ಶಿವಮೊಗ್ಗ ಜೈಲ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶಿವಮೊಗ್ಗ ಜೈಲ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಆಗಸ್ಟ್ 28, 2024

ನಾಲ್ಕು ಗಂಟೆಗಳ ಕಾಲ ಎಸ್ಪಿ ಅವರಿಂದ ಜೈಲು ತಪಾಸಣೆ



ಸುದ್ದಿಲೈವ್/ಶಿವಮೊಗ್ಗ


ಎಸ್ಪಿ ಮಿಥುನ್ ಕುಮಾರ್  ನೇತೃತ್ವದಲ್ಲಿ 100 ಜನ ಅಧಿಕಾರಿಗಳ ನೇತೃತ್ವದಲ್ಲಿ ಶಿವಮೊಗ್ಗ ಕಾರಾಗೃಹದ ಮೇಲೆ ದಾಳಿ ನಡೆದಿದೆ. ದಾಳಿಯಲ್ಲಿ ಕೆಲವಸ್ತುಗೂ ಪತ್ತೆಯಾಗಿದ್ದು ಆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ. 


ಬೆಳಿಗ್ಗೆ 3 ಗಂಟೆಗೆ ದಾಳಿ ನಡೆದಿದೆ. ದಾಳಿಯ ವೇಳೆ ಬೀಡಿ ಗಳು ಪತ್ತೆಯಾಗಿವೆ. ಇವುಗಳು ಜೈಲಿನಲ್ಲಿ ಅನುಮತಿ ಇದೆಯೋ ಇಲ್ಲವೋ ಎಂಬುದನ್ನ ಪರಿಶೀಲಿಸಲಾಗುತ್ತಿದೆ ಎಂದು ಅವರು ಸುದ್ದಿಲೈವ್ ಗೆ ತಿಳಿಸಿದ್ದಾರೆ. 


ದರ್ಶನ್ ಗ್ಯಾಂಗ್ ನ ಇಬ್ಬರು ಆರೋಪಿಗಳು ಶಿವಮೊಗ್ಗ ಜೈಲಿಗೆ ಇಂದು ಶಿಫ್ಟ್ ಆಗುತ್ತಿದ್ದಾರೆ. ಶಿಫ್ಟ್ ಬೆನ್ಬಲ್ಲೇ ಪೊಲೀಸರ ದಾಳಿ ಮಹತ್ವ ಪಡೆದಕೊಂಡಿದೆ. ಖುದ್ದುಎಸ್ಪಿ ಅವರೆ ಜೈಲಿನ ತಪಾಸಣೆ ನಡೆಸಿದ್ದಾರೆ. ಸುಮಾರು ನಾಲ್ಕ ಗಂಟೆಗಳ ಕಾಲ  ತಪಾಸಣೆ ನಡೆದಿದೆ. 


ದರ್ಶನ್ ಗ್ಯಾಂಗ್ ನ ಲಕ್ಷ್ಮಣ್ ಮತ್ತು ಜಗದೀಶ್ ರನ್ನ ಇಂದು ಮಧ್ಯಾಹ್ನ ಶಿವಮೊಗ್ಗ ಜೈಲಿಗೆ ಕರೆತರುವ ನಿರೀಕ್ಷೆ ಇದೆ. 

ಶನಿವಾರ, ಆಗಸ್ಟ್ 24, 2024

ಕೊಲೆ ಆರೋಪಿಗಳಿಗೆ ಶಿಕ್ಷೆ ಪ್ರಕಟ



ಸುದ್ದಿಲೈವ್/ಶಿವಮೊಗ್ಗ


2018 ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐವರಲ್ಲಿ ಇಬ್ವರಿಗೆ ಜೀವಾವಧಿ ಶಿಕ್ಷೆ ತಲಾ 25 ಸಾವಿರ ರೂ ದಂಡ ಹಾಗೂ ಉಳಿದ ಮೂವರಿಗೆ  ಕಠಿಣ ಐದು ವರ್ಷ ಕಾರಾಗೃಹ ಶಿಕ್ಷೆ ಮತ್ತು ತಲಾ 20 ಸಾವಿರ ರೂ.ಗಳ ದಂಡವಿಧಿಸಿ ತೀರ್ಪು ನೀಡಿದೆ.‌


2018 ರಲ್ಲಿ ಶಿವಮೊಗ್ಗ ಹನುಮಂತ ನಗರದ ನಿವಾಸಿ 34 ವರ್ಷದ ಸಂತೋಷ @ ಜೈಲರ್ ಮತ್ತು ಆತನ ಹೆಂಡತಿ ನಾಗವೇಣಿಗೆ ಆಗಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿತ್ತು.‌ ದಿನಾಂಕ : 12-02-2018 ರಂದು ಇಬ್ಬರೂ ಜಗಳ  ಮಾಡಿಕೊಳ್ಳುತ್ತಿದ್ದ ಸಮಯದಲ್ಲಿ ನಾಗವೇಣಿ ಮತ್ತು ಜಹೀರಾಬೀ ಇಬ್ಬರೂ ದೊಣ್ಣೆಯಿಂದ ಸಂತೋಷನಿಗೆ ಹೊಡೆದು ಕೊಲೆ ಮಾಡಿದ್ದರು, 



ನಂತರ ಚಂದ್ರು, ರಾಕಿ, ಇಮ್ರಾನ್ ಮತ್ತು ಜಬೀ ರವರುಗಳು ಜಹೀರಾಬೀ ಮನೆಯಲ್ಲಿರುವ ಓಮಿನಿ ವಾಹನದಲ್ಲಿ ಸಂತೋಷನ ಮೃತ ದೇಹವನ್ನು ಸಾಗಿಸಿ ಸವಳಂಗ ರಸ್ತೆಯ ಕಡೆಗೆ  ಎಸೆದಿರುತ್ತಾರೆಂದು ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆ  ಕೊಲೆ ಪ್ರಕರಣ ದಾಖಲಿಸಿದ್ದರು.


ಪ್ರಕಣದಲ್ಲಿ ಆಗಿನ ತನಿಖಾಧಿಕಾರಿ  ಜಿ. ದೇವರಾಜ್, ಸಿ.ಪಿ.ಐ, ಕೋಟೆ ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು,  ವಾದ ಮಂಡಿಸಿದ್ದರು.


ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿ ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ,  ನ್ಯಾಯಾಧಿಶರಾದ ಮಂಜುನಾಥ್ ನಾಯಕ್ ರವರು ದಿನಾಂಕಃ 23-08-2024 ರಂದು   ಆರೋಪಿತರಾದ 1) ನಾಗವೇಣಿ, (27) ವರ್ಷ, 2) ಜಹೀರಾಬಿ (41) ವರ್ಷ, ಇವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 25,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 04 ತಿಂಗಳು ಸಾಧಾ ಕಾರಾಗೃಹವಾಸ ಶಿಕ್ಷೆ 

ಮತ್ತು ಆರೋಪಿ 3) ಜಬೀವುಲ್ಲಾ, 23 ವರ್ಷ, 4) ಮೊಹಮ್ಮದ್ ಇಮ್ರಾನ್, 25 ವರ್ಷ, ಮತ್ತು 5)  ಚಂದ್ರಕುಮಾರ್, 24  ವರ್ಷ, ಹನುಮಂತನಗರ, ಶಿವಮೊಗ್ಗ, ಇವರುಗಳಿಗೆ 05 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ 20,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 03 ತಿಂಗಳು ಸಾಧಾ ಕಾರಾಗೃಹವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.