ಮನವಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮನವಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಸೆಪ್ಟೆಂಬರ್ 10, 2024

ಲಾರಿ ಮತ್ತು ಬಸ್ ಟರ್ಮಿನಲ್ ನಿರ್ಮಾಣಕ್ಕೆ ಮನವಿ

 


ಸುದ್ದಿಲೈವ್/ಶಿವಮೊಗ್ಗ


ಲಾರಿ ಮತ್ತು ಬಸ್ ಟರ್ಮಿನಲ್ ಗಳಿಗೆ ಜಾಗಕೊಡಿ ಎಂದು ಒತ್ತಾಯಿಸಿ ಇಂದು ಲಾರಿ  ಮಾಲೀಕರ ಒಕ್ಕೂಟ ಹಾಗೂ ಬಸ್ ಮಾಲೀಕರ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.


ಈ ಹಿಂದೆ ಸರ್ಕಾರಿ ಜಾಗ ಇಲ್ಲದ ಕಾರಣ ಖಾಸಗಿ ಭೂಮಿಯನ್ನ‌ಬಳಸಿಕೊಂಡು ಟರ್ಕ್ ಟರ್ಮಿನಲ್ ನಿರ್ಮಿಸಲು ಯೋಜಿಸಲಾಗಿತ್ತು.  ಹೊನ್ನಾಳಿ ರಸ್ತೆಯಲ್ಲಿ ಬರುವ ಗೋಂಧಿ ಮತ್ತು ತ್ಯಾವೆರ ಚಟ್ನಹಳ್ಳಿಯಲ್ಲಿ ಜಾಗ ಗುರುತಿಸಲಾಗಿತ್ತು.


ಹೊನ್ನಾಳಿ ರಸ್ತೆ, ಬೆಂಗಳೂರು ರಸ್ತೆಯಲ್ಲಿ ಬರುವ ಯಲವಟ್ಟಿ, ಸಾಗರ ರಸ್ತೆಯಲ್ಲಿ ಲಾರಿ ಟರ್ಮಿನಲ್  ನಿರ್ಮಿಸಲು ಜಿಲ್ಲಾಧಿಕಾರಿಗಳು ಸೂಡದಿಂದ ಡಿನೋಟಿಫೈ ಮೂಲಕ ಮಾಡಲು ಯೋಚಿಸಲಾಗಿತ್ತು. ಮತ್ತೆ ಇದನ್ನ ಕೈಗೆತ್ತಿಕೊಂಡು ಲಾರಿ ಮಾಲೀಕರಿಗೆ ಮತ್ತುಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮ ಜರುಗಿಸಲು ಮನವಿಸಲ್ಲಿಸಲಾಗಿದೆ.


ಬಸ್ ಮಾಲೀಕರ ಸಂಘವೂ ಸಹ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ಥಳಾವಕಾಶ ಕಡಿಮೆಇದೆ. ಹಾಗಾಗಿ ಬಸ್ ಟರ್ಮಿನಲ್ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದ್ದಾರೆ.


ಮನವಿ ಸಲ್ಲಿಸುವ ವೇಳೆ  ಎಸ್ ಎಸ್ ಜ್ಯೋತಿ ಪ್ರಕಾಶ್ ಜಿಲ್ಲಾ ಬಸ್ ಮಾಲೀಕರ ಸಂಘದ ರಂಗಪ್ಪ, ತಲ್ಕೀನ್ ಅಹಮದ್, ಆರ್ ರುದ್ರೇಶ್ ಮೊದಲಾದವರು ಉಪಸ್ಥಿತರಿದ್ದರು

ಭಾನುವಾರ, ಸೆಪ್ಟೆಂಬರ್ 8, 2024

ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು SDPI ಜಿಲ್ಲಾಧ್ಯಕ್ಷರಾದ ಇಮ್ರಾನ್ ಮನವಿ



ಸುದ್ದಿಲೈವ್/ಶಿವಮೊಗ್ಗ


ಕಳೆದ ಎರಡು ಮೂರು ವರ್ಷಗಳಿಂದ ಶಿವಮೊಗ್ಗ ಕೋಮು ದ್ವೇಷದ ಕೋಮುವಾದಿ ಪ್ರಚೋದನೆಗೆ ಒಳಗಾಗಿ ಗಲಭೆಗಳು ನಡೆದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. 


ಹಬ್ಬಗಳು ಸೌಹಾರ್ದತೆ, ಪ್ರೀತಿ, ವಿಶ್ವಾಸದ ಸಂದೇಶ ಸಾರಬೇಕಾಗಿದೆ. ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಧರ್ಮಗಳ ಮಧ್ಯೆ ಸೌಹಾರ್ದತೆ ಪ್ರೀತಿ ವಿಶ್ವಾಸದ ಸಂದೇಶ ನೀಡುವ ಕರ್ತವ್ಯ ಪ್ರಮುಖವಾಗಿ ಯುವ ನಾಗರಿಕರು ಮಾಡಬೇಕಾದ ಅಗತ್ಯತೆ ಇದೆ.ನಮ್ಮ ಶಿವಮೊಗ್ಗವನ್ನು ರಾಜಕೀಯ ಲಾಭಕ್ಕಾಗಿ ಇಲ್ಲಿನ ಯುವಕರಿಗೆ ದ್ವೇಷದ ವಿಶ ನೀಡಿ ಅಶಾಂತಿ ಸೃಷ್ಟಿಸುತ್ತಿರುವವರು ಇದ್ದಾರೆ, ಪೊಲೀಸರು ಇವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ.


ಹಿಂದೂ ಮುಸ್ಲಿಂ ಎನ್ನುವುದಕ್ಕಿಂತ ನಾವೆಲ್ಲ ಭಾರತೀಯರು ನಾವು ಸರ್ವಜನಾಂಗದ ಶಾಂತಿಯ ತೋಟದ ಮರಗಳು ಎಂದು ಜವಾಬ್ದಾರಿಯುತ ನಾಗರೀಕರು ಅರ್ಥ ಮಾಡಿಕೊಳ್ಳಬೇಕು. ಈದ್ ಮಿಲಾದ್ ಮತ್ತು ಗಣೇಶೋತ್ಸವ ಹಬ್ಬಗಳು ಅದ್ದೂರಿಯಾಗಿ ವಿಜ್ರಂಭಣೆಯಿಂದ ಆಚರಿಸಿ ಸೌಹಾರ್ದತೆಯ ಸಂದೇಶ ನೀಡುವ ಮೂಲಕ ರಾಜ್ಯಕ್ಕೆ ಶಿವಮೊಗ್ಗ ಒಂದು ಮಾದರಿಯಾಗಿ ಮಾಡಬೇಕಾದ ಕರ್ತವ್ಯ ಸರ್ವ ನಾಗರಿಕರದ್ದು.


ಹಬ್ಬಗಳಲ್ಲಿ ಮಧ್ಯ ಪಾನ ಮಾಡಿಕೊಂಡು ವಾಹನ ಚಲಾಯಿಸುವುದು, ವೀಲೀಂಗ್ ಬೈಕ್ ಸ್ಟೆಂಟ್ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತದೆ ಇದರಿಂದ ದೂರವಿರಿ ಎಂದು ಮನವಿ ಮಾಡುತ್ತೇನೆ. ಶಿವಮೊಗ್ಗದ ಜನತೆಗೆ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು ಕೋರುತ್ತೇನೆ.

ಗುರುವಾರ, ಆಗಸ್ಟ್ 22, 2024

ದರ್ಪಮೆರೆದ ಇನ್ ಸ್ಪೆಕ್ಟರ್ ವಿರುದ್ಧ‌ ಟ್ರಸ್ಟ್ ಮತ್ತು ಸಂಘದಿಂದ ಮನವಿ



ಸುದ್ದಿಲೈವ್/ಶಿವಮೊಗ್ಗ


ತೀರ್ಥಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವಥ್ ಗೌಡ ಅವರ ಉದ್ಧಟತನ ಮತ್ತು ಅಮಾನತ್ತಿಗೆ ಆಗ್ರಹಿಸಿ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಎಸ್ಪಿ ಮತ್ತು ಡಿಸಿ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ಮನವಿ ಸಲ್ಲಿಸಿತು.


ತೀರ್ಥಹಳ್ಳಿಯಲ್ಲಿ  ಪ್ರಜಾವಾಣಿ ವರದಿಗಾರ ನಿರಂಜನ್ ಅವರು ವರದಿಗಾಗಿ ರಥಬೀದಿಯಲ್ಲಿ ಪೋಟೋ, ವಿಡಿಯೋ ತೆಗೆಯುವಾಗ ಇಲ್ಲಿನ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವಥ್ ಗೌಡ ಬಲವಂತವಾಗಿ ಪತ್ರಕರ್ತ ನಿರಂಜನ್ ಅವರಿಂದ ಮೊಬೈಲ್ ಕಿತ್ತುಕೊಂಡು ಠಾಣೆಗೆ ಹೋಗಿರುತ್ತಾರೆ. 


ಮೊಬೈಲ್ ಪಡೆಯಲು ಠಾಣೆಗೆ ಹೋದ ನಿರಂಜನ್ ಅವರನ್ನು    ಇನ್್ಸಪೆಕ್ಟರ್ ಅಶ್ವಥ್ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.  ಇದನ್ನು ಪ್ರಶ್ನಿಸಿದ ಇತರೆ ಪತ್ರಕರ್ತರ ಜೊತೆಗೂ ಉದ್ದಟತನದಿಂದ ವರ್ತಿಸಿದ್ದಾರೆ.


ವೃತ್ತ ನಿರೀಕ್ಷಕರ ವರ್ತನೆ ಖಂಡನೀಯ,  ಸುಳ್ಳು ಕೇಸು ಹಾಕುವುದಾಗಿ ಪತ್ರಕರ್ತರನ್ನೆ ಬೆದರಿಸುವ ಈ ಪೊಲೀಸ್ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಸ್ಪಷ್ಡವಾಗಿದೆ.  ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ದ ಹರಣ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯ ಈ ವರ್ತನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ.


ಪೊಲೀಸ್ ಅಧಿಕಾರಿ ಅಶ್ವಥ್ ಗೌಡ ಅವರನ್ನು ಈ ಕೂಡಲೆ ಅಮಾನತ್ತುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.