ಶಿವಮೊಗ್ಗ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶಿವಮೊಗ್ಗ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 15, 2024

ವೈಯುಕ್ತಿಕ ಕಾರಣಕ್ಕೆ ಬಡಿದಾಟ ಮೂವರು ಜೆಸಿಗೆ



ಸುದ್ದಿಲೈವ್/ಶಿವಮೊಗ್ಗ


ಮಾರನಮಿ ಬೈಲು ಬಳಿ ಆಯುಧ ಹಿಡಿದು ಗಲಾಟೆ ಮಾಡಿಕೊಂಡ ಮೂವರು ಯುವಕರನ್ನ ದೊಡ್ಡಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ವೈಯುಕ್ತಿಕ ಕಾರಣಗಳಿಗೆ ಮೂವರು ಸಾರ್ವಜನಿಕ ಸ್ಥಳದಲ್ಲಿ ಬಡಿಕೊಂಡ ಹಿನ್ನಲೆಯಲ್ಲಿ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ. 


ಎನ್‌ಟಿ ರಸ್ತೆಯ ನಿವಾಸಿ  ಆನಂದ ಎಂಬಾತ ಆಟೋ ಡ್ರೈವರ್ ಆಗಿದ್ದಾನೆ. ಈತ ವಿಶ್ವನಾಥ ಎಂಬ ಯುವಕನಿಗೆ 12 ಇಂಚು ಚಾಕು ಹಿಡಿದು ಕೊಲೆ ಮಾಡುವ ಉದ್ದೇಶದಿಂದ  ಮಾರನಮಿ ಬೈಲಿನದ್ದ ವಿಶ್ವನಾಥನ ಮೇಲೆ ದಾಳಿಗೆ ಮುಂದಾಗಿದ್ದಾನೆ.  


ಅಲ್ಯುಮಿನಿಯಂ ಫ್ಯಾಬ್ರಿಕ್ ಕೆಲಸ ಮಾಡಿಕೊಢಿರುವ ವಿಶ್ವನಾಥನು ಸಹ ತನ್ನ ಜೊತೆಗಿದ್ದ ರಾಘವೇಂದ್ರ ಎಂಬಾತನೊಂದಿಗೆ ಸೇರಿ ರಸ್ತೆಯ ಬದಿ ನಿಂತಿದ್ದ ಕಾರಿನ ಗ್ಲಾಜನ್ನ ಒಡೆದು ಹಾಕಿರುತ್ತಾನೆ. ಈ ಜಗಳವನ್ನ ಮುಜೀಬ್ ಎಂಬಾತ ಯುವಕ ಜಗಳ ಬಿಡಿಸಲು ಯತ್ನಿಸಿರುತ್ತಾನೆ. 


ಈ ಪ್ರಕರಣದಲ್ಲಿ ಆನಂದ, ವಿಶ್ವನಾಥ ಹಾಗೂ ರಾಘವೇಂದ್ರ ಗಲಾಟೆ ಮಾಡಿಕೊಂಡಿರುವ 3 ನಿಮಿಷ 41 ಸೆಕೆಂಡಿನ ವಿಡಿಯೋವೊಂದು ದೊಡ್ಡಪೇಟೆ ಪೊಲೀಸರೊಬ್ಬರ ವಾಟ್ಸ್‌ಪ್‌ಗೆ ಬಂದಿರುತ್ತದೆ. ವಾಟ್ಸಪ್‌ ವಿಡಿಯೋವನ್ನ  ಪರಿಶೀಲಿಸಿದಾಗ ಯುವಕರ‌ಬಡಿದಾಟ ಕಂಡು ಬಂದಿದೆ.  


ಆನಂದ, ವಿಶ್ವನಾಥ್ ಮತ್ತ ರಾಘವೇಂದ್ರರು ಸಾರ್ವಜನಿಕರಿಗೆ ಉಪಟಳ ನೀಡುತ್ತ ಭಯದ ವಾತಾವರಣ ನಿರ್ಮಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಈ ಮೂವರ ನಡುವೆ ನಡೆದ ಹಣದ ವ್ಯವಹಾರಗಳು ಸಾರ್ವಜನಿಕ ಸ್ಥಳದಲ್ಲಿ ಬಡಿದಾಡುವಂತೆ ಮಾಡಿದೆ. ಸುಮೀಟೋ ಪ್ರಕರಣ ದಾಖಲಾಗುವಂತೆ ಮಾಡಿದೆ. 

ಶನಿವಾರ, ಸೆಪ್ಟೆಂಬರ್ 14, 2024

ಎರಡು ದಿನ ನಗರದಲ್ಲಿ ನೀರಿನ ವ್ಯತ್ಯಯ


ಸುದ್ದಿಲೈವ್/ಶಿವಮೊಗ್ಗ


ಕೃಷ್ಣರಾಜೇಂದ್ರ ಜಲಶುದ್ದೀಕರಣ ಘಟಕಕ್ಕೆ ವಿದ್ಯುತ್ ವ್ಯತ್ಯಯ, ಭೂಕೇಬಲ್ ಚಾಲನೆಗೊಳ್ಳುತ್ತಿರುವುದರಿಂದ ಎರಡು ದಿನ ನಗರದಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.  


ಮಹಾನಗರಪಾಲಿಕೆ ವತಿಯಿಂದ ಹೊಸದಾಗಿ ಭೂಗತ ಕೇಬಲ್ ಅಳವಡಿಸಿದ್ದು, ಕೇಬಲ್ ಚಾಲನೆಗೊಳಿಸಬೇಕಾಗಿರುವುದರಿಂದ ದಿನಾಂಕ:18-9-2024 ರಂದು ಜಲಶುದ್ದೀಕರಣಕ್ಕೆ ವಿದ್ಯುತ್ ವ್ಯತ್ಯಯವಾಗುವುದರಿಂದ ದಿನಾಂಕ:18-9-2024 ಮತ್ತು ದಿನಾಂಕ:19-9-2024 ರಂದು ಶಿವಮೊಗ್ಗ ನಗರದಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಕೋರಲಾಗಿದೆ.

ಗುರುವಾರ, ಸೆಪ್ಟೆಂಬರ್ 12, 2024

ರಾಗಿಗುಡ್ಡದಲ್ಲಿ 14 ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ-ಬಿಗಿ ಬಂದೋಬಸ್ತ್




ಸುದ್ದಿಲೈವ್/ಶಿವಮೊಗ್ಗ


ರಾಗಿಗುಡ್ಡದಲ್ಲಿ ಇಂದು ಏಕಕಾಲದಲ್ಲಿ 14 ಗಣಪತಿ ವಿಗ್ರಹಗಗಳನ್ನ ವಿಸರ್ಜಿಸಲಾಗುತ್ತಿದೆ. 14 ಗಣಪತಿಗಳ  ವಿಸರ್ಜನೆಯ ಬೆನ್ನಲ್ಲೇ ಹಾಗೂ ಕಳೆದು ಬಾರಿಯ ಮಿಲಾದ್ ಮೆರವಣಿಗೆಯ ವೇಳೆ ನಡೆದ ಕಹಿ ಘಟನೆ ಹಿನ್ನಲೆಯಲ್ಲಿ ಪೊಲೀಸರ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. 


ಛತ್ರಪತಿ ಶಿವಾಜಿ ಯುವಕರ ಸಂಘ, ತಿಲಕ್ ಭಾಯ್ಸ್, ಭುವನೇಶ್ವರಿ ಯುವಕರ ಸಂಘ, ಭಗತ್ ಸಿಂಗ್ ಯುವಕರ ಸಂಘ, ವಿಶ್ವಪ್ರಿಯ ಗಣಪತಿ ಯವಕರ ಸಂಘ, ಕುವೆಂಪು ಯುವಕರ ಸಂಘ, ಮಾರಿಕಾಂಬ ಯುವಕರ ಸಂಘ, ಸಿದ್ದಿ ವಿನಾಯಕ ಸ್ಟಾರ್ ಯುವಕರ ಸಂಘ ಸೇರಿದಂತೆ 14 ಪ್ರತಿಷ್ಠಾಪನಾ ಗಣಪತಿ ಮೂರ್ತಿಗಳನ್ನ ವಿಸರ್ಜಿಸಲಾಗುತ್ತಿದೆ. 



ರಾಗಿಗುಡ್ಡದ ಸರ್ಕಲ್ ಗೆ ಹೋಗಿ ನಂತರ ಕೆಳಗೆ ಬಂದು ಚಾನೆಲ್ ನಲ್ಲಿ ವಿಸರ್ಜಿಸಲಾಗುತ್ತಿದೆ.‌ ಸಿದ್ದಿ ವಿನಾಯಕ ಸ್ಟಾರ್ ಯುವಕರ ಸಂಘದ 28 ನೇ ವರ್ಷದ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ವಿಸರ್ಜನೆಯ ನಂತರ ಗಣಪತಿ ಮೂರ್ತಿ ವಿಸರ್ಜನೆಯ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ. 3000 ಜನರಿಗೆ ಪ್ರಸಾದ ವಿತರಣೆ ನಡೆಯಲಿದೆ. 


ಬಿಗಿ ಬಂದೋಬಸ್ತ್


ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆಯುವ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ 04 ಪೊಲೀಸ್  ಉಪಾಧೀಕ್ಷಕರು, 14 ಪೋಲಿಸ್ ನಿರೀಕ್ಷಕರು, 26 ಪೊಲೀಸ್ ಉಪನಿರೀಕ್ಷಕರು, 56 ಸಹಾಯಕ ಪೊಲೀಸ್ ನಿರೀಕ್ಷಕರು, 



416 ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಮತ್ತು ಪೊಲೀಸ್ ಕಾನ್ಸ್ ಟೆಬಲ್ ಗಳು, 232 ಗೃಹರಕ್ಷಕ ದಳ ಸಿಬ್ಬಂದಿಗಳು, 01-RAF  ತುಕಡಿ 03 ಡಿಎಆರ್ ತುಕಡಿ ಮತ್ತು 05 ಕೆಎಸ್ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. 


ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆ ಮಾಡಲಾದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ,  ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರಡ್ಡಿ, ಮತ್ತು  ಎ. ಜಿ. ಕಾರ್ಯಪ್ಪ ಅವರಿಂದ ಶಿವಮೊಗ್ಗ ಜಿಲ್ಲೆರವರು ಪೊಲೀಸ್ ಕವಾಯಿತು ಮೈದಾನ ಶಿವಮೊಗ್ಗದಲ್ಲಿ ಬ್ರೀಫಿಂಗ್ ನಡೆಸಲಾಯಿತು. ಬಂದೋಬಸ್ತ್ ಸಂದರ್ಭದಲ್ಲಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಸಲಹೆ ಮತ್ತು ಸೂಚನೆಗಳನ್ನು ನೀಡಿದರು.

ಬುಧವಾರ, ಸೆಪ್ಟೆಂಬರ್ 11, 2024

ಜೋಗದಲ್ಲಿ ಹೋಗುವಾಗ ಎಚ್ಚರಿಕೆ



ಸುದ್ದಿಲೈವ್/ಶಿವಮೊಗ್ಗ


ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರೇ ಎಚ್ಚರವಾಗಿರಿ. 



ಜೋಗ ಜಲಪಾತಕ್ಕೆ (Jog Falls) ಹೋಗುವ ರಸ್ತೆಯಲ್ಲೇ ಕರಿ ಚಿರತೆಯೊಂದು (Black Leopard)  ಹಸುವನ್ನು ಬೇಟೆಯಾಡಿದೆ.ಸಾಗರ ತಾಲೂಕಿನ ವಡನಬೈಲಿನಲ್ಲಿ ಕರಿ ಚಿರತೆ ಪ್ರತ್ಯಕ್ಷವಾಗಿದ್ದು, ಹಸುವನ್ನು ಬೇಟೆಯಾಡಿ ಪೊದೆಯೊಳಗೆ ಎಳೆದೊಯ್ದಿದೆ. 


ಕರಿಚಿರತೆ ಹಸುವನ್ನು ಬೇಟೆಯಾಡುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಗುರುವಾರ, ಸೆಪ್ಟೆಂಬರ್ 5, 2024

ಮುಂದಿನ ಚುನಾವಣೆಗೆ ಸಿದ್ದರಾಗಿ-ಅಚ್ಚರಿ ಮೂಡಿಸಿದ ಕುಮಾಸ್ವಾಮಿಯ ಹೇಳಿಕೆ




ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳದ ಬೇರು ಗಟ್ಟಿಯಾಗಿದೆ. ಆದರೆ ಪಕ್ಷಕ್ಕೆ ಬಂದು ಚುನಾವಣೆ ನಂತರ ಬಿಟ್ಟುಹೋಗುತ್ತಿರುವುದರಿಂದ ಪಕ್ಷಕ್ಕೆ  ಹಿನ್ನಡೆಯಾಗಿದೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಅಭಿಪ್ರಾಯ ಪಟ್ಟರು. 


ಶುಭಮಂಗಳದಲ್ಲಿ ಜಿಲ್ಲಾ ಜಾತ್ಯಾತೀತ ಜನತಾದಳದಿಂದ ಕೇಂದ್ರ ಸಚಿವ ಹೆಚ್ ಡಿ ಕುಮಾರ ಸ್ವಾಮಿ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 


ಅಪ್ಪಾಜಿ ಗೌಡರ ನಂತರ ಇಬ್ವರು ಸಹೋದರಿಯರಿಂದ ಪಕ್ಷ ಭದ್ರಾವತಿ ಮತ್ತು ಗ್ರಾಮಾಂತರದಲ್ಲಿ ಗಟ್ಟಿಯಾಗಿದೆ. ಪ್ರತಿ ಭೂತ್ ಮಟ್ಟದಲ್ಲಿ ಯುವಕರು, ಬೇರೆ ಸಮಾಜದವರನ್ನ ಹಾಗೂ ಮಹಿಳೆಯರನ್ನ  ನೋಂದಣಿ ಮಾಡಲು ತೀರ್ಮಾನಿಸಲಾಗಿದೆ. 


ಜನತೆಯಲ್ಲಿ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಹಿಂದಿನ ಸರ್ಕಾರದ ಬಗ್ಗೆ ಆರೋಪ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಅಭಿವೃದ್ಧಿ ಕಾಣ್ತಾ ಇಲ್ಲ, ಜನ ಬೇಸತ್ತಿದ್ದಾರೆ. ಮುಂದಿನ ಮೂರು ವರ್ಷಗಳ ವರೆಗೆ ಅವಧಿ ಇದ್ದರೂ ಕಾಂಗ್ರೆಸ್ ನಾಯಕರ ತಪ್ಪಿನಿಂದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. 


ಯಾವ ಸಮಯದಲ್ಲಾದರೂ ಚುನಾವಣೆ ಬರಬಹುದು ಎಲ್ಲದಕ್ಕೂ ಸಿದ್ದರಾಗಿರಿ ಎಂಬ ಕುಮಾರಸ್ವಾಮಿಯವರ  ಹೇಳಿಕೆ ಕುತೂಹಲ ಮೂಡಿಸಿದೆ. 2028 ರಲ್ಲೇ ಬರಬಹುದು, 2026ರಲ್ಲೇ ಬರಬಹುದು ಆದರೆ 2025 ರಲ್ಲೇ ಚುನಾವಣೆ ಬರಬಹುದು. ಮುಂದಿನ ಚುನಾವಣೆಗೆ ಸಿದ್ದರಾಗಿ ಎಂದು ಹೇಳಿರುವುದು ಕಾರ್ಯಕರ್ತರನ್ನ ಹುರುದುಂಬಿಸಿದೆ. 


ಜಿಲ್ಲೆಯಲ್ಲಿ ಹಳ್ಳಿಗೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಜೆಡಿಎಸ್ ಮಾತ್ರ ಸಮಗ್ರ ಸರ್ಕಾರ ನೀಡಲಿದೆ ಎಂಬ ವಿಶ್ವಾಸ ಹುಟ್ಟಿಸಿದರೆ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಪಡೆಯಬಹುದು. ಮೈತ್ರಿಗೆ ನಮ್ಮಿಂದ ಯಾವುದೇ ದಕ್ಕೆ ತರದಂತೆ ಸಂಘಟನೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. 


ಮಗ ನಿಖಿಲ್ ಪಕ್ಷ ಸಂಘನೆ ದೃಷ್ಠಿಯಿಂದ ರಾಜ್ಯದಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಕೊಪ್ಪಳದಲ್ಲಿ ನಿನ್ನೆ ಅಭೂತ ಪೂರ್ವ ಕಾರ್ಯಕ್ರಮ ನಡೆದಿದೆ‌  ಇದರಿಂದ ನನಗೆ ನೆಮ್ಮದಿ ತಂದಿದೆ. ನನಗೂ ಶಿವಮೊಗ್ಗಕ್ಕೂ ನಂಟಿದೆ. 2004 ರಲ್ಲಿ ಉಪಚುನಾವಣೆಯಲ್ಲಿ ಶಿವಮೊಗ್ಗಕ್ಕೆ ಬಂದಿದ್ದೆ. ಆಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ್ ಗೆದ್ದಿದ್ದರು. ಮೊದಲಬಾರಿಗೆ ಅವರ ಮನೆಗೆ ಹೋಗಿದ್ದೆ. ಅವರ  ಮೇಲೆ ಬೇರೆರೀತಿಯ ಒತ್ತಡವನ್ನೆಲ್ಲಾ ತರಲಾಗಿತ್ತು. ನನ್ನ ಮತ್ತು ಗ್ರಾಮಾಂತರ ಶಾಸಕಿಯರ ನಡಿವಿನ ಸಹೋದರ ಸಹೋದರಿ ಸಂಬಂಧ ಎಂತಹ  ಒತ್ತಡವನನ್ನೂ ಮುರಿದು ಹಾಕಿದೆ. 


ಮಾನಸಿಕ ವಾಗಿ ಚುನಾವಣೆಗೆ ಸಿದ್ದರಾಗಲು ಕರೆ ನೀಡಿರುವ ಕೇಂದ್ರ ಸಚಿವರು, ಮುಂದಿನ ಸರ್ಕಾರವನ್ನ ರಚಿಸಲು  ಇಬ್ವರು ಸಹೋದರಿಯರ ಜೊತೆಗೆ ಇನ್ನೆರಡು ಸ್ಥಾನ ಬೇಕು. visl ಬಗ್ಗೆ ಆಸೆ ಇಟ್ಟುಕೊಂಡಿದ್ದೀರಿ. ಅದನ್ನ ಹುಸಿ ಮಾಡೊಲ್ಲ. ಅದನ್ನ ಸರಿಪಡಿಸಿವ ಬಗ್ಗೆ ಕಾರ್ಯನಡೆಸುತ್ತಿದ್ದೇನೆ. 2016 ರಲ್ಲಿ ಮುಚ್ಚಲು ತೀರರ್ಮಾನವಾಗಿದೆ. ಅದನ್ನ ಹಿಂಪಡೆಯುವಂತಾಗಬೇಕು. ಮುಂದಿನ ಐವತ್ತು ವರ್ಷದವರೆಗೆ ಹೇಗೆ ಕಾರ್ಖಾನೆ ನಡೆಸುವ ಬಗ್ಗೆ ಯೋಚಿಸಬೇಕಿದೆ. ಏಕಾಏಕಿ ಸರಿಪಡಿಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು. 


ಭದ್ರಾವತಿಯಲ್ಲಿ ಜಗದೀಶ ಮತ್ತು ಪ್ರವೀಣ ಬಗ್ಗೆ ತೊಂದರೆಯಾಗುವ ಬಗ್ಗೆ ಮನವಿ ಮಾಡಲಾಗಿದೆ. ಅದನ್ನ  ಸರಿಪಡಿಸುವೆ.  25 ದಿನಗಳ ವರೆಗೆ  ಕಾರ್ಖಾನೆ ಕಾರ್ಮಿಕರಿಗೆ ಕೆಲಸ ಕೊಡುವ ಕೆಲಸವಾಗಲಿದೆ ಎಂದರು

ಮಂಗಳವಾರ, ಸೆಪ್ಟೆಂಬರ್ 3, 2024

ಇಬ್ಬರು ಶಿಕ್ಷಕರಿಗೆ ಓರ್ವ ಉಪನ್ಯಾಸಕರಿಗೆ ಅತ್ಯುತ್ತಮ ಶಿಕ್ಷಕ ಮತ್ತು ಉಪನ್ಯಾಸಕ ಪ್ರಶಸ್ತಿ



ಸುದ್ದಿಲೈವ್/ಶಿವಮೊಗ್ಗ


ರಾಜ್ಯಮಟ್ಟದ ಉತ್ತಮ ಶಿಕ್ಷಕರ  ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗಿದೆ. ಪ್ರಾಥಮಿಕ ಶಾಲೆ ವಿಭಾಗದಲ್ಲಿ 20 ಶಿಕ್ಷಕರು, ಪ್ರೌಢಶಾಲೆ ವಿಭಾಗದಲ್ಲಿ 11 ಶಿಕ್ಷಕರು ಮತ್ತು 8 ಜನ ಉಪನ್ಯಾಸಕರಿಗೆ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಇಬ್ಬರು  ಶಿಕ್ಷಕರಿಗೆ ಮತ್ತು ಓರ್ವ ಉಪನ್ಯಾಸಕರಿಗೆ ಪ್ರಶಸ್ತಿ ಲಭಿಸಿದೆ.


ಸೆ.5ರಂದು ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಶಿಕ್ಷಕಿಯರಿಗೆ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್‌.ಹೊಸಮಠ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.


ಪ್ರಾಥಮಿಕ ಶಾಲೆ ವಿಭಾಗದಲ್ಲಿ ಶಿವಮೊಗ್ಗದ ಗುತ್ಯಪ್ಪ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಭಾಗೀರಥಿ.ಎಂ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರೌಢಶಾಲೆ ವಿಭಾಗದಲ್ಲಿ ತೀರ್ಥಹಳ್ಳಿ ತಾಲೂಕು ಹೊಸೂರು ಗುಡ್ಡೇಕೇರಿಯ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ವೀರೇಶ್‌.ಟಿ ಅವರಿಗೆ ಪ್ರಶಸ್ತಿ ಲಭಿಸಿದೆ.


ರಿಪ್ಪನ್ಬಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಣಿತ ಉಪನ್ಯಾಸಕ ವಾಸುದೇವ ಕೆ.ಹೆಚ್ ಅತ್ಯುನ್ನತ ಉಪನ್ಯಾಸಕರಿಗೆ ಪ್ರಶಸ್ತಿ ಲಭಿಸಿದೆ. 

ಮೀಸಲಾತಿ ಕುರಿತು 9 ನೇ ಬೆಂಚ್ ನಲ್ಲಿ ಕಾನೂನು ಹೋರಾಟಕ್ಕೆ ತೀರ್ಮಾನ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟ ಇವರ ಆಶ್ರಯದಲ್ಲಿ ಒಳ ಮೀಸಲಾತಿ - ಬಂಜಾರ ಸಮುದಾಯಕ್ಕೆ ಪೂರಕವೇ ಬಾಧಕವೇ ಒಂದು ಅವಲೋಕನ ರಾಜ್ಯ ಮಟ್ಟದ ವಿಚಾರ ಸಂಕಿರಣ ವನ್ನು ವಿಧಾನ ಸಭಾ ಉಪ ಸಭಾಪತಿ ರುದ್ರಪ್ಪ ಲಾಂಬಾಣಿ ಉದ್ಘಾಟಿಸಿದರು,           


ಉಮೇಶ್ ಜಾದಾವ್   :- ಸಮಾಜದ ಉಳಿಗೆ ಆಳುವರ ಜವಾಬ್ದಾರಿ ಬಹಳ ಮಖ್ಯವಿದೆ, ಜನಗಣತಿ ಅದ ಮೇಲೆ ಒಳ ಮೀಸಲಾತಿ ಜಾರಿ ಮಾಡುವುದು ಬಹಳ ಮುಖ್ಯ ಎಂದರು.                      


ಎಂ ಎಲ್ ಸಿ  ಪ್ರಕಾಶ್ ರಾಠೋಡ್ ಮಾತನಾಡಿ,   ಒಳಮೀಸಲಾತಿ ಜಾರಿ ಮಾಡಲು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ  ಇದರ ಹಿನ್ನಲೆಯಲ್ಲಿ  ಸಮಾಜ ನಾವುಗಳ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಬೇಕಾಗಿದೆ. 


ಸರ್ಕಾರ ಬಳಿ ಯಾವುದೆ ಮಾಹಿತಿ ಇಲ್ಲಾ ಹಾಗಾಗೀ ಜನಗಣತಿ ಮಾಡಿ, ವಿಭನ್ನವಾದ ಆದೇಶವಿರುವುದರಿಂದ ಇಡೀ ದೇಶದಲ್ಲಿ ಒಂದೆ ರೀತಿಯ ಕಾನೂನು ತರಬೇಕಾಗಿದೆ.  7ಸ್ಥಾನ ಬೇಂಜ್ ನ್ಯಾಯಲಯದಲ್ಲಿ ಈ ಆದೇಶವಾಗಿದೆ, ಮುಂದಿನ ದಿನದಲ್ಲಿ ಸಮಾಜ 9 ಸ್ಥಾನ ಪೀಠದ ನ್ಯಾಯದಲ್ಲಿ ಕೇಸ್ ದಾಖಲಿಸಲು ಕಟ್ಟಿಬದ್ಥವಾಗಬೇಕಿದೆ ಎಂದರು. 


ಅಧ್ಯಕ್ಷತೆಯನ್ನು ಮಾಜಿ ಶಾಸಕ ಹಾಗೂ ಬಂಜಾರ ಸಂಘದ ಅಧ್ಯಕ್ಷರಾದ ಆಶೋಕನಾಯ್ಕ ವಹಿಸಿದ್ದರು, ಮುಖ್ಯ ಅತಿಥಿ ಯಾಗಿ ಎಂಎಲ್ ಸಿ ಪ್ರಕಾಶ್ ರಠೋಡ್, ಶಾಸಕ ಅವಿನಾಶ್ ಜಾದವ್,ಡಾ. ಚಂದು ಲಾಂಬಾಣಿ,  ಶಾರದ ಪೋರ್ಯಾನಾಯ್ಕ, ಮಾಜಿ ಶಾಸಕ ರಾಜೀವ್ ಕುಡುಚಿ, ಬಸವರಾಜನಾಯ್ಕ, ಮನೋಹರ ಐನಾಪೂರ ಹಾಗೂ ಮಾಜಿ ಸಂಸದ ಉಮೇಶ್ ಜಾದವ್, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರು ಜಯದೇವ್ ನಾಯ್ಕ, ಮಾಜಿ ನಿಗಮದ ಅದ್ಯಕ್ಷ ಬಾಲರಾಜ್ ನಾಯ್ಕ, ಒಕ್ಕೂಟದ ಕಾರ್ಯಧ್ಯಕ್ಷ ರಾಘವೇಂದ್ರನಾಯ್ಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.     

ಗುರುವಾರ, ಆಗಸ್ಟ್ 29, 2024

ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ



ಸುದ್ದಿಲೈವ್/ಶಿವಮೊಗ್ಗ


ಇಲ್ಲಿನ ವಿನೋಬನಗರದ ಸೂಡ ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕ ಓಡಾಡುವ ರಸ್ತೆಯನ್ನೇ ಬಂದ್ ಮಾಡಲಗಿದ್ದು ಇದನ್ನ ಒಂದು ವಾರದ ವರೆಗೆ ಗಡುವು ನೀಡಿದರೂ ಪ್ರಯೋಜನೆಯಾಗದ ಹಿನ್ನಲೆಯಲ್ಲಿ ಶಿವಮೊಗ್ಗದ ನಾಗರೀಕ ಹಿತರಕ್ಷಣೆಯ ವೇದಿಕೆ ನಿನ್ನೆಯಿಂದ ಪಾಲಿಕೆ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದೆ. 


ಇಂದು ಅದು ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪಾಲಿಕೆ ಅಥವಾ ಜಿಲ್ಲಾಡಳಿತ ನಿರ್ಲಕ್ಷದಿಂದಾಗಿ ಆಹೋರಾತ್ರಿ ಧರಣಿಗೆ ಕಾರಣವಾಗಿದೆ.  ಇಬ್ಬರೂ ಅಧಿಕಾರಿಗಳಿಗೆ 3 ತಿಂಗಳ ಹಿಂದೆಯೇ ದೂರು ನೀಡಿದರೂ ಕಡೆಗಾಣಿಸಲಾಗಿದೆ, ಇಷ್ಟೇಲ್ಲಾ ಹೋರಾಟ  ಮಾಡಿದರೂ ತಾವು ಒಂದೇ ಒಂದು ಮೀಟಿಂಗ್ ಮಾಡಿಲ್ಲ ಅಥವಾ ಪರಿಹಾರ ಕೊಡಿಸಿಲ್ಲ. ನಾವು ತಮ್ಮನ್ನು ಈ ವಿಚಾರವಾಗಿ ಬೇಟಿ ಆದಾಗ ಸೌಜನ್ಯ ವರ್ತಿಸಿಲ್ಲ ಎಂಬ ನೊವು ನಮ್ಮಲ್ಲಿ ಇದೆ ಎಂದು ಪ್ರತಿಭಟನಾಕಾರರು ನೋವು ತೋಡಿಕೊಂಡಿದ್ದಾರೆ. 



ಇದೇ ವೇಳೆ ಶಾಸಕ ಚೆನ್ನಬಸಪ್ಪ ಶಿವಮೊಗ್ಗ ನಾಗರೀಕ‌ಹಿರತಕ್ಷಣಾ ವೇದಿಕೆಯ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ ಸೂಡ ಆಯುಕ್ತ ವಿಶ್ವನಾಥ್ ಮಜ್ಜಿಗಿಗೆ ಕರೆವಮಾಡಿ ನಾನು ಹುಟ್ಟಿ ಬೆಳೆದ ಊರಿದು. ಸಾರ್ವಜನಿಕರ ಓಡಾಟಕ್ಕೆ ಇರುವ ಜಾಗದಲ್ಲಿ ಶೆಡ್ ನಿರ್ಮಿಸಿರುವುದನ್ನ ಕೂಡಲೇ ತೆಗೆಯಿರಿ ಎಂದು ನಿರ್ದೇಶಿಸಿದ್ದಾರೆ. ಎರಡು ದಿನಗಳಲ್ಲಿ ಸಭೆ ನಡೇಯಲಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಆಯಕ್ತರು ಭರವಸೆ ನೀಡಿದ್ದಾರೆ. 

ಟೋಲ್ ವಿರೋಧಿಸಿ ನಗರದಲ್ಲಿ ಪ್ರತಿಭಟನೆ

 


ಸುದ್ದಿಲೈವ್/ಶಿವಮೊಗ್ಗ


ಹಾನಗಲ್ ನಿಂದ ಶಿಕಾರಿಪುರ ಮೂಲಕ ಶಿವಮೊಗ್ಗಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಎರಡು ಟೋಲ್ ಗಳನ್ನ ನಿರ್ಮಿಸಿರುವ ವಿರುದ್ಧ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಶಿವಮೊಗ್ಗದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 


ನಗರದ ಉಷಾ ನರ್ಸಿಂಗ ಹೋಮ್ ವೃತ್ತದಿಂದ ಡಿಸಿ ಕಚೇರಿಯ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಸರ್ಷಕ್ಕೂ ಮೊದಲೇ ಸಹಕಾರ ನೀಡಿ, ಹೋರಾಟ, ಹೋರಾಟ ಟೋಲ್ ತೆಗೆಯುವರೆಗೂ ಹೋರಾಟ, ಒಂದು ರಸ್ತೆಯ ಟೋಲ್ ನಲ್ಲಿ ಕೊಳ್ಳೆ ಹೊಡೆಯುವುದನ್ನ ನಿಲ್ಲಿಸಿ, 


ಮೊಂಡಾಟ ಬಿಡಿ, ಟೋಲ್ ಬಿಟ್ಟು ನಡೆಯಿರಿ, ನಮ್ಮ ನಡಿಗೆ ಟೋಲ್ ತೆರವುಗೊಳಿಸುವ ಕಡೆಗೆ ಎಂಬ ಪ್ಲಕಾರ್ಡ್ ಹಿಡಿದು ಪ್ರತಿಭಟನಾ ಮೆರವಣೆಗೆಯಲ್ಲಿ ಭಾಗಿಯಾಗಿದ್ದಾರೆ. 15 ದಿನಗಳಲ್ಲಿ ಮನವಿಗೆ ಯಾವ ಅಧಿಕಾರಿಗಳು ಸ್ಪಂಧಿಸದಿದ್ದರೆ ಎರಡು ಟೋಲ್ ಗಳಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು. 


ಎರಡೂ ಟೋಲು ಯಾವ ಮಾನದಂಡನೆಯಲ್ಲಿ ನಿರ್ಮಿಸಲಾಗಿದೆ ಎಂಬುದು ಮಾಹಿತಿ ಬೇಕು. 60 ಕಿ.ಮೀ ದೂರದ ಅಂತರದಲ್ಲಿ ಅಳವಡಿಸಬೇಕೆಂಬ ನಿಯಮವುದ್ದರೂ ಶಿರಾಳಕೊಪ್ಪದ  ಕುಟ್ರಳ್ಳಿಯಿಂದ ಕಲ್ಲಾಪುರದ ಟೋಲ್ ನಡುವೆಇರುವ 35 ಕಿಮಿ ಅಂತರದಲ್ಲಿ ಮತ್ತೊಂದು ಟೋಲ್ ನಿರ್ಮಿಸಲಾಗಿದೆ. 


ಅವೈಜ್ಞಾನಿಕ ಟೋಲ್ ನಿರ್ಮಿಸಲಾಗಿದೆ. ಬಸ್ ನಲ್ಲಿ ಶಿರಾಳಕೊಪ್ಪದಿಂದ ಶಿವಮೊಗ್ಗಕ್ಕೆ ಬಂದರೆ 35 ರೂ ಹೆಚ್ಚಳವಾಗುತ್ತದೆ.ಈ ಅವೈಜ್ಞಾನಿಕ ತೆರಿಗೆ ವಸೂಲಿ ನಿಲ್ಲಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರತಿಭಟನೆಯಲ್ಲಿ ಪದ್ಮನಾಭ್ ಭಟ್, ಸಮಿತಿಯ ಅಧ್ಯಕ್ಷ ಶಿವರಾಜ್ ಜಿ.ಪಿ, ಪತ್ರಕರ್ತ ನವೀದ್, ಪ್ರಸನ್ನ, ಮೊದಲಾದವರು ಭಾಗಿಯಾಗಿದ್ದರು.



ಬುಧವಾರ, ಆಗಸ್ಟ್ 28, 2024

ಸೂಡಾ ಶೆಡ್ ಪರ ವಿರುದ್ಧದ ಹೋರಾಟ

 


ಸುದ್ದಿಲೈವ್/ಶಿವಮೊಗ್ಗ


ಚಿತ್ರದುರ್ಗದ ರೇಣುಕಾಚಾರ್ಯರ ಹತ್ಯೆ ಪ್ರಕರಣದಲ್ಲಿ ಶೆಡ್ ನ ವಿಷಯ ಕರ್ನಾಟದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆದರೆ ವಿನೋಬ ನಗರದ ಸೂಡ ಕಚೇರಿಯಲ್ಲಿನ ಶೆಡ್ ಈಗ ಎರಡು ಸಂಘಟನೆಯ ಪ್ರತಿಭಟನೆ ಕಾರಣವಾಗಿದೆ.


ಇಂದು ಶಿವಮೊಗ್ಗ ನಾಗರೀಕ ಹಿತರಕ್ಷಣ ವೇದಿಕೆಗಳ ಒಕ್ಕೂಟ ರಸ್ತೆಯ ಮೇಲೆ ಸೂಡದವರು ಕಚೇರಿ ನೌಕರರ ವಾಹನ ನಿಲುಗಡೆಗೆ ನಿರ್ಮಿಸಿರುವ ಅನಧಿಕೃತ ಶೆಡ್ ತರವಿಗೆ ಅಹೋ ರಾತ್ರಿ ಧರಣಿಗೆ ಮುಂದಾಗಿದ್ದಾರೆ.


ತಕ್ಷಣವೇ ರಸ್ತೆಯಲ್ಲಿರುವ ಶೆಡ್ ತೆರವುಗೊಳಿಸಬೇಕು. ಸಾರ್ವಜನೊಕರ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಕಾನೂನು ಬಾಹಿರವಾಗಿ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಸೂಡ ಆಯುಕ್ತ ವಿಶ್ವನಾಥ್ ಮುತ್ತಜ್ಜಿ, ನಗರ ಯೋಜನೆ ಸದಸ್ಯೆ ರೂಪ, ಸಹಾಯಕ ಇಂಜಿನಿಯರ್ ಬಸವರಾಜುಮತ್ತು ಗಂಗಾಧರ್ ಸ್ವಾಮಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವೇದಿಕೆ ಅಹೋರಾತ್ರಿ ಪ್ರತಿಭಟನೆಗೆ ಮುಂದಾಗಿದೆ.


ಆದರೆ ಇದರ ವಿರುದ್ಧವಾಗಿ ಭಗತ್ ಸಿಂಗ್ ಕನ್ನಡ ಯುವಕ ಸಂಘ ಶೆಡ್ ತೆರವುಗೊಳಿಸಬಾರದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದೆ. ಭಗತ್ ಸಿಂಗ್ ಕನ್ನಡ ಯುವಕ ಸಂಘದ ಅಧ್ಯಕ್ಷ ರಾಜಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ.


ಶೆಡ್ ನ್ನ ನಿರ್ಮಾಣ ಪ್ರಾಧಿಕಾರದ ಕಟ್ಟಡ ನಕ್ಷೆಯಂತೆಯೇ ಪಾರ್ಕಿಂಗ್ ಜಾಗದಲ್ಲಿ ನಿರ್ಮಿಸಿರುವುದು ಸರಿಯಿದೆ. ಸೂಡಾ ಮತ್ತು ಪಾಲಿಕೆ ಜಂಟಿ ಕಾರ್ಯಾಚರಣೆ ನಡೆಸಿ ವರದಿ ಸಲ್ಲಿಸಿದ ಮೇಲೆ ಮುಂದಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಲಾಗಿದೆ. ಸೂಡಾ ಶೆಡ್ ನ ತೆರವಿನ ಹೋರಾಟದ ಹಿಂದೆ ವೇದಿಕೆಯು ಬೇರೆಂದು ಖಾಸಗಿ ಸಂಸ್ಥೆಗೆ ಲಾಭ ಮಾಡಿಕೊಡಲು ಹೊರಟಿದೆ ಎಂದು ಕನ್ನಡ ಯುವಕರ ಸಂಘ ದೂರಿದೆ.


ಒಟ್ಟಿನಲ್ಲಿ ಎರಡೂ ಸಂಘಟನೆಗಳ ಹೋರಾಟ ಯಾವ ಹಂತಕ್ಕೆ ತಲುಪಲಿದೆ ಎಂಬುದು ಕಾದು ನೋಡಬೇಕಿದೆ. 


ಇಂದಿನ ಜಲಾಶಯಗಳ ನೀರಿನ ಮಟ್ಟ



ಸುದ್ದಿಲೈವ್/ಶಿವಮೊಗ್ಗ


ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳ ಒಳ, ಹೊರ ಹರಿವು ಹೆಚ್ಚಳವಾಗಿದೆ.


ಲಿಂಗನಮಕ್ಕಿ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಇವತ್ತು 26,162 ಕ್ಯೂಸೆಕ್‌ ಒಳ ಹರಿವು ಇದೆ. 39,896 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ನೀರಿನ ಮಟ್ಟ 1817.20 ಅಡಿಗೆ ತಲುಪಿದೆ. ಪ್ರಸ್ತುತ ಜಲಾಶಯದಲ್ಲಿ 145.47 ಟಿಎಂಸಿ ನೀರು ಇದೆ.


ತುಂಗಾ ಜಲಾಶಯದ ಒಳ ಹರಿವು ಕೂಡ ಹೆಚ್ಚಳವಾಗಿದೆ. ಇವತ್ತು 14,724 ಕ್ಯೂಸೆಕ್‌ ಒಳ ಹರಿವು ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಇದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಪುನಃ ಏರಿಕೆಯಾಗಿದೆ.


ಭದ್ರಾ ಜಲಾಶಯದ ಒಳ ಹರಿವು ಕೂಡ ತುಸು ಏರಿಕೆಯಾಗಿದೆ. ಇವತ್ತು 8571 ಕ್ಯೂಸೆಕ್‌ ಒಳ ಹರಿವು ಇದೆ. 3942 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಜಲಾಶಯದ ನೀರಿನ ಮಟ್ಟ 181.2 ಅಡಿ ಇದೆ. ಪ್ರಸ್ತುತ ಜಲಾಶಯದಲ್ಲಿ 65.57 ಟಿಎಂಸಿ ನೀರು ಸಂಗ್ರಹವಾಗಿದೆ.

ಮಂಗಳವಾರ, ಆಗಸ್ಟ್ 27, 2024

ಲಾಂಗ್ ಹಿಡಿದು ಝಳಪಿಳಿಸಿದವನ ವಿರುದ್ಧ ಎಫ್ಐಆರ್

 


ಸುದ್ದಿಲೈವ್/ಶಿವಮೊಗ್ಗ


ಇನ್ ಸ್ಟಾಗ್ರಾಮ್ ನಲ್ಲಿ ಲಾಂಗ್ ನ್ನ ತೋರಿಸಿ ಝಳಪಿಸುತ್ತಿರುವ ಯುವಕನ ವಿರುದ್ಧ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊ ವೈರಲ್ ಆದ ಬೆನ್ನಲ್ಲೇ ಸುಮೋಟೊ ಪ್ರಕರಣ‌ ದಾಖಲಾಗಿದೆ.‌


ಸಾಮಾಜಿಕ ಜಾಲತಾಣದಲ್ಲಿ ಒಬ್ಬ ವ್ಯಕ್ತಿಯು ಕೈಯಲ್ಲಿ ಲಾಂಗ್ ಹಿಡಿದುಕೊಂಡು ಪ್ರದರ್ಶನ ಮಾಡುತ್ತಿರುವ ಫೋಟೋ ಹರಿದಾಡುತ್ತಿದ್ದು. ಅದನ್ನು ಪರಿಶೀಲಿಸಿ ನೋಡಿದ ಪೊಲೀಸರಿಗೆ ಪ್ರೋಫೈಲ್ ಹೆಸರು King_areess ಎಂದು ತಿಳಿದುಬಂದಿದೆ.  ಅದರಲ್ಲಿ ಒಬ್ಬ ವ್ಯಕ್ತಿಯ ಫೋಟೋ ಕಂಡು ಬಂದಿದ್ದು, ಲಿಂಕ್ ಪರಿಶೀಲಿಸಲಾಗಿದೆ.


Kingkhans Ares ಅಂತಾ ಉಲ್ಲೇಖಿಸಲಾಗಿದೆ. ಈ ಪ್ರೋಫೈಲ್ ಕೆಳಭಾಗದಲ್ಲಿ july 07 ರ ಫೋಟೋದಲ್ಲಿ 02 ಜನ ವ್ಯಕ್ತಿಗಳು ಇದ್ದು, ಅದರಲ್ಲಿ ತುಂಬು ತೋಳಿನ ಸಿಮೆಂಟ್ ಬಣ್ಣದ ಟೀ ಷರ್ಟ್ ಹಾಕಿಕೊಂಡಿರುವ ವ್ಯಕ್ತಿಯು ಬಲಗೈಯಲ್ಲಿ ಉದ್ದನೆಯ ಲಾಂಗ್ ನ್ನು ಎತ್ತಿ ಹಿಡಿದುಕೊಂಡಿರುವುದು ಕಂಡು ಬಂದಿದೆ.


ಅದರ ಕೆಳಭಾಗದ ಇನ್ನೊಂದು ಫೋಟೋ ಇದ್ದು, july 06 ಅಂತಾ ಉಲ್ಲೇಖವಾಗಿದೆ. ಅದರಲ್ಲಿ ಒಬ್ಬ ವ್ಯಕ್ತಿ ಮಾತ್ರ ಇದ್ದು, ಆತನು ತುಂಬು ತೋಳಿನ ಸಿಮೆಂಟ್ ಬಣ್ಣದ ಟೀ ಷರ್ಟ್ ಹಾಕಿಕೊಂಡು ಬಲಗೈಯಲ್ಲಿ ಉದ್ದನೆಯ ಲಾಂಗ್ ನ್ನು ಎತ್ತಿ ಹಿಡಿದುಕೊಂಡಿರುವುದು ಕಂಡು ಬಂದಿದೆ. 


ವ್ಯಕ್ತಿಯ ಬಗ್ಗೆ ಸ್ಥಳೀಯರಲ್ಲಿ ವಿಚಾರ ಮಾಡಲಾಗಿ ಕೈಯಲ್ಲಿ ಕಬ್ಬಿಣದ ಲಾಂಗ್ ಹಿಡಿದುಕೊಂಡು ವ್ಯಕ್ತಿಯು ಭರ್ಮಪ್ಪ ನಗರ ವಾಸಿ ಮೊಹಮದ್ ಹ್ಯಾರೀಸ್ ಅಂತಾ ತಿಳಿದು ಬಂದಿದೆ. ವ್ಯಕ್ತಿಯ ಕೈಯಲ್ಲಿ. ಉದ್ದನೆಯ ಕಬ್ಬಿಣದ ಲಾಂಗ್ ನ್ನು ಹಿಡಿದುಕೊಂಡು ಮೇಲಕ್ಕೆ ಎತ್ತಿ ಲಾಂಗ್ ನ್ನು ಝಳಪಿಸುತ್ತಾ ಸಾರ್ವಜನಿಕರಿಗೆ ತೋರಿಸುತ್ತಾ ಜನರಿಗೆ ಭಯ ಹುಟ್ಟಿಸುವಂತಹ ವಾತಾವರಣ ಉಂಟು ಮಾಡುತ್ತಿರುವುದು ಕಂಡು ಬಂದಿದೆ.


ಮುಂಬರುವ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಮೆರವಣಿಗೆ ಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗದಂತೆ ಮುಂಜಾಗೃತ ಕ್ರಮವಾಗಿ INSTA POST ಗಳನ್ನು ಹಾಕಿ ಸಾರ್ವಜನಿಕರಿಗೆ ಜೀವ ಹಾನಿ ಮಾಡುವ ಸಾದ್ಯತೆ ಇದ್ದುದರಿಂದ ಮೊಹಮದ್ ಹ್ಯಾರೀಸ್ ವಿರುದ್ಧ ದೂರು ದಾಖಲಾಗಿದೆ.

ಸೋಮವಾರ, ಆಗಸ್ಟ್ 26, 2024

ಸುದ್ದಿಲೈವ್ ನ ಫಲಶೃತಿ-ಗಾಂಜಾ ಕಿಟ್ ಪೂರೈಕೆ

 


ಸುದ್ದಿಲೈವ್/ಶಿವಮೊಗ್ಗ


ನಿನ್ನೆ ಭದ್ರಾವತಿಯಲ್ಲಿ ಗಾಂಜಾ ಪ್ರಕರಣದಲ್ಲಿ ಬೆಳಕಿಗೆ ಬಂದಿದ್ದ, ಆಸ್ಪತ್ರೆಗಳಲ್ಲಿನ ಗಾಂಜಾ ಕಿಟ್ ನ ಕೊರತೆಯ ಬಗ್ಗೆ ಮೆಗ್ಗಾನ್ ನ ಡಿಎಸ್ ಸ್ಪಂಧಿಸಿದ್ದಾರೆ. ಮುಂದಾಗಬಹುದಿದ್ದ ಮುಜುಗರದಿಂದ ಪಾರು ಮಾಡಿದ್ದಾರೆ.


ನಿನ್ನೆ ಭದ್ರಾವತಿ ತಾಲೂಕಿನಲ್ಲಿ ಗಾಂಜಾ ಪ್ರಕರಣದಲ್ಲಿ ಇಬ್ಬರು ಯುವಕರನ್ನ ಗ್ರಾಮಸ್ಥರು 112 ಗೆ ಹಿಡಿದುಕೊಟ್ಟಿದ್ದರು. ಇದೇ ಆರೋಪಿಗಳನ್ನ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದಾಗ ಭದ್ರಾವತಿಯಲ್ಲೂ ಕಿಟ್ ಖಾಲಿಯಾಗಿತ್ತು.


ಇದರಿಂದ ಭದ್ರಾವತಿಯಿಂದ ಶಿವಮೊಗ್ಗದ ಮೆಗ್ಗಾನ್ ಗೆ ಕರೆತರಲಾಗಿತ್ತು. ಒಬ್ಬರಿಗೆ ಪಾಸಿಟಿವ್ ಬಂದಿತ್ತು. ಮತ್ತೊಬ್ಬನಿಗೆ ಗಾಂಜಾ ಪತ್ತೆ ಮಾಡಲು ಕಿಟ್ ಕೊರತೆಯಾಗಿತ್ತು. ಈ ಘಟನೆಯ ಮೇಲೆ ನಿನ್ನ ಸುದ್ದಿಲೈವ್ ಮೆಗ್ಗಾನ್ ನಲ್ಲಿ ಗಾಂಜಾ ಪತ್ತೆ ಮಾಡುವ ಕಿಟ್ ಖಾಲಿಯಾಗಿದೆ. ಡಾ.ಸುರಗೀಹಳ್ಳಿಯವರು ನೀಡಿದ್ದ ಕಿಟ್ ಖಾಲಿಯಾಗಿದೆ.


ಹೊಸದಾಗಿ ಡಿಹೆಚ್ ಒ ಆಗಿ ಬಂದ ಡಾ.ನಟರಾಜ್ ನಾಲ್ಕು ತಿಂಗಳು ಕಳೆದರೂ ಒಂದು ಕೊಟ್ಟಿಲ್ಲ ಎಂದು ಸುದ್ದಿ ಮಾಡಲಾಗಿತ್ತು. ಸುದ್ದಿಯ ಬೆನ್ನಲ್ಲೇ ಸ್ಪಂಧಿಸಿದ ಡಾ.ಸಿದ್ದನಗೌಡ 8 ಸಾವಿರ ಕಿಟ್ ಗಳಿಗೆ ಆರ್ಡರ್ ಮಾಡಿದ್ದಾರೆ. ಗುರುವಾರದ ಒಳಗೆ ಕಿಟ್ ಪೂರೈಕೆ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲಿಯವರೆಗೆ ತಾತ್ಕಾಲಿಕ ಕಿಟ್ ನ್ನ ತರಲಾಗಿದೆ ಎಂದು ತಿಳಿಸಿದ್ದಾರೆ. ಇದು ಸುದ್ದಿಲೈವ್ ನ ಫಲಶೃತಿಯಾಗಿದೆ.

ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲಿಯೇ ದಲಿತ ವಿದ್ಯಾರ್ಥಿನಿಗೆ ಅನ್ಯಾಯ?



ಸುದ್ದಿಲೈವ್/ಶಿವಮೊಗ್ಗ


ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕು ಎಂದು ಸರ್ಕಾರಗಳು ಅನೇಕ ಸೌಲಭ್ಯ. ಸವಲತ್ತುಗಳನ್ನು ಆಯಾ ಕಾಲೇಜಿಗೆ ನೀಡುತ್ತವೆ..ಆದರೆ ಶಿವಮೊಗ್ಗದ ಪ್ರತಿಷ್ಠಿತ ಎನಿಸಿಕೊಳ್ಳುವ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕಾಲೇಜು ಎಂಬ ಹೆಗ್ಗಳಿಕೆ ಪಡೆದುಕೊಂಡ ಈ ಕಾಲೇಜು ಡೂನೇಷನ್ ಹಾವಳಿ ನಡೆಸುತ್ತಾ ಉನ್ನತ ಶಿಕ್ಷಣ ವನ್ನು ಮಾರಾಟಕ್ಕಿಟ್ಟಿದೆ.


ಅದರಲ್ಲೂ ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯ ಬಡ.ದಲಿತ.ಶೋಷಿತರ ವಿದ್ಯಾರ್ಥಿಗಳ ಅನುಕೂಲ ಕ್ಕಾಗಿ ಆರಂಭಿಸಿದ ಕಾಲೇಜು ಇಂದು ಹಣ ಪಿಪಾಸುಗಳ.ಡೂನೇಷನ್ ಮಾಫಿಯಾಗಳ ಹಿಡಿತದಲ್ಲಿ ಇರುವುದು ಶೋಚನೀಯ.!? ಇತ್ತೀಚಿಗೆ ಒಬ್ಬ ದಲಿತ ಸಮುದಾಯದ ಬಾಲಕಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ.ಆಕೆಯ ತಾಯಿಗೆ ಕಿಡ್ನಿ ತೊಂದರೆಯಾಗಿ ಚಿಕಿತ್ಸೆ ಗಾಗಿ ಲಕ್ಷಗಟ್ಟಲೆ ಹಣ ಖರ್ಚಾಗಿದ್ದು.


ಪ್ರಸ್ತುತ ವರ್ಷದ ಶಾಲಾ ಶುಲ್ಕವನ್ಮು ವಿಳಂಬವಾಗಿ ಪಾವತಿಸಲು ಆಕೆಯ ಪೋಷಕರು ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದರು.ನಿಗದಿತ ಸಮಯದಲ್ಲಿ ಪಾವತಿಸಲು ಸಾದ್ಯವಾಗದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಶುಲ್ಕ ಪಾವತಿಸಲು ವಾಯಿದೆ ಕೊಡಿಸಿ ಪರೀಕ್ಷೆ ಬರೆಯಲು ಅನುಮತಿ ಕೊಡಿಸಲು  ಮನವಿ ಮಾಡಿಕೊಂಡ ಅರ್ಜಿಗೆ ಸಚಿವರು ಕ್ರಮವಹಿಸಲು ಸೂಚಿಸಿದ್ದರು.ಆದರೆ ಆ ಪತ್ರಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಆಡಳಿತ ಮಂಡಳಿ ದಲಿತ ಬಾಲಕಿ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ನೀಡದೆ ಮೌಖಿಕವಾಗಿ ಸೂಚಿಸಿದೆಯಂತೆ.


ಅಂದರೆ ಒಬ್ಬ ದಲಿತ ವಿದ್ಯಾರ್ಥಿನಿಯ ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನೀಡದ ಕಾಲೇಜಿನ ಆಡಳಿತ ಮಂಡಳಿಯ ವಿರುದ್ದ ಹಾಗು ಸಂಬಂಧಿಸಿದದವ ವಿರುದ್ದ ದಲಿತ ಸಂಘಟನೆಗಳು ಪ್ರತಿಭಟನೆ ಮಾಡಲು ಸಜ್ಜಾಗುತ್ತಿವೆ.

ಶುಕ್ರವಾರ, ಆಗಸ್ಟ್ 23, 2024

ಆ.25 ರಂದು ಶಿವಮೊಗ್ಗ-ಭದ್ರಾವತಿಯಲ್ಲಿ ವಿದ್ಯುತ್ ವ್ಯತ್ಯಯ



ಸುದ್ದಿಲೈವ್/ಭದ್ರಾವತಿ/ಶಿವಮೊಗ್ಗ


ಆಗಸ್ಟ್ 25 ರಂದು ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 


ಮೆಸ್ಕಾಂ ಗ್ರಾಮಂತರ/ ನಗರ ಉಪವಿಭಾಗ  ದಲ್ಲಿ ವ್ಯವಸ್ಥೆ ಸುಧಾರಣೆ ಕಾಮಗಾರಿಯ ಕಾರಣ ಅಗಸ್ಟ್ 25 ರ ಭಾನುವಾರ ಬೆಳಿಗ್ಗೆ  10 - 30 ರಿಂದ ಸಂಜೆ 05 - 30 ಘಂಟೆವರೆಗೆ ಭದ್ರಾವತಿಯ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ತಯವಾಗಲಿದೆ




ದೊಣಬಘಟ್ಟ, ತಡಸ, ಪದ್ಮೇನಹಳ್ಳಿ, ಬಿ.ಹೆಚ್. ರಸ್ತೆ, ಲೋಯರ್ ಹುತ್ತಾ, ದೊಣಬಘಟ್ಟ  ರಸ್ತೆ, ಕೈಗಾರಿಕಾ ಪ್ರದೇಶ, ಅರಣ್ಯ ಇಲಾಖೆ ದಾಸ್ತಾನು ಕಛೇರಿ, ಹೆಬ್ಬಂಡಿ, ಕವಲುಗೊಂದಿ, ಕಡದಕಟ್ಟೆ, ಐ.ಟಿ.ಐ. ಸುತ್ತಮುತ್ತ, ರೈಲ್ವೆದ್ವಾರ ಮತ್ತು ಲಕ್ಷ್ಮೀಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಗ್ರಾಗಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.



ಶಿವಮೊಗ್ಗ ಗ್ರಾಮಾಂತರ


ಆಗಸ್ಟ್ 25 ರ ತಾವರೆಚಟ್ನಹಳ್ಳಿ 66/11 ಕೆವಿ ವಿವಿ ಕೇಂದ್ರದ ಎಫ್-7 ಚನ್ನಮುಂಬಾಪುರ ಮಾರ್ಗದಲ್ಲಿ ವಾಹಕ ಬದಲಾವಣೆ ಮತ್ತು ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿAದ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಗ್ರಾಮಗಳಾದ ರತ್ನಗಿರಿನಗರ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಮೋಜಪ್ಪನ ಹೊಸೂರು ಸುತ್ತಮುತ್ತಲಿನ ಕ್ರಷರ್‌ಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.


ಶಿವಮೊಗ್ಗ ನಗರ ಭಾಗಗಳು


ಶಿವಮೊಗ್ಗ ಮೆಸ್ಕಾಂ ನಗರ ಉಪ ವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ 11 ಕೆವಿ ಮಾಗ್ ಬದಲಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿ: 25/08/2024 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಊರಗಡೂರು, ಸೂಳೆಬೈಲು, ಮದಾರಿಪಾಳ್ಯ, ಮಳಲಿಕೊಪ್ಪ, ಬೈಪಾಸ್ ರಸ್ತೆ, ವಾದಿ-ಎ-ಹುದಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. 

ಇಂದಿನಿಂದ ಮೂರುದಿನ ರಾಯಲ್ ಆರ್ಕಿಡ್ ನಲ್ಲಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ



ಸುದ್ದಿಲೈವ್/ಶಿವಮೊಗ್ಗ


ಬೆಂಗಳೂರಿನ ಹೆಸರಾಂತ ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಆಭರಣಗಳ ಕಂಪನಿಯು ಇಂದಿನಿಂದ ಶಿವಮೊಗ್ಗದಲ್ಲಿ ಮೂರು ದಿನಗಳ ಕಾಲ ನಗರದ ರಾಯಲ್ ಆರ್ಕಿಡ್ ಹೋಟೆಲ್ ನಲ್ಲಿ ವಜ್ರ, ಪ್ಲಾಟಿನಂ, ಚಿನ್ನ, ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಬೆಳಗ್ಗೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ನಕಲಿ ಯುಗ. ಆಭರಣಗಳನ್ನು ಖರೀದಿಸುವಾಗ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು. ಆದರೆ, ಕೃಷ್ಣಯ್ಯ ಚೆಟ್ಟಿ ಕಂಪನಿಯು ನಂಬಿಕೆಗೆ ಅರ್ಹವಾಗಿದೆ. ಸುಮಾರು ೧೫೫ ವರ್ಷಗಳಿಂದ ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ರಾಜರ ಕಾಲದಿಂದ ಇವರ ಪೂರ್ವಜರು ಆಭರಣಗಳ ತಯಾರಿಕೆಯಲ್ಲಿ ಇದ್ದರು. ಶಿವಮೊಗ್ಗದ ಜನರು ಇದರ ಪ್ರಯೋಜನ ಪಡೆಯಬೇಕು ಎಂದರು.


ಕಂಪನಿಯ ವ್ಯವಸ್ಥಾಪಕ ಶ್ರೀ ಚರಣ್ ಮಾತನಾಡಿ, ೧೮೬೯ರಿಂದ ನಮ್ಮ ಸಂಸ್ಥೆ ಜನರ ನಂಬಿಕೆಗೆ ಅನುಗುಣವಾಗಿ ಆಭರಣಗಳ ಮಾರಾಟ ಮಾಡುತ್ತಾ ಬಂದಿದೆ. ಶಿವಮೊಗ್ಗದ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ಇದೆ. ಬಂಗಾರಕ್ಕೆ ಶೇ. ೪, ವಜ್ರಕ್ಕೆ ಶೇ. ೬, ಬೆಳ್ಳಿಗೆ ಶೇ. ೨ರಷ್ಟು, ೧೯ ಲಕ್ಷ ರೂ.ಗಿಂತ ಹೆಚ್ಚಿನ ವಜ್ರದ ಆಭರಣಗಳ ವ್ಯಾಪಾರ ಮಾಡಿದರೆ ಶೇ. ೯ ರಷ್ಟು ರಿಯಾಯಿತಿ ಇದೆ ಎಂದರು.


ಆ. ೨೩ರಿಂದ ೨೫ರವರೆಗೆ ಬೆಳಗ್ಗೆ ೧೦.೩೦ರಿಂದ ರಾತ್ರಿ ೮ ಗಂಟೆವರೆಗೆ ನಡೆಯುವ ಪ್ರದರ್ಶನ ಮತ್ತು ಮಾರಾಟದಲ್ಲಿ ವಿಶೇಷ ವಿನ್ಯಾಸದ ಆಭರಣಗಳು ಕಂಡು ಬಂದವು. ತೋಳಬಂಧಿ, ಸೊಂಟದ ಪಟ್ಟಿ, ನೆಕ್ಲೇಸ್, ಉಂಗುರಗಳು, ಬಳೆ, ಓಲೆ, ಮೂಗುತಿ, ಜುಮುಕಿ, ಪ್ಲಾಟಿನಂ ಆಭರಣಗಳು, ಲಕ್ಷ್ಮೀ ವೆಂಕಟೇಶ, ರುದ್ರಾಕ್ಷಿ ಮಣಿ ಸೇರಿದಂತೆ ವಿವಿಧ ವಿನ್ಯಾಸದ ಡಾಲರ್ ಗಳು, ಪ್ರೇಮಿಗಳಿಗಾಗಿ ಪ್ರೀತಿ ಸಂಕೇತದ ಡಾಲರ್ ಗಳು ಕಂಡು ಬಂದವು. ೫ ಸಾವಿರ ರೂ.ನಿಂದ ೫೦ ಲಕ್ಷ ರೂ.ಗೂ ಅಧಿಕ ಮೌಲ್ಯದ ಆಭರಣಗಳು, ಇದರ ಜೊತೆಗೆ ಸುಗಂಧ ದ್ರವ್ಯಗಳು, ಮುತ್ತು, ರತ್ನ, ನೀಲ ಮಾಣಿಕ್ಯ, ವೈಢೂರ್ಯ ಇಲ್ಲಿವೆ.


ಕಾರ್ಯಕ್ರಮದಲ್ಲಿ ಕಂಪನಿಯ ವ್ಯಸವ್ಥಾಪಕ ನಿರ್ದೇಶಕಿ ತ್ರಿವೇಣಿ ವಿನೋದ್, ಶ್ರೇಯಸ್, ಗೋಪಾಲ್, ಗಣೇಶ್ ಮೊದಲಾದವರಿದ್ದರು.

ಜ್ಞಾನೇಶ್ವರ್ ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಪಂಚವಟಿ ಕಾಲೋನಿಯಲ್ಲಿರುವ  ಶ್ರೀ ಮಾರಿಕಾಂಬ ಸೌಹಾರ್ದ ಸಹಕಾರ ನಿ., ಕ್ಕೆ  ಮೂರನೆಯ ಬಾರಿ ಅಧ್ಯಕ್ಷರಾಗಿ ಎಸ್ ಜ್ಞಾನೇಶ್ವರ್ ಆಯ್ಕೆಯಾಗಿದ್ದಾರೆ.  


ಹಾಗೂ ಮೊದಲನೇ ಬಾರಿ ಉಪಾಧ್ಯಕ್ಷರಾಗಿ ಶ್ರೀಮತಿ ರತ್ನ ಮಂಜುನಾಥ್ ರವರಿಗೆ ಅಭಿನಂದನೆಗಳು, ನಿರ್ದೇಶಕರುಗಳಾದ ಶ್ರೀ ಕೆಎಸ್ ಈಶ್ವರಪ್ಪ, ಶ್ರೀ ಕೆಇ ಕಾಂತೇಶ್, ಕೆ ಶಂಕರ್, ಶ್ರೀ ಕೆಟಿ ಸತ್ಯನಾರಾಯಣ, ಎನ್ ಎಸ್ ಪ್ರಕಾಶ್,  ಸೋಮಸುಂದರಂ.


ಡಿ. ಜಯರಾಮ್ ಎಸ್ ಎಚ್, ಎಸ್ ಎನ್ ಕಾಂತೇಶ್, ಸಲ್ವರಾಜ್ ಕೆ, ಪುಷ್ಪ ಶೆಟ್ಟಿ, ಬಿ ಟಿ ನಾಯಕ್, ರಾಜು ಜಿ,  ಬಾಲಕೃಷ್ಣ ಎಲ್ಲಾ ನಿರ್ದೇಶಕರಿಗೂ  ಅಭಿನಂದನೆಗಳನ್ನ ಸಲ್ಲಿಸಲಾಗಿದೆ.

ಕೃಷ್ಣ ಜನ್ಮಾಷ್ಟಮಿ-ಮಾಂಸ ಮಾರಾಟ ನಿಷೇಧ



ಸುದ್ದಿಲೈವ್/ಶಿವಮೊಗ್ಗ


ಆಗಸ್ಟ್ 26  ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಂದು ಒಂದು ದಿನ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. 


ಆದ್ದರಿಂದ ಮಾಂಸ ಮಾರಾಟದ ಮಾಲೀಕರು ತಮ್ಮ ಉದ್ದಿಮೆಯನ್ನು ಬಂದ್ ಮಾಡಿ ಸಹಕರಿಸಲು ಕೋರಿದೆ. ಈ ಆದೇಶವನ್ನು ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. 

ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ವಿಷಯ ಸುಳ್ಳು-ಮಹಿಳೆಯರು ತುರ್ತುಪರಿಸ್ಥಿತಿಯಲ್ಲಿ 112 ಗೆ ಕರೆಮಾಡಿ-ಎಸ್ಪಿ ಸ್ಪಷ್ಟನೆ

 


ಸುದ್ದಿಲೈವ್/ಶಿವಮೊಗ್ಗ


ವಾಟ್ಸಪ್ ಗಳಲ್ಲಿ ಗಾಳಿ ಸುದ್ದಿ ಹರಡುತ್ತಿದ್ದು ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಇಂತಹ ಯಾವುದೇ ವ್ಯವಸ್ಥೆಯನ್ನ ಪೊಲೀಸ್ ಇಲಾಖೆ ಮಾಡುತ್ತಿಲ್ಲ.‌ ತುರ್ತು ಪರಿಸ್ಥಿತಿಗೆ 112 ಗೆ ಕರೆ ಮಾಡುವಂತೆ ಸ್ಪಷ್ಟನೆ ನೀಡಿದ್ದಾರೆ.


ವಾಟ್ಸಪ್ ಗಳಲ್ಲಿ ಹರಡುತ್ತಿರುವ ಸುದ್ದಿ ಏನು?


ಯಾವುದೇ ಮಹಿಳೆ ಒಂಟಿಯಾಗಿರುವಾಗ ಮತ್ತು ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಮನೆಗೆ ಹೋಗಲು ವಾಹನ ಸಿಗದಿದ್ದಾಗ ಪೊಲೀಸ್ ಪಡೆ ಉಚಿತ ಪ್ರಯಾಣ ಯೋಜನೆಯನ್ನು ಪ್ರಾರಂಭಿಸಿದೆ. 


ಅವರು ಪೊಲೀಸ್ ಸಹಾಯವಾಣಿ ಸಂಖ್ಯೆಗಳು: 1091 ಮತ್ತು 7837018555 ಅನ್ನು ಸಂಪರ್ಕಿಸಿ ಮತ್ತು ವಾಹನಕ್ಕಾಗಿ ವಿನಂತಿಸಬಹುದು. ಅವರು 24x7 ಕೆಲಸ ಮಾಡುತ್ತಾರೆ. ನಿಯಂತ್ರಣ ಕೊಠಡಿಯ ವಾಹನ ಅಥವಾ ಹತ್ತಿರದ PCR ವಾಹನ/SHO ವಾಹನವು ಅವಳನ್ನು ಸುರಕ್ಷಿತವಾಗಿ ಆಕೆಯ ಗಮ್ಯಸ್ಥಾನಕ್ಕೆ ಕೊಂಡೊಯ್ಯುತ್ತದೆ. ಇದನ್ನು ಉಚಿತವಾಗಿ ಮಾಡಲಾಗುವುದು.  ದಯವಿಟ್ಟು ಈ ಸಂದೇಶವನ್ನು ನಿಮಗೆ ತಿಳಿದಿರುವ ಎಲ್ಲರಿಗೂ ಹರಡಿರಿ.

 
ಹೆಂಡತಿಯರು, ಹೆಣ್ಣುಮಕ್ಕಳು, ಸಹೋದರಿಯರು, ತಾಯಂದಿರು, ಸ್ನೇಹಿತರು ಮತ್ತು ನಿಮಗೆ ತಿಳಿದಿರುವ ಎಲ್ಲಾ ಮಹಿಳೆಯರಿಗೆ ಸಂಖ್ಯೆಯನ್ನು ಕಳುಹಿಸಿ. ಸಂಖ್ಯೆಗಳನ್ನು ಉಳಿಸಲು ಅವರನ್ನು ಕೇಳಿ.. ಪುರುಷರು ದಯವಿಟ್ಟು ನಿಮಗೆ ತಿಳಿದಿರುವ ಮಹಿಳೆಯರೊಂದಿಗೆ ಹಂಚಿಕೊಳ್ಳಿ .
 

ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಖಾಲಿ ಸಂದೇಶ ಅಥವಾ ಮಿಸ್ಡ್ ಕಾಲ್ ಅನ್ನು ಸಹ ನೀಡಬಹುದು.. ಇದರಿಂದ ಪೊಲೀಸರು ನಿಮ್ಮ ಸ್ಥಳವನ್ನು ತಿಳಿದುಕೊಳ್ಳುತ್ತಾರೆ ಮತ್ತು ನಿಮಗೆ ಸಹಾಯ ಮಾಡುತ್ತಾರೆ. ಭಾರತದಾದ್ಯಂತ ಅನ್ವಯಿಸುತ್ತದೆ ಎಂದು ವಾಟ್ಸಪ್ ಗಳಲ್ಲಿ ಹರಡುತ್ತಿದೆ.


7837018555 ನಂಬರ್ ಗೆ ಕರೆ ಮಾಡಿದರೆ ಲೂದಿಯಾನ ಎಂದು ಬರುತ್ತದೆ. ಆದರೆ ಇಂತಹ ಯಾವುದೇ ವ್ಯವಸ್ಥೆಯನ್ನ ಶಿವಮೊಗ್ಗದಲ್ಲಿ ಮಾಡಿಲ್ಲ. ಯಾರಾದರೂ ಈ ರೀತಿ ಹೇಳಿಕೊಂಡು ವಾಹನಗಳು ಬಂದರೆ 112 ಗೆ ಕರೆ ಮಾಡಬಹುದಾಗಿದೆ. ಮಹಿಳೆಯರು ತುರ್ತುಪರಿಸ್ಥಿತಿಯಲ್ಲಿ 112 ಗೆ ಕರೆ ಮಾಡಬೇಕೆಂದು ಶಿವಮೊಗ್ಗ ಪೊಲೀಸ್ ಇಲಾಖೆ ವಿಂತಿಸಿಕೊಂಡಿದೆ.

ಕೈಗಳು ಕೆಲಸ, ಕಾರ್ಯ ಮಾಡುವ ಜೊತೆಗೆ ಭಾಷಾ ಸಂಜ್ಞೆಯಾಗಿಯೂ ಮಾಡುತ್ತದೆ-ಡಾ.ಚೇತನ್ ಕುಮಾರ್ ನವಿಲೇಹಾಳ್



ಸುದ್ದಿಲೈವ್/ಶಿವಮೊಗ್ಗ


ಮನುಷ್ಯನ ದೇಹವೇ ಒಂದು ಅದ್ಭುತ ಸೃಷ್ಟಿ, ಇದರಲ್ಲಿ  ಕೈಗಳು ಕೂಡ ಅತ್ಯಂತ ಪ್ರಮುಖ ಅಂಗವಾಗಿದ್ದು, ಕೈಗಳು ಕೆಲಸ, ಕಾರ್ಯಗಳನ್ನು ಮಾಡುವ ಜೊತೆಗೆ ಭಾಷಾ ಸಂಜ್ಞೆಯಾಗಿಯೂ ಕೆಲಸವನ್ನು ಮಾಡುತ್ತದೆ, ಕೈಗಳನ್ನು ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು  ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ.ಚೇತನ್ ಕುಮಾರ್ ನವಿಲೇಹಾಳ್ ಅಭಿಪ್ರಾಯಿಸಿದರು. 


ಇಲ್ಲಿನ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೈ ಶಸ್ತ್ರ ಚಿಕಿತ್ಸಾ ದಿನದ ಕಾರ್ಯಕ್ರಮದಲ್ಲಿ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. “ಕೈ ಗಾಯದ ನಂತರ ಅಂಗ ವೈಕಲ್ಯ ತಡೆಗಟ್ಟುವಿಕೆ” ಯ ಥೀಮ್ ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ, ಕೈ ಬೆರಳು ತುಂಡಾಗಿದ್ದರೆ ಇಲ್ಲವೇ ತೀವ್ರ ಗಾಯಗೊಂಡಿದ್ದರೆ ಬೆರಳಿನ ಉಂಗುರವನ್ನು ತೆಗೆಯಬೇಕು, ಕಟ್ ಆಗಿದ್ದರೆ ಸಂರಕ್ಷಣೆ ಮಾಡಿ ತಕ್ಷಣವೇ ತರಬೇಕು, ಇದು ಯಶಸ್ವಿ ಚಿಕಿತ್ಸೆಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು. 


ಅಪಘಾತ ಅಥವಾ ದುರಂತದಲ್ಲಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ಕತ್ತರಿಸಿದಾಗ ಚಿಂತಾಕ್ರಾಂತರಾಗುವುದಕ್ಕಿಂತ ಆ ಕ್ಷಣ ಸ್ವಲ್ಪ ಯೋಚಿಸಿ ಮುಂಜಾಗ್ರತಾ ಕ್ರಮಗಳನ್ನು ಕ್ರಮ ಕೈಗೊಂಡರೆ ಮತ್ತೆ ಹೊಸ ಬದಕನ್ನು ಕಂಡುಕೊಳ್ಳಬಹುದು. ಅವಘಡ ಸಂಭವಿಸಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ತುಂಡಾಗಿದ್ದರೆ ಭಯಪಡದೇ ಆತ್ಮಸ್ಥೈರ್ಯದೊಂದಿಗೆ ತುಂಡಾದ ಭಾಗವನ್ನು ಪ್ಲಾಸ್ಟಿಕ್ ಕವರ್ ನೊಂದಿಗೆ  ಐಸ್ ಬಾಕ್ಸ್ ನಲ್ಲಿಟ್ಟು 6 ಗಂಟೆಯೊಳಗೆ ಆಸ್ಪತ್ರೆಗೆ ತಂದರೆ ಶಸ್ತ್ರ ಚಿಕಿತ್ಸೆ ಮಾಡಿ ಮರು ಜೋಡಿಸಲು ಸಾಧ್ಯವಿದೆ ಹೀಗೆ ಮಾಡಿದಾಗ ಜೀವಕೋಶಗಳು ಸಾಯುವುದಿಲ್ಲ ಎಂದರು.


ಆಸ್ಪತ್ರೆಯ ಅರಿವಳಿಕೆ ತಜ್ಞ ವೈದ್ಯರಾದ ಡಾ.ಅರ್ಜುನ್ ಭಾಗವತ್ ಮಾತನಾಡಿ ಶಸ್ತ್ರ ಚಕಿತ್ಸೆಗಳ ವೇಳೆ ಅರಿವಳಿಕೆ ನೀಡುವುದು ಅವಶ್ಯವಾಗಿರುತ್ತದೆ, ಈ ಬಗ್ಗೆ ರೋಗಿಗಳಾಗಲಿ ಅಥವಾ ಅವರ ಕುಟುಂಬದವರಾಗಲಿ ಭಯಪಡುವ ಅಗತ್ಯ ಇಲ್ಲ, ಇದರಿಂದ ಶೇ 99 ರಷ್ಟು ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ, ಆತ್ಮಸ್ಥೈರ್ಯದಿಂದ ಇರಬೇಕು ಶಸ್ತ್ರ ಚಿಕಿತ್ಸೆಯ ನಂತರ ರೋಗಿಗಳೊಂದಿಗೆ ವೈದ್ಯರು ಹಾಗೂ ಶುಶ್ರೂಷಕಿಯರು ನಿರಂತರ ಸಂಪರ್ಕ ಸಾಧಿಸಿ  ಕಾಳಜಿ ವಹಿಸುತ್ತಾರೆ ಎಂದರು. 


ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ವಾದಿರಾಜ ಕುಲಕರ್ಣಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮೂಳೆ ಚಿಕಿತ್ಸೆ ವಿಭಾಗದ , ಡಾ.ಸುಮನ್, ಡಾ.ನವೀನ್, ಡಾ.ಸಂತೋಷ್, ಫಲ್ಮನಾಜಿಸ್ಟ್ ಡಾ.ಅಮಿತಾಶ್, ಆಶಾ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ರೋಗಿಗಳು , ಸಾರ್ವಜನಿಕರು ಹಾಜರಿದ್ದರು. ಶ್ರೀಮತಿ ರಾಜೇಶ್ವರಿ ಪ್ರಾರ್ಥಿಸಿದರು, ಮಂಜಪ್ಪ ನಿರೂಪಿಸಿದರು.