ರಾಷ್ಟ್ರೀಯ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ರಾಷ್ಟ್ರೀಯ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಆಗಸ್ಟ್ 21, 2024

ಬಿಜೆಪಿ ತಕ್ಕೆಯಲ್ಲಿದ್ದ ಶಿರಾಳಕೊಪ್ಪ ಪುರಸಭೆ 'ಕೈ' ತೆಕ್ಕೆಗೆ



ಸುದ್ದಿಲೈವ್/ಶಿಕಾರಿಪುರ


ಶಿರಾಳಕೊಪ್ಪ ಪುರಸಭೆ ಈ ಹಿಂದೆ ಬಿಜೆಪಿಯ ಅಧಿಕಾರದಲ್ಲಿದ್ದು ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ದೊರೆತಿದೆ.


ನೂತನವಾಗಿ  ಅಧ್ಯಕ್ಷರಾಗಿ ಮಮತಾ ನಿಂಗಪ್ಪ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಮುದಾಸಿರ್ ಅಹಮದ್ ಉಪಾಧ್ಯಕ್ಷರಾಗಿ ಸುಮಾರು 17  ಜನ ಪುರಸಭಾ ಸದಸ್ಯರಿದ್ದು ಅದರಲ್ಲಿ 11 ಜನ ಕಾಂಗ್ರೆಸ್ ಪಕ್ಷದವರು ಬೆಂಬಲ ನೀಡಿ  ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಗೊಂಡಿರುತ್ತಾರೆ. 


ಅದರಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ಮಹಾಬಲೇಶ್ವರ ಮತ್ತು ಲಲಿತಮ್ಮ ಸಹಕಾರ ಕೊಟ್ಟಿದ್ದು ಅದೇ ರೀತಿ ಸಲ್ಮಾ ಬೇಗಂ ಕೋಂ ರಾಜ ಸಾಬ್, ಶಾಹಿದ ಬಾನು ಕೋಂ  ಸಫೀರ್ ಅಹ್ಮದ್ , ತಸ್ಲೀಮಾ ಸುಲ್ತಾನ್ ಕೋಂ  ಮನ್ಸೂರ್ ಅಲಿ  ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ಕೊಟ್ಟು ಇಂದು  ಶಿರಾಳಕೊಪ್ಪ ಪುರಸಭೆ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬಂದಿರುತ್ತದೆ.

ಆ.23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ



ಸುದ್ದಿಲೈವ್/ಶಿವಮೊಗ್ಗ


ಚಂದ್ರಯಾನ-3 ಮಿಷನ್‌ನ ಯಶಸ್ಸನ್ನು ಆಚರಿಸಲು ಭಾರತ ಸರ್ಕಾರವು ಪ್ರತಿ ವರ್ಷ ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಘೋಷಿಸಿದ್ದು, ಇದರ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ರಾಜ್ಯ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಲು ಗಗನಯಾತ್ರಿ ಹಾಗೂ ಬಾಹ್ಯಾಕಾಶ ವಿಜ್ಞಾನಿಗಳ ಕೊಡುಗೆಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಅನೇಕ ವಿಜ್ಞಾನ ಚಟುವಟಿಕೆಗಳನ್ನು ಆಯೋಜಿಸಿದೆ.


ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪಂಚಾಯತಿಯು ದಿ: 23/08/2024 ರಂದು ಬೆಳಗ್ಗೆ 10.30 ಕ್ಕೆ  ನಗರದ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಯೋಜಿಸಿದೆ.  ಈ ಕಾರ್ಯಕ್ರಮದಲ್ಲಿ ಇಸ್ರೋ ಸಂಸ್ಥೆಯಿಂದ ಸಂಪನ್ಮೂಲ ವ್ಯಕ್ತಿಯಾಗಿ ವಿಜ್ಞಾನಿಗಳು ಆಗಮಿಸಲಿದ್ದಾರೆ. 


ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಎನ್‌ಆರ್‌ಡಿಎಂಎಸ್ ಕೇಂದ್ರದ ಶಂಕರ್ ಪಿ. -9036710230 ಇವರನ್ನು ಸಂಪರ್ಕಿಸುವುದು.

ಮಂಗಳವಾರ, ಆಗಸ್ಟ್ 20, 2024

ಕೆಪಿಸಿಸಿ ಕಾರ್ಯದರ್ಶಿ ಹಾಗೂ ಉಪ್ಪಾರ ಸಮಾಜದ ಮುಖಂಡ ಕೆ ದೇವೇಂದ್ರಪ್ಪ ನವರ ನಿವಾಸದಲ್ಲಿ ನಾಳೆ ರಾಯರ ಆರಾಧನೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗ ನಗರದ ಶರಾವತಿ ನಗರ 4ನೇ ಮುಖ್ಯರಸ್ತೆಯ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಉಪ್ಪಾರ ಸಮಾಜದ ಮುಖಂಡ  ಕೆ ದೇವೇಂದ್ರಪ್ಪನವರ ಮನೆಯಲ್ಲಿ   ಬುಧವಾರ ನಾಳೆ ಬುಧವಾರ ರಾಘವೇಂದ್ರ ಸ್ವಾಮಿಗಳ ಮಧ್ಯರಾಧನೆ (((ಪುಣ್ಯ ದಿನ  )) ಆಚರಿಸಲಾಗುತ್ತಿದೆ.  


ರಾಯಚೂರಿನ ಮಂತ್ರಾಲಯ ಹಾಗೂ ಕರ್ನಾಟಕ ರಾಜ್ಯದಲ್ಲಿಯೂ  ಈ ಕಾರ್ಯಕ್ರಮ ಸುಮಾರು ಏಳು ದಿನಗಳ ಕಾಲ  ಬಹಳ ವಿಜೃಂಭಣೆಯಿಂದ ರಾಯರ ಭಕ್ತಾದಿಗಳು  ಸದಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಇದು 353ನೇ ಅವರ ಆರಾಧನೋತ್ಸವ ಇದ್ದು. ಕೆಪಿಸಿಸಿ ಕಾರ್ಯದರ್ಶಿ ಹಾಗೂ ಉಪ್ಪಾರ ಸಮಾಜದ ಮುಖಂಡ ಕೆ ದೇವೇಂದ್ರಪ್ಪ ನವರ ನಿವಾಸದಲ್ಲಿ ನಾಳೆ ಆಚರಿಸಲಾಗುತ್ತಿದೆ. 


ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕಳೆದ ಆರು ವರ್ಷಗಳಿಂದ ತಮ್ಮ ಮನೆಯಲ್ಲಿ ಶ್ರೀ ರಾಯರನ್ನು ಶ್ರದ್ಧಾ ಭಕ್ತಿಯಿಂದ  ಅಭಿಷೇಕದೊಂದಿಗೆ ವಿಶೇಷ ಅಲಂಕಾರ ಮಾಡಿ  ರಾಯರಿಗೆ ಪೂಜಿಸಲಾಗುತ್ತಿದೆ. ನಂತರ ಬರುವ ಎಲ್ಲಾ ಭಕ್ತಾದರಿಗೆ ಮಂತ್ರಾಲಯದಿಂದ ಪರಿಮಳ ಪ್ರಸಾದ ವಿತರಿಸಿ ಭೋಜನದೊಂದಿಗೆ ಸತ್ಕರಿಸಲಾಗುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ರಾಯರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಅವರು ಮಾಡಿಕೊಂಡಿದ್ದಾರೆ.

ಸೋಮವಾರ, ಆಗಸ್ಟ್ 19, 2024

ಝಿಕಾ ವೈರಸ್ ಗೆ 73 ವರ್ಷದ ವೃದ್ಧ ಬಲಿ




ಸುದ್ದಿಲೈವ್/ಶಿವಮೊಗ್ಗ


ಝೀಕಾ ವೈರಸ್ ಗೆ ಮಲೆನಾಡಿನಲ್ಲಿ ಓರ್ವ ಬಲಿಯಾಗಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.  ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 9 ಝೀಕಾ ವೃರಸ್ ಗೆ ಬಲಿಯಾಗಿದೆ. ಶಿವಮೊಗ್ಗದಲ್ಲಿ 3 ಮತ್ತು ಬೆಂಗಳೂರಿನಲ್ಲಿ 6 ಪ್ರಕರಣಗಳು ಪತ್ತೆಯಾಗಿದೆ, ಈ ವೃದ್ಧರಲ್ಲಿ ಜೂನ್ ತಿಂಗಳಿನಲ್ಲೇ ಝಿಕಾ ವೈರಸ್ ಪತ್ತೆಯಾಗಿತ್ತು.73 ವರ್ಷದ ವೃದ್ಧ ಝೀಕಾ ವೈರಸ್‌ಗೆ ಮೃತಪಟ್ಟಿದ್ದಾರೆ. 


ಗರ್ಭಿಣಿ ಹಾಗೂ ಮಗು ಸುರಕ್ಷಿತ

ವೈರಸ್‌ಗೆ ತುತ್ತಾಗಿದ್ದ ಗರ್ಭೀಣಿ ಸ್ತ್ರೀಯರ ಆರೈಕೆಗೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗರ್ಭಿಣಿಯರ ಸಂಪರ್ಕಕ್ಕೆ ಬಂದವರ ತಪಾಸಣೆ ನಡೆಸುವಂತೆ ಕೂಡ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಸೂಚನೆ ನೀಡಿದ್ದಾರೆ. ಇನ್ನು ಶಿವಮೊಗ್ಗದಲ್ಲಿ ಇಬ್ಬರು ಝೀಕಾ ವೈರಸ್‌ ತುತ್ತಾಗಿದ್ದ ಇಬ್ಬರು ರೋಗಿಗಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಗಣಿಯಲ್ಲಿ ಝೀಕಾ ವೈರಸ್ ಕಂಡುಬಂದಿದ್ದ ಗರ್ಭಿಣಿಗೆ ಹೆರಿಗೆಯಾಗಿದ್ದು ತಾಯಿ-ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ. ಇನ್ನುಳಿದ ನಾಲ್ವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿಯಲ್ಲಿ ತಿಳಿಸಿದೆ.


ಝೀಕಾ ವೈರಸ್‌ನ ಲಕ್ಷಣಗಳೇನು?


ಕಣ್ಣು ಕೆಂಪಾಗುವಿಕೆ, ತಲೆ ನೋವು, ಜ್ವರ, ಕೀಲುಗಳಲ್ಲಿ ನೋವು, ಗಂಧೆಗಳು, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಝೀಕಾ ವೈರಸ್‌ನ ಪ್ರಮುಖ ಲಕ್ಷಣಗಳಾಗಿದ್ದು, ಈ ಲಕ್ಷಣ ಹೊಂದಿರುವವರು ಕೂಡಲೆ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವಂತೆಯು ಆತರೋಗ್ಯ ಇಲಾಖೆ ಮಾಹಿತಿ ನೀಡಿದೆ.


ರೋಗದ ಲಕ್ಷಣ ಕಂಡು ಬಂದ ಕೂಡಲೇ ಜನರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಈ ಮೂಲಕ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳಬಾರದು ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡಿದೆ. ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ

ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ



 ಸುದ್ದಿಲೈವ್/ಸೊರಬ


ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಭೂಮಿಗೆ ಮರಳಲಿ ಎಂದು ಪ್ರಾರ್ಥಿಸಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಪಟ್ಟಣದ ದಂಡಾವತಿ ಬ್ಲಾಕ್‍ನಲ್ಲಿರುವ ನದಿಕಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಲಾಯಿತು.  


ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಜೂ.5ರಂದು ಭೂಮಿಯಿಂದ ಅಂತಾರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣಕ್ಕೆ ತೆರಳಿದ್ದ ಭಾರತ ಮೂಲದ ಖಗೋಳ ವಿಜ್ಞಾನಿ ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ಹಿಂದಿರುವುದು ಕಷ್ಟಕರವಾಗಿದೆ. ಅವರ ವಾಹನದಲ್ಲಿ ಹಲವು ತಾಂತ್ರಿಕ ದೋಷಗಳು ಕಾಣಿಸಿಕೊಂಡಿವೆ. ಆದ್ದರಿಂದ ಅವರು ಭೂಮಿಗೆ ತೆರಳದೇ ಅಲ್ಲೇ ಉಳಿಯುವಂತಾಗಿದೆ. ಎರಡು ಬಾರಿ ಯಶಸ್ವಿಯಾಗಿ ಗಗನಯಾತ್ರೆ ಮಾಡಿದಾಗ ಇಡೀ ದೇಶವೇ ಸಂಭ್ರಮಿಸಿತ್ತು. ಮೂರನೇ ಬಾರಿಗೆ ಮತ್ತೋರ್ವ ಖಗೋಳ ವಿಜ್ಞಾನಿ ಬುಚ್ ವಿಲ್ಮೋರ್ ಅವರೊಂದಿಗೆ ಭೂಮಿಗೆ ಜೂನ್ 14ರಂದು ವಾಪಾಸ್ಸಾಗಬೇಕಿತ್ತು. ಆದರೆ, ಈಗಾಗಲೇ ಎರಡು ತಿಂಗಳು ಹೆಚ್ಚುವರಿಯಾಗಿದೆ ಎಂದು ತಿಳಿಸಿದರು.


ಖಗೋಳಾಸಕ್ತರಿಗೆ ಸಾಮಾನ್ಯವಾದ ಪ್ರವಾಸದಂತೆ ಬಾಹ್ಯಕಾಶಕ್ಕೆ ಕರೆದುಕೊಂಡು ಹೋಗಿ ಅಂತಾರಾಷ್ಟ್ರೀಯ ಬಾಹ್ಯಕಾಶದಲ್ಲಿ ಕೆಲ ದಿನಗಳು ಉಳಿದು ಪುನಃ ಭೂಮಿಗೆ ಹಿಂದಿರುಗುವ ರೋಮಾಂಚನ ನೀಡುವ ಉದ್ದೇಶದಿಂದ ಯೋಜನೆ ರೂಪಿತವಾಗಿತ್ತು. ಇದರಿಂದ ಖಗೋಳಾಸಕ್ತರಿಗೆ ಮತ್ತಷ್ಟು ಮಾಹಿತಿ ಲಭ್ಯವಾಗುತ್ತಿತ್ತು. ಪ್ರಾಯೋಗಿಕವಾಗಿ ನಡೆದ ಯೋಜನೆಯಲ್ಲಿ ಸುನಿತಾ ವಿಲಿಯಮ್ಸ್ ಸಿಲುಕಿದ್ದಾರೆ. ಅವರು ಸುರಕ್ಷಿತವಾಗಿ ಭೂಮಿಗೆ ಹಿಂದಿರಗಬೇಕು. ದೇಶಕ್ಕೆ ಮತ್ತಷ್ಟು ಕೀರ್ತಿ ತರಬೇಕು ಎಂದು ಪ್ರಾರ್ಥಿಸಿ ಪವನಸುತ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ ಎಂದರು.


ಈ ಸಂದರ್ಭದಲ್ಲಿ ಸುಮನಾ ಬಿ. ಗೌಡ, ಜೆ.ಸಿ. ಮುರಳೀಧರ ಗುಡಿಗಾರ್, ರಾಮಚಂದ್ರ ಆಚಾರ್, ನಿರಂಜನಗೌಡ ಹಳೇಸೊರಬ, ಶಾಂತಕುಮಾರ್ ಮರೂರು, ಎಂ.ಎಸ್. ಸಂಜಯ, ಅರ್ಚಕ ಭಾರ್ಗವ ಗೋಖಲೆ ಸೇರಿದಂತೆ ಇತರರಿದ್ದರು.

ಶನಿವಾರ, ಆಗಸ್ಟ್ 17, 2024

ಶಿವಮೊಗ್ಗಕ್ಕೆ ಬರ್ತಾಯಿದೆ 30 ಕೋಟಿ ಬೆಲೆಬಾಳುವ ನಾಯಿ

 


ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಸಿನಿಸಂಭ್ರಮ ಕಾರ್ಯಕ್ರಮ ನಡೆಯುತ್ತಿದ್ದು ಈ ಕಾರ್ಯಕ್ರಮಕ್ಕೆ 30 ಕೋಟಿ ರೂ. ಬೆಲೆಬಾಳುವ ಪಾಂಡ ನಾಯಿ ಭಾಗಿಯಾಗಲಿದ್ದಾರೆ.


ಸಿನಿಸಂಭ್ರಮಕ್ಕೆ 30 ಕೋಟಿ ರೂ ಬೆಲೆಬಾಳುವ  ನಾಯಿಯ ಮಾಲೀಕ ಸತೀಶ್ ಅವರು  ಚೀಫ್ ಗೆಸ್ಟ್ ಆಗಿ ಬರುತ್ತಿದ್ದಾರೆ. ಈ ನಾಯಿಗೆ ಒಂದು ತಿಂಗಳ ಹಿಂದೆ ನಟಿ ರಾಗಿಣಿ ಅವರ ಮೂಲಕ ಕೇಕ್ ಕಟ್ ಮಾಡಿಸುವ ಮೂಲಕ ಲಾಂಚ್ ಮಾಡಲಾಗಿದೆ.


ಸಿನಿಸಂಭ್ರಮದಲ್ಲಿ ಮಿಸ್ ಮಲ್ನಾಡ್ ಮಿಸ್ ಕರ್ನಾಟಕ ಎಂಬ ಫ್ಯಾಷನ್ ಶೋ ಸಹ ನಡೆಯಲಿದೆ. ನಾ ನಿನ್ನ ಬಿಡಲಾರೆ ಸಿನಿಮಾ ಪ್ರಮೋಷನ್ ಕಾರ್ಯಕ್ರಮ ಇದಾಗಿದ್ದು, ಇದಕ್ಕೆ 30 ಕೋಟಿ ರೂ ಬೆಲೆ ಬಾಳುವ ನಾಯಿ ಮಾಲೀಕ ಸತೀಶ್ ಮುಖ್ಯ ಅತಿಥಿಗಳಾಗಿ ಆಗಮಿಸುತದತಿದ್ದಾರೆ.

ಶುಕ್ರವಾರ, ಆಗಸ್ಟ್ 16, 2024

ಆಶ್ರಯ ಮನೆಗಳ ಮೂಲಭೂತ ಸೌಕರ್ಯ ಸಮಸ್ಯೆ ಬಗೆಹರಿಸಲು ಕ್ರಮ-ಮಧು ಬಂಗಾರಪ್ಪ

 


ಸುದ್ದಿಲೈವ್/ಶಿವಮೊಗ್ಗ


ಗೋವಿಂದಾಪುರ ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಂಬಂಧ ನ್ಯೂನ್ಯತೆಗಳ ಪಟ್ಟಿಯನ್ನು ತಮಗೆ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ . ಮಧು ಬಂಗಾರಪ್ಪ ಆಯುಕ್ತರಿಗೆ ತಿಳಿಸಿದರು.


ಶುಕ್ರವಾರ ಮಹಾನಗರ ಪಾಲಿಕೆಯಲ್ಲಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಮಾತನಾಡಿ, ಗೋವಿಂದಾಪುರ ಆಶ್ರಯ ಯೋಜನೆಯಡಿ 40 ಎಕರೆಯಲ್ಲಿ ಒಟ್ಟು 3000 ಮನೆಗಳು ಮಂಜೂರಾಗಿದ್ದು 624 ಮನೆಗಳನ್ನು ಈಗಾಗಲೇ ಸಂಪೂರ್ಣಗೊಳಿಸಿದ್ದು 225 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಉಳಿದ 399 ಮನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಾಲ ಪ್ರಕ್ರಿಯೆ ನಡೆಯುತ್ತಿದೆ. 


ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲ ಮಂಜೂರಾದ ತಕ್ಷಣ ಹಸ್ತಾಂತರಿಸಲಾಗುವುದು. 648 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 1728 ಮನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.


ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಮನೆಗಳನ್ನು ಹಸ್ತಾಂತರಿಸಿದ್ದರೂ ಅಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಇತರೆ ಸೌಲಭ್ಯಗಳೇ ಇಲ್ಲ. ಇದನ್ನೆಲ್ಲ ಶೀಘ್ರವಾಗಿ ಒದಗಿಸುವಂತೆ ತಿಳಿಸಿದರು.


ಶಾಸಕರಾದ ಚನ್ನಬಸಪ್ಪ ಮಾತನಾಡಿ ಪಾಲಿಕೆ ವತಿಯಿಂದ ಈ ವಸತಿ ಯೋಜನೆಗೆ ರೂ.25 ಕೋಟಿ ನೀಡಬೇಕಿದ್ದು ಈವರೆಗೆ ರೂ.9 ಕೋಟಿ ನೀಡಲಾಗಿದೆ. ಹಿಂದಿನ ಸಭೆಯಲ್ಲಿ ಆಯುಕ್ತರು ಇತರೆ ಹೆಡ್‌ನಲ್ಲಿ ಉಳಿಕೆ ಹಣವನ್ನು ನೀಡುವುದಾಗಿ ತಿಳಿಸಿದ್ದರು. ಉಳಿದ ಹಣವನ್ನು ನೀಡುವಂತೆ ತಿಳಿಸಿದರು.


ಆಯುಕ್ತರು ಮಾತನಾಡಿ, ಪಾಲಿಕೆಯಿಂದ ಈಗಾಗಲೇ ರಸ್ತೆ ಹಾಗೂ ತುರ್ತಾಗಿ ನೀರಿನ ಅಗತ್ಯ ನೀಗಿಸಲು 3 ಬೋರ್‌ವೆಲ್ ಕೊರೆಸಲಾಗಿದೆ, 288 ಮನೆಗಳಿಗೆ ಯುಜಿಡಿ, ಕುಡಿಯುವ ನೀರು ನೀಡಲಾಗಿದೆ. 336 ಮನೆಗಳಿಗೆ ಬೋರ್ ವೆಲ್ ವ್ಯವಸ್ಥೆ ಮಾಡಲಾಗುತ್ತಿದೆ. ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ರೂ.10.5 ಕೋಟಿ ಅವಶ್ಯಕತೆ ಇದೆ ಎಂದರು.


ಶಾಸಕರ ಮಾತು


ಶಾಸಕರಾದ ಚನ್ನಬಸಪ್ಪ ಪ್ರತಿಕ್ರಿಯಿಸಿ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗೋವಿಂದಾಪುರ ಗೋಪಿಶೆಟ್ಟಿಕೊಪ್ಪ ಒಂದೆಡೆಯಾದರೆ, ಸ್ಲಂ ಬೋರ್ಡ್ ಗೆ ಸಂಬಂಧಿಸಿದಂತೆ 1500 ಮನೆಗಳ ಸಮಸ್ಯೆಯೂ ಇದೆ. ಗೋವಿಂದಾಪುರದಲ್ಲಿ ಈಗ ಕೇವಲ 60-70 ಜನ ಮಾತ್ರ ವಾಸ ಮಾಡುತ್ತಿದ್ದಾರೆ. ಅಲ್ಲಿ ಮೂಲಭೂತ ಸೌಕರ್ಯಗಳಿಗೆ ಶಾಶ್ವತವಾದ ಪರಿಹಾರಗಳನ್ನು ಒದಗಿಸಬೇಕೆಂದರು.


ಮೂಲ ಸೌಕರ್ಯಕ್ಕೆ ಹಣ ತರುವುದಾಗಿ ಭರವಸೆ


ಸಚಿವರು, ನೀರು, ಯುಜಿಡಿ, ವಿದ್ಯುತ್ ಇತರೆ ಮೂಲಭೂತ ಸೌಕರ್ಯಗಳ ಕುರಿತು ಯೋಜನೆಯಲ್ಲಿ ಮೊದಲೇ ವ್ಯವಸ್ಥೆ ಮಾಡಬೇಕಿತ್ತು. ಫಲಾನುಭವಿಗಳ ವಂತಿಗೆಯೂ ಹೆಚ್ಚಾಗಿದ್ದು ಅವರಿಗೆ ಹೊರೆಯಾಗಿದೆ. ರೂ.260 ಕೋಟಿ ಮೊತ್ತದಷ್ಟು ದೊಡ್ಡ ಯೋಜನೆಯನ್ನು ಸಮರ್ಪಕವಾಗಿ ಯೋಜಿಸಬೇಕಿತ್ತು. ಅದು ಆಗಿಲ್ಲ. ಇದೀಗ ನ್ಯೂನ್ಯತೆಗಳ ಸಂಪೂರ್ಣ ವರದಿ ತಕ್ಷಣ ನೀಡಿ. ತುರ್ತಾಗಿ ಅವಶ್ಯಕವಾಗಿ ಆಗಬೇಕಿರುವ ಕೆಲಸಗಳ ಕುರಿತು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳ ಮೂಲಕ ತಮಗೆ ಒಂದು ಸೋಮವಾರದ ಒಳಗೆ ವರದಿ ನೀಡಿ. ಸರ್ಕಾರದಿಂದ ರೂ.10 ರಿಂದ 15 ಕೋಟಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದರು.


ಪಾಲಿಕೆ ಆಯುಕ್ತರು, 2024-5 ನೇ ಸಾಲಿನ ಜುಲೈವರೆಗೆ ಒಟ್ಟು 4626.31 ಲಕ್ಷ, ರೂ.2872.13 ವೆಚ್ಚವಾಗಿದ್ದು ರೂ.1754.18 ಲಕ್ಷ ಉಳಿಕೆಯಾಗಿದೆ ಎಂದು ತಿಳಿಸಿದರು.


ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ಮಾತನಾಡಿ, ಪಾಲಿಕೆಯಲ್ಲಿ ಖಾತೆ ಎಕ್ಸಟ್ರಾಕ್ಟ್ ತೆಗೆದುಕೊಳ್ಳಲು ಹೋದಾಗ ಕಳೆದ 8 ರಿಂದ 10 ವರ್ಷ ನಿರಂತರವಾಗಿ ತೆರಿಗೆ ಕಟ್ಟಿದ್ದರೂ ಸಹ ಅದರ ಹಿಂದಿನ 8 ರಿಂದ 10 ವರ್ಷಗಳ ತೆರಿಗೆಯನ್ನು ಪಾವತಿಸಿಕೊಳ್ಳುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕಿರುಕುಳ ಆದಂತೆ ಆಗುತ್ತಿದೆ ಎಂದು ದೂರಿದರು.


ಸಚಿವರು, ಪಾಲಿಕೆಯವರು ತಮ್ಮ ಸಾಫ್ಟ್ವೇರ್‌ನಲ್ಲಿ ಅಗತ್ಯವಾದ ಬದಲಾವಣೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು. ಹಾಗೂ ನಗರದಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಹಲವಾರು ದೂರುಗಳಿದ್ದು ಆಯುಕ್ತರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನೀರು, ವಿದ್ಯುತ್, ಯುಜಿಡಿ ಇತರೆ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕೆಂದರು. 


ಸ್ಮಾರ್ಟ್ ಸಿಟಿ ಯೋಜನೆಯಡಿ 24×7 ಕುಡಿಯುವ ನೀರಿನ ಯೋಜನೆಯಡಿ 59 ಝೋನ್‌ಗಳ ಪೈಕಿ 18 ಝೋನ್‌ಗಳಲ್ಲಿ ಸಂಪರ್ಕ ನೀಡಲಾಗಿದ್ದು ಎಲ್ಲ ಝೋನ್‌ಗಳಲ್ಲಿ ಸಂಪರ್ಕ ನೀಡಿದ ನಂತರ ಬಿಲ್ ನೀಡಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದರು.


ತುಂಗಾನದಿ ಮಾಲಿನ್ಯ ತಡೆಯಿರಿ : 


ಕಾಡಾ ಅಧ್ಯಕ್ಷರಾದ ಡಾ.ಅಂಶುಮನ್ ಮಾತನಾಡಿ, ತುಂಗಾ ಎಡ ಮತ್ತು ಬಡದಂಡೆ ಕಾಲುವೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ನೇರವಾಗಿ ಕಲುಷಿತ ನೀರನ್ನು ಬಿಡಲಾಗುತ್ತಿದೆ. ಇದರಿಂದ ನೀರು ಕಲುಷಿತವಾಗಿ ಕೃಷಿಗೆ ಕೂಡ ಯೋಗ್ಯವಾಗಿಲ್ಲ, ಜನ-ಜಾನುವಾರುಗಳ ಆರೋಗ್ಯಕ್ಕೂ ಈ ನೀರು ಮಾರಕವಾಗಿದೆ. ಈ ಮಾಲಿನ್ಯ ತಡೆಗಟ್ಟಬೇಕೆಂದು ಮನವಿ ಮಾಡಿದರು.


ಕರ್ನಾಟಕ ನೀರು ಮಂಡಳಿ ಎಇಇ ಮಿಥುನ್ ಕುಮಾರ್ ಮಾತನಾಡಿ, ಒಳಚರಂಡಿ ನೀರನ್ನು ಸಂಸ್ಕರಣಾ ಘಟಕದಿಂದ ಶುದ್ದೀಕರಿಸಿ ನದಿಗೆ ಬಿಡಲಾಗುತ್ತಿದೆ, ಬಚ್ಚಲು, ಶೌಚಾಲಯದ ಗ್ರೇವಾಟರ್‌ನ್ನು ಒಳಚರಂಡಿ ನೀರಿಗೆ ಸಂಪರ್ಕ ಒದಗಿಸಿದರೆ ಅದನ್ನು ಸಂಸ್ಕರಿಸಿ ಬಿಡಲಾಗುವುದು. 80 ಸಾವಿರ ಮನೆಗಳ ಪೈಕಿ 42 ಸಾವಿರ ಮನೆಗಳ ತ್ಯಾಜ್ಯ ನೀರು ಶುದ್ದೀಕರಣಕ್ಕೆ ಒಳಗಾಗುತ್ತಿದೆ. ಗ್ರೇವಾಟರ್‌ನ್ನೂ ಕೂಡ ಸಂಸ್ಕರಿಸಿದಲ್ಲಿ ಮಾಲಿನ್ಯ ತಡೆಗಟ್ಟಬಹುದು ಎಂದರು.


ಸಚಿವರು, ಅನಧಿಕೃತ ಗ್ರೇ ಮತ್ತು ಬ್ಲಾಕ್ ವಾಟರ್ ನದಿ ಸೇರದಂತೆ ತಡೆಯಬೇಕು. ಪ್ರತಿ ಮನೆಗಳ ಒಳಚರಂಡಿ, ಗ್ರೇವಾಟರ್ ಶುದ್ದೀಕರಣಕ್ಕೆ ಒಳಗಾಗುವಂತೆ ಕ್ರಮ ವಹಿಸಬೇಕು ಎಂದರು ಹೇಳಿದರು. ಹಾಗೂ ಶಾಸಕರು ಸಭೆಯಲ್ಲಿ ತಿಳಿಸಿದಂತೆ ಕಾವೇರಿ ನದಿ ಮಾಲಿನ್ಯ ತಡೆ ಸಮಿತಿ ರಚನೆಯಂತೆ ತುಂಗ-ಭದ್ರಾ ನದಿ ಮಾಲಿನ್ಯ ತಡೆಯಲು ಸಮಿತಿ ರಚನೆಗೆ ಪ್ರಸ್ತಾವನೆ ಸಿದ್ದಪಡಿಸುವಂತೆ ತಿಳಿಸಿದರು.


ರಾಷ್ಟ್ರೀಯ ಹಬ್ಬಗಳನ್ನ ನೆಹರೂ ಕ್ರೀಡಾಂಗಣದಲ್ಲಿ ನಡೆಸಲು ಒತ್ತಾಯ


ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಬ್ಬಗಳನ್ನು ನೆಹರೂ ಕ್ರೀಡಾಂಗಣದಲ್ಲಿ ನೆರವೇರಿಸುವಂತೆ ಶಾಸಕರು ಕೋರಿದರು. ಈ ಕುರಿತು ಚಿಂತಿಸುವುದಾಗಿ ಹೇಳಿದ ಸಚಿವರು, ನಗರದ ಅಲ್ಲಮಪ್ರಭು ಮೈದಾನದಲ್ಲಿ ಜಿಲ್ಲಾ, ರಾಜ್ಯ ಮಟ್ಟದ ಕಾರ್ಯಕ್ರಮಗಳು ಜರುಗುವಂತೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಲು ಕ್ರಿಯಾಯೋಜನೆ ಸಿದ್ದಪಡಿಸಲಾಗುವುದು ಎಂದರು.


ಮಹಾನಗರಪಾಲಿಕೆ ವ್ಯಾಪ್ತಿಯ ಕೆರೆ ಮತ್ತು ಉದ್ಯಾನಗಳ ನಿರ್ವಹಣೆ ಸಂಬಂಧಿಸಿದಂತೆ ಮಾಹಿತಿಯನ್ನು ತಮಗೆ ನೀಡುವಂತೆ ತಿಳಿಸಿದ ಅವರು ಪಾಲಿಕೆ ವ್ಯಾಪ್ತಿಗೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಸ್ಥಳೀಯ ಪ್ರದೇಶ ಅಭಿವೃದ್ದಿ ವ್ಯಾಪ್ತಿಯಲ್ಲಿ ಹೊಸದಾಗಿ 23 ಗ್ರಾಮಗಳನ್ನು ಸೇರ್ಪಡೆಗೊಳಿಸುವ ವಿಷಯ ಪರಿಶೀಲನಾ ಹಂತದಲ್ಲಿದೆ ಎಂದರು ತಿಳಿಸಿದರು.


ಪಾಲಿಕೆ ಆಯುಕ್ತರು ಬೈಪಾಸ್ ರಸ್ತೆಗೆ ಪೂರಕವಾಗಿ ಹೊರ ವರ್ತುಲ ರಸ್ತೆ ಅಭಿವೃದ್ದಿ, ಸುಸಜ್ಜಿತ ಮೀನು ಮಾರುಕಟ್ಟೆ ಅಭಿವೃದ್ದಿಗೆ ಅಗತ್ಯವಾದ ಅನುದಾನ ಒದಗಿಸುವಂತೆ ಸಚಿವರಿಗೆ ಕೋರಿದರು.


ಶಾಸಕರಾದ ಶಾರದಾ ಪರ‍್ಯಾನಾಯ್ಕ ಮಾತನಾಡಿ, ಅನುಪಿನಕಟ್ಟೆ ಪೋದಾರ್ ಶಾಲೆ ಬಳಿ ಪಾಲಿಕೆಯವರು ರಾತ್ರಿ ಹೊತ್ತು ಕಸ ಹಾಕುತ್ತಿದ್ದಾರೆ, ಕಟ್ಟಡದ ತ್ಯಾಜ್ಯಗಳನ್ನು ಹಾಕುತ್ತಿದ್ದು ಇದನ್ನು ನಿಲ್ಲಿಸಬೇಕು. ಪಾಲಿಕೆ ಆಯುಕ್ತರು ಖುದ್ದು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.


ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಗುರುವಾರ, ಆಗಸ್ಟ್ 15, 2024

ಶಿವಮೊಗ್ಗದಲ್ಲಿ ನಡೆದ 78 ನೇ ಸ್ವಾತಂತ್ರ್ಯೋತ್ಸವ



ಸುದ್ದಿಲೈವ್/ಶಿವಮೊಗ್ಗ


78 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಡಿಎಆರ್ ಮೈದಾನದಲ್ಲಿ ಶಿವಮೊಗ್ಗದಲ್ಲಿ ತ್ರಿವರ್ಣ ಧ್ವಜವನ್ನ ಹಾರಿಸುವ ಮೂಲಕ ಆಚರಿಸಲಾಯಿತು. 


ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಸರಿಯಾದ ವೇಳೆಗೆ 9 ಗಂಟೆಗೆ ಮೈದಾನದಲ್ಲಿ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಗೆ ಚಾಲನೆ ನೀಡಲಾಯಿತು. 



ಕೆಎಸ್ಆರ್ ಪಿ, ಡಿಆರ್, ಸಿವಿಲ್, ಹೋಮ್ ಗಾರ್ಡ್, ಅಗ್ನಿಶಾಮಕದಳ ಅರಣ್ಯ ಇಲಾಖೆ ಮತ್ತು ಎನ್ ಸಿಸಿ ಹಾಗೂ ಶಾಲಾ ಮಕ್ಕಳು ರಾಷ್ಟ್ರಗೀತೆಯನ್ನ ವಾದ್ಯಗಳ ಮೂಲಕ ನುಡಿಸಲಾಯಿತು. ನಂತರ ಶಾಲಾ ಮಕ್ಕಳಿಂದ ನಾಡಗೀತೆ ಹಾಡಲಾಯಿತು. 


ಗೌರವವಂದನೆ ಸ್ವೀಕರಿಸಿದ ಸಚಿವ ಡಿಎಆರ್ ನ ಪ್ರಶಾಂತ್ ಅವರ ಜೊತೆ ಮಧು ಬಂಗಾರಪ್ಪ ತೆರೆದ ಜೀಪಿನಲ್ಲಿ 26 ತುಕಡಿಗಳನ್ನ ಪರಿಶೀಲನೆ ನಡೆಸಿ ವಂದನೆಗೆ ಗೌರವವಂದನೆ ಸ್ವೀಕರಿಸಿದರು ನಂತರ 26 ತುಕಡಿಗಳ ಪಥ ಸಂಚಲನ ನಡೆಸಿದರು.




ನಂತರ ಮಾತನಾಡಿದ ಸಚಿವ ಮಧು ಬಂಗಾರಪ್ಪ 12 ಸಾವಿರ ಶಿಕ್ಷಕರನ್ನ ನೇಮಿಸಲಾಗಿದೆ  ಖಾಲಿ ಇರುವ 10 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಮಕ್ಕಳಿಗೆ ಚಿಕ್ಕಿ, ಮೊಟ್ಟೆ ಜೊತೆ ಊಟ ನೀಡಕಾಗುತ್ತಿದೆ. 1500 ಕೋಟಿ ಅನುದಾನದಲ್ಲಿ ಅಜಿಜ್ ಪ್ರೇಮ್ ಜಿ ಜೊತೆ ಶಿಕ್ಷಣ ನೀಡಲು ಯೋಜಿಸಲಾಗಿದೆ. 


98 ಎಕರೆಯಲ್ಲಿ ಸೋಗಾನೆಯಲ್ಲಿ ಫುಡ್ ಪಾರ್ಕ್, ಚಂದ್ರಗುತ್ತಿ ಮತ್ತು ಆನವಟ್ಟಿಯಲ್ಲಿ ಶುದ್ಧ ಕುಡಿಯುವ ನೀರು ನೀಡಲು ಯೋಜಿಸಲಾಗಿದೆ. ಕಿದ್ವಾಯಿ ಆಸ್ಪತ್ರೆ ಪ್ರಗತಿಯಲ್ಲಿದೆ. ಮೆಗ್ಗಾನ್ ನಲ್ಲಿ ಮೆದುಳು ರೋಗಕ್ಕೆ ಚಿಕಿತ್ಸೆ ಕುರಿತು ಜನವರಿಯಿಂದ ಆರಂಭಿಸಲಾಗುವುದು ಎಂದು ತಿಳಿಸಿದರು. 


ನಂತರ ಉತ್ತಮ ಸೇವೆ ಸಲ್ಲಿಸಿದ ಐವರು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ  ಮೂವರು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪಥ ಸಂಚಲನದಲ್ಲಿ ಭಾಗವಹಿಸಿದ ತಂಡದ ನಾಯಕರಿಗೆ ಮತ್ತು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅಂಗಾಂಗ ದಾನ ಮಾಡಿದ ಇಬ್ಬರಿಗೆ ಪ್ರಶಂಸನೀಯ ಪತ್ರ ನೀಡಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 


ಕಾರ್ಯಕ್ರಮದಲ್ಲಿ ಶಾಸಕ ಚೆನ್ನಬಸಪ್ಪ,  ಎಎಂಎಲ್ ಸಿ ಡಾ.ಧನಂಜಯ ಸರ್ಜಿ,  ಡಿಎಸ್ ಅರುಷ್ ಬಲ್ಕಿಸ್ ಭಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಗ್ಯಾರೆಂಟಿ ಸಮಿತಿಯ ಜಿಲ್ಲಾ‌ಅಧ್ಯಕ್ಚ ಚಂದ್ರಭೂಪಾಲ್, ಮತ್ತು ಕಲಗೋಡು ರತ್ನಾಕರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್ ಕುಮಾರ್ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಮೊದಲಾದವರು ಉಪಸ್ಥಿತರಿದ್ದರು. 


ಬುಧವಾರ, ಆಗಸ್ಟ್ 14, 2024

ಪತ್ರಿಕೋದ್ಯಮಕ್ಕೆ ಸಂದ ಅತಿದೊಡ್ಡ ಜಯ



ಸುದ್ದಿಲೈವ್/ಬೆಂಗಳೂರು 


ಇದು ಪತ್ರಿಕೋದ್ಯಮ-ಪತ್ರಿಕಾ ಧರ್ಮಕ್ಕೆ ಸಂದ ಜಯ ಎಂದರೂ ತಪ್ಪಾಗಲಿಕ್ಕಿಲ್ಲವೇನೋ..? ಪೊಲೀಸ್ ವ್ಗವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು "ಪತ್ರಿಕಾಸ್ವಾತಂತ್ರ್ಯ" ವನ್ನು ಹತ್ತಿಕ್ಕುವ ದುಸ್ಸಾಹಸ ನಡೆಸುತ್ತಿರುವ ಸರ್ಕಾರಕ್ಕೆ ಸರಿಯಾಗೇ ಶಾಸ್ತಿಯಾಗಿದೆ.


ಖುದ್ದು ರಾಜ್ಯಪಾಲರೇ ಸರ್ಕಾರದ ಧೋರಣೆಗೆ ಗರಂ ಆಗಿದ್ದು ರಾಜ್ಯದ ಪ್ರತಿಷ್ಟಿತ ಸುದ್ದಿವಾಹಿನಿ ಬಿಟಿವಿ ಮಾಲೀಕರಾದ ಜಿಎಂ ಕುಮಾರ್ ವಿರುದ್ಧದ ಕೇಸ್ ನ್ನು ತತ್ ಕ್ಷಣಕ್ಕೆ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ.ರಾಜ್ಯಪಾಲರ ಆದೇಶದ ಪ್ರತಿ ಸುದ್ದಿಲೈವ್ ಗೆ EXCLUSIVE ಆಗಿ ಲಭ್ಯವಾಗಿದೆ.


ಮಹತ್ವದ ಬೆಳವಣಿಗೆಯೊಂದರಲ್ಲಿ, ಬಿಟಿವಿ ಮಾಲಿಕರು ಆಗಿರುವ ಹಿರಿಯ ಪತ್ರಕರ್ತ ಜಿ ಎಂ ಕುಮಾರ್ ಮೇಲಿನ ಕೇಸ್ ವಾಪಸ್ ಪಡೆಯುವಂತೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ತಮ್ಮ ವಿರುದ್ಧ  ವಿಜಯನಗರ ಕ್ಷೇತ್ರದ  ಕಾಂಗ್ರೆಸ್ ಶಾಸಕ ಕೃಷ್ಣಪ್ಪ ಮತ್ತು ಅವರ ಪುತ್ರ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ  ಪ್ರಿಯಕೃಷ್ಣ ಒತ್ತಡದಿಂದ ಕೇಸ್ ದಾಖಲಿಸಲಾಗಿತ್ತು. 


ಬಸವೇಶ್ವರ ನಗರ ಠಾಣೆಯ ಇನ್ಸ್​ಪೆಕ್ಟರ್​ ಮೇಲೆ ಅಪ್ಪ-ಮಗ ಒತ್ತಡ ಹೇರಿ ನಿಸ್ಸಂಶಯವಾಗಿ ಬಿ ರಿಪೋರ್ಟ್ ಮಾಡಬಹುದಾಗಿದ್ದ  ಪ್ರಕರಣದಲ್ಲಿ ಚಾರ್ಜ್​ಶೀಟ್ ಹಾಕಿಸಿದ್ದರು ಎಂದು ಜಿ ಎಂ ಕುಮಾರ್ ದೂರು ನೀಡಿದ್ದರು.


ಈ ಸಂಬಂಧ, ಮಾನವ ಹಕ್ಕುಗಳ ಆಯೋಗದ ವರದಿ, ಇನ್ಸ್​ಪೆಕ್ಟರ್ ಮಾತನಾಡಿದ್ದ ಆಡಿಯೋ ಸಾಕ್ಷಿ ಸೇರಿ ಹಲವು ಸಾಕ್ಷಿಗಳನ್ನು ಜಿಎಂ ಕುಮಾರ್ ಅವರು  ರಾಜ್ಯಪಾಲ ರಿಗೆ ಒದಗಿಸಿದ್ದರು. ತಮ್ಮ ವಿರುದ್ಧದ ಸುಳ್ಳು ಮೊಕದ್ದಮೆ ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದರು. 


ಇದೀಗ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿರುವ ರಾಜ್ಯಪಾಲರು, ಹಿರಿಯ ಪತ್ರಕರ್ತ ಜಿ ಎಂ ಕುಮಾರ್ ಮೇಲಿನ ಕೇಸ್​ಗಳನ್ನು ಕಾನೂನು ರೀತ್ಯಾ ಹಿಂಪಡೆಯುವಂತೆ ಡಿಜಿ-ಐಜಿಪಿ ಮತ್ತು ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದಾರೆ. ಕರ್ನಾಟಕ ರಾಜ್ಯಪಾಲರ ಸಚಿವಾಲಯ 13-08-2024 ರಂದು ಹೊರಡಿಸಿರುವ ಆದೇಶ ಪತ್ರದ ಪ್ರತಿ ಸುದ್ದಿಲೈವ್  ಗೆ ಲಭಿಸಿದೆ.


ಪ್ರಕರಣದ ವಿವರ:


ಹಿರಿಯ ಪತ್ರಕರ್ತ ಜಿ ಎಂ ಕುಮಾರ್ ಅವರು ತಮ್ಮ ಒಡೆತನದ ಬಿಟಿವಿ ಸುದ್ದಿ ವಾಹಿನಿಯಲ್ಲಿ, ಮಾಜಿ ಸಚಿವ ಕೃಷ್ಣಪ್ಪ ಕುಟುಂಬದ ಅಕ್ರಮ ಆಸ್ತಿ, ಜಮೀನು ಕಬಳಿಕೆ ಪ್ರಕರಣವನ್ನು ದಾಖಲೆ ಸಮೇತ ಬಯಲು ಮಾಡಿದ್ದರು.ಇದರಿಂದ ತೀವ್ರ ಮುಜುಗರ ಹಾಗೂ ಅವಮಾನಕ್ಕೀಡಾದ ಶಾಸಕ ಕೃಷ್ಣಪ್ಪ ತಮ್ಮ ಪಕ್ಷ  ಅಧಿಕಾರಕ್ಕೆ ಬರುತ್ತಿದ್ದಂತೆ   ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದರು.ಇದರ ಭಾಗವಾಗಿ ಬಸವೇಶ್ವರ ನಗರ ಪೊಲೀಸ್ ವ್ಯವಸ್ಥೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರು.


ಪೊಲೀಸರ  ಮೇಲೆ ಒತ್ತಡ ಹೇರಿ ಬಿ ರಿಪೋರ್ಟ್ ಆಗಬೇಕಿದ್ದ ಪ್ರಕರಣದಲ್ಲಿ ಎಫ್ ಐ ಆರ್ ಹಾಕಿಸಿ, ಚಾರ್ಜ್ ಶೀಟ್ ಮಾಡಿಸಿದ್ದರು.ಇದನ್ನು ಪೊಲೀಸ್ ಅಧಿಕಾರಿಗಳೇ ಖುದ್ದು ಫೋನ್ ಸಂಭಾಷಣೆಯಲ್ಲಿ ಬಹಿರಂಗಗೊಳಿಸಿದ್ದರು.ಇದೆಲ್ಲವೂ ರಾಜಕೀಯ ಒತ್ತಡದಿಂದ ಮಾಡಿರುವ ಕೇಸ್ ಎನ್ನುವುದು ಈಗ ದಾಖಲೆ ಸಮೇತ ಸಾಬೀತಾಗಿದೆ.


ಇನ್ಸ್ ಪೆಕ್ಟರ್ ತನ್ನ ಸೀನಿಯರ್ ಆಗಿದ್ದವರ ಜೊತೆ ಮಾತನಾಡುವ ಆಡಿಯೋದಲ್ಲಿ ಅಧಿಕಾರ ದುರ್ಬಳಕೆ ಹಗರಣ ಬಯಲಾಗಿದೆ. "ಕೃಷ್ಣಪ್ಪನವರ ಭೂ ಕಬಳಿಕೆ ಹಗರಣ ಹೊರ ತಂದಿದ್ದಕ್ಕಾಗಿ ಜಿ ಎಂ ಕುಮಾರ್ ಮೇಲೆ ಚಾರ್ಜ್ ಶೀಟ್ ಮಾಡಬೇಕಾಯಿತು", "ಬಿ ರಿಪೋರ್ಟ್ ಮಾಡಬೇಕಿದ್ದ ಪ್ರಕರಣ ಕೃಷ್ಣಪ್ಪ ಒತ್ತಡದಿಂದ ಚಾರ್ಜ್ ಶೀಟ್ ಮಾಡಬೇಕಾಯಿತು" ಎಂದು ಇನ್ಸ್​ಪೆಕ್ಟರ್ ತಮ್ಮ ಹಿರಿಯ ಅಧಿಕಾರಿಯೊಬ್ಬರ ಜೊತೆ ಹೇಳಿಕೊಂಡಿದ್ದಾರೆ. ಫೋನ್ ಕರೆಯಲ್ಲಿ ಜಿ ಎಂ ಕುಮಾರ್ ವಿರುದ್ದ ಶಾಸಕ ಕೃಷ್ಣಪ್ಪ ಮಾಡಿರುವ ಅಧಿಕಾರ ದುರ್ಬಳಕೆ ಸ್ಪಷ್ಟವಾಗಿ ಬಯಲಾಗಿದೆ.


ಇನ್ಸ್​ಪೆಕ್ಟರ್ ಮಾತಾಡಿರುವ ಆಡಿಯೋ ಸಿಡಿ ಜೊತೆಗೆ ಎಸಿಪಿ, ಡಿಸಿಪಿ ರಿಪೋರ್ಟ್, ಮಾನವ ಹಕ್ಕು ಆಯೋಗದ ವರದಿಯನ್ನೂ ರಾಜ್ಯಪಾಲರಿಗೆ ಜಿಎಂ ಕುಮಾರ್ ಸಲ್ಲಿಸಿದ್ದರು. ಮಾನವ ಹಕ್ಕುಗಳ ಆಯೋಗದ ವರದಿಯಲ್ಲಿ, ಜಿ ಎಂ ಕುಮಾರ್ ವಿರುದ್ಧ ಏನೆಲ್ಲಾ ಪಿತೂರಿ ನಡೆಯಿತು, ಹೇಗೆಲ್ಲಾ ಕೇಸ್​ ಅನ್ನು ತಿರುಚಲಾಯಿತು, ಇನ್ಸ್​ಪೆಕ್ಟರ್ ಪಾತ್ರವೇನು? ಎಲ್ಲವನ್ನೂ ಕೂಡಾ ಅತ್ಯಂತ ವಿವರವಾಗಿ ದಾಖಲಿಸಲಾಗಿತ್ತು.


ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಅವರು ವಿಜಯನಗರ ಇನ್ಸ್​ಪೆಕ್ಟರ್ ಆಗಿದ್ದ ಸಂತೋಷ್ ಕುಮಾರ್ ಅವರನ್ನು ಬಳಸಿಕೊಂಡು ಅಧಿಕಾರ ದುರ್ಬಳಕೆ ಮಾಡಿ ತಮ್ಮ ವಿರುದ್ಧ ಚಾರ್ಜ್​ಶೀಟ್ ಮಾಡಿಸಿದ್ದಾರೆ ಎಂದು ದಾಖಲೆ ಸಮೇತ ಜಿ ಎಂ ಕುಮಾರ್​ ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದ ಸಿಡಿ ಮತ್ತು ದಾಖಲೆಗಳನ್ನು ರಾಜ್ಯಪಾಲರಿಗೆ ನೀಡಿದ್ದರು. ಪತ್ರಕರ್ತರ ವಿರುದ್ಧ ನಡೆಯುತ್ತಿರುವ ಇಂತಹ ಪಿತೂರಿ, ದೌರ್ಜನ್ಯಗಳನ್ನು ಹತ್ತಿಕ್ಕಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. 


ಅಲ್ಲದೆ ತಮ್ಮ ವಿರುದ್ಧ ಹಾಕಿರುವ ಸುಳ್ಳು ಚಾರ್ಜ್​​ಶೀಟ್ ಮತ್ತು FIR ಅನ್ನು ರದ್ದುಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ಕೊಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು.ಇದೀಗ, ಜಿ ಎಂ ಕುಮಾರ್ ದೂರನ್ನು ಪರಿಶೀಲಿಸಿ, ದಾಖಲೆಗಳನ್ನೆಲ್ಲಾ ಗಮನಿಸಿರುವ ರಾಜ್ಯಪಾಲರು, ಕೇಸ್​ಗಳನ್ನು ವಾಪಸ್ ಪಡೆಯುವಂತೆ ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.


ರಾಜ್ಯಪಾಲರ ಆದೇಶದಿಂದ ಸರ್ಕಾರಕ್ಕೆ ತೀವ್ರ ಹಿನ್ನಡೆಯಲ್ಲದೇ ಅವಮಾನವಾಗಿದೆ.ರಾಜಕಾರಣಿಗಳು ಅಕ್ರಮ ನಡೆಸಿದಾಗ ಅದರ ಮೇಲೆ ಬೆಳಕು ಚೆಲ್ಲುವ ಮೂಲಕ ಕರ್ತವ್ಯಪ್ರಜ್ನೆ ಮೆರೆದ  ಬಿಟಿವಿಗೆ ನೈತಿಕ ಗೆಲುವಾಗಿದೆ. 


ರಾಜಕಾರಣಿಗಳು ಇನ್ನಾದ್ರು ತಮ್ಮ ಸ್ವಾರ್ಥಕ್ಕಾಗಿ ಪೊಲೀಸ್ ವ್ಯವಸ್ಥೆ ದುರ್ಬಳಕೆ ಮಾಡಿಕೊಳ್ಳುವುದನ್ನು ಬಿಡಬೇಕು.ಇಲ್ಲವಾದರೆ ಎಂಥಾ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಬಿಟಿವಿ ಮಾಲೀಕರಾದ ಜಿಎಂ ಕುಮಾರ್ ಅವರ ಪ್ರಕರಣದಲ್ಲಿ ನೀಡಿರುವ ಆದೇಶ-ಸೂಚನೆಯೇ ಸ್ಪಷ್ಟ ನಿದರ್ಶನ.

ನಾಳೆಯ ಹವಮಾನ ಮುನ್ಸೂಚನೆ




ಸುದ್ದಿಲೈವ್/ಬೆಂಗಳೂರು


ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ, ಸಂಜೆ, ರಾತ್ರಿ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. (ನಿನ್ನೆ ಸುಳ್ಯ ತಾಲೂಕು ಹಲವು ಭಾಗಗಳಲ್ಲಿ ಮತ್ತು ಕಡಬ ತಾಲೂಕಿನ ಕೆಲವು ಭಾಗಗಳಲ್ಲಿ ಮೇಘ ಸ್ಪೋಟದಂತಹ ಮಳೆಯಾಗಿತ್ತು. ಇವತ್ತು ಆ ರೀತಿಯ ಮಳೆಯ ಸಾಧ್ಯತೆ ಕಡಿಮೆ ಇರಬಹುದು) 


ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಮೂಡಿಗೆರೆ, ಕುದುರೆಮುಖ, ಬಾಳೆಹೊನ್ನೂರು, ಶೃಂಗೇರಿ ಸುತ್ತಮುತ್ತ ಭಾಗಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ. 


ಮೈಸೂರು, ಚಾಮರಾಜನಗರದ ಕೊಳ್ಳೇಗಾಲ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ಗದಗ ಜಿಲ್ಲೆಗಳಲ್ಲಿ ಮೋಡದ ವಾತಾವರಣ ಇರಲಿದ್ದು ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆಯನ್ನ ಹವಮಾನ ಇಲಾಖೆ ನೀಡಿದೆ. 


ಉಳಿದ ಕರ್ನಾಟಕದ ಭಾಗಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಈಗಿನಂತೆ ಆಗಸ್ಟ್ 15ರಿಂದ ಮುಂದಿನ 10 ದಿನಗಳವರೆಗೂ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚೆನೆ ಇದೆ. ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಜಾಸ್ತಿ ಇರಬಹುದು.

ಮಂಗಳವಾರ, ಆಗಸ್ಟ್ 13, 2024

ಭೂ ಒತ್ತುವರಿ ತೆರವು-ಶಿಕ್ಷೆಗೆ ಆದೇಶ



ಸುದ್ದಿಲೈವ್/ಶಿವಮೊಗ್ಗ


ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲವು 2024ರ ಜುಲೈ ತಿಂಗಳಿನಲ್ಲಿ  ಪ್ರತ್ಯೇಕ ಪ್ರಕರಣಗಳಲ್ಲಿ ಶಿಕ್ಷೆ ಮತ್ತು ಭೂ ಕಬಳಿಕೆಯಾದ ಜಮೀನನ್ನು ಸರ್ಕಾರಕ್ಕೆ ವಾಪಸ್ಸು ಪಡೆಯಲು ಅದೇಶ ನೀಡಿರುತ್ತದೆ.  


ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಭದ್ರಾಪುರ ಗ್ರಾಮದ ಸರ್ವೆ ನಂ. 19ರ ಸರ್ಕಾರಿ ಜಮೀನಿನನ್ನು ಅದೇ ಗ್ರಾಮದ ಚನ್ನಯ್ಯ ಬಿನ್ ವೀರಯ್ಯ ಎಂಬುವವರು 25 ಗುಂಟೆ ಜಮೀನು ಹಾಗೂ ಬಸಪ್ಪ ಬಿನ್ ಲೇಟ್ ಅಯ್ಯಣ್ಣ ಎಂಬುವವರು 36 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುತ್ತಾರೆ ಎಂಬ ಗ್ರಾಮಸ್ಥರ ದೂರಿನನ್ವಯ ಶಿಕಾರಿಪುರ ತಹಶೀಲ್ದಾರ್ ನೀಡಿ ದೂರನ್ನು ಪರಿಗಣಿಸಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪೂರ್ಣಗೊಳಿಸಿ ಆರೋಪಿತರ ವಿರುದ್ಧ ಕ.ಭೂ.ಕಂ. ಅಧಿನಿಯಮದಡಿ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.  


ಈ ಪ್ರಕರಣವನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಸ್ವೀಕರಿಸಿ ಸಂಪೂರ್ಣ ಸಾಕ್ಷ್ಯ ವಿಚಾರಣೆಯನ್ನು ನಡೆಸಿದ ನಂತರ ಆರೋಪಿತರು ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿರುವುದು ಸಾಬೀತಾದ ಕಾರಣ ಆರೋಪಿತರಿಗೆ 01 ವರ್ಷ ಸಾದಾ ಶಿಕ್ಷೆ ಮತ್ತು 5,000/-ರೂ. ದಂಡವನ್ನು ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆಯನ್ನು 2ನೇ ವಿಶೇಷ ನ್ಯಾಯಾಲಯದ ಸದಸ್ಯರಾದ ಕೆ.ಹೆಚ್. 


ಅಶ್ವತ್ಥ ನಾರಾಯಣಗೌಡ ಪೀಠವು ಜು.25 ರಂದು ತೀರ್ಪು ನೀಡಿದೆ.  ಆರೋಪಿತರು ಒತ್ತುವರಿ ಮಾಡಿಕೊಂಡ ಸರ್ಕಾರಿ ಜಮೀನನ್ನು ಕೂಡಲೇ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿ, 60 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಶಿಕಾರಿಪುರ ತಹಶೀಲ್ದಾರ್‌ರವರಿಗೆ ನೀರ್ದೇಶಿಸಿ ತೀರ್ಪು ನೀಡಿದೆ

12 ಜನ ನಿರ್ದೇಶಕ ಸ್ಥಾನಕ್ಕೆ 31 ಜನ ಅಂತಿಮ ಕಣದಲ್ಲಿ-ನಾಳೆ ಶಿಮೂಲ್ ಚುನಾವಣೆ



ಸುದ್ದಿಲೈವ್/ಶಿವಮೊಗ್ಗ


ನಾಳೆ ಶಿಮೂಲ್ ನ ನಿರ್ದೇಶಕರ ಚುನಾವಣೆಗೆ ಮತದಾನ ನಡೆಯಲಿದ್ದು 12 ಜನ ನಿರ್ದೇಶಕರ ಸ್ಥಾನಕ್ಕೆ 31 ಜನ ಸ್ಪರ್ಧಿಸುತ್ತಿದ್ದಾರೆ. ಇಬ್ಬರು ಅವಿರೋಧ ಆಯ್ಕೆಯಾಗಿದ್ದು ನಾಳೆ ಘೋಷಣೆಯಾಗಲಿದೆ. 


ಶಿವಮೊಗ್ಗ ವಿಭಾಗದಿಂದ ಎರಡು ಸ್ಥಾನಗಳಿದ್ದು ಇಲ್ಲಿ 5 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಾಗರ ವಿಭಾಗದಿಂದಲೂ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಇಲ್ಲಿ ನಾಲ್ವರು ಅಂತಿಮ ಕಣದಲ್ಲಿದ್ದಾರೆ. 


ದಾವಣಗೆರೆ ವಿಭಾಗದಲ್ಲಿ ನಾಲ್ಕು ಸ್ಥಾನಗಳಿಗೆ 10 ಜನ ಅರ್ಜಿ ಹಾಕಿದ್ದಾರೆ. ಚಿತ್ರದುರ್ಗದಲ್ಲೂ ನಾಲ್ಕು ಸ್ಥಾನಕ್ಕೆ 12 ಜನ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ಶಿವಮೊಗ್ಗ ವಿಭಾಗದಲ್ಲಿ 264,  ಸಾಗರ ವಿಭಾಗ 256, ದಾವಣಗೆರೆಯಲ್ಲಿ 362, ಚಿತ್ರದುರ್ಗ ವಿಭಾಗದಲ್ಲಿ 289 ಮತಗಳಿವೆ. 


ಒಟ್ಟು 1171 ಮತಗಳು ನಾಳೆ ಚಲಾವಣೆಯಾಗಲಿದೆ. ಆರ್, ಎಂ ಮಂಜುನಾಥ್ ಗೌಡ ಮತ್ತು ವಿದ್ಯಾಧರ ಎಂಬುವರು  ಅವಿರೋಧ ಆಯ್ಕೆಯಾಗಿದ್ದು ಘೋಷಣೆ ಒಂದೇ ಬಾಕಿ ಇದೆ. ಇದು  ಫಲಿತಾಂಶದ ವೇಳೆ ಬಹಿರಂಗಗೊಳ್ಳುವ ನಿರೀಕ್ಷೆ ಇದೆ.‌

ಅರಣ್ಯ ಇಲಾಖೆಯ ವಿರುದ್ಧ ಆರ್ಭಟಿಸಿದ ರೈತರು




ಸುದ್ದಿಲೈವ್/ಶಿವಮೊಗ್ಗ


ತಾಲೂಕಿನ ಕಸಬ ಹೋಬಳಿ ಆಲದೇವರ ಹೊಸೂರು ಸರ್ವೇನಂ 27 ರಲ್ಲಿ ಅರಣ್ಯ ಇಲಾಖೆಯು ಜೆಸಿಬಿಯಲ್ಲಿ 30  ತೆಂಗಿನ‌ಮರ ನಾಶಪಡಿಸಿರುವುದನ್ನ ಖಂಡಿಸಿ ಮಲೆನಾಡ ರೈತ ಹೋರಾಟ ಸಮಿತಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಭರ್ಜರಿ ಪ್ರತಿಭಟನೆ ನಡೆಸಿದ್ದಾರೆ. 


ನಾಶಪಡಿಸಿದ ತೆಂಗಿನ ಮರವನ್ನ ಟ್ರ್ಯಾಕ್ಟರ್ ನಲ್ಲಿ ಹೇರಿಕೊಂಡು ಬಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈತರು ಅರಣ್ಯ ಇಲಾಖೆ ವಿರುದ್ಧ ಘೋಷಣೆ ಕೂಗಿದ್ದಾರೆ. 


ನ್ಯಾಯಾಲಯದ ಮುಂದೆ, ಸರ್ವೆ ನಙಬರ್ 27 ರಲ್ಲಿ 230 ಜಮೀನು ಬರಲಿದ್ದು, ಈ ಜಮೀನಿನಲಗಲಿ ಒಂದಿಂಚು ಭೂಮಿಯೂ ಅರಣ್ಯಕ್ಕೆ ಬರೊದಿಲ್ಲ ಎಂದು  ನ್ಯಾಯಾಲಯದ ಮುಂದೆ ಅರಣ್ಯದ ರೇಂಜರ್ ಮಾಹಿತಿ ನೀಡಿದ್ದರೂ ಅರಣ್ಯ ಇಲಾಖೆ ದಬ್ಬಾಳಿಕೆ ಮೂಲಕ 30 ತೆಂಗಿನಮರ ಕಡಿದಿದ್ದಾರೆ. 


ಜಂಟಿ ಸರ್ವೆ ನಡೆಸಲು ತಹಶೀಲ್ದಾರ್ ಅವರು ಅರಣ್ಯಕ್ಕೆ ಪತ್ರ ಬರೆದಿದ್ದಾರೆ. ಈ ವೇಳೆ ನಿಗದಿ ಆದ ದಿನಾಂಕದಂದು ಸರ್ವೆ ಮಾಡಲು ತಹಶೀಲ್ದಾರ್ ಗೆ ಸಾಧ್ಯವಾಗದ ಕಾರಣ ಆ.15 ಕ್ಕೆ ಮುಂದೂಡಲಾಗಿತ್ತು. ಆದರೆ ಆ.07 ರಂದು ಅರಣ್ಯ ಇಲಾಖೆ ಏಕಾಏಕಿ 30 ತೆಂಗಿನಮರವನಚನ ಕಡಿದು ಹಾಕಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 


ಹೋರಾಟದ ನೇತೃತ್ವವನ್ನ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್ ವಹಿಸಿದ್ದರು. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವುಕುಮಾರ್,  ಸಚಿವ ಮಧು ಬಂಗಾರಪ್ಪ, ಮಾಜಿ ಸಿಎಂ ಯಡಿಯೂರಪ್ಪನವರ ವಿರುದ್ಧ ರೈತರು ದಿಕ್ಕಾರ ಕೂಗಿದ್ದಾರೆ. 

ಜಿಲ್ಲೆಗಳ ಪ್ರಮುಖ ಜಲಾಶಯಗಳ ನೀರಿನ ಮಟ್ಟ

 

ತುಂಗ ಜಲಾಶಯ


ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯಲ್ಲಿ ಮಳೆ ಆಗಾಗ ಕಾಣಿಸಿಕೊಂಡಿದ್ದು ಜುಲೈನಲ್ಲಿ ಬೀಳುತ್ತಿದ್ದ ಮಳೆಯ ಆರ್ಭಟ ಸಧ್ಯಕ್ಕೆ ನಿಂತಿದೆ. ಪರಿಣಾಮ ಜಿಲ್ಲೆಗಳ ಜಲಾಶಯದ ಒಳಹರಿವು ತಗ್ಗಿದೆ. 


ಲಿಂಗನಮಕ್ಕಿ ಜಲಾಶಯದ ಒಳ ಹರಿವು ಇಳಿಕೆಯಾಗಿದೆ. ಇವತ್ತು 7741 ಕ್ಯೂಸೆಕ್‌ ಒಳ ಹರಿವು ಇದೆ. 7619 ಕ್ಯೂಸೆಕ್‌ ನೀರಿನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 1816.65 ಅಡಿ ಇದೆ. ಜಲಾಶಯದಲ್ಲಿ 143.74 ಟಿಎಂ ನೀರು ಸಂಗ್ರಹವಾಗಿದೆ


ತುಂಗಾ ಜಲಾಶಯದ ಒಳ ಮತ್ತು ಹೊರ ಹರಿವು ಕೂಡ ಇಳಿಕೆಯಾಗಿದೆ. ಇವತ್ತು 9137 ಕ್ಯೂಸೆಕ್‌ ಒಳ ಹರಿವು ಇದೆ. ಅಷ್ಟೇ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸದ್ಯ ಶಿವಮೊಗ್ಗದಲ್ಲಿ ತುಂಗಾ ನದಿಯಲ್ಲಿ ನೀರಿನ ಹರಿವು ಇದೆ.


ಭದ್ರಾ ಜಲಾಶಯದ ಒಳ ಹರಿವು ಕುಸಿತ ಕಂಡಿದೆ. ಇವತ್ತು 6075 ಕ್ಯೂಸೆಕ್‌ ಒಳ ಹರಿವು ಇದೆ. 7811 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತತ ಜಲಾಶಯದ ನೀರಿನ ಮಟ್ಟ 180.1 ಅಡಿ ಇದೆ. 64.32 ಟಿಎಂಸಿ ನೀರು ಸಂಗ್ರಹವಾಗಿದೆ.

ಸೋಮವಾರ, ಆಗಸ್ಟ್ 12, 2024

ಹಿಂದೂ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಬೃಹತ್ ಮಾನವ ಸರಪಳಿ




ಸುದ್ದಿಲೈವ್/ಸೊರಬ


ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಸೋಮವಾರ ಪಟ್ಟಣದ ರೈತ ವೃತ್ತದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಅಡಿಯಲ್ಲಿ ಹತ್ತಾರು ಸಂಘಟನೆಗಳ ಕಾರ್ಯಕರ್ತರು ಬೃಹತ್ ಮಾನವ ಸರಪಳಿ ನಿರ್ಮಿಸಿ ನಾಮ ಫಲಕ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ, ಬಾಂಗ್ಲಾದೇಶದ ಸಂತ್ರಸ್ತ ಹಿಂದುಗಳಿಗೆ ಎಲ್ಲ ರೀತಿಯ ನೆರವು ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಯಿತು.


ಹಿಂದೂ ಹಿತರಕ್ಷಣಾ ವೇದಿಕೆಯ ಕಾಳಿಂಗರಾಜ್ ಮಾತನಾಡಿ, "ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಮೀಸಲಾತಿಯಿಂದ ಪ್ರಾರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ, ಅರಾಜಕತೆ ನಿರ್ಮಾಣವಾಗಿದೆ. ಅಲ್ಲಿನ ಹಿಂದುಗಳನ್ನು ಗುರಿಯಾಗಿಸಿಕೊಂಡು ಬಾಂಗ್ಲಾ ಇಸ್ಲಾಮಿಕ್ ಜಿಹಾದಿಗಳು ಸ್ತ್ರೀಯರು, ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ. ಇತ್ತೀಚಿಗೆ ಗಾಜಾ ಪಟ್ಟಿಯಲ್ಲಿ ಏನಾದರೂ ಘಟಿಸಿದರೆ, ವಿಶ್ವಸಂಸ್ಥೆಯಲ್ಲಿ ಚರ್ಚಿಸಲಾಗುತ್ತದೆ. ಆದರೆ, ಬಾಂಗ್ಲಾದೇಶದ ಹಿಂದುಗಳ ಮೇಲಿನ ಆಕ್ರಮಣಗಳ ಬಗ್ಗೆ ಜಗತ್ತಿನಲ್ಲಿ ಯಾರೂ ಧ್ವನಿಯೆತ್ತುತ್ತಿಲ್ಲ," ಎಂದು ಆಕ್ಷೇಪಿಸಿದರು.


ಬಾಂಗ್ಲಾದೇಶಿ ಹಿಂದುಗಳ ರಕ್ಷಣೆಗೆ ತಕ್ಷಣವೇ ಕೇಂದ್ರ ಸರ್ಕಾರ ಮುಂದಾಗಬೇಕು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಮತ್ತು ಹಿಂಸಾಚಾರ ಕುರಿತು ವಿಶೇಷ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅಲ್ಲದೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಆಯೋಗ ಸ್ಥಾಪನೆ ಮಾಡಿ, ಅಲ್ಲಿನ ಹಿಂದುಗಳಿಗೆ ನ್ಯಾಯವನ್ನು ನೀಡಬೇಕು. ಈ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಿ, ವಿಶೇಷ ನಿಯೋಗವನ್ನು ಬಾಂಗ್ಲಾದೇಶಕ್ಕೆ ಕಳುಹಿಸಿ, ಪೀಡಿತ ಹಿಂದು ಕುಟುಂಬಗಳಿಗೆ ಪರಿಹಾರ ಒದಗಿಸಬೇಕು," ಎಂದು ಕಾಳಿಂಗರಾಜ ಆಗ್ರಹಿಸಿದರು.


ಸಮಾಜ ಸೇವಕರಾದ ಡಾ|| ಜ್ಞಾನೆಶ ಮಾತನಾಡಿ, "ಭಾರತದಲ್ಲಿರುವ ಸೆಕ್ಯುಲರ್‌ವಾದಿಗಳು ಮತ್ತು ಬುದ್ಧಿಜೀವಿಗಳು ಟರ್ಕಿಯಲ್ಲಿ ಅಥವಾ ಪ್ಯಾಲಿಸ್ಟೈನ್‌ನಲ್ಲಿ ಸಂಭವಿಸುವ ಘಟನೆಗಳಿಗೆ ಧ್ವನಿಯೆತ್ತುತ್ತಾರೆ. ಆದರೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಅವರ ಡೋಂಗಿ ಮಾನಸಿಕತೆಯನ್ನು ತೋರಿಸುತ್ತದೆ," ಎಂದು ದೂರಿದರು.


ಈ ಸಂದರ್ಭದಲ್ಲಿ ವಿವಿಧ ಸಾರ್ವಜನಿಕ ಸಂಘ ಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು, ಹಿಂದೂಪರ ಸಂಘಟನೆಗಳ ಪ್ರತಿನಿಧಿಗಳು, ಸಮಾಜಿಕ ಚಿಂತಕರು, ರೈತರು ಹಾಗೂ ಹಿಂದೂಗಳು ಭಾಗವಹಿಸಿದ್ದರು.

ಗಾಜನೂರು ಜಲಾಶಯಕ್ಕೆ ಕೆಎನ್ ಎನ್ ಅಧಿಕಾರಿಗೂ ಭೇಟಿ ಪರಿಶೀಲನೆ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ಗಾಜನೂರಿನಲ್ಲಿರುವ ಜಲಾಶಯದ ಗೇಟ್ ಹಾಳಾಗಿರುವ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಪ್ರಚಾರವಾಗಿದ್ದು ಇದರ ಬೆನ್ನಲ್ಲೇ ಕರ್ನಾಟಕದ ನೀರಾವರಿ ನಿಗಮದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 


ಜಲಾಶಯದ 8 ನೇ ರೇಡಿಯಲ್ ಕ್ರಸ್ಟ್ ಗೇಟ್ ನ ರೋಪ್ ಹಾಳಾಗಿದ್ದು ಇದರಿಂದ ಈ ಬಾರಿ ಈ ಗೇಟನ್ನ ಮೇಲಕ್ಕೆ ಎತ್ತಿ ನೀರು ಹರಿಸಿಲ್ಲ. ಇದು ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿತ್ತು. 


ಅಲ್ಲದೆ ತುಂಗಭದ್ರ ಜಲಾಶಯದಲ್ಲಿ ಕ್ರಸ್ಟ್ ಗೇಟು ಹಾನಿಗೊಳಗಾದ ಬೆನ್ನಲ್ಲೇ ನಿಗಮದ ಅಧಿಕಾರಿಗಳು ಭೇಟಿ ಮಹತ್ವ ಪಡೆದುಕೊಂಡಿದೆ. 2009 ರಲ್ಲಿ ಆರಂಭವಾಗಿರುವ‌ ಜಲಾಶಯಕ್ಕೆ ಇನ್ನೂ 15 ವರ್ಷ ಪ್ರಾಯ. ಆದರೆ ಜಲಾಶಯದ ಸಣ್ಣಪುಟ್ಟ ಸಮಸ್ಯೆಗಳು ಮಾಮೂಲಿಯಾಗಿದೆ. 


ಈ ಬಾರಿ ಜಲಾಶಯಕ್ಕೆ ಭರ್ಜರಿ ನೀರು ಹರಿದು ಬಂದಿತ್ತು. 85 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿತ್ತು. ರೋಪ್ ವೇ ಮೂಲಕ ಗೇಟ್ ತೆಗೆದರೆ ಕಟ್ ಆಗುವ ಸಾಧ್ಯತೆಯಿದ್ದಿದ್ದರಿಂದ ಗೇಟ್ ಒಪನ್ ಮಾಡಿರಲಿಲ್ಲ. 


ಈ ಕಾರಣದಿಂದ ಒಟ್ಟು 22 ಗೇಟ್ ಗಳಲ್ಲಿ ಈ ಬಾರಿ 21 ಗೇಟ್ ಮಾತ್ರ ಒಪನ್ ಆಗಿತ್ತು. ಈಗಲೂ ಜಲಾಶಯಕ್ಕೆ 10 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 2,6,9,10 ನಾಲ್ಕು ಗೇಟನ್ನ ಮೇಲಕ್ಕೆತ್ತಿ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿದೆ. ಒಳಹರಿವು ಕಡಿಮೆಯಾದ ನಂತರ ನಿಗದಿತ ಗೇಟನ್ನ ಸರಿಪಡಿಸಲಾಗುತ್ತದೆ. 


ಆನೆ ದಿನಾಚರಣೆಯ ಅಂಗವಾಗಿ ಸಕ್ರೇಬೈಲಿನಲ್ಲಿ ಆನೆಗೊಂದು ನಾಮಕಾರಣ-ಡಿಎಫ್ ಒರಿಂದ ಶಾಸ್ತ್ರೋಕ್ತವಾಗಿ ನಡೆದ ನೇಮಿಂಗ್ ಸೆರಮನಿ

 


ಸುದ್ದಿಲೈವ್/ಶಿವಮೊಗ್ಗ


ಸಕ್ಕರೆ ಬೈಲಿನಲ್ಲಿ ಆನೆ ದಿನಾಚರಣೆಯ ಅಂಗವಾಗಿ  ಅನೆಗೊಂದು ಹೆಸರಿಡಲಾಗಿದೆ.‌  ಮೂಡಿಗೆರೆಯ ಆಲ್ದೂರ್ ರೇಂಜ್ ನಲ್ಲಿ ಸೆರೆ ಸಿಕ್ಕ  ಕಾಡಾನೆಯನ್ನ  ಪಳಗಿಸಿ ಬಿಡಾರದಲ್ಲಿ ಶಾಸ್ತ್ರೋಕ್ತವಾಗಿ ಅಶ್ವತ್ಥಾಮ ಎಂದು  ಇಡಲಾಗಿದೆ. 


ಅರ್ಜುನ, ಸಾಗರ, ಕೃಷ್ಣ, ಬಹದ್ದೂರು, ಅಭಿಮನ್ಯ  5 ಆನೆಗಳನ್ನ ಸಾಲಾಗಿ ನಿಲ್ಲಿಸಿ ಮೂಡಿಗೆರೆಯಿಂದ ಬಂದ ಕಾಡಾನೆಗೆ ಅಶ್ವತ್ಥಾಮ ಎಂದು ನಾಮಕರಣ ಮಾಡಲಾಯಿತು. 6 ಆನೆಗಳಿಗೆ ಬಣ್ಣ ಬಳಿದು ದಸರಾ ಆನೆಗಳಂತೆ ಕಂಗೊಳಿಸುವಂತೆ ಮಾಡಲಾಗಿತ್ತು. ಪುರೋಹಿತ ಮಧು ಭಟ್ಟರ ಮಂತ್ರಘೋಷದ ನಡುವೆ  ಅರಣ್ಯ ವನ್ಯ ಜೀವಿ ಇಲಾಖೆಯ ಡಿಎಫ್ಒ ಪ್ರಸನ್ನ ಕೃಷ್ಣ ಪಟಗಾರ್ ಅವರು ಆನೆಯ ಕಿವಿಯಲ್ಲಿ ಮೂರು ಬಾರಿ ಹೇಳಿ ನಾಮಕರಣ ಮಾಡಾಯಿತು. 


ನಂತರ ಕುರಿತು ಮಾತನಾಡಿದ ಡಿಎಫ್ಒ ಪ್ರಸನ್ನ ಪಟಗಾರ್, ಆನೆದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕಾನ್ಫೆರೆನ್ಸ್ ನಡೆಯುತ್ತಿದೆ. ಆನೆ ಮತ್ತು ಮಾನವ ಸಂಘರ್ಷದ ಕುರಿತು ಚರ್ಚೆ ನಡೆಯಲಿದ್ದು ಸಿಎಂ ಸಿದ್ದಾರಾಮಯ್ಯನವರ ನೇತೃತ್ವದಲ್ಲಿ ಕಾನ್ಫೆರೆನ್ಸ್ ನಡೆಯಲಿದೆ. 



2023 ನವೆಂಬರ್ 16 ರಂದು  ಕಾಡಾನೆಯನ್ನ ಸಕ್ಕರೆಬೈಲಿನ ಕ್ರಾಲ್ ಗೆ  ಕರೆತರಲಾಗಿತ್ತು. ಅದನ್ನ ಪಳಗಿಸಿ ನಾಮಕರಣ ಮಾಡಲೆಂದು ಇಂದು ಕ್ಯಾಂಪ್ ನಲ್ಲಿ ಕರೆತಲಾಗಿತ್ತು. ಪರಿಸರದ ಅಂಗವಾಗಿ ಆನೆದಿನಾಚರಣೆಯನ್ನ ಪ್ರತಿವರ್ಷ ಆಗಸ್ಟ್12 ರಂದು ಆನೆದಿನಾಚರಣೆಯನ್ನ ಆಚರಿಸಲಾಗಿದೆ. ಇವತ್ತಿಗೆ ಈ ದಿನಾಚರಣೆ ನಡೆದು 12 ವರ್ಷ ಕಳೆದು 13 ನೇ ವರ್ಷಕ್ಕೆ ಕಾಲಿಟ್ಟಿದೆ.‌ ಮೂರು ಮರಿ ಆನೆ ಸೇರಿ 23 ಆನೆಗಳು ಸಕ್ರೆಬೈಲಿನಲ್ಲಿದೆ ಎಂದು ಡಿಎಫ್ ಒ ತಿಳಿಸಿದ್ದಾರೆ. 


ಆನೆ ದಿಬಾಚರಣೆಯ ದಿನ ಶಾಲಾ ಮಕ್ಕಳ ಜಾಥ ನಡೆದಿದೆ.  ಸಕ್ರೆಬೈಲಿನ ಆನೆ ಬಿಡಾರದಿಂದ ಗಾಜನೂರಿನ ಶಾಲೆಯ ವರೆಗೆ ಜಾಥ ನಡೆದಿದೆ. ಶಾಲ ಮಕ್ಕಳಲ್ಲಿ ಆನೆ ದಿನಾಚರಣೆ ಜಾಗೃತಿಗಾಗಿ ಜಾಥ ನಡೆದಿದ್ದು ಡಿಎಫ್ಒ ಜಾಥಾಕ್ಕೆ ಹಸಿರು ನಿಶಾನೆ ನೀಡಿದ್ದಾರೆ.‌ 



ಶನಿವಾರ, ಆಗಸ್ಟ್ 10, 2024

ಸೊರಬ ಆಸ್ಪತ್ರೆ ಮೇಲ್ದರ್ಜೆಗೆ



ಸುದ್ದಿಲೈವ್/ಚಂದ್ರಗುತ್ತಿ


ಸೊರಬ ಆಸ್ಪತ್ರೆಯ ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಅಲ್ಲಿನ ಅಲ್ಲಿ ಸ್ತ್ರೀರೋಗ ತಜ್ಞರನ್ನ ನೇಮಿಸಿಕೊಳ್ಳುವ ಪ್ರಕ್ರಿಯೆಯನ್ನ‌ ಒಂದು ತಿಂಗಳ ಒಳಗೆ ಮುಗಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು‌


ಅವರು ಮಾಧ್ಯಮಗಳೊಂದಿಗೆ ಮಾತನಾಡಿ,  ಸೊರಬ ತಾಲೂಕ ಆಸ್ಪತ್ರೆಯಲ್ಲಿ ಕಳೆದ 8 ತಿಂಗಳಿಂದ ಸ್ತ್ರೀರೋಗ ತಜ್ಞೆಯ ಕೊರತೆ ಇದೆ. ಅವರ ನೇಮಕಾತಿಯನ್ನ ಒಂದು ತಿಂಗಳ ಒಳಗೆ ನಡೆಸಲಾಗುವುದು. ಇದರಜೊತೆಗೆ ಜಡೆ, ಆನವಟ್ಟಿ ಮತ್ತು ಸೊರಬ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಭರವಸೆ ನೀಡಿದರು.


ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನದಲ್ಲಿ ಸವಲತ್ತು ಕಡಿಮೆಯಿರುವದರಿಂದ ಅರಣ್ಯ ಕ್ಲಿಯರೆನ್ಸ್ ದೊರೆಯಬೇಕಿದೆ. ಕ್ಲಿಯರೆನ್ಸ್ ದೊರೆತ ನಂತರ  ಸವಲತ್ತು ಕಲ್ಪಿಸಲಾಗುತ್ತದೆ.  ಮಳಿಗೆ, ಶೌಚಾಲಯ, ಪಾರ್ಕಿಂಗ್ ನಿರ್ಮಿಸಲಾಗುತ್ತಿದೆ. ಈ ಕುರಿತು ಚಂದ್ರಗುತ್ತಿ ಇಒ, ಪ್ರವಾಸೋದ್ಯಮ, ನಡುವೆ ಸಭೆ ನಡೆಯಲಿದೆ ಎಂದರು.


ಮಳೆಯಿಂದಾಗಿ ರಸ್ತೆ ನಿರ್ಮಾಣ ಆಗಬೇಕು ಕಾಲು ಸಂಕ, ಸೇತುವೆ, ಮನೆ ಮತು ಶಾಲೆಗಳು ಮಳೆಯಿಂದ  ಹಾನಿಯಾಗಿದೆ. ಇದರಿಂದಾಗಿ  ವಾರಕ್ಕೊಮ್ಮೆ ಅಧಿಕಾರಿಗಳಿಂದ  ಪರಶೀಲನೆನಡೆಸುತ್ತಿದ್ದೇವೆ ಎಂದರು.


ಕೊಪ್ಪಳದ ಅಂಗನವಾಡಿಯೊಂದರಲ್ಲಿ ಮಕ್ಕಳಿಗೆ ಬಾಯಿಯಲ್ಲಿ ಮೊಟ್ಟೆನ್ನಿಟ್ಟು ವಾಪಾಸ್ ಪಡೆದುಕೊಳ್ಳುವ ವಿಡಿಯೋ ವೈರಲ್ ಆಗುತ್ತಿರುವ ಬಗ್ಗೆನೂ ಪ್ರತಿಕ್ರಿಯಿಸಿದ ಸಚಿವರು ಈ ಇಲಾಖೆ ನನಗೆ ಬರೊಲ್ಲ. ಆದರೆ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು. 

ವಿಸಿಬಿಲಿಟಿ ಸಮಸ್ಯೆ ಶಿವಮೊಗ್ಗ ಮಾತ್ರವಲ್ಲ ಎಲ್ಲಡೆ ಇದೆ-ಎಂಬಿಪಾ




ಸುದ್ದಿಲೈವ್/ಶಿವಮೊಗ್ಗ


ವಿಸಿಬಲಿಟಿ ಕೊರತೆಯಿಂದಾಗಿ ಶಿವಮೊಗ್ಗ ಏರ್‌ಪೋರ್ಟ್ ನಲ್ಲಿ ವಿಮಾನಗಳ ಹಾರಾಟ ರದ್ದಾಗುತ್ತಿರುವ ವಿಷಯದ ಕುರಿತು ಬೃಹತ್ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಕ್ರ ವಹಿಸುವ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರು. 


ನನಗಿರುವ ಮಾಹಿತಿ ಪ್ರಕಾರ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಗೆ ವಿಸಿಬಿಲಿಟಿಯ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ತಾಂತ್ರಿಕ ತಜ್ಞರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ವಿಸಿಬಿಲಿಟಿಯ ಸಮಸ್ಯೆ ಕೇವಲ ಶಿವಮೊಗ್ಗ ಏರ್ ಪೋರ್ಟ್ ನಲ್ಲಿ ಮಾತ್ರವಲ್ಲ, ದೇಶದ ಉಳಿದ ಏರ್ಪೋರ್ಟ್ ಗಳಲ್ಲೂ ಇದೇ ರೀತಿಯ ಸಮಸ್ಯೆ ಇದೆ ಎಂದರು. 


ವಿಸಿಬಿಲಿಟಿಯ ಸಮಸ್ಯೆ ಇದ್ದಾಗ ರಿಸ್ಕ್ ತೆಗೆದುಕೊಂಡು ಲ್ಯಾಂಡಿಂಗ್ ಅಥವಾ ಟೇಕಾಫ್ ಮಾಡಲಾಗುವುದಿಲ್ಲ. ಶಿವಮೊಗ್ಗ ಏರ್ಪೋರ್ಟ್ ನಲ್ಲಿ ಕೇವಲ ವಿಸಿಬಿಲಿಟಿಯ ಸಮಸ್ಯೆ ಅಷ್ಟೇ ಅಲ್ಲ ಇತರ ಸಮಸ್ಯೆಗಳೂ ಇದೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಬಾಕಿ ಇದೆ. ಕೆಲವೊಂದು ತಾಂತ್ರಿಕ ಸಲಕರಣೆಗಳ ಅಗತ್ಯವಿದೆ . ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು. 


ಭದ್ರಾವತಿಯ ಎಂಪಿಎಂ ಕಾರ್ಖಾನೆ ಪುನರಾರಂಭ ಕುರಿತ ವಿಷಯ


ಎಂಪಿಎಂ ಕಾರ್ಖಾನೆ ಪುನಾರಂಭದ ಸಂಬಂಧ ನಾನು ಅರಣ್ಯ ಸಚಿವ ಈಶ್ಕರ್ ಖಂಡ್ರೆ ಜೊತೆ ಚರ್ಚಿಸಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆಯನ್ನು ಸರ್ಕಾರ ನಿರ್ವಹಿಸಲು ಆಗುವುದಿಲ್ಲ. ಅದಕ್ಕಾಗಿ ಖಾಸಗಿಯವರ ಅಗತ್ಯವಿದೆ. ರಾಜ್ಯದಲ್ಲಿ ನೀಲಗಿರಿ ಮತ್ತು ಅಕೇಶಿಯಾ ಗಿಡ ಬೆಳೆಸಲು ನಿಷೇಧ ಇದೆ ಎಂದು ಸಚಿವರು ತಿಳಿಸಿದರು. 


ಹಾಗಾಗಿ ಕಾರ್ಖಾನೆಯನ್ನು ವಹಿಸಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ನಾವು ಹಾಲಿ ಕಾರ್ಖಾನೆಯ ಹೆಸರಿನಲ್ಲಿರುವ 30,000 ಹೆಕ್ಟರ್ ಪ್ರದೇಶದಲ್ಲಿರುವ ಅಕೇಶಿಯ ಮತ್ತು ನೀಲಗಿರಿ ಬಳಸಿಕೊಳ್ಳಲು ಅನುಮತಿ ಕೋರಿದ್ದೇವೆ. ಅರಣ್ಯ ಇಲಾಖೆಯ ಅನುಮತಿಯನ್ನು ಕೇಳಿದ್ದೇವೆ ಎಂದರು. 


ಕಾರ್ಖಾನೆಯ ಪುನರಾರಂಭದ ಸಂಬಂಧ ಎರಡು ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನೀಲಗಿರಿ ಮತ್ತು ಅಕೇಶಿಯಾ  ಬೆಳಸಿ ಕಾರ್ಖಾನೆಯನ್ನು ಆರಂಭಿಸಿ ಎಂದು ಕೆಲವರು ಹೇಳಿದ್ದಾರೆ. ಮತ್ತೆ ಕೆಲವರು ಇದನ್ನು ಬೆಳೆಸುವುದರಿಂದ ಅಂತರ್ಜಲ ಕುಸಿತವಾಗುತ್ತದೆ ಎಂದು ಹೇಳುತ್ತಿದ್ದಾರೆ ಈ ವಿಷಯದಲ್ಲಿ ನಮ್ಮ ಇಲಾಖೆ ಗಿಂತ ಅರಣ್ಯ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದೆ ಅವರು ಸೂಕ್ತ ನಿರ್ಧಾರ ಕೈಗೊಂಡು ತಿಳಿಸುವುದಾಗಿ ಹೇಳಿದ್ದಾರೆ ಎಂದರು. 

ಶುಕ್ರವಾರ, ಆಗಸ್ಟ್ 9, 2024

ಮೌಡ್ಯತೆ ವಿರುದ್ಧ ಜಾಗೃತಿ



ಸುದ್ದಿಲೈವ್/ಆಯನೂರು


ಮಾನವ ಬಂಧುತ್ವ ವೇದಿಕೆ ಸೊರಬವತಿಯಿಂದ ಆಯನೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮೌಢ್ಯತೆ ವಿರುದ್ಧ ಅಂಗನವಾಡಿ ಕೇಂದ್ರದ ಮಕ್ಕಳಿಗೆ ನಾಗರ ಕಲ್ಲಿಗೆ ಹಾಲನ್ನು ಎರೆಯುವದನ್ನ  ತಪ್ಪಿಸಿ ಮೂಢನಂಬಿಕೆಯ ಬಗ್ಗೆ ಅರಿವು ಮೂಡಿಸಿ ಪೌಷ್ಟಿಕ ಆಹಾರವಾದ ಹಾಲನ್ನು ಮಕ್ಕಳಿಗೆ ನೀಡಲಾಯಿತು


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನವ ಬಂಧುತ್ವ ವೇದಿಕೆ ಸೊರಬ ತಾಲೂಕು ಅಧ್ಯಕ್ಷರಾದ ರಾಜೇಶ್ ಸಿ ಕಾನಡೆ ಅವರು ವಹಿಸಿದ್ದರು ಹಾಗೂ ಆಯನೂರು  ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀಮತಿ ಲತಾ ಅವರು ಹಾಗೂ ಆಸರೆ ಮಹಿಳಾ ಸಂಘದ ಅಧ್ಯಕ್ಷರಾದ ಶಿಲ್ಪ ಆರ್ ಅವರು ಹಾಗೂ ಆಸರೆ ಸಂಘದ ಕಾರ್ಯದರ್ಶಿಯಾದ ವಿಶಾಲಾಕ್ಷಮ್ಮ ಹಾಗೂ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ನಾಗರಾಜ್ ಬಿ ಟಿ, ಹಾಗೂ ಮಾನವ ಬಂದುತ್ವ ವೇದಿಕೆ ಸೊರಬ ಹೊಸಗುಡಿಗಿನಕೊಪ್ಪದ ಗ್ರಾಮ ಸಂಚಾಲಕರಾದ 


ವೀರಭದ್ರ ಸ್ವಾಮಿ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ತನೀಕಾ ಸಮಿತಿ ಸೊರಬದ ತಾಲೂಕು ಅಧ್ಯಕ್ಷರಾದ ಲತಾ ಟಿ ಎಚ್  ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅಂಗನವಾಡಿ ಮಕ್ಕಳಿಗೆ ಹಾಲು ಬ್ರೆಡ್ ಸ್ಲೇಟ್ ಹಾಗೂ ಚಾಪೀಸ್ ನೀಡಿ ಬಸವ ಪಂಚಮಿಯನ್ನು ಆಚರಿಸಲಾಯಿತು.