ನಗರ‌ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಗರ‌ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಆಗಸ್ಟ್ 22, 2024

ಹುಂಚದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ವಿಶೇಷಾಧಿಕಾರಿಗಳ ನೇಮಕ

 


ಸುದ್ದಿಲೈವ್/ಶಿವಮೊಗ್ಗ


ಜಿಲ್ಲೆಯ ಹೊಸನಗರ ತಾಲೂಕು ಹುಂಚದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ವಿಶೇಷಾಧಿಕಾರಿಗಳನ್ನ ನೇಮಿಸಿ ಸಾಗರದ ಉಪವಿಭಾಗದ ಸಹಕಾರ ಸಂಘದ ಸಹಾಯಕ ನಿಬಂಧಕರು ಆದೇಶಿಸಿದ್ದಾರೆ.


ಈವರೆಗೂ ಕಾರ್ಯನಿರ್ವಾಹಣ ಅಧಿಕಾರಿಗಳನ್ನ ನೇಮಿಸಿಕೊಳ್ಳಲು ಈಗಿನ ಆಡಳಿತದಲ್ಲಿರುವ ಸಹಕಾರ ಸಂಘದ ಸದಸ್ಯರುಗಳಿಗೆ ಆದೇಶ ನೀಡಲಾಗಿತ್ತು. ಆದರೆ ಆಡಳಿತದಲ್ಲಿನ  ಸದಸ್ಯರು ನೇಮಿಸಿಕೊಳ್ಳದೆ ಕಾಲ ಹರಣ ಮಾಡಿರುವುದು ತಿಳಿದು ಮೇಲಿನ ಆದೇಶ ಮಾಡಲಾಗಿದೆ.


ಮುಂದಿನ 6 ತಿಂಗಳ ವರೆಗೆ ವಿಶೇಷಾಧಿಕಾರಿಗಳನ್ನ ನೇಮಿಸಿ ಸಹಾಯಕ ನಿಬಂಧಕರು ಆದೇಶಿಸಿದ್ದಾರೆ

ಜಿಪಂ ಮುಂದೆ ಅನಿರ್ದಿಷ್ಠಾವಧಿ ಧರಣಿ



ಸುದ್ದಿಲೈವ್/ಶಿವಮೊಗ್ಗ


ಗ್ರಾಮ ಪಂಚಾಯಿತಿ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದಿನಿಂದ  ಜಿ.ಪಂ.ಮುಂಭಾಗದಲ್ಲಿ  ಕರ್ನಾಟಕ ರಾಜ್ಯ ಗ್ರಾ.ಪಂ. ನೌಕರರ ಸಂಘ ಬೆಂಗಳೂರು ಹಾಗೂ (ಸಿಐಟಿಯೂ) ಸಂಯೋಜಿತ ಜಿಲ್ಲಾ ಸಮಿತಿ ಶಿವಮೊಗ್ಗದ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಯಿತು.


ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಲವರು ವರ್ಷಗಳಿಂದ ಗ್ರಾ.ಪಂ.ಗಳಲ್ಲಿ ಕರ ವಸೂಲಿಗಾರ, ವಾಟರ್ ಮ್ಯಾನ್, ಜವಾನ, ಕ್ಲರ್ಕ್, ಸ್ವಚ್ಚತ ಗಾರ ಹೀಗೆ ವಿವಿಧ ಹುದ್ದೆಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ.  ಸರ್ಕಾರ ನೌಕರರ ಹಿತ ದೃಷ್ಠಿಯಿಂದ ಅನೇಕ ಆದೇಶಗಳನ್ನು ಮಾಡಿದ್ದರೂ ಕೂಡ ನಿಗದಿತ ಸಮಯದೊಳಗೆ ಅನುಷ್ಠಾನಗೊಳ್ಳುತ್ತಿಲ್ಲ. 


ಗ್ರಾಪಂ ನೌಕರರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ನಮ್ಮ ನೌಕರರ ಸಂಘ ಸಿಐಟಿಯುನೊಂದಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ನಮ್ಮ ಬೇಡಿಕೆಗಳಿ ಈಡೇರಿಲ್ಲ. ಹಾಗಾಗಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.


೨೦೧೭ರ ಅಕ್ಟೋಬರ್ ೩೨ರ ಒಳಗೆ ಗ್ರಾಮ ಪಂಚಾಯಿತಿಯಲ್ಲಿ ಸಭಾ ನಡುವಳಿ ಮೂಲಕ ಕರ್ತವ್ಯಕ್ಕೆ ನೇಮಕ ಆದಂತಹ ವಿವಿಧ ವೃಂದದ ನೌಕರರಿಗೆ ಏಕ ಕಾಲದಲ್ಲಿ ಅನುಮೋದನೆ ನೀಡಬೇಕು. ನೌಕರರ ಸಮಸ್ಯೆಗಳಿಗೆ ಸ್ಪಂದಿಸದ ವಿಷಯ ನಿರ್ವಾಹಕರನ್ನು ಬದಲಾವಣೆ ಮಾಡಬೇಕು. 


ಗ್ರಾ.ಪಂ.ನೌಕರರಿಗೆ ಸುರಕ್ಷತಾ ಕಿಟ್, ಸಮವಸ್ತ್ರ, ಐಡಿ ಕಾರ್ಡ್ ಅಂತ್ಯ ಸಂಸ್ಕಾರಕ್ಕೆ ೧೦ ಸಾವಿರ ಸಹಾಯ ಧನ. ಕನಿಷ್ಠ ವೇತನ ತುಟ್ಟಿ ಭತ್ಯೆ ನೀಡಬೇಕು. ಜಾಬ್ ಚಾರ್ಟ್ನಲ್ಲಿ ನಮೂದಿ ಸಿರುವ ಕರ್ತವ್ಯಗಳನ್ನು ಬಿಟ್ಟು ಅನ್ಯ ಕೆಲಸಕ್ಕೆ ನೇಮಕ ಮಾಡಬಾರದು ಎಂದು ಅವರು ಆಗ್ರಹಿಸಿದರು.


ಕ್ಲರ್ಕ್, ಡಾಟಎಂಟ್ರಿ ಆಪ ರೇಟರ್, ನೌಕಕರಿಗೆ ಕಾರ್ಯ ದರ್ಶಿ ಗ್ರೇಡ್೨, ಎಸ್‌ಡಿಎಎ ಹುದ್ದೆಗಳಿಗೆ ಮುಂಬಡ್ತಿ ಇರುವ ಲೋಪದೋಷಗಳನ್ನು ಸರಿ ಪಡಿಸಬೇಕು. ಖಾಲಿ ಇರುವ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಕೈ ಬಿಟ್ಟು ಸರ್ಕಾರದ ಅಧಿಸೂಚನೆಯಂತೆ ೧೧೨ ಮತ್ತು ೧೧೩ರಂತೆ ನೇಮಕ ಮಾಡಿಕೊಳ್ಳಬೇಕು. ಜಿ.ಪಂ. ಅಧಿಕಾರದಲ್ಲಿ ಸಾಧ್ಯವಾಗುವ ಎಲ್ಲಾ ಸೌಲತ್ತುಗಳನ್ನು ನೌಕರರಿಗೆ ಕೂಡಲೇ ಒದಗಿಸಬೇಕು ಎಂದು ಧರಣಿಯಲ್ಲಿ ನಾಯಕರು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಂಗಾರಪ್ಪ, ಪ್ರಧಾನ ಕಾರ್ಯದರ್ಶಿ ಪರಮೇಶ್, ಪ್ರಮುಖರಾದ ಎಂ.ಬಿ.ನಾಡಗೌಡ, ನಾರಾಯಣ್, ಹನುಮಮ್ಮ, ದೇವರಾಜ್, ಸಂಘದ ಪದಾಧಿಕಾರಿಗಳಾದ ಎಂ.ಸಂತೋಷ್, ನಾಗೇಶ್ ಕೆ.ವಾಲೆ,ಚೆನ್ನಬಸಪ್ಪ, ಉಮೇಶ್, ಸ್ವಾಮಿ, ರಂಗಸ್ವಾಮಿ ಇದ್ದರು.

ಕಾಂಗ್ರೆಸ್ ನಾಯಕರ ವಿರುದ್ಧ ಜಿಲ್ಲಾ ಬಿಜೆಪಿ ಪ್ರತಿಭಟನೆ


ಸುದ್ದಿಲೈವ್/ಶಿವಮೊಗ್ಗ


ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಿರುವ ಮತ್ತು ಪೂರ್ವಯೋಚಿತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಇಂದು ಪ್ರತಿಭಟನೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.


ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರು ರಾಜ್ಯಪಾಲರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ವೈಯುಕ್ತಿಕವಾಗಿ ತೇಜೋವಧೆ ಮಾಡಲು ಹೊರಟಿದ್ದಾರೆ. ಇದು ಖಂಡನೀಯ ಎಂದು ಪ್ರತಿಭಟನಕಾರರು ತಿಳಿಸಿದರು.


ಈಗಾಗಲೇ ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದಾರೆ ಎಂದು ಗೊತ್ತಾಗಿದೆ.ಅಲ್ಲದೇ ರಾಜ್ಯಪಾಲರು ಕೂಡ ತನಿಖೆಗೆ ಒಪ್ಪಿಗೆ ನೀಡಿದ್ದಾರೆ. ಈಗಿದ್ದರೂ ಕೂಡ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಮೇಲೆ ಮುಗಿಬಿದ್ದಿರುವುದು ಶೋಷಿತ ಸಮುದಯದ ವಿರೋಧಿ ಪ್ರವೃತ್ತಿಗೆ ಸಾಕ್ಷಿಯಾಗಿದೆ ಎಂದರು.


ರಾಜ್ಯಪಾಲರ ವಿರುದ್ಧ ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಜಾತಿನಿಂದನೆ ಕೇಸ್‌ಗಳನ್ನು ದಾಖಲಿಸಬೇಕಾಗಿದೆ. ಪರಿಶಿಷ್ಟ ಜನಾಂಗಕ್ಕೆ ಸೇರಬೇಕಾಗಿದ್ದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರು ಕೂಡ ಪರಿಶಿಷ್ಟ ಜಾತಿಗೆ ಸೇರಿದವರು ಎಂಬ ಕಾರಣದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.


ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯಪಾಲರೇ ಹೊಣೆ ಎಂದು ಹೇಳಿಕೆ ನೀಡಿರುವ ಮತ್ತು ಬಾಂಗ್ಲಾದ ಸ್ಥಿತಿ ಕರ್ನಾಟಕಕ್ಕೂ ಬರುತ್ತದೆ ಎಂದಿರುವ ಐವಾನ್ ಡಿಸೋಜ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಜಮೀರ್ ಅಹಮ್ಮದ್, ಕೃಷ್ಣೇ ಬೈರೇಗೌಡ, ದಿನೇಶ್ ಗುಂಡುರಾವ್, ನಂಜೇಗೌಡ ಅವರ ವಿರುದ್ಧ ಜಾತಿ ನಿಂದನೆ ಹಾಗೂ ಗುಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಪ್ರತಿಭಟನಕಾರರು ಮನವಿ ಮಾಡಿದರು.


ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಧನಂಜಯಸರ್ಜಿ, ಮಾಜಿ ಶಾಸಕ ಅಶೋಕ್ ನಾಯ್ಕ್, ಸುರೇಖಾ ಮುರಳೀಧರ್, ಜಗದೀಶ್, ಎಸ್.ದತ್ತಾತ್ರಿ, ನಾಗರಾಜ್, ಐಡಿಯಲ್ ಗೋಪಿ, ಶಿವಾನಂದ್, ಜ್ಞಾನೇಶ್ವರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಗಾಯಿತ್ರಿಮಲ್ಲಪ್ಪ, ಸುಮಲತಾ, ರಶ್ಮಿ ಮತ್ತು ಪದಾಧಿಕಾರಿಗಳು ಸೇರಿದಂತೆ ಮೊದಲಾದವರು ಇದ್ದರು. 

ದರ್ಪಮೆರೆದ ಇನ್ ಸ್ಪೆಕ್ಟರ್ ವಿರುದ್ಧ‌ ಟ್ರಸ್ಟ್ ಮತ್ತು ಸಂಘದಿಂದ ಮನವಿ



ಸುದ್ದಿಲೈವ್/ಶಿವಮೊಗ್ಗ


ತೀರ್ಥಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವಥ್ ಗೌಡ ಅವರ ಉದ್ಧಟತನ ಮತ್ತು ಅಮಾನತ್ತಿಗೆ ಆಗ್ರಹಿಸಿ  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಎಸ್ಪಿ ಮತ್ತು ಡಿಸಿ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಮತ್ತು ಗೃಹಸಚಿವರಿಗೆ ಮನವಿ ಸಲ್ಲಿಸಿತು.


ತೀರ್ಥಹಳ್ಳಿಯಲ್ಲಿ  ಪ್ರಜಾವಾಣಿ ವರದಿಗಾರ ನಿರಂಜನ್ ಅವರು ವರದಿಗಾಗಿ ರಥಬೀದಿಯಲ್ಲಿ ಪೋಟೋ, ವಿಡಿಯೋ ತೆಗೆಯುವಾಗ ಇಲ್ಲಿನ ಪೊಲೀಸ್ ಇನ್ಸ್ ಪೆಕ್ಟರ್ ಅಶ್ವಥ್ ಗೌಡ ಬಲವಂತವಾಗಿ ಪತ್ರಕರ್ತ ನಿರಂಜನ್ ಅವರಿಂದ ಮೊಬೈಲ್ ಕಿತ್ತುಕೊಂಡು ಠಾಣೆಗೆ ಹೋಗಿರುತ್ತಾರೆ. 


ಮೊಬೈಲ್ ಪಡೆಯಲು ಠಾಣೆಗೆ ಹೋದ ನಿರಂಜನ್ ಅವರನ್ನು    ಇನ್್ಸಪೆಕ್ಟರ್ ಅಶ್ವಥ್ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.  ಇದನ್ನು ಪ್ರಶ್ನಿಸಿದ ಇತರೆ ಪತ್ರಕರ್ತರ ಜೊತೆಗೂ ಉದ್ದಟತನದಿಂದ ವರ್ತಿಸಿದ್ದಾರೆ.


ವೃತ್ತ ನಿರೀಕ್ಷಕರ ವರ್ತನೆ ಖಂಡನೀಯ,  ಸುಳ್ಳು ಕೇಸು ಹಾಕುವುದಾಗಿ ಪತ್ರಕರ್ತರನ್ನೆ ಬೆದರಿಸುವ ಈ ಪೊಲೀಸ್ ಅಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ಸ್ಪಷ್ಡವಾಗಿದೆ.  ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ದ ಹರಣ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯ ಈ ವರ್ತನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ.


ಪೊಲೀಸ್ ಅಧಿಕಾರಿ ಅಶ್ವಥ್ ಗೌಡ ಅವರನ್ನು ಈ ಕೂಡಲೆ ಅಮಾನತ್ತುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.

ಒಂದು ವಾರದೊಳಗೆ ಸೂಡ ಶೆಡ್ ತೆರವುಗೊಳಿಸದಿದ್ದರೆ ಅಹೋರಾತ್ರಿ ಧರಣಿ



ಸುದ್ದಿಲೈವ್/ಶಿವಮೊಗ್ಗ


ಶಿವಮೊಗ್ಗದ ವಿನೋಬ ನಗರದ ಸೂಡ ಕಚೇರಿಯು ಭೂಕಬಳಿಕೆ ಕಾಯ್ದೆಯನ್ನ ಉಲ್ಲಂಘಿಸಿ ಶೆಡ್ ಕಟ್ಟಲಾಗಿದೆ ಎಂದು ಶಿವಮೊಗ್ಗ ಹಿತರಕ್ಷಣ ವೇದಿಕೆಗಳ ಒಕ್ಕೂಟ ಆಗ್ರಹಿಸಿದೆ. 


ಸುದ್ದಿಗೋಷ್ಠಿ ನಡೆಸಿದ ವೇದಿಕೆಯ ಅಧ್ಯಕ್ಷ ವಸಂತ್ ಕುಮಾರ್ ರಸ್ತೆ ಇದೆ ಎಂದು 40 ವರ್ಷಗಳಿಂದ ಬಳಕೆ ಆಗುತ್ತಿದೆ. ಇದು ಪಾಲಿಕೆ ರಸ್ತೆಯಾಗಿದೆ ಎಂದು ಹೇಳಿದೆ. ಪಾಲಿಕೆ ಎರಡು ಪತ್ರ ಬರೆದರೂ ಶೆಡ್ ತೆರವುಗೊಳಿಸಿಲ್ಲ. ಆ.28 ರಿಂದ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. 


ಎರಡು ವರೆ ತಿಂಗಳಿಂದ ವೇದಿಕೆ ಹೋರಾಟ ಮಾಡುತ್ತಿದೆ. ಪಾಲಿಕೆಯು ಸಾರ್ವಜನಿಕರ ರಸ್ತೆ ಎಂದು ಹೇಳುತ್ತಿದೆ. 2000 ಸಾವಿರ ವಾಹನಗಳು, 5000 ಪಾದಚಾರಿಗಳು ಓಡಾಡುತ್ತಾರೆ. ವ್ಯಾಪಾರಸ್ಥರಿಗೆ ಈ ಶೆಡ್ ನಿರ್ಮಾಣದಿಂದ ತೊಂದರೆಯಾಗಿದೆ.


ಶಾಸಕರು ಸೂಡಾ ಸಭೆಯಲ್ಲಿ ಉಲ್ಲೇಖಿಸಿದ್ದಾರೆ.ಡಿಸಿ ಸಹ ತೆರವಿಗೆ ಸೂಚಿಸಿದರೂ ತೆರವುಗೊಳಿಸಿಲ್ಲ. ಒಂದುವಾರದ ಒಳಗೆ ತೆರವುಗೊಳಿಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದರು. 


ಕೆಲ ಸಂಘಟನೆಗಳು ಶೆಡ್ ತೆರವುಗೊಳಿಸಬಾರದು ಎಂದು ಆಗ್ರಹಿದಿವೆ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ವೇದಿಕೆಯ ವಸಂತ್ ಕುಮಾರ್ ರಸ್ತೆಯಿಂದ ತೊಂದರೆಯಾದರೆ ಕಾನೂನು ಕ್ರಮ ಜರುಗುಸಿ ಹಾಗಂತ ರಸ್ತೆ ಇರುವ ಪ್ಲಾನ್ ಮೇಲೆ ಶೆಡ್ ನಿರ್ಮಿಸುವುದರೆ ಹೇಗೆ ಎಂದು ಪ್ರಶ್ನಿಸಿದರು.


ಸತೀಶ್ ಕುಮಾರ್ ಶೆಟ್ಟಿ, ಚನ್ನವೀರಪ್ಪ ಗಾಮನಗಟ್ಟಿ, ಗೋಪಾಲ್, ವಿನೋದ್ ಪೈ, ಇಕ್ಬಾಲ್ ನೇತಾಜಿ ಮೊದಲಾದವರು ಉಪಸ್ಥಿತರಿದ್ದರು. 

ಬುಧವಾರ, ಆಗಸ್ಟ್ 21, 2024

ಪತ್ರಕರ್ತರ ಮೇಲೆ ಇನ್ ಸ್ಪೆಕ್ಟರ್ ಅಶ್ವಥ್ ಗೌಡ ದರ್ಪ



ಸುದ್ದಿಲೈವ್/ತೀರ್ಥಹಳ್ಳಿ


ಪತ್ರಕರ್ತನ ಮೇಲೆ ತೀರ್ಥಹಳ್ಳಿ ಪಿಎಸ್ಐ ಅಶ್ವಥ್ ಗೌಡ ದರ್ಪ ಮೆರೆದಿದ್ದಾರೆ. ಶಿವಮೊಗ್ಗ ಜಿಲ್ಲಾ ಎಸ್ಪಿ ಭೇಟಿ ನೀಡಿದ ವೇಳೆಯಲ್ಲೇ ಸ್ಥಳೀಯ ಪೊಲೀಸರು ಅಟ್ಟಹಾಸ ಮೆರೆದಿದ್ದಾರೆ. 


ತೀರ್ಥಹಳ್ಳಿಗೆ ಎಸ್ಪಿ ಭೇಟಿ ನೀಡಿದ್ದಾರೆ.  ಸ್ಟೇಷನ್‌ಗೆ ತೆರಳುವಾಗ ದಾರಿಯಲ್ಲಿ ಜನಸಂದಣಿಯಾಗಿದೆ. ನಿಯಂತ್ರಿಸುವ ಭರಾಟೆಯಲ್ಲಿ ಇನ್ಸ್‌ಪೆಕ್ಟರ್‌ ಅಶ್ವತ್ಥಗೌಡ ಪತ್ರಕರ್ತರನ್ನ ಅವ್ಯಾಚ್ಯ ಶಬ್ದಗಳ ಪದ ಬಳಕೆ ಮಾಡಿದ್ದಾರೆ. 


ಸಾರ್ವಜನಿಕರಿಗೆ ಸಾರ್ವಜನಿಕವಾಗಿ ಅವ್ಯಾಚ್ಯ ಶಬ್ಧಗಳಲ್ಲಿ  ಇನ್ಸ್‌ಪೆಕ್ಟರ್‌ ಅವ್ಯಾಚ್ಯಶಬ್ದಗಳನ್ನ ಬಳಸುತ್ತಿರುವುದನ್ನ ಪತ್ರಕರ್ತ ವಿ ನಿರಂಜನ್ ಈ ದೃಶ್ಯಾವಳಿಗಳನ್ನ  ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ‘ಪ್ರಜಾವಾಣಿ’ಯ ತೀರ್ಥಹಳ್ಳಿ ತಾಲೂಕು ಅರೆಕಾಲಿಕ ವರದಿಗಾರ ನಿರಂಜನ್  ವಿಡಿಯೋ ಡಿಲೀಟ್‌ ಮಾಡುವಂತೆ ಇನ್ಸ್‌ಪೆಕ್ಟರ್, ಜೀಪು ಚಾಲಕ ಸಿಬ್ಬಂದಿಯಿಂದ ಬೆದರಿಕೆ ಹಾಕಿದ್ದಾನೆ. 


ಬಳಿಕ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಸಮಯದಲ್ಲಿ ದೈಹಿಕ ಹಲ್ಲೆಗೂ ಇನ್ಸ್‌ಪೆಕ್ಟರ್‌ ಅಶ್ವತ್ಥಗೌಡ ಮುಂದಾಗಿದ್ದಾರೆ. ಬಲವಂತವಾಗಿ ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡಿಸಿರುವುದಾಗಿ ತಿಳಿದು ಬಂದಿದೆ. ಸದ್ಯ ಠಾಣೆಯ ಮುಂದೆ  ತೀರ್ಥಹಳ್ಳಿಯ ಪತ್ರಕರ್ತರು ಧರಣಿಗೆ ಮುಂದಾಗಿದ್ದಾರೆ. 


ಶಿವಮೊಗ್ಗದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯ ವೇಳೆಯೂ ಸುದ್ದಿಲೈವ್ ನ್ಯೂಸ್ ವೆಬ್ ಪೇಜ್ ನ್ನ ತಡೆದು ವಾಪಾಸ್ ಕಳುಹಿಸಿದ್ದ ಅಶ್ವಥ್ ಗೌಡ ಪತ್ರಕರ್ತರು ಸುದ್ದಿ ಮಾಡಲು ಬಿಡಿ ಎಂದು ಕೇಳಿದರೂ ಬಿಟ್ಟಿರಲಿಲ್ಲ. ಖಡಕ್ ಅಧಿಕಾರಿ ಎನಿಸಿಕೊಳ್ಳಬೇಕೆಂಬ ಭ್ರಮೆಯಲ್ಲಿ ಇಂದು ಈ ರೀತಿ ನಡೆದು‌ಕೊಂಡಿರಬಹುದು. 

ಶ್ರದ್ಧ, ಭಕ್ತಿಗಳಿಂದ ನಡೆದ ರಾಯರ ಮಧ್ಯಾರಾಧನೆ



ಸುದ್ದಿಲೈವ್/ಶಿವಮೊಗ್ಗ


ರಾಯರ 353ನೇ ಆರಾಧನಾ ಮಹೋತ್ಸವ ಸಂಭ್ರಮ ಮನೆ ಮಾಡಿದೆ. ನಗರದ ತಿಲಕ್ ನಗರದಲ್ಲಿರುವ ಮತ್ತು ಬೊಮ್ಮನ್ ಕಟ್ಟೆಯ ರಾಯರ ಮಠದಲ್ಲಿ ಮಧ್ಯಾರಾಧನೆ ಜನರ ಭಕ್ತಿ ಭಾವಕ್ಕೆ ಪರಾವಶವಾಗಿದೆ. ಅಧಿಕ ಸಂಖ್ಯೆಯಲ್ಲಿ ಈ ಎರಡೂ ಮಠಕ್ಕೆ ಆಗಮಿಸಿದ್ದರು. 


ರಾಯರ ಮಂತ್ರಾಲಯದಲ್ಲಿ ದೇವರ ಧ್ಯಾನದಲ್ಲಿರುವ ರಾಯರ ಕಣ್ಣು ಭಕ್ತರ ಕಡೆ ದೃಷ್ಟಿ ಹಾಯಿಸಿದ್ದು, ಹೀಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಇಂದು ಭಕ್ತರು ಸೇರ್ಪಡೆಯಾಗಲಿದ್ದಾರೆ. ಅದರಂತೆ ಶಿವಮೊಗ್ಗದ ಈ ಎರಡೂ ಮಠಗಳಲ್ಲಿ ಜನರು ಹೆಚ್ಚುನ ಸಂಖ್ಯೆಯಲ್ಲಿ ಆಗಮಿಸಿ ರಾಯರ ಕೃಪಾಕಟಾಕ್ಷಕ್ಕೆ ಒಳಗಾಗಿದ್ದಾರೆ. 



ಆಯನೂರಿನ ವಾದಿರಾಜ ಆಶ್ರಮದ ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ತಿಲಕ್ ನಗರ ಮತ್ತು ಬೊಮ್ಮನ್ ಕಟ್ಟೆಯ ರಾಯರ ಮಠದಲ್ಲಿಯೂ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಯರು ಜೀವಂತವಾಗಿ ವೃಂದಾವನ ಪ್ರವೇಶವಾದ ದಿನವೇ ಮಧ್ಯಾರಾಧನೆ ಆಗಿದೆ. 


ಮಧ್ಯಾರಾಧನೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳ ಜೊತೆ ಉತ್ಸವಗಳು ಶ್ರೀ ಮಠದಲ್ಲಿ ನಡೆಯುತ್ತಿದೆ, ಇವತ್ತು ಮಂತ್ರಾಲಯದ ರಾಯರ ಮಠದಲ್ಲಿ ಮಧ್ಯಾರಾಧನೆ ನಡೆಯಲಿದೆ. ರಾಯರ ಏಳು ದಿನಗಳ ಆರಾಧನಾ ಮಹೋತ್ಸವದಲ್ಲಿ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾಧನೆ ಈ ಮೂರು ದಿನಗಳು ಅತಿ ಮಹತ್ವವಾಗಿವೆ.  


ಸರ್ಕಾರಿ ವಸತಿ ಶಾಲೆ ಶಿಕ್ಷಕನ ವಿರುದ್ಧ ಪೋಕ್ಸೋ ದೂರು-ದೂರಿನ ಬೆನ್ನಲ್ಲೆ ಶಿಕ್ಷಕ ಪೊಲೀಸರ ವಶಕ್ಕೆ



ಶಿವಮೊಗ್ಗ/ತೀರ್ಥಹಳ್ಳಿ


ವಸತಿ ಶಾಲೆಯ ಶಿಕ್ಷಕನಿಂದ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಹಿನ್ನಲೆಯಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ದೂರೊಂದು ದಾಖಲಾಗಿದೆ. ದೂರಿನ ಅನ್ವಯ ಸಂಗೀತ ಶಿಕ್ಷಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.


10 ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿರುವ ವಿದ್ಯಾರ್ಥಿನಿಯರ ದೇಹ ಮುಟ್ಟಿ ಅಸಭ್ಯ ವರ್ತನೆ ನಡೆಸಿರುವ ಅರೋಪ ಕೇಳಿ ಬಂದಿದೆ. ಸಂಗೀತ ಶಿಕ್ಷಕ ಇಮ್ತಿಯಾಜ್ (45) ನ ವಿರುದ್ಧ ಪೋಕ್ಸೋ ಆರೋಪ ಮಾಡಲಾಗಿದೆ. 


ಹಲವು ದಿನಗಳಿಂದ ಅಸಭ್ಯವಾಗಿ ವರ್ತಿಸುತ್ತಿರುವ ಶಿಕ್ಷಕನ ದುರ್ವರ್ತನೆ ಬಗ್ಗೆ  ವಿದ್ಯಾರ್ಥಿನಿಯರೇ ಪ್ರಾಂಶುಪಾಲರಿಗೆ ದೂರು ನೀಡಿರುವುದಾಗಿ ಕೇಳಿ ಬಂದಿದೆ. ವಿದ್ಯಾರ್ಥಿನಿಯರ ದೂರಿನ ಮೇರೆಗೆ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಾಂಶುಪಾಲರೇ ದೂರು ದಾಖಲಿಸಿದ್ದರು. 


ಶಿಕ್ಷಕನ ವಿರುದ್ದ‌ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು ತೀರ್ಥಹಳ್ಳಿ ಠಾಣೆಯಲ್ಲಿ ಶಿಕ್ಷಕನ ವಿರುದ್ದ ಪ್ರಕರಣ ದಾಖಲಾಗಿದೆ. ಪೊಕ್ಸೋ ಕಾಯಿದೆ ಅಡಿ ತೀರ್ಥಹಳ್ಳಿ ಪೊಲೀಸರು ಶಿಕ್ಷಕರನ್ನ ವಶಕ್ಕೆ ಪಡೆದಿದ್ದು ಬಂಧನದ ಪ್ರಕ್ರಿಯೆ ನಡೆದಿರುವುದಾಗಿ ತಿಳಿದು ಬಂದಿದೆ. 

ಮಂಗಳವಾರ, ಆಗಸ್ಟ್ 20, 2024

ಬಿಸಿಯೂಟದ ದಾಸ್ತಾನು ಕೊಠಡಿಯಲ್ಲಿ 9 ಅಡಿ ಕಾಳಿಂಗ ಸರ್ಪ ಪ್ರತ್ಯಕ್ಷ



ಸುದ್ದಿಲೈವ್/ಶಿವಮೊಗ್ಗ


ತಾಲೂಕಿನ ಸಂಪೆಕಟ್ಟೆಯ ಮತ್ತಿಕೈ ಶಾಲೆಯ ಬಿಸಿಯೂಟ ದಾಸ್ತಾನು ಕೊಠಡಿಯಲ್ಲಿ ಅವಿತಿದ್ದ 9 ಅಡಿ ಗಾತ್ರದ ಕಾಳಿಂಗ ಸರ್ಪವನ್ನು,ಸೋಮವಾರ ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರದ ಉರಗ ತಜ್ಞ ಅಜಯಗಿರಿ ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಕ್ಕೆ ಬಿಟ್ಟರು.


ಸೋಮವಾರ ಬೆಳಿಗ್ಗೆ ಅಡುಗೆ ಸಹಾಯಕಿ ಪ್ರೇಮ, ಅಕ್ಕಿ ಬೇಳೆಗಾಗಿ ಬಿಸಿಯೂಟ ದಾಸ್ತಾನು ಕೊಠಡಿಯ ಬಾಗಿಲು ತೆರೆದಾಗ ಕಾಣಿಸಿಕೊಂಡಿದೆ. ಮಕ್ಕಳು ಕೂಡ ಶಾಲೆಗೆ ಆಗಮಿಸಿದ್ದರು. ತರಗತಿ ಕೊಠಡಿ ನಡುವೆ ಅಂತರವಿರುವ ಕಾರಣ.. ಮಕ್ಕಳು ಬಿಸಿಯೂಟದ ಕೊಠಡಿಯ ಹತ್ತಿರ ಸುಳಿದಿರಲಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಶಿಕ್ಷಕ ಸುಪ್ರಿತ್ ಡಿಸೋಜ ಕೊಠಡಿಯ ಬಾಗಿಲು ಹಾಕಿ ಹಾವನ್ಜು ಬಂಧಿ ಮಾಡಿದರು. ನಂತರ ಪೋಷಕರಿಗೆ ಸುದ್ದಿ ಮುಟ್ಟಿಸಿದರು ಬಳಿಕ ಅರಣ್ಯ ಇಲಾಖೆಯ ಮೂಲಕ ಅಜಯಗಿರಿಯನ್ನು ಸಂಪರ್ಕಿಸಲಾಯಿತು.


ಶನಿವಾರವೇ ಕಾಳಿಂಗ ಸರ್ಪ ಒಳಗಡೆ ಸೇರಿಕೊಂಡಿರಬೇಕು. ಹೊರಗೆ ಹೋಗಲು ಅವಕಾಶವಿಲ್ಲದೇ ಅಲ್ಲೇ ಉಳಿಯುವಂತಾಗಿತ್ತು ಎನ್ನುತ್ತಾರೆ. ಕಾಳಿಂಗ ಸರ್ಪವನ್ನು ಸೆರೆ ಹಿಡಿದ ನಂತರ ಮಕ್ಕಳು ಮತ್ತು ಪೋಷಕರಿಗೆ ಅಜಯಗಿರಿ, ಕಾಳಿಂಗ ಸರ್ಪ ಕಂಡುಬಂದಾಗ ಮುಂಜಾಗ್ರತಾ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.


ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡರ್ ಸೇರಿದಂತೆ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಭದ್ರಾವತಿಯಲ್ಲಿ ನಾಳೆ ವಿದ್ಯುತ್ ವ್ಯತ್ಯಯ

 ಭದ್ರಾವತಿಯಲ್ಲಿ-ನಾಳೆ-ವಿದ್ಯುತ್-ವ್ಯತ್ಯಯ


Suddi Live/ಭದ್ರಾವತಿ ಆ.20


ಸಿಗೇಬಾಗಿ 66/11 ವಿದ್ಯುತ್ ವಿತರಣಾ ಕೇಂದ್ರದ ಅಭಿವೃದ್ಧಿ ಕಾಮಗಾರಿಯನ್ನು  ಅ 21 ರ ಬುಧವಾರ ಬೆಳಿಗ್ಗೆ  09 - 30 ರಿಂದ  ಸಂಜೆ 06-00 ಘಂಟೆವರೆಗೆ ಹಮ್ಮಿಕೊಂಡಿದೆ. ಭದ್ರಾವತಿಯ ಉಪವಿಭಾಗ ಘಟಕ - 2 ಘಟಕ -4 ಶಾಖಾವ್ಯಾಪ್ತಿಗೆ  ಒಳಪಡುವ ಈ ಕೆಳಕಂಡ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ.


ಹಳೇನಗರ, ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ, ಕಂಚಿಬಾಗಿಲು, ಹಳದಮ್ಮನ ಕೇರಿ, ಖಾಜಿಮೊಹಲ್ಲಾ, ಭೂತನಗುಡಿ , ಹೊಸಮನೆ , ಎನ್. ಎಂ. ಸಿ. ರಸ್ತೆ, ಭೋವಿಕಾಲೋನಿ, ಸಂತೇ ಮೈದಾನ, ಕೇಶವಪುರ, ಬಾಬಳ್ಳಿ ರಸ್ತೆ, ಸತ್ಯಸಾಯಿ ನಗರ, ಶಿವಾಜಿ ವೃತ್ತ, ಹನುಮಂತ ನಗರ, ತಮ್ಮಣ್ಣ ಕಾಲೋನಿ, ಸುಭಾಷ್ ನಗರ, ವಿಜಯ ನಗರ, ,ಕುವೆಂಪು ನಗರ, ನೃಪತುಂಗ ನಗರ, ಸೀಗೇಬಾಗಿ, ಹಳೇ ಸೀಗೇಬಾಗಿ, 


ಅಶ್ವಥ್ಥ್ ನಗರ, ಕಬಳೀಕಟ್ಟೆ, ಭದ್ರಕಾಲೋನಿ, ಕಣಕಟ್ಟೆ, ಚನ್ನಗಿರಿ ರಸ್ತೆ, ಕನಕ ನಗರ, ಗೌರಾಪುರ, ಕೃ. ಉ. ಮಾ. ಸಮಿತಿ (ಎ.ಪಿ.ಎಂ.ಸಿ), ಗಾಂಧಿ ವೃತ್ತ, ಕೋಡಿಹಳ್ಳಿ, ಹೊಸಸೇತುವೆ ರಸ್ತೆ, ಸಿದ್ಧಾರೂಡ ನಗರ, ಶಂಕರಮಠ, ಕನಕ ನಗರ, ಸ್ಮಶಾಣ ಪ್ರದೇಶ, ಕ.ರಾ. ರ. ಸಾ.ನಿ. ಘಟಕ , ಹೊಳೆಹೊನ್ನೂರು ರಸ್ತೆ, ಖಲಂದರ್ ನಗರ,  ಜಟ್ ಪಟ್ ನಗರ, ಅನ್ವರ್ ಕಾಲೋನಿ, ಮೊಮ್ಮಿನ್ ಮೊಹಲ್ಲ, ಅಮೀರ್ ಜಾನ್ ಕಾಲೋನಿ, 


ಮಜ್ಜಿಗೆನ ಹಳ್ಳಿ, ಗೌಡರಹಳ್ಳಿ, ಬಾಬಳ್ಳಿ, ವೀರಾಪುರಾ   ಶ್ರೀ ರಾಮನಗರ ಮತ್ತು ಲಕ್ಷ್ಮೀಪುರ  ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ಕೊರಿದೆ.

ಬಡತನದಲ್ಲಿ ಸಾಧನೆ ಶಿಖರವೇರಿದ ಚಂದ್ರಗುತ್ತಿಯ ಐಶ್ವರ್ಯ: ಸರ್ಕಾರ ಮತ್ತು ದಾನಿಗಳ ನೆರವು ಅಗತ್ಯ

 


ಸುದ್ದಿಲೈವ್/ಸೊರಬ


ತಾಲೂಕಿನ ಚಂದ್ರಗುತ್ತಿಯ ಕಡೆ ಜೋಳದ ಗುಡ್ಡೆ ಎಂಬ ಗ್ರಾಮದಲ್ಲಿ ಬಡ ದಂಪತಿ ವೆಂಕಟೇಶ್ ಮತ್ತು ಮಂಜುಳಾ ಅವರ ಮಗಳು, ಐಶ್ವರ್ಯ, ಅನೇಕ ರಾಜ್ಯಳಲ್ಲಿ ನಡೆದ ಕಾಯಕಿಂಗ್, ಮೌಂಟನೆರಿಂಗ್ ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಿ, ಅನೇಕ ಪದಕಗಳನ್ನು ಗೆದ್ದುಕೊಂಡಿದ್ದಾಳೆ. ಈ ಪ್ರತಿಭಾವಂತ ಕ್ರೀಡಾಪಟುವಿಗೆ ಒಲಂಪಿಕ್ ಕ್ರೀಡೆಯಲ್ಲಿ ಭಾಗವಹಿಸುವ  ತವಕ ಇದ್ದು ತನ್ನ ಸಾಧನೆಯನ್ನು ಮುಂದುವರಿಸಲು ಸರ್ಕಾರ ಮತ್ತು ಸಮಾಜಮುಖಿ ಚಿಂತನೆ ಹೊಂದಿರುವ ದಾನಿಗಳ ನೆರವು ಅತ್ಯಾವಶ್ಯಕವಾಗಿದೆ.


ಈ ಸಮಯದಲ್ಲಿ, ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಮಾಜ ಸೇವಕರಾದ  ಡಾ|| ಜ್ಞಾನೇಶ್ ಹೆಚ್. ಈ. ಅವರು ವೈಯಕ್ತಿಕವಾಗಿ ಧನ ಸಹಾಯ ಮಾಡಿದ್ದು, ಬಡತನದಲ್ಲಿ ಹುಟ್ಟಿ ಬೆಳೆದ ಐಶ್ವರ್ಯಳಿಗೆ ಬಡತನ ಅಡ್ಡಿಯಾಗಿರಬಹುದು  ಸಾಧಿಸುವ ಛಲ ಇದ್ದಾಗ ಯಾವುದೇರೀತಿಯ ಅಡ್ಡಿ ಆತಂಕಗಳು ದೂರವಾಗುತ್ತದೆ," ಎಂದು ಹೇಳಿದರು. ಅವರು, ಈ ಪ್ರತಿಭಾವಂತೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ, ರಾಜ್ಯಕ್ಕೆ ಮತ್ತು ತಾಲೂಕಿಗೆ ಕೀರ್ತಿಯನ್ನು ತರುತ್ತಾಳೆ," ಎಂದು ಆಶಿಸಿದರು.


ಕ್ರೀಡಾ ಸಾಧನೆಗೆ ಅಗತ್ಯವಿರುವ ನೆರವು ಈ ಪ್ರತಿಭೆಯ ಮುಂದಿನ ಹೆಜ್ಜೆಯನ್ನು ಸಹಸ್ರಗೊಳಿಸಲು  ದಾನಿಗಳು ಮತ್ತು ಸರ್ಕಾರ ಮುಂದಾಗಬೇಕಾಗಿದೆ.

ಐವಾನ್ ಡಿಸೋಜಾ ವಿರುದ್ಧ ಎಸ್ಪಿಗೆ ದೂರು



ಸುದ್ದಿಲೈವ್ /ಶಿವಮೊಗ್ಗ


ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಬಾಂಗ್ಲಾದೇಶ ರೀತಿಯಲ್ಲಿ ಗಲಭೆ ಆಗುತ್ತದೆ ಎಂಬ ಹೇಳಿಕೆ ವಿರುದ್ಧ ಬಿಜೆಪಿ ಜಿಲ್ಲಾ ಯುವಮೋರ್ಚಾ ಜಿಲ್ಲಾರಕ್ಷಣಾಧಿಕಾರಿ ಮತ್ತು ದೊಡ್ಡಪೇಟೆ ಪೊಲೀಸ್ ಠಾಣೆ ಪಿಐಗೆ ಮನವಿ ಸಲ್ಲಿಸಿದೆ. 


ಶಿವಮೊಗ್ಗದಲ್ಲಿ ಐವನ್ ಡಿಸೋಜ ವಿರುದ್ಧ ದೂರು . ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಗೆ ದೂರು ನೀಡಲಾಗಿದ್ದು, ದೂರು ನೀಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಐವತ್ತಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಎಸ್ಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಲಾಯಿತು.ಹಾಗೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಯಿತು. 


ಬಾಂಗ್ಲಾ ದೇಶದಲ್ಲಿ ಆದ ಹಿಂಸಾಚಾರದ ಸ್ವರೂಪ ಇಲ್ಲೂ ಆಗುತ್ತದೆ ಎಂಬ ಎಂಎಲ್ ಸಿ ಐವಾನ್ ಡಿಸೋಜ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಯುವ ಮೋರ್ಚಾ ಕಾರ್ಯಕರ್ತರು, ಕೂಡಲೇ ಈ ಬಗ್ಗೆ ಪೊಲೀಸರು ಎಫ್ ಐ ಆರ್ ದಾಖಲು ಮಾಡಿಕೊಂಡು ಐವಾನ್ ಡಿಸೋಜ ಬಂಧಿಸಬೇಕೆಂದು ಒತ್ತಾಯಿಸಿದರು.


ಇದರ ಜೊತೆ ಸಿಎಂ ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಯಿತು. ಈ ವೇಳೆ ಮಾತನಾಡಿದ ಹರಿಕೃಷ್ಣ ಕೈಯಲ್ಲಿ ಸಂವಿಧಾನ ಹಿಡಿದು ಪರಿಪಾಲಕನಂತೆ ಬಿಂಬಿಸಿಕೊಳ್ಳುವ ರಾಹುಲ್ ಗಾಂಧಿ ಐವನ್ ಹೇಳಿಕೆ ಸಂವಿಧಾನ ಬದ್ದವಾಗಿದೆಯಾ ಅಥವಾ ಇಲ್ಲವಾ ಎಂಬುದನ್ನ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು. 


ರಾಷ್ಟ್ರೀಯ ಹಬ್ಬಗಳ ಆಚರಣೆಗಳನ್ನ ನೆಹರೂ ಕ್ರೀಡಾಂಗಣ ಅಥವಾ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಾ? ಶಾಸಕರ ಆಶಾಭಾವನೆ ಏನು?



ಸುದ್ದಿಲೈವ್/ಶಿವಮೊಗ್ಗ


ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯದ ಸಂಭ್ರಮಾಚರಣೆಯನ್ನ ಇನ್ನು ಮುಂದೆ ನೆಹರೂ ಕ್ರೀಡಾಂಗಣ ಅಥವಾ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಆಶಾಭಾವನೆಯನ್ನ ಶಾಸಕ ಚೆನ್ನಬಸಪ್ಪ ವ್ಯಕ್ತಪಡಿಸಿದ್ದಾರೆ. 


ಸುಮಾರು 12 ವರ್ಷಗಳ ಹಿಂದೆ ನೆಹರೂ ಕ್ರೀಡಾಂಗಣದಲ್ಲಿ ನಡೆಯತ್ತಿದ್ದ ರಾಷ್ಟ್ರೀಯ ಹಬ್ಬವನ್ನ ಡಿಎಆರ್ ಮೈದಾನಕ್ಕೆ ಶಿಫ್ಟ್ ಆಗಿತ್ತು. ಆಗ ಸಿಂಥೆಟಿಕ್ ಟ್ರ್ಯಾಕ್ ಇರುವ ಕಾರಣ ಸಂಭ್ರಮಾಚರಣೆಯ ಜಾಗವನ್ನೇ ಬದಲಿಸಲಾಗಿತ್ತು. ಆದರೆ ಈಗ ಸಿಂಥೆಟಿಕ್ ಟ್ರ್ಯಾಕ್ ಇರುವ ಕಡೆ ರಾಷ್ಟ್ರೀಯ ಹಬ್ಬಗಳನ್ನ ನಡೆಸುವ ಬಗ್ಗೆ ಪಾಸಿಟಿವ್ ಮಾತುಗಳು ಕೇಳಿ ಬರುತ್ತಿವೆ. 


ಮೊನ್ನೆ ಪಾಲಿಕೆ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ರಾಷ್ಟ್ರೀಯ ಹಬ್ಬಗಳನ್ನ ನೆಹರೂ ಕ್ರೀಡಾಂಗಣ ಅಥವಾ ಫ್ರೀಡಂ ಪಾರ್ಕ್ ನಲ್ಲಿ ಆಚರಿಸಲು ಅವಕಾಶ ಕಲ್ಪಿಸಬೇಕು ಎಂಬ ಮಾತು ಜನಪ್ರತಿನಿಧಿಗಳಿಂದಲೇ ಕೇಳಿ ಬಂದಿದೆ.  


ಸಚಿವರು ಸಹ ಜನರ ಜೊತೆ ರಾಷ್ಟ್ರೀಯ ಹಬ್ಬ ಆಚರಿಸಬೇಕೆಂಬ ಆಸೆಯನ್ನ ಹೊರಹಾಕಿದ್ದಾರೆ. ಈ ಮೊದಲು ನೆಹರೂ ಕ್ರೀಡಾಂಗಣದಲ್ಲಿ ಸುತ್ತಲೂ ವಿದ್ಯಾರ್ಥಿಗಳು ಕುಳಿತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದ ಗತಕಾಲ ಮರುಕಳಿಸುವ ಆಶಾಭಾವನೆ ಹೊರಬಿದ್ದಿದೆ. ಆದರೆ ಡಿಎಆರ್ ಮೈದಾನದಲ್ಲಿ ಈ ಸೊಬಗು ಕಣ್ಮರೆಯಾಗಿದೆ. 


ಸಚಿವರ ಮತ್ತು ಶಾಸಕರ ಮಾತುಗಳಿಂದ ಕಳೆದು ಹೋದ ರಾಷ್ಟ್ರೀಯ ಹಬ್ಬಗಳ ವೈಭವ ಮತ್ತೆ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಇಂದು ಶಾಸಕರ ಸುದ್ದಿಗೋಷ್ಠಿಯಲ್ಲೂ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ‌ ಪಾಲಿಕೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಸಿಟಿವ್ ಮಾತನಾಡಿದ್ದಾರೆ. ಕಾದು ನೋಡೋಣ ಎಂದಿದ್ದಾರೆ. 

ಗಣಪತಿ ಹಾಗೂ ಈದ್ ಮೆರವಣಿಗೆ ನಡೆಯೋದು ಯಾವಾಗ? ಈ ಕುರಿತು ಶಾಸಕರ ಹೇಳಿಕೆ ಏನು?



ಸುದ್ದಿಲೈವ್/ಶಿವಮೊಗ್ಗ


ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮಹೋತ್ಸವ ಮತ್ತು ಈದ್ ಹಬ್ಬದ ಮೆರವಣಿಗೆ ಬಹುತೇಕ ಒಟ್ಟಿಗೆ ಬಂದಿದ್ದು ಈ ಬಾರಿಯೂ ಏನಾಗಲಿದೆ ಎಂಬ ಕುತೂಹಲ ಆರಂಭವಾಗಿದೆ.  


ಕಳೆದ ವರ್ಷ ಈದ್ ಮೆರವಣೆಗೆಯ ವೇಳೆ ರಾಗಿಗುಡ್ಡದಲ್ಲಿ ಅವಘಡ ಸಂಭವಿಸಿತ್ತು. ಈ ಹಿನ್ನಲೆಯಲ್ಲಿ ಮೆರವಣೆಗೆಗಳು ಏನಾಗಲಿದೆ ಎಂಬ ಕುತೂಹಲಕ್ಕೆ ಇಂದು ನಡೆದ ಶಾಸಕ ಚೆನ್ನಬಸಪ್ಪನವರ ಸುದ್ದಿಗೋಷ್ಠಿಯಲ್ಲೂ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಾಸಕ ಚೆನ್ನಬಸಪ್ಪ ಪೊಲೀಸ್ ಅಧಿಕಾರಿಗಳ ಜೊತೆಯ ಮಾತುಕತೆ ಮುಂದುವರೆದಿದೆ ಎಂದಿದ್ದಾರೆ. 


ಈ ಬಾರಿಯ ಮೆರವಣಿಗೆಗಳು ಅದಕ್ಕೆ ಸಿದ್ದತೆಗಳು ನಡೆಯಬೇಕಿದೆ. ಆಚರಣೆಯ ಬಗ್ಗೆ ಡಿವೈಎಸ್ಪಿ ಬಳಿ ಮಾತುಕತೆ ನಡೆಯುತ್ತಿದೆ. ಯಾವುದೂ ಫೈನಲ್ ಆಗಿಲ್ಲ.‌ಆಚರಣೆಗೆ ಇನ್ನೂ ದಿನಗಳಿವೆ ಎಂದರು.‌

ಸೋಮವಾರ, ಆಗಸ್ಟ್ 19, 2024

ರೇಣುಕಾಂಬ ದೇಗುಲಕ್ಕೆ ಭಕ್ತರ ದಂಡು-ಶ್ರಾವಣ ನೂಲು ಹುಣ್ಣಿಮೆಯ ವಿಶೇಷ ಪೂಜೆ

 


ಸುದ್ದಿಲೈವ್/ಸೊರಬ


ಶ್ರಾವಣ ಮಾಸದ ನೂಲು ಹುಣ್ಣಿಮೆಯ ಪ್ರಯುಕ್ತ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತಾದಿಗಳು ಸೋಮವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು. ಮಲೆನಾಡಿನ ಆರಾಧ್ಯ ಶಕ್ತಿ ದೇವತೆಯಾದ ಶ್ರೀ ರೇಣುಕಾಂಬೆಯ ದರ್ಶನ ಪಡೆಯಲು ಶಿವಮೊಗ್ಗ ಸೇರಿದಂತೆ ವಿವಿಧ ಹೊರಜಿಲ್ಲೆಗಳಿಂದ ಭಕ್ತರು ದೇವಳಕ್ಕೆ ಬಂದು 'ಉದೋ ಉದೋ' ಎನ್ನುವ ಗೋಶದೊಂದಿಗೆ ಭಕ್ತಿ ಸಮರ್ಪಿಸಿದರು. 


ವಿಶೇಷ ಪೂಜೆಯಲ್ಲಿ ಪರಿವಾರ ದೇವತೆಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರುಶುರಾಮ, ತ್ರಿಶೂಲ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವರ ಹೆಸರಿನಲ್ಲಿ ಧಾರ್ಮಿಕ ಸೇವೆ ಹಾಗೂ ಹರಕೆಗಳನ್ನು ಅರ್ಪಿಸಿದರು.


ತೀವ್ರ ಮಳೆಯಿಂದಾಗಿ ಸ್ವಲ್ಪಕಾಲ ಭಕ್ತರಿಗೆ ತೊಂದರೆ ಉಂಟಾದರೂ, ಭಕ್ತರ ಸಂಖ್ಯೆ ಕಡಿಮೆಯಾಗದೆ, ದೇವಾಲಯದ ವಾತಾವರಣ ಭಕ್ತಿಮಯವಾಗಿ ಕಂಗೊಳಿಸಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ, ರಥ ಬೀದಿಯಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ಜೋರಾಗಿಯೇ ನಡೆಯಿತು. 


ಪೊಲೀಸ್ ಇಲಾಖೆಯಿಂದ ಭಕ್ತರ ಸುರಕ್ಷತೆಗಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು, ಭಕ್ತರ ದರ್ಶನ ಶಾಂತಿಯುತವಾಗಿ ನೆರವೇರಿತು.


ವರದಿ ಮಧು ರಾಮ್  ಸೊರಬ

ಬೆಳ್ಳಂಬೆಳಿಗ್ಗೆ ಶಾಸಕ ಚೆನ್ನಬಸಪ್ಪರಿಂದ ಸಿಟಿ ರೌಂಡ್ಸ್



ಸುದ್ದಿಲೈವ್/ಶಿವಮೊಗ್ಗ 


ಶಿವಮೊಗ್ಗದಲ್ಲಿ ದಿಡೀರ್ ಎಂದು ಕುಡಿಯುವ ನೀರಿನ ಬಗ್ಗೆ ಸಮಸ್ಯೆಗಳು ಉದ್ಭವಿಸಿದೆ. ಕೆಲ ಮನೆಗಳಿಗೆ ಕುಡಿಯುವ ನೀರು ಹೆಚ್ಚಿನ ಫೋರ್ಸ್ ಆಗಿ ಬರುತ್ತಿಲ್ಲವೆಂದು ದೂರಿದರೆ, ಕೆಲ ಬಡಾವಣೆಗಳಲ್ಲಿ ಇನ್ನೂ ಕುಡಿಯುವ ನೀರು ಮನೆಗಳಿಗೆ ಬರ್ತಾಯಿಲ್ಲ. 


ಈ ಬಗ್ಗೆ ಬೆಳ್ಳಂಬೆಳಿಗ್ಗೆ ಶಾಸಕ ಚೆನ್ನಬಸಪ್ಪ ನಗರ ರೌಂಡ್ಸ್ ಮಾಡಿದ್ದಾರೆ.   ನಗರದ ಬಿ.ಬಿ ರಸ್ತೆ ಹಾಗೂ ಕುಂಬಾರಕೇರಿಯ ಬಡಾವಣೆಗಳಿಗೆ ಜಲಮಂಡಳಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸ್ಥಳೀಯರ ಸಮಸ್ಯೆಗಳನ್ನುಆಲಿಸಿ ಕೂಡಲೇ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.


ಬಿಬಿ ರಸ್ತೆಯಲ್ಲಿ ಒಂದು ಕಡೆ 9 ಮನೆಗಳಿಗೆ ಮತ್ತು ಒಂದು ಲೈನ್ ಮನೆಗಳಿಗೆ  ಈ ಹಿಂದೆ ಕುಡಿಯುವ ನೀರನ್ನ ಮೈನ್ ವಾಲ್ ಗಳಿಂದ ನೀಡುತ್ತಿದ್ದರಿಂದ ಹೆಚ್ಚಿನ‌ಫೋರ್ಸ್ ನಲ್ಲಿ ನೀರು ಮನೆಗಳಿಗೆ ತಲುಪುತ್ತಿತ್ತು. ಆದರೆ ಈಗ ಈ ಮನೆಗಳಿಗೆ 24×7 ರ ಅಡಿಯಲ್ಲಿ ಟ್ಯಾಂಕ್ ಮೂಲಕ ನೀರು ಬರುತ್ತಿರುವುದರಿಂದ  ಹೆಚ್ಚಿನ ಫೋರ್ಸ್ ನಲ್ಲಿ ಬರುತ್ತಿಲ್ಲ ಎಂಬುದು ಸ್ಥಳೀಯರ ದೂರಾಗಿದೆ. 


ಈ ಬಗ್ಗೆ ಗಮನ ಹರಿಸಿ ಆ.22 ರ ಒಳಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಡೆಡ್ ಲೈನ್ ನೀಡಲಾಗಿದೆ.

ಕಟ್ಟಡ ಕಾರ್ಮಿಕರ ಹಕ್ಕೊತ್ತಾಯದ ಬೃಹತ್ ಬೈಕ್ ರ್ಯಾಲಿ



ಸುದ್ದಿಲೈವ್/ಶಿವಮೊಗ್ಗ


ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಇಂದು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಶಿವಮೊಗ್ಗ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು. ನಂತರ  ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರನ್ನ, ಜಿಲ್ಲಾಧಿಕಾರಿಗಳನ್ನ  ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.‌ 


ಅಶೋಕ ವೃತ್ತ, ಶಿವಪ್ಪನಾಯಕ ವೃತ್ತ, ಎಮ್ಆರ್ ಎಸ್, ಬೈಪಾಸ್ ರಸ್ತೆ, ಮಂಡ್ಲಿ, ಗೋಪಾಳ, ಆಲ್ಕೊಳ ವೃತ್ತ, ವಿನೋಬ ನಗರ, ಉಷಾ ನರ್ಸಿಂಗ್ ಹೋಂ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ದುರ್ಗಿಗುಡಿ, ಗೋಪಿ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ.  ಶಿವಮೊಗ್ಗ ಜಿಲ್ಲೆಗೆ ಅಂತರ ರಾಜ್ಯದಿಂದ ಕಾರ್ಮಿಕ ಕೆಲಸಕ್ಕೆ ಎಂದು ಆಗಮಿಸಿರುವ ಕಾರ್ಮಿಕರ ಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಠಾಣೆಯ ವ್ಯಾಪ್ತಿಯಲ್ಲಿ ಪಡೆಯುವ ಕುರಿತು ಮನವಿ ಸಲ್ಲಿಸಲಾಯಿತು. 


ಮನವಿಯಲ್ಲಿನ ಬೇಡಿಕೆಗಳು


1. ಅಂತರ ರಾಜ್ಯದಿಂದ ಕೆಲಸಕ್ಕೆ ಬಂದವರು ಅವರು ಪೂರ್ವಪರ ಯಾವುದೇ ಮಾಹಿತಿ ನೀಡದೆ ಕೆಲವೇ ಕೆಲವು ದಿನ ಕೆಲಸ ಮಾಡಿ ಅಲ್ಲಿಂದ ಸಾಲ ಮಾಡಿ ಕೈಗೆ ಸಿಕ್ಕುವ ವಸ್ತುಗಳನ್ನು ತೆಗೆದುಕೊಂಡು ಹೇಳದೇ ಕೇಳದೆ ಹೋಗುತ್ತಿರುವುದು  ಕುರಿತು.


2.  ಅಂತರ ರಾಜ್ಯದಿಂದ ಕೆಲಸಕ್ಕೆ ಬರುವವರು ಆ ರಾಜ್ಯದಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ಇಲ್ಲಿ ಕೆಲಸ ಮಾಡಲು ಯಾವುದೇ ಮಾಹಿತಿ ನೀಡದೆ ಇರುವುದರ ಕುರಿತು.


3.  ಸ್ಥಳೀಯವಾಗಿ ಕೆಲಸ ಮಾಡುವಾಗ ಪುರುಷರು ಸ್ಥಳೀಯ ಸ್ತ್ರೀಯರನ್ನು ವರಿಸುವುದು ಹಾಗೂ ಪುಸಲಾಯಿಸಿ ಕರೆದುಕೊಂಡು ಹೋಗುತ್ತಿರುವುದರ ಕುರಿತು.


4.  ನಗರದಲ್ಲಿ ಕಟ್ಟಡ ಕಾಮಗಾರಿ ಮಾಡುವವರು ಕೆಲವು ದಿನಗಳು ಕೆಲಸ ಮಾಡಿ ಬೆಲೆಬಾಳುವ ಮಿಷನರಿ ವಸ್ತುಗಳನ್ನು ಕಳ್ಳತನ ಮಾಡುತ್ತಿರುವುದರ ಕುರಿತು ಮನವಿಯಲ್ಲಿ ಒತ್ತಾಯಿಸಿದ್ದಾರೆ. 

ಠಾಣೆಗೆ ತೆರಳಿ ಪೊಲೀಸರಿಗೆ ರಾಖಿ ಕಟ್ಟಿದ ಕಾನೂನು ವಿದ್ಯಾರ್ಥಿನಿಯರು




ಸುದ್ದಿಲೈವ್/ಶಿವಮೊಗ್ಗ


ಮಾನವ ಬಂಧುತ್ವ ವೇದಿಕೆ ಸೊರಬ ಹಾಗೂ ಕಾನೂನು ವಿದ್ಯಾರ್ಥಿಗಳಿಂದ ಇಂದು ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು, 


ಠಾಣೆಗೆ ತೆರಳಿದ ಸಂಘಟನಾಕಾರರು ಮತ್ತು ವಿದ್ಯಾರ್ಥಿಗಳು ಪೊಲೀಸರಿಗೆ ಪೂಜೆ ಮಾಡಿ ರಾಖಿ ಕಟ್ಟಿದ್ದಾರೆ.‌ಈ ಕಾರ್ಯಕ್ರಮನ ಉದ್ದೇಶಿಸಿ  ಕಾನೂನು ವಿದ್ಯಾರ್ಥಿ ಹಾಗೂ ಸಮಾಜ ಸೇವಕರಾದ ಶಶಿಕುಮಾರ್ ಕೆ ಅವರು ರಕ್ಷಾ ಬಂಧನ ಎಂದರೆ ಒಡಹುಟ್ಟಿದ ಸಹೋದರರಿಗೆ ಮಾತ್ರ ಸೀಮಿತವಾಗಿಲ್ಲ ರಕ್ಷಾ ಬಂಧನ ವು ನಮಗೆ ರಕ್ಷಣೆ ಕೊಡುವಂತಹ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದು ಎಂದು ಹೇಳಿದರು,



ಮಾನವ ಬಂಧುತ್ವ ವೇದಿಕೆ ಸೊರಬ ಅಧ್ಯಕ್ಷರಾದ ರಾಜೇಶ್ ಸಿ ಕಾನಡೆ ಅವರು ಮಾತನಾಡಿ ಪೋಲಿಸ್ ಇಲಾಖೆಯವರು ನಮಗೆ ಯಾವುದೇ ಜನಾಂಗ ಧರ್ಮ ಲಿಂಗ ಜಾತಿ ಎಂಬ ತಾರತಮ್ಯವಿಲ್ಲದೆ ನಮಗೆ ರಕ್ಷಣೆ ನೀಡುವ ಹೊರೆಯನ್ನು ಹೊತ್ತಿದ್ದಾರೆ ಆದ್ದರಿಂದ ಅವರಿಗೆ ರಾಕಿ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಿಸರಿಸಿದ್ದೇವೆ ಈ ರೀತಿಯಾಗಿ ನಾವು ಪೋಲಿಸ್ ಇಲಾಖೆಗೆ ಧನ್ಯವಾದಗಳನ್ನು ತಿಳಿಸಿದ್ದೇವೆ.


ಈ ಕಾರ್ಯಕ್ರಮದಲ್ಲಿ ಕಾನೂನು ವಿದ್ಯಾರ್ಥಿಗಳಾದ 1 ಸ್ಪಂದನ, 2 ಅಕ್ಷತಾ, 3 ಸಂಗೀತ, 4 ಐಶ್ವರ್ಯ, 5 ವಿದ್ಯಾ,  6 ಸ್ನೇಹ, 7 ಭಾರತಿ ಹಾಗೂ ಸಹೋದರಿ ಯಾದಂತಹ  ಶಿಲ್ಪ ಅಜಯ್,   ಕಾವ್ಯ, 3 ರೇವತಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಪೋಲಿಸ್ ಇಲಾಖೆಯ PSI ಕೋಮಲ ಮೇಡಂ  ಸಿಬ್ಬಂದಿಗಳಾದ ಸಚಿನ್ ಸರ್ ರಾಮಕೃಷ್ಣ ಸರ್ ಗಾಯತ್ರಿ ಮೇಡಂ ಸರೋಜಿನಿ ಮೇಡಂ ರಾಘವೇಂದ್ರ ಸರ್ ಹಾಗೂ ಹಲವಾರು ಸಿಬ್ಬಂದಿ ವರ್ಗದವರಿದ್ದರು.

ಆ.20 ರಂದು ವಿದ್ಯುತ್ ವ್ಯತ್ಯಯ

 


ಸುದ್ದಿಲೈವ್/ಶಿವಮೊಗ್ಗ


ನ.ಉ.ವಿ-2ರ ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ  ತ್ರೆöÊಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ  ಆ.20 ರಂದು ಬೆಳಗ್ಗೆ 09.00 ಗಂಟೆಯಿಂದ  ಸಂಜೆ 6.00 ರವರೆಗೆ ಈ ವ್ಯಾಪ್ತಿಗೆ ಸೇರಿರುವ ಪಿಯರ್‌ಲೈಟ್, ಪೇಪರ್ ಪ್ಯಾಕೇಜ್, ಓ.ಟಿ.ರಸ್ತೆ, ಪಂಚವಟಿ ಕಾಲೋನಿ, ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರ್, 


ಇಲಿಯಾಜ್‌ನಗರ 1 ರಿಂದ 13ನೇ ಕ್ರಾಸ್, ಸಿದ್ದೇಶ್ವರ ಸರ್ಕಲ್, ಫಾರೂಕ್ಯ ಶಾದಿಮಹಲ್, ತುಂಗಾನಗರ ಆಸ್ಪತ್ರೆ, ವೈಷ್ಣವಿ ಲೇಔಟ್, ಭವಾನಿ ಲೇಔಟ್, ಗದ್ದೇಮನೆ ಲೇಔಟ್, ಚಾಲುಕ್ಯನಗರ, ಕೆಹೆಚ್‌ಬಿ ಕಾಲೋನಿ, ಮಂಡಕ್ಕಿಭಟ್ಟಿ, ಮೇಲಿನ ಮತ್ತು ಕೆಳಗಿನ ತುಂಗಾನಗರ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿನಗರ 80 ಅಡಿರಸ್ತೆ, ಕಾಮತ್ ಲೇಔಟ್, ಆನಂದರಾವ್ ಬಡಾವಣೆ, 


ಗಾರ್ಡನ್ ಏರಿಯಾ, ಸಿಟಿ ಸೆಂಟ್ರಲ್ ಮಾಲ್, ರಾಯಲ್ ಆರ್ಕೇಡ್, ಸರ್ಕಾರಿ ಮತ್ತು ಖಾಸಗಿ ಬಸ್‌ನಿಲ್ದಾಣ, ಇಲಿಯಾಜ್‌ನಗರ ಲಾರಿ ಗ್ಯಾರೇಜ್, ಬಿಹೆಚ್ ರಸ್ತೆ, ಸಾಗರ ನರ್ಸರಿ, ಚಾನಲ್ ಏರಿಯಾ ಹಾಗೂ  ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ಪ್ರಕಟಣೆ ತಿಳಿಸಿದೆ

ಶನಿವಾರ, ಆಗಸ್ಟ್ 17, 2024

ಜಾಗೃತಿಗಾಗಿ ಆ.19 ರಂದು ಬೈಕ್ ರ್ಯಾಲಿ



ಸುದ್ದಿಲೈವ್/ಶಿವಮೊಗ್ಗ


ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕರ ಹಿತಾರಕ್ಷಣ ವೇದಿಕೆ ವತಿಯಿಂದ ಜನಜಾಗೃತಿಗಾಗಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. 


ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದೇವು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊರರಾಜ್ಯದಿಂದ ಕಟ್ಟಡ ಕಾರ್ಮಿಕ ಕೆಲಸಕ್ಕೆ ಬರುಔರು ಕ್ರಿಮಿನಲ್ ಹಿನ್ನಲೆಯನ್ನ‌ ಹೊಂದಿರುತ್ತಾರೆ. ಯಾವುದೇ ಮಾಹಿತಿ ನೀಡದೇ ಇರುವುದು ಕೂಡ ಹೆಚ್ಚಾಗಿದೆ. 


ಸ್ಥಳೀಯ ಮಹಿಳೆಯರನ್ನ ಆಕರ್ಷಿಸಿ ಕರೆದುಕೊಂಡು ಹೋಗುವುದು. ಬೆಲೆ ಬಾಳುವ ಯಂತ್ರೋಪಕರಣವನ್ನ ಕಳುವು ಮಾಡುವುದು. ಆಧಾರ್ ಕಾರ್ಡ, ರೇಷನ್ ಕಾರ್ಡ್ ಗಳನ್ನ ಪಡೆದು ಕೆಲಸ ನೀಡಬೇಕು. ಇಂಜಿನಿಯರ್, ಮೇಸ್ತ್ರಿಗಳು ವಹಿಸಬೇಕು ಎಂದು ಆಗ್ರಹಿಸಿ ಬೈಕ್ ರ್ಯಾಲಿ ನಡೆಸಲಾಗುತ್ತಿದೆ. 


ಆ.19 ರಂದು ಬೆಳಿಗ್ಗ 10-30 ಕ್ಕೆ ಬಸ್ ನಿಲ್ದಾಣದಿಂದ ಬೈಕ್ ರ್ಯಾಲಿ ಆರಂಭವಾಗಲಿದ್ದು,  ಅಶೋಕ ವೃತ್ತ, ಶಿವಪ್ಪನಾಯಕ ವೃತ್ತ, ಎಮ್ಆರ್ ಎಸ್, ಬೈಪಾಸ್ ರಸ್ತೆ, ಮಂಡ್ಲಿ, ಗೋಪಾಳ, ಆಲ್ಕೊಳ ವೃತ್ತ, ವಿನೋಬ ನಗರ, ಉಷಾ ನರ್ಸಿಂಗ್ ಹೋಂ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ದುರ್ಗಿಗುಡಿ, ಗೋಪಿ ವೃತ್ತದ ಮೂಲಕ ಡಿಸಿ ಕಚೇರಿ ತಲುಪಲಿದೆ.