ಭದ್ರಾವತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭದ್ರಾವತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಸೆಪ್ಟೆಂಬರ್ 17, 2024

ಭದ್ರಾವತಿಯ ಮಸ್ಜಿದ್ ಎ ಚೌಕ್ ಚುನಾವಣೆಯಲ್ಲಿ ಕೊಂಚ ಬದಲಾವಣೆ-ಚುನಾವಣೆ ಅಧಿಕಾರಿ ಸೈಯ್ಯದ್ ಮೆಹತಾಬ್ ಸರ್ವರ್‌ರಿಂದ ಆದೇಶ



ಸುದ್ದಿಲೈವ್/ಭದ್ರಾವತಿ


ಇಲ್ಲಿನ ಟಿ.ಕೆ ರಸ್ತೆಯಲ್ಲಿರುವ ಮಸ್ಜಿದ್-ಎ-ಚೌಕ್‌ಗೆ 11 ಜನ  ವ್ಯವಸ್ಥಾಪನ ಸಮಿತಿಯ ಸದಸ್ಯರನ್ನ ಚುನಾಯಿಸಲು ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಯನ್ನ ತಂದು ವಕ್ಫ್ ಸಮಿತಿಯ ಅಧಿಕಾರಿಯಾಗಿರುವ ಸೈಯ್ಯದ್ ಮೆಹತಾಬ್ ಸರ್ವರ್ ಅದೇಶಿಸಿದ್ದಾರೆ.


ಇಷ್ಟು ದಿನ ನಾಮಪತ್ರ ಸಲ್ಲಿಕೆ ಪಡೆಯುವುದನ್ನ ಶಿವಮೊಗ್ಗದ ಮುಸ್ಲೀಂ ಹಾಸ್ಟೆಲ್ ನಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಈಗ ಚುನಾವಣೆ ಅಧಿಕಾರಿ ಸೈಯ್ಯದ್ ಮೆಹತಾಬ್ ಸರ್ವರ್ ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ನಾಮತ್ರ ಪಡೆಯಲು, ನಾಮಪತ್ರ ಸಲ್ಲಿಸುವುದು ಪರಿಷ್ಕರಣೆ, ಅಭ್ಯರ್ಥಿಗಳಿಗೆ ಚಿಹ್ನೆ ಪ್ರಕಟಿಸುವುದನ್ನ  ಭದ್ರಾವತಿಯ ಟಿ.ಕೆ ರಸ್ತೆಯಲ್ಲಿರುವ ಮಸ್ಜಿದ್-ಎ-ಚೌಕ್‌ನಲ್ಲಿಯೇ ಪಡೆಯಲು ಅವಕಾಶ ಕಲ್ಪಿಸಿದ್ದಾರೆ. ಸೆ.26 ರಂದು ನಾಮಪತ್ರ ಮಧ್ಯಾಹ್ನ 2 ಗಂಟೆಯ ವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 


ಚುನಾವಣೆ ಅಧಿಸೂಚನೆ ಪ್ರಕಟಣೆ ಇಂದಿನಿಂದ ಹೊರಡಿಸಲಾಗಿದೆ‌.  ನಾಮಪತ್ರ ಪಡೆಯಲು ಮತ್ತು ಸಲ್ಲಿಸಲು ಸೆ.19 ರಿಂದ ಸೆ.26 ರ ವರೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ( ಸರ್ಕಾರಿ ರಜೆ ಹೊರತುಪಡಿಸಿ) ನಡೆಯಲಿದ್ದು ಭರ್ತಿ ಮಾಡಿದ ನಾಮಪತ್ರವನ್ನ ಸೆ.26 ರಂದು ಮಧ್ಯಾಹ್ನ 2 ಗಂಟೆಯ ಒಳಗೆ ಸಲ್ಲಿಸಬಹುದಾಗಿದೆ.  ಸೆ.30 ರಂದುವನಾಮಪತ್ರ ಪರಿಷ್ಕರಣೆ ನಡೆಯಲಿದೆ. 


ಚುನಾವಣೆ ಸ್ಪರ್ಧಿಸುವ ಅರ್ಹ ಅಭ್ಯರ್ಥಿಗಳ ಪಟ್ಟಿಪ್ರಕಟಣೆ ಮತ್ತು ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಅ.01 ರವರೆಗೆ ಅವಕಾಶ ಕಲ್ಪಿಸಲಾಗಿದೆ. ಅ.03 ರಂದು ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಅ.04 ರಂದು ಮದ್ಯಾಹ್ನದ 2 ಗಂಟೆಯ ಒಳಗೆ ಅಭ್ಯರ್ಥಿಗಳ ಚಿಹ್ನೆ ಹಂಚಲಾಗುತ್ತದೆ. 


ಅ.13 ರಂದು ಭಾನುವಾರ ಭದ್ರಾವತಿಯ ಬೈಪಾಸ್ ರಸ್ತೆಯಲ್ಲಿರುವ ಅಲ್ ಮೆಹಮೂದ್ ತಾಜ್ ಶಿಕ್ಷಣ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ರವರೆಗೆ ಮತದಾನ ನಡೆಯಲಿದೆ. ಅಂದು ಸಂಜೆ 4 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ನಂತರ ಫಲಿತಾಂಶ ಪ್ರಕಟಿಸಲಾಗುವುದು.

ಭಾನುವಾರ, ಸೆಪ್ಟೆಂಬರ್ 15, 2024

ಭದ್ರಾವತಿಯ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ



ಸುದ್ದಿಲೈವ್/ಭದ್ರಾವತಿ


ಭದ್ರಾವತಿಯ 52 ನೇ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆ ಇಂದು ನಡೆದಿದೆ. ವಿಸರ್ಜನಾ ಮೆರವಣಿಗೆಯನ್ನ ಮಧ್ಯಾಹ್ನದ ವೇಳೆ ಚಾಲನೆ ದೊರೆತಿದೆ. 


ಹೊಸಮನೆಯಲ್ಲಿರುವ ಈ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ಶಾಸಕರ ಸಹೋದರ ಶಿವಕುಮಾರ್, ಪುತ್ರರು, ಕೆಂಚನಹಳ್ಳಿ ಕುಮಾರ ಮೊದಲಾದವರು ಚಾಲನೆ ನೀಡಿದರು. 



ಹೊಸಮನೆಯಿಂದ ಹೊರಟ ಮೆರವಣಿಗೆ ರಂಗಪ್ಪ ಸರ್ಕಲ್, ಮಾಧವಾಚಾರ್ ಸರ್ಕಲ್, ಬಸ್‌ಸ್ಟ್ಯಾಂಡ್ ಹುತ್ತಕಾಲೋನಿ, ನಂತರ ವಾಪಾಸ್ ಆಗಿ ಗಾಂಧಿಸರ್ಕಲ್ ಹಾಗೂ ತರೀಕೆರೆ ರಸ್ತೆಗೆ ಬಂದು ಭದ್ರ ನದಿಗೆ ಗಣಪತಿಯನ್ನ ವಿಸರ್ಜಿಸಲಾಗುತ್ತದೆ. 

ಶನಿವಾರ, ಸೆಪ್ಟೆಂಬರ್ 14, 2024

ಇಂದು ಭದ್ರಾವತಿಯಲ್ಲಿ ಕೆಲವೆಡೆ ವಿದ್ಯುತ್ ವ್ಯತ್ಯಯ



ಸುದ್ದಿಲೈವ್/ಭದ್ರಾವತಿ


ನಗರದ ಸೀಗೆಬಾಗಿ 60/11 ಕೆವಿ ವಿದ್ಯುತ್ ವಿತರಣಾಕೇಂದ್ರದಲ್ಲಿ ಅಭಿವೃದ್ಧಿ ಕಾಮಗಾರಿ ಹಮ್ಮಿ ಕೊಂಡಿದ್ದು ಸೆ: 14 ರ ನಾಳೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಘಟಕ -2 ಮತ್ತು ಘಟಕ-4 ರ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯೆಯ ವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.


ಹಳೇನಗರ ತಾಲ್ಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ, ಕಂಚಿ ಬಾಗಿಲು, ಹಳ್ಳದಮ್ಮ ಬೀದಿ, ಖಾಜಿಮೊಹಲ್ಲಾ, ಭೂತನಗುಡಿ, ಹೊಸಮನೆ, ಎಸ್.ಎಂ.ಸಿ. ರಸ್ತೆ, ಭೋವಿ ಕಾಲೋನಿ, ಸಂತೆ ಮೈದಾನ, ಕೇಶವಪುರ, ಸಾಯಿನಗರ, ಶಿವಾಜಿ ವೃತ್ತ, ಹನುಮಂತ ನಗರ, ತಮ್ಮಣ್ಣ ಕಾಲೋನಿ, ಸುಭಾಷ್ ನಗರ, ವಿಜಯ ನಗರ, ಕುವೆಂಪುನಗರ, ನೃಪತುಂಗ ನಗರ ಸೀಗೇಬಾಗಿ, ಹಳೇ ಸೀಗೆಬಾಗಿ, ಅಶ್ವತ್ಥನಗರ, ಭದ್ರಾಕಾಲೋನಿ, ಕಣಕಟ್ಟೆ, ಚೆನ್ನಗಿರಿರಸ್ತೆ, ಗೌರಾಪುರ, ಕೃ.ಉ.ಮಾ.ಸ(ಎ.ಪಿ.ಎಮ್.ಸಿ),



ಗಾಂಧಿ ವೃತ್ತ, ಕೋಡಿಹಳ್ಳಿ, ಹೊಸ ಸೇತುವೆ ರಸ್ತೆ, ಸಿದ್ದಾರೂಢನಗರ, ಶಂಕರಮಠ, ಕನಕನಗರ ಸ್ಮಶಾನ ಪ್ರದೇಶ, ಹೊಳೆ ಹೊನ್ನೂರು ರಸ್ತೆ, ಖಲಂದರ್ ನಗರ, ಜಟ್ ಪಟ್ ನಗರ, ಅನ್ವರ್ ಕಾಲೋನಿ, ಮೊಮಿನ್ ಮೊಹಲ್ಲಾ, ಅಮೀರ್ ಜಾನ್ ಕಾಲೋನಿ, ಮಜ್ಜಿಗೇನಹಳ್ಳಿ, ಗೌಡರಹಳ್ಳಿ, ಬಾಬಳ್ಳಿ, ವೀರಾಮಠ, ಶ್ರೀರಾಮನಗರ, ಲಕ್ಷ್ಮೀಪುರ ಮುಂತಾದೆಡೆ ವಿದ್ಯುತ್ ವ್ಯತ್ಯೆಯ ವಾಗಲಿದ್ದು, ಗ್ರಾಹಕರು ಸಹಕರಿಸಲು ಕೋರಿದೆ.

ಸೋಮವಾರ, ಸೆಪ್ಟೆಂಬರ್ 2, 2024

ಭದ್ರಾವತಿಯ ಬಿಜೆಪಿ ನಗರಸಭಾ ಸದಸ್ಯರು ಪಕ್ಷದಿಂದ ಉಚ್ಚಾಟನೆ



 ಸುದ್ದಿಲೈವ್/ಶಿವಮೊಗ್ಗ


ಗಂಭೀರ ಬೆಳವಣಿಗೆಯೊಂದರಲ್ಲಿ ಭದ್ರಾವತಿ ನಗರ ಸಭೆ ಬಿಜೆಪಿ ಸದಸ್ಯರನ್ನ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಉಚ್ಚಾಟಿಸಿ ಆದೇಶಿಸಿದ್ದಾರೆ. 


ದಿನಾಂಕ : 26.08.2024 ರ ಸೋಮವಾರದಂದು ಭದ್ರಾವತಿಯ ನಗರಸಭಾ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾಹವಹಿಸಿ ಮತ ಚಲಾವಣೆ ಮಾಡಲು ಪಕ್ಷ  ವಿಪ್ ಜಾರಿಗಿಳಿಸಲಾಗಿತ್ತು. ಆದರೆ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಗೈರು ಹಾಜರಾಗಿದ್ದರು. 


ಚುನಾವಣೆಗೆ ಹಾಜರಾಗದೆ ವಿಪ್ ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ನಗರಸಭಾ ಸದಸ್ಯರುಗಳಾದ  ವಿ ಕದಿರೇಶ್,  ಅನಿತಾ ಮಲ್ಲೇಶ್ ಮತ್ತು  ಶಶಿಕಲಾ ನಾರಾಯಣಪ್ಪ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 06 ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ.

ಭದ್ರಾವತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್ ಹಾಕಿ-7 ದಿನಗಳಕಾಲ ಗಡುವು ನೀಡಿದ ಭದ್ರಾವತಿ ಹಿತರಕ್ಷಣ ವೇದಿಕೆ




ಸುದ್ದಿಲೈವ್/ಶಿವಮೊಗ್ಗ

ಭದ್ರಾವತಿ ತಾಲೂಕಿನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ಸಂಪೂರ್ಣ ಮಟ್ಟ ಹಾಕಲು 7 ದಿನಗಳ ಗಡುವು ನೀಡಿದ ಭದ್ರಾವತಿ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು.


 ಈ ದಿನ ಬೆಳಗ್ಗೆ ಭದ್ರಾವತಿಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸುವ ಮೂಲಕ ಕಾರ್ಯಕರ್ತರು ಕೈಗಳಿಗೆ ಕಂಕಣವನ್ನು ಕಟ್ಟಿ ಭದ್ರಾವತಿ ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸುವ ಪಣತೊಟ್ಟಿದ್ದಾರೆ. 


ಅಲ್ಲದೆ ಮುಂದುವರೆದು ಈ ದಿನ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೂ ಮತ್ತು ಜಿಲ್ಲಾಧಿಕಾರಿಗಳಿಗೂ ಆಗ್ರಹ ಪತ್ರವನ್ನು ನೀಡಿ,  ಭದ್ರಾವತಿ ತಾಲೂಕಿನಲ್ಲಿ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿದೆ. ಉಕ್ಕಿನ ನಗರಿ ಎಂದು ಪ್ರಸಿದ್ದಿ ಯಾಗಿದ್ದ ಭದ್ರಾವತಿ ನಗರವು ಅಕ್ರಮ ಕಾನೂನುಬಾಹಿರ ಚಟುವಟಿಕೆಗಾರರ ಅಡಗು ತಾಣವಾಗಿದೆ. ಭದ್ರಾವತಿ ಮತ್ತು ಸುತ್ತಮುತ್ತಲಿನ ಭದ್ರಾವತಿ ತಾಲೂಕಿಗೆ ಸಂಬಂಧಪಟ್ಟ ಹಳ್ಳಿಗಳಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ದಿನನಿತ್ಯದ ಬಳಕೆಯ ಹಾಲು ತರಕಾರಿ ಕೈಗೆಟುಕುವಂತೆ, ಓಸಿ ಮಟ್ಕಾ ಬರೆಯುವವರು ಸಹ ಸಿಗುತ್ತಿದ್ದಾರೆ. ಎಂದರೆ ಎಷ್ಟು ಬಿಗಿ ಕಾನೂನಿನ ವ್ಯವಸ್ಥೆ ಭದ್ರಾವತಿಯಲ್ಲಿ ಇದೆ ಎಂದು ವೇದಿಕೆ ಆರೋಪಿಸದೆ.  



ಭದ್ರಾವತಿಯ ಬಹುತೇಕ ಕಡೆಗಳಲ್ಲಿ ಇಸ್ಪೀಟ್ ದಂಧೆಯು ಜೋರಾಗಿ ನಡೆಯುತ್ತಿದೆ. ನಂಜಾಪುರ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ, ಉಬ್ರಾಣಿ ರಸ್ತೆಯ ಅರಣ್ಯ ಭಾಗದಲ್ಲಿ, ದಾನವಾಡಿ ಮತ್ತು ಕಲ್ಲಾಪುರ ಭಾಗಕ್ಕೆ ಸೇರಿದ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮತ್ತು ಮುಂತಾದ ಸ್ಥಳಗಳಲ್ಲಿ ಇಸ್ಪೀಟ್ ದಂಧೆಯು ನಡೆಯುತ್ತಿದ್ದು. ಕೆಲವು ಅಧಿಕಾರಿಗಳು ಇಸ್ಪೀಟ್ ದಂಧೆ ನಿಂತಿದೆ ಎಂದು ಹೇಳಿದರು ಸಹ ನೆಪ ಮಾತ್ರಕ್ಕೆ ಹೇಳಿಕೆಯಾಗಿದೆ ಹೊರತು ಭದ್ರಾವತಿಯಲ್ಲಿ ಇಸ್ಪೀಟ್ ದಂಧೆ ನಿಲ್ಲುತ್ತಿಲ್ಲ. 


ಬೇರೆ ಬೇರೆ ಜಿಲ್ಲೆಗಳಿಂದ ಬಂದು ಭದ್ರಾವತಿಯ ಅರಣ್ಯ ಭಾಗಗಳಲ್ಲಿ ಇಸ್ಪೀಟ್ ಆಡುವ ಮಟ್ಟಿಗೆ ಭದ್ರಾವತಿಯಲ್ಲಿ ಇಸ್ಪೀಟ್ ದಂದೆ ಬೆಳೆದು ನಿಂತಿದೆ. ಇಸ್ಪೀಟ್ ದಂಧೆಯಲ್ಲಿ ಸಾಲ ಮಾಡಿಕೊಂಡು ಜೀವವನ್ನು ಕಂಠಿ ಎಂಬ ವ್ಯಕ್ತಿ ಕಳೆದುಕೊಂಡಿರುವ ಪ್ರಕರಣವು ಸಹ ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹಲವಾರು ಯುವಕರು ಆನ್ಸೆನ್ ಗೇಮ್ನಲ್ಲಿ ಹಣ ಕಳೆದುಕೊಂಡು ಬದುಕನ್ನು ತೊರೆಯುವ ಮಟ್ಟಿಗೆ ಪರಿಸ್ಥಿತಿ ಎದ್ದು ನಿಂತಿದೆ. 


ಭದ್ರಾವತಿಯಲ್ಲಿ ಗಾಂಜಾ ದಂಧೆಯೂ ಸಹ ಹೇರಳವಾಗಿ ನಡೆಯುತ್ತಿದ್ದು. ಬಹುತೇಕ ಯುವಕರು ಗಾಂಜಾ ಸೇವನೆಗೆ ತುತ್ತಾಗಿದ್ದಾರೆ. ಹಲವಾರು ಪ್ರಕರಣಗಳು ದಾಖಲಾದರೂ ಸಹ ಗಾಂಜಾ ಸೇದುವ ಯುವಕರ ಗುಂಪು ಕಡಿಮೆ ಆಗಿಲ್ಲ. ವಾರದ ಬಡ್ಡಿಗೆ ಹಣವನ್ನು ಪಡೆದು ಜೂಜಾಟಕ್ಕೆ ಯುವಕರು ಮುಗಿಬಿದ್ದು ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. 


ಸದರಿ ವಿಚಾರಗಳಂತೆ ಭದ್ರಾವತಿಯ ಯುವ ಪೀಳಿಗೆಯು ಬಹುತೇಕ ದಾರಿ ತಪ್ಪುತಿದ್ದು. ಯುವಕನರನ್ನು ಹೆತ್ತ ತಂದೆ ತಾಯಿಯಂದಿರ ಜೀವನ ಚಿಂತಾ ಜನಕವಾಗಿದೆ. ಈ ಕೂಡಲೇ ತಾವುಗಳು ಗಮನ ಹರಿಸಿ ಸಂಬಂಧ ಪಟ್ಟ ಇಲಾಖೆಗೆ ಕಠಿಣ ಕಾನೂನು ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಭದ್ರಾವತಿ ತಾಲೂಕಿನಲ್ಲಿ ಸಂಪೂರ್ಣ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳು ನಿಲ್ಲಿಸಲು ಮುಂದಾಗ ಬೇಕೆಂದು ತಮ್ಮಲ್ಲಿ ವೇದಿಕೆ ಎಸ್ಪಿ ಮತ್ತು ಡಿಸಿಗೆ ನೀಡಿದ ಮನವಿಯಲ್ಲಿ ವಿನಂತಿಸಲಾಗಿದೆ.‌ 


ಮುಂದಿನ ಏಳು ದಿನಗಳಲ್ಲಿ ಭದ್ರಾವತಿ ತಾಲೂಕಿನಲ್ಲಿ ಅಕ್ರಮ ಕಾನೂನುಬಾಹಿರ ಚಟುವಟಿಕೆಗಳು ನಿಲ್ಲದೆ ಹೋದರೆ ಮುಂದಿನ ಪೀಳಿಗೆಗೆ ಸುಭದ್ರ ಭದ್ರಾವತಿಯನ್ನು ನೀಡುವ ನಿಟ್ಟಿನಲ್ಲಿ ಭದ್ರಾವತಿ ಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರೆ ಅಕ್ರಮ ಚಟುವಟಿಕೆಗಳು ನಡೆಯುವ ಸ್ಥಳ ದಲ್ಲೇ ನಿಂತು ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಾನೂನಾತ್ಮಕವಾಗಿ ಸಂಬಂಧಪಟ್ಟ ಇಲಾಖೆಯವರನ್ನು ಸ್ಥಳಕ್ಕೆ ಕಲರೆಸಿ ಹೋರಾಟ ನಡೆಸಲಾಗುತ್ತದೆ ಎಂದು ಆಗ್ರಹಿಸಲಾಗಿದೆ.


 ಇದೇ ಸಮಯದಲ್ಲಿ ಭದ್ರಾವತಿ ಹಿತ ರಕ್ಷಣ ವೇದಿಕೆ ಅಧ್ಯಕ್ಷರಾದ ಯೇಸುಕುಮಾರ್  ಮತ್ತು ಉಪಾಧ್ಯಕ್ಷರಾದ ತೀರ್ಥೇಶ್, ಭರತ್ ಕುಮಾರ್,  ಸಾಮಾಜಿಕ ಹೋರಾಟಗಾರರಾದ ದೇವರಾಜ್ ಅರಳಿಹಳ್ಳಿ, ಪ್ರಸನ್ನ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

ಸೋಮವಾರ, ಆಗಸ್ಟ್ 26, 2024

ಭದ್ರಾವತಿ-ನಗರ ಸಭೆ ಉಪಾಧ್ಯಕ್ಷರಾಗಿ ಮಣಿ ಆಯ್ಕೆ



ಸುದ್ದಿಲೈವ್/ಭದ್ರಾವತಿ


ಭದ್ರಾವತಿಯ ನಗರ ಸಭೆ ಉಪಾಧ್ಯಕ್ಷರ ಆಯ್ಕೆ ನಡೆದಿದೆ. ಅಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟವಾಗುವವರೆಗೂ ಮುಂದೂಡಲ್ಪಟ್ಟಿದ್ದು, ಇದರ ನಡುವೆ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದೆ. 


ಇಂದು ಭದ್ರಾವತಿಯ ನಗರ ಸಭೆಯ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಸದಸ್ಯರಿಬ್ಬರೂ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಿಂದ ಮಣಿ ಸ್ಪರ್ಧಿಸಿದ್ದರೆ, ಜೆಡಿಎಸ್ ನಿಂದ ಕವಿತಾ ಉಮೇಶ್ ಕಣದಲ್ಲಿದ್ದರು‌.


ಶಾಸಕರ ಬೆಂಬಲದೊಂದಿಗೆ 11 ನೇ ವಾರ್ಡ್ ನ ಕಾಂಗ್ರಸ್ ನ ಸದಸ್ಯ  ಮಣಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದರು. 19 ಮತಗಳನ್ನ ಪಡೆದ ಮಣಿ ಉಪಾಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ. 


ಇವರ ಪ್ರತಿಸ್ಪರ್ಧಿಯಾಗಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಕವಿತಾ ಉಮೇಶ್ 14 ಮತ ಪಡೆದು ಪರಾಜಿತರಾದರು. ಮೂರು ಜನ ಬಿಜೆಪಿ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಗೈರಾಗಿದ್ದರು. ಚುನಾವಣೆ ಅಧಿಕಾರಿಯಾಗಿ ಸತ್ಯನಾರಾಯಣ್ ಕರ್ತವ್ಯ ನಿರ್ವಹಿಸಿದ್ದರು. 


ಪೌರಾಯುಕ್ತ ಪ್ರಕಾಶ್ ಚೆನ್ನಣ್ಣನವರ್, ಅವರ ಸಮ್ಮುಖದಲ್ಲಿ ಚುನಾವಣೆ ನಡೆದಿದೆ.  ಒಟ್ಟು 35 ಸದಸ್ಯರಿದ್ದ ನಗರ ಸಭೆಯಲ್ಲಿ ಶಾಸಕರ ಮತಗಳು ಸೇರಿ 36 ಸದಸ್ಯರನ್ನ ಹೊಂದಿದೆ. 36 ಜನ ಸದಸ್ಯರಲ್ಲಿ 19 ಜನ ಕಾಂಗ್ರೆಸ್ ಪರ ಮತ ಚಲಾಯಿಸಿದರೆ, ಬಿಜೆಪಿಯ ಮೂವರು ಸದಸ್ಯರ ಗೈರು ಹಾಜರಿಯಾಗಿದ್ದರು. ಜೆಡಿಎಸ್ ನಿಂದ 14 ಜನ ಮತ ಚಲಾಯಿಸಿದ್ದರು. ಅದ್ಯಕ್ಷ ಕೆಟಗಾರಿ ಘೋಷಣೆ ಆಗದ  ಕಾರಣ ಅದರ ಆಯ್ಕೆಯನ್ನ ಮುಂದಕ್ಕೆ ಹಾಕಲಾಗಿದೆ. 

ಭಾನುವಾರ, ಆಗಸ್ಟ್ 25, 2024

ಒಂದು ಗಾಂಜಾ ಪ್ರಕರಣ-ಇಡೀ ಆರೋಗ್ಯ ಇಲಾಖೆಯ ಗುಟ್ಟನ್ನೇ ಬಿಚ್ಚಿಟ್ಟಿತು!




ಸುದ್ದಿಲೈವ್/ಭದ್ರಾವತಿ


ತಾಲೂಕಿನ ಅರಹಳ್ಳಿಯಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರಲ್ಲಿ ಇಬ್ಬರು ಬಂಧನಕ್ಕೊಳಗಾಗಿದ್ದಾರೆ. ಗ್ರಾಮದಲ್ಲಿ ಗಾಂಜಾ ಸೇವಿಸುತ್ತಿದ್ದ ಮೂವರು ಯುವಕರಲ್ಲಿ ಇಬ್ಬರನ್ನ ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 



ಅರಹಳ್ಳಿಯಲ್ಲಿ ಮೂವರು ಯುವಕರು ಗಾಂಜಾ ಸೇವಿಸಿತ್ತಿರುವುದನ್ನ ಗಮನಿಸಿದ ಗ್ರಾಮಸ್ಥರು 112 ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಒಬ್ಬರನ್ನ ಹಿಡಿದ್ದಾರೆ. ಇಬ್ಬರು ತಪ್ಪಿಸಿಕೊಂಡಿದ್ದಾರೆ. ಇಬ್ಬರಲ್ಲಿ ಒಬ್ಬರನ್ನ ಗ್ರಾಮಸ್ಥರು ಹಿಡಿದು ಮತ್ತೆ ಪೊಲೀಸರಿಗೆ ನೀಡಿದ್ದಾರೆ. ಇದಲ್ಲಿ ಜಬೀ (19) ಎಂಬ ಯುವಕನಲ್ಲಿ ಗಾಂಜಾ ಪಾಸಿಟಿವ್ ಬಂದಿದೆ. 


ಅನ್ವರ್ ಕಾಲೋನಿಯ ಮೊಹಮದ್ ಜಬೀಗೆ ಗಾಂಜಾ ಪಾಸಿಟಿವ್ ಬಂದಿದೆ. ಅಣ್ಣನಗರದ ಸಂಜಯ್(19), ಮತ್ತೀರ್ವ ಓಡಿಹೋಗಿದ್ದಾನೆ. 


ಮೆಗ್ಗಾನ್ ಮತ್ತು ಭದ್ರಾವತಿ ಅಸ್ಪತ್ರೆಗಳಲ್ಲಿ ಕಿಟ್ ಖಾಲಿಯಾಗಿದೆಯಾ?


ಗಾಂಜಾ ಸೇವಿಸಿದವರನ್ನ ಪತ್ತೆಹಚ್ಚುವ ಕಿಟ್ ಖಾಲಿಯಾಗಿದೆಯಾ ಎಂಬ ಅನುಮಾನಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕರೆದುಕೊಂಡು ಹೋಗಿದ್ದಾರೆ. ಕಿಟ್ ಖಾಲಿಯಾಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ. 


ಸರಿ ಎಂದು ಮೆಗ್ಗಾನ್ ಗೆ ಇಬ್ಬರು ಯುವಕರನ್ನ ಕರೆದುಕೊಂಡು ಬಂದಿದ್ದಾರೆ. ಇಬ್ಬರಲ್ಲಿ ಒಬ್ಬನಿಗೆ ಪರೀಕ್ಷಿಸಲಾಗಿದೆ. ಒಬ್ಬನಿಗೆ ಪಾಸಿಟಿವ್ ಬಂದಿದೆ. ಇನ್ನೊಬ್ಬನಿಗೆ ಪರೀಕ್ಷಿಸಲು ಕಿಟ್ ಖಾಲಿಯಾಗಿದೆ.


ಈ ಬಗ್ಗೆ ಸುದ್ದಿಲೈವ್ ಗೆ ಮಾಹಿತಿ ನೀಡಿದ ಜಿಲ್ಲಾ ಸರ್ಜನ್ ಡಾ.ಸಿದ್ಷನಗೌಡ, ಗಾಂಜಾ ಪತ್ತೆಹಚ್ಚುವ ಕಿಟ್ ಡಾ.ರಾಜೇಶ್ ಸುರಗೀಹಳ್ಳಿಯವರು 2000 ಸಾವಿರ ಕಿಟ್ ಕೊಟ್ಟಿದ್ದರು. 2000 ಕಿಟ್ ಗಳು ಖಾಲಿಯಾಗಿವೆ. ವಾರಕ್ಕೆ 4-5 ಜನರಿಗೆ ಮೆಗ್ಗಾನ್ ನಲ್ಲಿ ಕಿಟ್ ಖಾಲಿಯಾಗುತ್ತದೆ ಎಂದರು. 


ಗಾಂಜಾ ಪತ್ತೆ ಮಾಡುವ ಕಿಟ್ ನ್ನ  ಮೆಡಿಸಿನ್ ನಲ್ಲಿ ತರಿಸಿಕೊಳ್ಳಲು ಅವಕಾಶವಿಲ್ಲ. ಇದನ್ನ ಜಿಲ್ಲಾ ಆರೋಗ್ಯ ಇಲಾಖೆ ತರಸಿಕೊಡಬೇಕು. ಇಲ್ಲಾ ಪೊಲೀಸ್ ಇಲಾಖೆ ಕೊಡಬೇಕು. ಒಬ್ಬನಿಗೆ ಗಾಂಜಾ ಪತ್ತೆ ಮಾಡಲು 350-400 ಖರ್ಚಾಗಲಿದೆ. ಈಗಿನ ಡಿಹೆಚ್ ಒ ಅವರು ಒಂದು ಕಿಟ್ ನ್ನೂ ಮೆಗ್ಗಾನ್ ಗೆ ಕೊಡಿಸಿಲ್ಲ ಎಂಬ ಮಾತು ಕೇಳಿ ಬಂದಿದೆ. ಇನ್ನು ಇದಕ್ಕೆ ಹೇಗೆ ಪರಿಹಾರ ಸಿಗಲಿದೆ ಕಾದು ನೋಡಬೇಕು.  

ಶನಿವಾರ, ಆಗಸ್ಟ್ 24, 2024

ಆನ್ ಲೈನ್ ಇನ್ ವೆಸ್ಟ್ ಮೆಂಟ್-ಯುವಕ ಆತ್ಮಹತ್ಯೆ




ಸುದ್ದಿಲೈವ್/ಭದ್ರಾವತಿ


ಭದ್ರಾವತಿಯಲ್ಲಿ ಸಾಲು ಸಾಲು ಆತ್ಮಹತ್ಯೆ ಮುಂದುವರೆದಿದೆ. ಮೊನ್ನೆ ಅಪ್ಪ ಮಾಡಿದ ಸಾಲಕ್ಕೆ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಸಿದ ಬೆನ್ನಲ್ಲೇ ಪೇಪರ್ ಟೌನ್ ನಡೆದಿದೆ.


ಪೇಪರ್ ಟೌನ್ 6 ನೇ ನಿವಾಸಿ ಪ್ರದೀಪ್ ಸುಮಾರು 27 ವರ್ಷ ಯುವಕ ಆನ್ ಲೈನ್  ನಲ್ಲಿ ಹಣತೊಡಗಿಸಿ ಕೈಸುಟ್ಟಿಕೊಂಡ ಪರಿಣಾಮ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. 


ಆನ್ ಲೈನ್ ಇನ್ ವೆಸ್ಟ್ ಮೆಂಟ್ ಗಾಗಿ ಸುಮಾರು 1.5 ಲಕ್ಷ ರೂ. ಇನ್‌ವೆಸ್ಟ್ ಮೆಂಟ್ ಮಾಡಿದ್ದ ಪ್ರದೀಪ್ ಇಷ್ಟು ಹಣವನ್ನ ಸಾಲ ಮಾಡಿ ಹಣ ಹೂಡಿಕೆ ಮಾಡಿದ್ದನು. ಮಾಚೇನಹಳ್ಳಿಯ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದ ಪ್ರದೀಪ್ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾನೆ. 


ಮೊನ್ನೆ ಸ್ಟೀವನ್ ಎಂಬ ಯುವಕ ಅಪ್ಪ ಮಾಡಿಕೊಂಡ ಸಾಲಕ್ಕೆ ಉತ್ತರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದ. ನಿನ್ನೆ ಪ್ರದೀಪ್ ಕನಸುಕಟ್ಟಿಕೊಂಡು ಇನ್ ವೆಸ್ಟ್ ಮೆಂಟ್ ಮಾಡಿದ್ದ. ಕನಸು ಕೈಕೊಟ್ಟ ಪರಿಣಾಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. 

ಶುಕ್ರವಾರ, ಆಗಸ್ಟ್ 23, 2024

ಆ.25 ರಂದು ಶಿವಮೊಗ್ಗ-ಭದ್ರಾವತಿಯಲ್ಲಿ ವಿದ್ಯುತ್ ವ್ಯತ್ಯಯ



ಸುದ್ದಿಲೈವ್/ಭದ್ರಾವತಿ/ಶಿವಮೊಗ್ಗ


ಆಗಸ್ಟ್ 25 ರಂದು ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. 


ಮೆಸ್ಕಾಂ ಗ್ರಾಮಂತರ/ ನಗರ ಉಪವಿಭಾಗ  ದಲ್ಲಿ ವ್ಯವಸ್ಥೆ ಸುಧಾರಣೆ ಕಾಮಗಾರಿಯ ಕಾರಣ ಅಗಸ್ಟ್ 25 ರ ಭಾನುವಾರ ಬೆಳಿಗ್ಗೆ  10 - 30 ರಿಂದ ಸಂಜೆ 05 - 30 ಘಂಟೆವರೆಗೆ ಭದ್ರಾವತಿಯ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ತಯವಾಗಲಿದೆ




ದೊಣಬಘಟ್ಟ, ತಡಸ, ಪದ್ಮೇನಹಳ್ಳಿ, ಬಿ.ಹೆಚ್. ರಸ್ತೆ, ಲೋಯರ್ ಹುತ್ತಾ, ದೊಣಬಘಟ್ಟ  ರಸ್ತೆ, ಕೈಗಾರಿಕಾ ಪ್ರದೇಶ, ಅರಣ್ಯ ಇಲಾಖೆ ದಾಸ್ತಾನು ಕಛೇರಿ, ಹೆಬ್ಬಂಡಿ, ಕವಲುಗೊಂದಿ, ಕಡದಕಟ್ಟೆ, ಐ.ಟಿ.ಐ. ಸುತ್ತಮುತ್ತ, ರೈಲ್ವೆದ್ವಾರ ಮತ್ತು ಲಕ್ಷ್ಮೀಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಗ್ರಾಗಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೋರಿದೆ.



ಶಿವಮೊಗ್ಗ ಗ್ರಾಮಾಂತರ


ಆಗಸ್ಟ್ 25 ರ ತಾವರೆಚಟ್ನಹಳ್ಳಿ 66/11 ಕೆವಿ ವಿವಿ ಕೇಂದ್ರದ ಎಫ್-7 ಚನ್ನಮುಂಬಾಪುರ ಮಾರ್ಗದಲ್ಲಿ ವಾಹಕ ಬದಲಾವಣೆ ಮತ್ತು ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿAದ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಗ್ರಾಮಗಳಾದ ರತ್ನಗಿರಿನಗರ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಮೋಜಪ್ಪನ ಹೊಸೂರು ಸುತ್ತಮುತ್ತಲಿನ ಕ್ರಷರ್‌ಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.


ಶಿವಮೊಗ್ಗ ನಗರ ಭಾಗಗಳು


ಶಿವಮೊಗ್ಗ ಮೆಸ್ಕಾಂ ನಗರ ಉಪ ವಿಭಾಗ-1, ಘಟಕ-1ರ ವ್ಯಾಪ್ತಿಯಲ್ಲಿ 11 ಕೆವಿ ಮಾಗ್ ಬದಲಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ದಿ: 25/08/2024 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಊರಗಡೂರು, ಸೂಳೆಬೈಲು, ಮದಾರಿಪಾಳ್ಯ, ಮಳಲಿಕೊಪ್ಪ, ಬೈಪಾಸ್ ರಸ್ತೆ, ವಾದಿ-ಎ-ಹುದಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. 

ಭದ್ರಾವತಿ ನಗರಸಭ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನ ಅಯ್ಕೆಗೆ ತಡೆಯಾಜ್ಞೆ

 


ಸುದ್ದಿಲೈವ್/ಭದ್ರಾವತಿ ಅ24 


ರೂಸ್ಟರ್ ಪದ್ಧತಿ, ಬಿ.ಸಿ.ಎಂ.ಮಹಿಳೆ ಮೀಸಲು ಹಾಗೂ ಬಿ.ಸಿ.ಎಂ.ಬಿ. ಮಹಿಳೆ ಮೀಸಲಾತಿ ಭದ್ರಾವತಿ ನಗರಸಭಾ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನ ಅಯ್ಕೆ ಪ್ರಕ್ರಿಯೆಯಲ್ಲಿ ತಾರತಮ್ಯವಾಗಿದೆ ಎಂದು ಅರೋಪಿಸಿ ನ್ಯಾಯಲಯದ ಮೊರೆ ಹೋಗಿ ತಡೆಯಾಜ್ಞೆ ತರಲಾಗಿದೆ.




ನಗರಸಭಾ ಅಧ್ಯಕ್ಷರ  ತೆರವಾಗಿದ್ದ ಸ್ಥಾನಕ್ಕೆ ಅಗಸ್ಟ್ 26 ರಂದು ಅಧ್ಯಕ್ಷರ ಸ್ಥಾನದ ಚುನಾವಣೆ ನಡೆಯಬೇಕಿದ್ದು, ಅಗಸ್ಟ್ 22 ರಂದು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ದಾವೆ ಹೂಡಿದ ಪರಿಣಾಮ ಉಚ್ಚನ್ಯಾಯಲಯ ಮಂಗಳವಾರ ಅಧ್ಯಕ್ಷರ ಅಯ್ಕೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ ಎನ್ನಲಾಗಿದೆ. ತಡೆಯಾಜ್ಞೆ ತೆರವಿನ ನಂತರ  ಸರ್ಕಾರ ತೆಗೆದುಕೊಳ್ಳುವ  ಪ್ರವರ್ಗ  ನಿರ್ದಾರದ ನಂತರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅಯ್ಕೆ  ಮುಂದುವರೆಯಲಿದೆ ಎನ್ನಲಾಗಿದೆ.