್ರಕೋಟೆ ದ.ಕ ಜಿಲ್ಲೆ ಎಂದು ಹೇಳಲಾಗುತ್ತಿದೆ. ಆದರೆ  ಬಿಜೆಪಿಗೆ ಶಕ್ತಿ ನೀಡಿದ್ದೇ ಶಿವಮೊಗ್ಗ ಜಿಲ್ಲೆ ಎಂದು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು. 


ಪಕ್ಷದ ಕಚೇರಿಯಲ್ಲಿ ನಡೆದ ಸದಸ್ಯತಾ ಅಭಿಯಾನ-2024 ರ ಜಿಲ್ಲಾ ಕಾರ್ಯಗಾರವನ್ನ ಉದ್ಘಾಟಿಸಿ ಮಾತನಾಡಿದರು.‌


ಸೇನೆ ಬಿಟ್ಟು ಬಂದಾಗಿನಿಂದ ಬಿಜೆಪಿಯ ಸಂಸದನಾದವರೆಗೆ ಈ ಜಿಲ್ಲೆಯ ಭಾನು ಪ್ರಕಾಶ್ ಬೆನ್ನಲುಬಾಗಿದ್ದರು.  ಅಭಿಯಾನದ ಮಹತ್ವ ಇದರ ಮೂಲಕ ವಿಚಾರ ಪ್ರವಾಹವನ್ನ ಬೆಳಸಲು ಸಾಧ್ಯ ಎಂದರು. 


ಶ್ರೇಷ್ಠವಾದ ಕೆಲಸ ಕಟ್ಟಲು ಹೊರಟವರು ಬಿಜೆಪಿಯವರು. ಪಕ್ಷ ಹುಟ್ಟಿದ್ದು ನೆಲದ ಸಂಸ್ಜೃತಿಯ ಆಧಾರವಾಗಿ ಕಟ್ಟಲಾಗಿದೆ. ವಿಶ್ವಕ್ಕೆ ಮಾದರಿಯಾಗುವಂತೆ ಬೆಳೆಸಬೇಕಿದೆ ಎಂದು ಕರೆ ನೀಡಿದರು. 


ಬಿಜೆಪಿ ಇತರೆ ಪಕ್ಷಕ್ಲಿಂತ ವಿಭಿನ್ನವಾದ ಪಕ್ಷವಾಗಿದೆ ವಿಚಾರ, ಪ್ರಜಾಪ್ರಭುತ್ವದ ಅಡಿಯಲ್ಲಿ ಪಕ್ಷವನ್ನ ಕಟ್ಟಲಾಗಿದೆ. . ಜಮ್ಮೂ ಕಾಶ್ಮೀರದಲ್ಲೂ ಪಕ್ಷ ಸರ್ಕಾರ ರಚಿಸಿದ ಉದಾಯರಣೆ ಇದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸಿದ್ದೇವೆ. ದೇಶದ ಎಲ್ಲೆಡೆ ಬಿಜೆಪಿ ಬಾವುಟ ಹಾರುತ್ತದೆ. ಪ್ರಜಾಪ್ರಭುತ್ವ ಪಕ್ಷವಾದ ಕಾರಣ ಬೆಳೆದು ನಿಂತಿದೆ ಎಂದರು. 


ಹಣ ಇಲ್ಲದ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಸಂಸದರನ್ಬಾಗಿ ಗೆಲ್ಲಿಸಿದ ಪಕ್ಷ ಬಿಜೆಪಿಯಾಗಿದೆ. ಅಭಿಯಾನದ ಮೂಲಕ ಪಕ್ಷ ಬೆಳೆಸಬೇಕಿದೆ. ದ.ಕ ಸಂಘಟನೆ ಶಿವಮೊಗ್ಗ ಸಂಘಟನೆಯಿಂದ ಕಲಿಯಬೇಕಿದೆ. 2014 ರ ನಂತರ ಮೊದಲ ಬಾರಿಗೆ ಡಿಜಿಟಲೈಜ್ ಆದ್ವಿ. ಮೊದಲನೇ ಬಾರಿಗೆ ಆನ್ ಲೈನ್ ಅಭಿಯಾನದ ಮೂಲಕ ಗೃಹ ಮಂತ್ರಿ ಅಮಿತ್ ಶಾ ಚಾಲನೆ ನೀಡಿದರು. 2014 ರಲ್ಲಿ 11 ಕೋಟಿ ಸದಸ್ಯತ್ವ ಮಾಡಿಸಲಾಗಿತ್ತು ,2019 ರಲ್ಲಿ 19 ಕೋಟಿ ಸದಸ್ಯತ್ವ ಮಾಡಲಾಯಿತು ಎಂದರು. 


ಈ ಬಾರಿ ಸೆಪ್ಟಂಬರ್ ನಿಂದ‌ ನವೆಂಬರ್ ವರೆಗೆ ಅಭಿಯಾನ ನಡೆಯಲಿದೆ. ಎರಡು ರೀತಿಯಲ್ಲಿ ಅಭಿಯಾನ ನಡೆಯುತ್ತದೆ. ಇದರಿಂದ ಸರ್ವ ವ್ಯಾಪಿ ಸರ್ವ ಸ್ಪರ್ಷಿಯಾಗಲಿದ್ದೇವೆ. 18-25 ರವರೆಗೆ ಇರುವ ಪ್ರಯಾದ ಯುವಕರು ಮಾತ್ರವಲ್ಲ ಎಲ್ಲಾ ವಯಸಿನವರು ಎಲ್ಲಾ ಜಾತಿಯವರನ್ನ‌ ಮತ್ತು ಮಹಿಳೆಯರನ್ನ ಮುಟ್ಟುವ ಕೆಲಸ ಆಗಬೇಕು ಎಂದರು. 


ಪಕ್ಷದ ವಿರೋಧಿಗಳನ್ನೇ ಸೆಳೆದು  ಅವರನ್ನ ಸಮರ್ಥಕರನ್ನಾಗಿ ಮಾಡಬೇಕು ನಾಳೆ ಅವರನ್ನ ಪಕ್ಷದ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. 7 T  ಆಧಾರದಲ್ಲಿ ಅಭಿಯಾನವಾಗಬೇಕು‌ ಟಾಸ್ಕ್, ಟೈಮ್ ಲೈನ್, ಟೀಮ್ ಅಂಡ್ ಟ್ರೈನಿಂಗ್, ಟಾರ್ಗೆಟ್, ಟ್ರ್ಯಾಕಿಂಗ್, ಟ್ರಾವೆಲಿಂಗ್, ಟಚ್ ಥೆರಪಿ ಎಂಬ ಏಳಿಲು ಟಿ ಅಡಿ ಪಕ್ಷದ ಅಭಿಯಾನ ನಡೆಯಬೇಕಿದೆ ಎಂದು ವಿವರಿಸಿದರು.‌


ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಸಂಸದ ರಾಘವೇಂದ್ರ, ಮಾಜಿ ಸಚಿವ ಹಾಲಪ್ಪ, ಶಾಸಕ ಚೆನ್ನಬಸಪ್ಪ, ಎಂಎಲ್ ಸಿಗಳಾದ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ, ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ದತ್ತಾತ್ರಿ  ಉಪಸ್ಥಿತರಿದ್ದರು.