ಪತ್ರಕರ್ತರ ಮೇಲಿನ ದೌರ್ಜನ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪತ್ರಕರ್ತರ ಮೇಲಿನ ದೌರ್ಜನ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಆಗಸ್ಟ್ 22, 2024

ಜಿಪಂ ಮುಂದೆ ಅನಿರ್ದಿಷ್ಠಾವಧಿ ಧರಣಿ



ಸುದ್ದಿಲೈವ್/ಶಿವಮೊಗ್ಗ


ಗ್ರಾಮ ಪಂಚಾಯಿತಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದಿನಿಂದ  ಜಿ.ಪಂ.ಮುಂಭಾಗದಲ್ಲಿ  ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘ ಬೆಂಗಳೂರು ಹಾಗೂ (ಸಿಐಟಿಯೂ) ಸಂಯೋಜಿತ ಜಿಲ್ಲಾ ಸಮಿತಿ ಶಿವಮೊಗ್ಗದ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಯಿತು.


ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಲವರು ವರ್ಷಗಳಿಂದ ಗ್ರಾ.ಪಂ.ಗಳಲ್ಲಿ ಕರ ವಸೂಲಿಗಾರ, ವಾಟರ್ ಮ್ಯಾನ್, ಜವಾನ, ಕ್ಲರ್ಕ್, ಸ್ವಚ್ಚತ ಗಾರ ಹೀಗೆ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ.  ಸರ್ಕಾರ ನೌಕರರ ಹಿತ ದೃಷ್ಠಿಯಿಂದ ಅನೇಕ ಆದೇಶಗಳನ್ನು ಮಾಡಿದ್ದರೂ ಕೂಡ ನಿಗದಿತ ಸಮಯದೊಳಗೆ ಅನುಷ್ಠಾನಗೊಳ್ಳುತ್ತಿಲ್ಲ. 


ಗ್ರಾಪಂ ನೌಕರರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ನಮ್ಮ ನೌಕರರ ಸಂಘ ಸಿಐಟಿಯುನೊಂದಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ನಮ್ಮ ಬೇಡಿಕೆಗಳಿ ಈಡೇರಿಲ್ಲ. ಹಾಗಾಗಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.


೨೦೧೭ರ ಅಕ್ಟೋಬರ್ ೩೨ರ ಒಳಗೆ ಗ್ರಾಮ ಪಂಚಾಯಿತಿಯಲ್ಲಿ ಸಭಾ ನಡುವಳಿ ಮೂಲಕ ಕರ್ತವ್ಯಕ್ಕೆ ನೇಮಕ ಆದಂತಹ ವಿವಿಧ ವೃಂದದ ನೌಕರರಿಗೆ ಏಕ ಕಾಲದಲ್ಲಿ ಅನುಮೋದನೆ ನೀಡಬೇಕು. ನೌಕರರ ಸಮಸ್ಯೆಗಳಿಗೆ ಸ್ಪಂದಿಸದ ವಿಷಯ ನಿರ್ವಾಹಕರನ್ನು ಬದಲಾವಣೆ ಮಾಡಬೇಕು. 


ಗ್ರಾ.ಪಂ.ನೌಕರರಿಗೆ ಸುರಕ್ಷತಾ ಕಿಟ್, ಸಮವಸ್ತ್ರ, ಐಡಿ ಕಾರ್ಡ್ ಅಂತ್ಯ ಸಂಸ್ಕಾರಕ್ಕೆ ೧೦ ಸಾವಿರ ಸಹಾಯ ಧನ. ಕನಿಷ್ಠ ವೇತನ ತುಟ್ಟಿ ಭತ್ಯೆ ನೀಡಬೇಕು. ಜಾಬ್ ಚಾರ್ಟ್ನಲ್ಲಿ ನಮೂದಿ ಸಿರುವ ಕರ್ತವ್ಯಗಳನ್ನು ಬಿಟ್ಟು ಅನ್ಯ ಕೆಲಸಕ್ಕೆ ನೇಮಕ ಮಾಡಬಾರದು ಎಂದು ಅವರು ಆಗ್ರಹಿಸಿದರು.


ಕ್ಲರ್ಕ್, ಡಾಟಎಂಟ್ರಿ ಆಪ ರೇಟರ್, ನೌಕಕರಿಗೆ ಕಾರ್ಯ ದರ್ಶಿ ಗ್ರೇಡ್೨, ಎಸ್‌ಡಿಎಎ ಹುದ್ದೆಗಳಿಗೆ ಮುಂಬಡ್ತಿ ಇರುವ ಲೋಪದೋಷಗಳನ್ನು ಸರಿ ಪಡಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಕೈ ಬಿಟ್ಟು ಸರ್ಕಾರದ ಅಧಿಸೂಚನೆಯಂತೆ ೧೧೨ ಮತ್ತು ೧೧೩ರಂತೆ ನೇಮಕ ಮಾಡಿಕೊಳ್ಳಬೇಕು. ಜಿ.ಪಂ. ಅಧಿಕಾರದಲ್ಲಿ ಸಾಧ್ಯವಾಗುವ ಎಲ್ಲಾ ಸೌಲತ್ತುಗಳನ್ನು ನೌಕರರಿಗೆ ಕೂಡಲೇ ಒದಗಿಸಬೇಕು ಎಂದು ಧರಣಿಯಲ್ಲಿ ನಾಯಕರು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಂಗಾರಪ್ಪ, ಪ್ರಧಾನ ಕಾರ್ಯದರ್ಶಿ ಪರಮೇಶ್, ಪ್ರಮುಖರಾದ ಎಂ.ಬಿ.ನಾಡಗೌಡ, ನಾರಾಯಣ್, ಹನುಮಮ್ಮ, ದೇವರಾಜ್, ಸಂಘದ ಪದಾಧಿಕಾರಿಗಳಾದ ಎಂ.ಸಂತೋಷ್, ನಾಗೇಶ್ ಕೆ.ವಾಲೆ,ಚೆನ್ನಬಸಪ್ಪ, ಉಮೇಶ್, ಸ್ವಾಮಿ, ರಂಗಸ್ವಾಮಿ ಇದ್ದರು.

ದರ್ಪಮೆರೆದ ಇನ್ ಸ್ಪೆಕ್ಟರ್ ವಿರುದ್ಧ‌ ಟ್ರಸ್ಟ್ ಮತ್ತು ಸಂಘದಿಂದ ಮನವಿ



ಸುದ್ದಿಲೈವ್/ಶಿವಮೊಗ್ಗ


ತೀರ್ಥಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವಥ್ ಗೌಡ ಅವರ ಉದ್ಧಟತನ ಮತ್ತು ಅಮಾನತ್ತಿಗೆ ಆಗ್ರಹಿಸಿ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಎಸ್ಪಿ ಮತ್ತು ಡಿಸಿ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ಮನವಿ ಸಲ್ಲಿಸಿತು.


ತೀರ್ಥಹಳ್ಳಿಯಲ್ಲಿ  ಪ್ರಜಾವಾಣಿ ವರದಿಗಾರ ನಿರಂಜನ್ ಅವರು ವರದಿಗಾಗಿ ರಥಬೀದಿಯಲ್ಲಿ ಪೋಟೋ, ವಿಡಿಯೋ ತೆಗೆಯುವಾಗ ಇಲ್ಲಿನ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವಥ್ ಗೌಡ ಬಲವಂತವಾಗಿ ಪತ್ರಕರ್ತ ನಿರಂಜನ್ ಅವರಿಂದ ಮೊಬೈಲ್ ಕಿತ್ತುಕೊಂಡು ಠಾಣೆಗೆ ಹೋಗಿರುತ್ತಾರೆ. 


ಮೊಬೈಲ್ ಪಡೆಯಲು ಠಾಣೆಗೆ ಹೋದ ನಿರಂಜನ್ ಅವರನ್ನು    ಇನ್್ಸಪೆಕ್ಟರ್ ಅಶ್ವಥ್ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.  ಇದನ್ನು ಪ್ರಶ್ನಿಸಿದ ಇತರೆ ಪತ್ರಕರ್ತರ ಜೊತೆಗೂ ಉದ್ದಟತನದಿಂದ ವರ್ತಿಸಿದ್ದಾರೆ.


ವೃತ್ತ ನಿರೀಕ್ಷಕರ ವರ್ತನೆ ಖಂಡನೀಯ,  ಸುಳ್ಳು ಕೇಸು ಹಾಕುವುದಾಗಿ ಪತ್ರಕರ್ತರನ್ನೆ ಬೆದರಿಸುವ ಈ ಪೊಲೀಸ್ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಸ್ಪಷ್ಡವಾಗಿದೆ.  ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ದ ಹರಣ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯ ಈ ವರ್ತನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ.


ಪೊಲೀಸ್ ಅಧಿಕಾರಿ ಅಶ್ವಥ್ ಗೌಡ ಅವರನ್ನು ಈ ಕೂಡಲೆ ಅಮಾನತ್ತುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.