ಬಾಹ್ಯಾಕಾಶ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬಾಹ್ಯಾಕಾಶ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಆಗಸ್ಟ್ 22, 2024

ಒಂದು ವಾರದೊಳಗೆ ಸೂಡ ಶೆಡ್ ತೆರವುಗೊಳಿಸದಿದ್ದರೆ ಅಹೋರಾತ್ರಿ ಧರಣಿ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ವಿನೋಬ ನಗರದ ಸೂಡ ಕಚೇರಿಯು ಭೂಕಬಳಿಕೆ ಕಾಯ್ದೆಯನ್ನ ಉಲ್ಲಂಘಿಸಿ ಶೆಡ್ ಕಟ್ಟಲಾಗಿದೆ ಎಂದು ಶಿವಮೊಗ್ಗ ಹಿತರಕ್ಷಣ ವೇದಿಕೆಗಳ ಒಕ್ಕೂಟ ಆಗ್ರಹಿಸಿದೆ. 


ಸುದ್ದಿಗೋಷ್ಠಿ ನಡೆಸಿದ ವೇದಿಕೆಯ ಅಧ್ಯಕ್ಷ ವಸಂತ್ ಕುಮಾರ್ ರಸ್ತೆ ಇದೆ ಎಂದು 40 ವರ್ಷಗಳಿಂದ ಬಳಕೆ ಆಗುತ್ತಿದೆ. ಇದು ಪಾಲಿಕೆ ರಸ್ತೆಯಾಗಿದೆ ಎಂದು ಹೇಳಿದೆ. ಪಾಲಿಕೆ ಎರಡು ಪತ್ರ ಬರೆದರೂ ಶೆಡ್ ತೆರವುಗೊಳಿಸಿಲ್ಲ. ಆ.28 ರಿಂದ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. 


ಎರಡು ವರೆ ತಿಂಗಳಿಂದ ವೇದಿಕೆ ಹೋರಾಟ ಮಾಡುತ್ತಿದೆ. ಪಾಲಿಕೆಯು ಸಾರ್ವಜನಿಕರ ರಸ್ತೆ ಎಂದು ಹೇಳುತ್ತಿದೆ. 2000 ಸಾವಿರ ವಾಹನಗಳು, 5000 ಪಾದಚಾರಿಗಳು ಓಡಾಡುತ್ತಾರೆ. ವ್ಯಾಪಾರಸ್ಥರಿಗೆ ಈ ಶೆಡ್ ನಿರ್ಮಾಣದಿಂದ ತೊಂದರೆಯಾಗಿದೆ.


ಶಾಸಕರು ಸೂಡಾ ಸಭೆಯಲ್ಲಿ ಉಲ್ಲೇಖಿಸಿದ್ದಾರೆ.ಡಿಸಿ ಸಹ ತೆರವಿಗೆ ಸೂಚಿಸಿದರೂ ತೆರವುಗೊಳಿಸಿಲ್ಲ. ಒಂದುವಾರದ ಒಳಗೆ ತೆರವುಗೊಳಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು. 


ಕೆಲ ಸಂಘಟನೆಗಳು ಶೆಡ್ ತೆರವುಗೊಳಿಸಬಾರದು ಎಂದು ಆಗ್ರಹಿದಿವೆ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ವೇದಿಕೆಯ ವಸಂತ್ ಕುಮಾರ್ ರಸ್ತೆಯಿಂದ ತೊಂದರೆಯಾದರೆ ಕಾನೂನು ಕ್ರಮ ಜರುಗುಸಿ ಹಾಗಂತ ರಸ್ತೆ ಇರುವ ಪ್ಲಾನ್ ಮೇಲೆ ಶೆಡ್ ನಿರ್ಮಿಸುವುದರೆ ಹೇಗೆ ಎಂದು ಪ್ರಶ್ನಿಸಿದರು.


ಸತೀಶ್ ಕುಮಾರ್ ಶೆಟ್ಟಿ, ಚನ್ನವೀರಪ್ಪ ಗಾಮನಗಟ್ಟಿ, ಗೋಪಾಲ್, ವಿನೋದ್ ಪೈ, ಇಕ್ಬಾಲ್ ನೇತಾಜಿ ಮೊದಲಾದವರು ಉಪಸ್ಥಿತರಿದ್ದರು. 

ಬುಧವಾರ, ಆಗಸ್ಟ್ 21, 2024

ಆ.23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ



ಸುದ್ದಿಲೈವ್/ಶಿವಮೊಗ್ಗ


ಚಂದ್ರಯಾನ-3 ಮಿಷನ್‌ನ ಯಶಸ್ಸನ್ನು ಆಚರಿಸಲು ಭಾರತ ಸರ್ಕಾರವು ಪ್ರತಿ ವರ್ಷ ಆಗಸ್ಟ್ 23 ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಘೋಷಿಸಿದ್ದು, ಇದರ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ರಾಜ್ಯ ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಕುರಿತು ಆಸಕ್ತಿ ಮೂಡಿಸಲು ಗಗನಯಾತ್ರಿ ಹಾಗೂ ಬಾಹ್ಯಾಕಾಶ ವಿಜ್ಞಾನಿಗಳ ಕೊಡುಗೆಗಳ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಅನೇಕ ವಿಜ್ಞಾನ ಚಟುವಟಿಕೆಗಳನ್ನು ಆಯೋಜಿಸಿದೆ.


ಈ ಸಂಬಂಧ ಶಿವಮೊಗ್ಗ ಜಿಲ್ಲಾ ಪಂಚಾಯತಿಯು ದಿ: 23/08/2024 ರಂದು ಬೆಳಗ್ಗೆ 10.30 ಕ್ಕೆ  ನಗರದ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಯೋಜಿಸಿದೆ.  ಈ ಕಾರ್ಯಕ್ರಮದಲ್ಲಿ ಇಸ್ರೋ ಸಂಸ್ಥೆಯಿಂದ ಸಂಪನ್ಮೂಲ ವ್ಯಕ್ತಿಯಾಗಿ ವಿಜ್ಞಾನಿಗಳು ಆಗಮಿಸಲಿದ್ದಾರೆ. 


ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಎನ್‌ಆರ್‌ಡಿಎಂಎಸ್ ಕೇಂದ್ರದ ಶಂಕರ್ ಪಿ. -9036710230 ಇವರನ್ನು ಸಂಪರ್ಕಿಸುವುದು.