ಶಿರಾಳಕೊಪ್ಪ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶಿರಾಳಕೊಪ್ಪ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಸೆಪ್ಟೆಂಬರ್ 14, 2024

ಕೊಲೆ ಯತ್ನ ನಡೆಸಿದ ಆರೋಪಿಗೆ ಶಿಕ್ಷೆ



ಸುದ್ದಿಲೈವ್/ಶಿವಮೊಗ್ಗ


ಹಣಕೊಡುವುದಾಗಿ ನಂಬಿಸಿ ಕೊಲೆ ಮಾಡುವ ಉದ್ದೇಶದಿಂದ ಚಾಕು ಇರಿದ ಪ್ರಕರಣದಲ್ಲಿ ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ತೀರ್ಪು ನೀಡಿ ಆದೇಶಿಸಿದೆ. 


ಶಿರಾಳಕೊಪ್ಪ ಟೌನ್‌ನ ದಾಸರ ಕಾಲೋನಿ ನಿವಾಸಿ,  ಹಯಾತ್ ಸಾಬ್ (31) ಮತ್ತು ಹಳ್ಳೂರು ಕೇರಿಯ ನಿವಾಸಿ ಜಿಯಾವುಲ್ಲಾ ಖಾನ್ (24),  ಇಬ್ಬರಿಗೂ ಈ ಹಿಂದಿನಿಂದಲೂ ಮಾವಿನ ತೋಟದ ಗುತ್ತಿಗೆಯ ವಿಚಾರವಾಗಿ ಹಣ ಕಾಸಿನ ವ್ಯವಹಾರವಿತ್ತು. ಹಯಾತ್ ಸಾಬ್‌ನು,  ಜಿಯಾವುಲ್ಲಾ ಖಾನ್‌ನಿಗೆ 25,000/- ರೂ ಹಣ ಕೊಡಲು ಬಾಕಿ ಇರುತ್ತದೆ. 


ಜಿಯಾವುಲ್ಲಾ ಖಾನ್‌ನು ಸದರಿ ಹಣವನ್ನು ಹಿಂದಿರುಗಿಸಲು ಕೇಳಿದಾಗ ದಿನಾಂಕಃ 15-05-2022 ರಂದು ಬೆಳಗ್ಗೆ ಹಯಾತ್ ಸಾಬ್ ನು ಜಿಯಾವುಲ್ಲಾಖಾನ್ ಗೆ  ಕರೆ ಮಾಡಿ, ಶಿರಾಳಕೊಪ್ಪ ಟೌನ್‌ನ ಅಣ್ಣಪ್ಪ ಟಿ ಹೋಟೆಲ್‌ಗೆ ಬಾ ಹಣ ಕೊಡುತ್ತೇನೆಂದು ತಿಳಿಸಿರುತ್ತಾನೆ.  


ಜಿಯಾವುಲ್ಲಾಖಾನ್ ನು ಅಲ್ಲಿಗೆ ಹೋದಾಗ ಹಯಾತ್ ಸಾಬ್ ನು ನಿನಗೆ ನಾನು ಯಾವ  ಹಣ ಕೊಡಬೇಕು, ಪದೇ ಪದೇ ಕೇಳುತ್ತೀಯ ಎಂದು ಜಗಳ ತೆಗೆದು, ಕೊಲೆ ಮಾಡುವ ಉದ್ದೇಶದಿಂದ ತನ್ನ ಬಳಿ ಇದ್ದ ಚಾಕುವಿನಿಂದ ಜಿಯಾವುಲ್ಲಾಖಾನ್ ನ ಬೆನ್ನಿಗೆ ಹಲ್ಲೆ ಮಾಡಿರುತ್ತಾನೆ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಗಾಯಾಳು ಜಿಯಾವುಲ್ಲಾ ಖಾನ್ ದೂರು ದಾಖಲಿಸಿದ್ದನು.‌


ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ರಮೇಶ್, ಶಿರಾಳಕೊಪ್ಪ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ  ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದರು. 


ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ  ಮಂಜುನಾಥ್ ನಾಯಕ್ ರವರು ದಿನಾಂಕಃ 13-09-2024 ರಂದು  ಆರೋಪಿತನಾದ ಹಯಾತ್ ಸಾಬ್, 31 ವರ್ಷ, ದಾಸರ ಕಾಲೋನಿ ಶಿರಾಳಕೊಪ್ಪ ಟೌನ್ ಈತನಿಗೆ  01 ವರ್ಷ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ಮತ್ತು ರೂ 15,000/- ದಂಡ ವಿಧಿಸಿದ್ದಾರೆ.


ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 03 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದು, ಪರಿಹಾರ ರೂಪವಾಗಿ  ದಂಡದ ಮೊತ್ತದಲ್ಲಿ  5,000 ರೂಗಳನ್ನು  ಗಾಯಾಳು ಜಿಯಾವುಲ್ಲಾ ಖಾನ್ ರವರಿಗೆ ನೀಡಲು ಆದೇಶಿಸಿರುತ್ತಾರೆ.

ಶನಿವಾರ, ಆಗಸ್ಟ್ 24, 2024

ಟೂಲ್ ವಿರುದ್ಧ ಪ್ರತಿಭಟನೆಗೆ ಸಜ್ಜಾದ ಸ್ಥಳೀಯರು




ಸುದ್ದಿಲೈವ್/ಶಿಕಾರಿಪುರ


ತಡಸ ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ  ಶಿರಾಳಕೊಪ್ಪ  ಶಿಕಾರಿಪುರ ಮಧ್ಯ ನಿರ್ಮಾಗೊಂಡ ಟೋಲ್ ನಿಂದಾಗಿ ಸ್ಥಳೀಯ ರೈತರಿಗೆ, ಕೂಲಿ ಕಾರ್ಮಿಕರಿಗೆ, ಜನ ಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು  ಟೋಲ್ ರದ್ದುಗೊಳಿಸುವಂತೆ ರೈತರ ಹೋರಾಟ ಸಮಿತಿಯೊಂದು ಪ್ರತಿಭಟನೆ ನಡೆಸಲು ಸಜ್ಜಾಗಿದೆ.‌


ಪಟ್ಟಣದ ಶ್ರೀ ವೀರಭದ್ರೇಶ್ವರ ಸಭಾಂಗಣದ್ದಲ್ಲಿ ನಡೆದ ಸಭೆಯಲ್ಲಿ ಟೋಲ್ ಗೇಟ್ ವಿರುದ್ದದ ಹೋರಾಟಕ್ಕೆ ಸಮಿತಿಯೂ ರಚನೆ ಮಾಡಲಾಗಿದೆ. ತಾಲ್ಲೂಕಿನ ಯುವ ನ್ಯಾಯವಾದಿ ಶಿವರಾಜ್ ಅಧ್ಯಕ್ಷರಾಗಿ, ನ್ಯಾಯವಾದಿ ವಿನಯ್ ಪಾಟೀಲ್ ಸಂಚಾಲಕರಾಗಿ ಹಾಗೂ ಶಿರಾಳಕೊಪ್ಪ ರೈತ ಸಂಘದ ಅಧ್ಯಕ್ಷ ನವೀದ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಾಗಿದ್ದು ಸುಮಾರು 5 ಜನ ರನ್ನು ಉಪಾಧ್ಯಕ್ಷರಾಗಿ 6 ಜನ ಸಹ ಕಾರ್ಯದರ್ಶಿಗಳಾಗಿ ಹಾಗೂ ಸುಮಾರು 10ಜನರನ್ನು ಸಲಹೆಗರರನ್ನಾಗಿ ಆಯ್ಕೆ ಮಾಡಲಾಗಿದೆ.


ಈ ಸಂಧರ್ಭದಲ್ಲಿ ಸಮಿತಿಯ ನೂತನ ಅಧ್ಯಕ್ಷ ನ್ಯಾಯವಾದಿ ಶಿವರಾಜ್ ಮಾತನಾಡಿ ಸದರಿ ಟೋಲ್ ಗೇಟ್ ನಿಂದಾಗಿ ಸ್ಥಳೀಯರಿಗೆ, ಅಕ್ಕ ಪಕ್ಕದ ರೈತ ಭಾಂದವರಿಗೆ, ರೋಗಿಗಳಿಗೆ ದಿನ ನಿತ್ಯ ಆರ್ಥಿಕ ವಾಗಿ ತೊಂದರೆ ಆಗುತ್ತಿದೆ. ಸ್ಥಳೀಯರು ತಾಲ್ಲೂಕು ಕೇಂದ್ರಕ್ಕೆ ಓಡಾಡಲು ಕಷ್ಟ ಪಡುವಂತಹದ್ದು ಪರಿಸ್ಥಿತಿ ನಿರ್ಮಾಣವಾಗಿದ್ದು ಅನೈತಿಕ ವಾಗಿ, ಅವೈಜ್ಞಾನಿಕವಾಗಿ ನಿರ್ಮಿಸಲ್ಪಟ್ಟ ಈ ಟೋಲ್ ಗೇಟನ್ನು ಕಿತ್ತೊಗಿಯಲೇ ಬೇಕಾಗಿದೆ. ಸ್ಥಳೀಯ ಜನ ಸಾಮಾನ್ಯರು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಈ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು.


ಪಟ್ಟಣದ ಹಿರಿಯ ವೈದ್ಯ ಡಾll ಮುರುಘರಾಜ್, ರೈತ ಸಂಘದ ಹಿರಿಯರಾದ ಜಯಪ್ಪ ಗೌಡರು, ಜಿಲ್ಲಾಧ್ಯಕ್ಷ ಹಾಲಪ್ಪ ಗೌಡ್ರು,    ಕಾರ್ಯಧ್ಯಕ್ಷ ಪುಟ್ಟನ ಗೌಡ್ರು ಆಮ್ ಆದ್ಮಿ ಪಕ್ಷದ ಚಂದ್ರಶೇಖರ ರೇವಣಕಾರ,ಕೆ ಪಿ ಸಿ ಸಿ ಸದಸ್ಯ ಎನ್ ಚಂದ್ರಪ್ಪ ಹಿರೇಜಂಬೂರು, ಬಿಜೆಪಿ ಮುಖಂಡ ರಟ್ಟೀಹಳ್ಳಿ ಲೋಕಪ್ಪ ಸತೀಶ್ ತಾಳಗುಂದ ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಥೆಳೀಯರು, ರೈತರು ಇದ್ದರು

ಕಳುವಾಗಿದ್ದ 4 ಹಸುಗಳು ಪತ್ತೆ-ಆರೋಪಿಗಳು ಅರೆಸ್ಟ್



ಸುದ್ದಿಲೈವ್/ಶಿರಾಳಕೊಪ್ಪ


ಫಾರಂ ಹೌಸ್ ನಲ್ಲಿದ್ದ 2.40 ಲಕ್ಷ ರೂ ಮೌಲ್ಯದ 4 ಹಸುಗಳನ್ನ ಪತ್ತೆ ಮಾಡುವಲ್ಲಿ ಶಿರಾಳಕೊಪ್ಪದ ಪೊಲೀಸರು ಯಶಸ್ವಿಯಾಗಿದ್ದಾರೆ. 


ದಿನಾಂಕಃ 09-08-2024  ರಂದು ರಾತ್ರಿ ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಜಂಬೂರು ಗ್ರಾಮದ ವಾಸಿ ಶ್ರೀ ಮೊಹಮದ್ ಆಲಿ ಖಾನ್, 34 ವರ್ಷ ರವರ ಫಾರಂ ಹೌಸ್ ನಲ್ಲಿದ್ದ 04 ಹಸುಗಳನ್ನು ಕಳುವು ಮಾಡಲಾಗಿತ್ತು.  ಬಿಎನ್ ಎಸ್ ಕಾಯ್ದೆ ಅಡಿ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 


ಪ್ರಕರಣದಲ್ಲಿ ಕಳುವಾದ ಮಾಲು ಹಾಗೂ ಮಾಲಿನ ಪತ್ತೆಗಾಗಿ ಜಿಲ್ಲಾರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆರವರ ಮಾರ್ಗದರ್ಶನದಲ್ಲಿ ಶಿಕಾರಿಪುರದ ಡಿವೈಎಸ್ಪಿ ಕೇಶವ್, ಸಿಪಿಐ ರುದ್ರೇಶ್ ರವರ ಮೇಲ್ವಿಚಾರಣೆಯಲ್ಲಿ ಪಿಎಸ್ಐ ಪ್ರಶಾಂತ್ ಕುಮಾರ್ ಟಿ.ಬಿ.ರವರ ನೇತೃತ್ವದಲ್ಲಿ ಪಿಎಸ್ಐ ಪುಷ್ಪಾ,  ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಸಂತೋಷ್, ಟೀಕಪ್ಪ, ಪಿಸಿ ಸಲ್ಮಾನ್, ಕಾರ್ತಿಕ್, ಅಶೋಕ್  ಮತ್ತು  ಪ್ರೇಮಾ ಬಾಯಿ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು. 


ತನಿಖಾ ತಂಡವು ದಿನಾಂಕಃ 23-08-2024  ರಂದು ಪ್ರಕರಣದ ಆರೋಪಿ ಶಿವರಾಜ್ @ ಕುಮಾರ, 26 ವರ್ಷ, ಆರಿಕಟ್ಟೆ ಗ್ರಾಮ, ಹಿರೇಕೆರೂರು ತಾ॥, ಹಾವೇರಿ ಜಿಲ್ಲೆ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ ಅಂದಾಜು ಮೌಲ್ಯ 2,40,000/- ರೂಗಳ 04 ಹಸುಗಳನ್ನು ವಶಪಡಿಸಿಕೊಳ್ಳಲಾಗಿತ್ತು.‌ ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.