ನಗರ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಗರ ಸುದ್ದಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಆಗಸ್ಟ್ 23, 2024

ಕೈಗಳು ಕೆಲಸ, ಕಾರ್ಯ ಮಾಡುವ ಜೊತೆಗೆ ಭಾಷಾ ಸಂಜ್ಞೆಯಾಗಿಯೂ ಮಾಡುತ್ತದೆ-ಡಾ.ಚೇತನ್ ಕುಮಾರ್ ನವಿಲೇಹಾಳ್



ಸುದ್ದಿಲೈವ್/ಶಿವಮೊಗ್ಗ


ಮನುಷ್ಯನ ದೇಹವೇ ಒಂದು ಅದ್ಭುತ ಸೃಷ್ಟಿ, ಇದರಲ್ಲಿ  ಕೈಗಳು ಕೂಡ ಅತ್ಯಂತ ಪ್ರಮುಖ ಅಂಗವಾಗಿದ್ದು, ಕೈಗಳು ಕೆಲಸ, ಕಾರ್ಯಗಳನ್ನು ಮಾಡುವ ಜೊತೆಗೆ ಭಾಷಾ ಸಂಜ್ಞೆಯಾಗಿಯೂ ಕೆಲಸವನ್ನು ಮಾಡುತ್ತದೆ, ಕೈಗಳನ್ನು ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು  ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ.ಚೇತನ್ ಕುಮಾರ್ ನವಿಲೇಹಾಳ್ ಅಭಿಪ್ರಾಯಿಸಿದರು. 


ಇಲ್ಲಿನ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೈ ಶಸ್ತ್ರ ಚಿಕಿತ್ಸಾ ದಿನದ ಕಾರ್ಯಕ್ರಮದಲ್ಲಿ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. “ಕೈ ಗಾಯದ ನಂತರ ಅಂಗ ವೈಕಲ್ಯ ತಡೆಗಟ್ಟುವಿಕೆ” ಯ ಥೀಮ್ ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ, ಕೈ ಬೆರಳು ತುಂಡಾಗಿದ್ದರೆ ಇಲ್ಲವೇ ತೀವ್ರ ಗಾಯಗೊಂಡಿದ್ದರೆ ಬೆರಳಿನ ಉಂಗುರವನ್ನು ತೆಗೆಯಬೇಕು, ಕಟ್ ಆಗಿದ್ದರೆ ಸಂರಕ್ಷಣೆ ಮಾಡಿ ತಕ್ಷಣವೇ ತರಬೇಕು, ಇದು ಯಶಸ್ವಿ ಚಿಕಿತ್ಸೆಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು. 


ಅಪಘಾತ ಅಥವಾ ದುರಂತದಲ್ಲಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ಕತ್ತರಿಸಿದಾಗ ಚಿಂತಾಕ್ರಾಂತರಾಗುವುದಕ್ಕಿಂತ ಆ ಕ್ಷಣ ಸ್ವಲ್ಪ ಯೋಚಿಸಿ ಮುಂಜಾಗ್ರತಾ ಕ್ರಮಗಳನ್ನು ಕ್ರಮ ಕೈಗೊಂಡರೆ ಮತ್ತೆ ಹೊಸ ಬದಕನ್ನು ಕಂಡುಕೊಳ್ಳಬಹುದು. ಅವಘಡ ಸಂಭವಿಸಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ತುಂಡಾಗಿದ್ದರೆ ಭಯಪಡದೇ ಆತ್ಮಸ್ಥೈರ್ಯದೊಂದಿಗೆ ತುಂಡಾದ ಭಾಗವನ್ನು ಪ್ಲಾಸ್ಟಿಕ್ ಕವರ್ ನೊಂದಿಗೆ  ಐಸ್ ಬಾಕ್ಸ್ ನಲ್ಲಿಟ್ಟು 6 ಗಂಟೆಯೊಳಗೆ ಆಸ್ಪತ್ರೆಗೆ ತಂದರೆ ಶಸ್ತ್ರ ಚಿಕಿತ್ಸೆ ಮಾಡಿ ಮರು ಜೋಡಿಸಲು ಸಾಧ್ಯವಿದೆ ಹೀಗೆ ಮಾಡಿದಾಗ ಜೀವಕೋಶಗಳು ಸಾಯುವುದಿಲ್ಲ ಎಂದರು.


ಆಸ್ಪತ್ರೆಯ ಅರಿವಳಿಕೆ ತಜ್ಞ ವೈದ್ಯರಾದ ಡಾ.ಅರ್ಜುನ್ ಭಾಗವತ್ ಮಾತನಾಡಿ ಶಸ್ತ್ರ ಚಕಿತ್ಸೆಗಳ ವೇಳೆ ಅರಿವಳಿಕೆ ನೀಡುವುದು ಅವಶ್ಯವಾಗಿರುತ್ತದೆ, ಈ ಬಗ್ಗೆ ರೋಗಿಗಳಾಗಲಿ ಅಥವಾ ಅವರ ಕುಟುಂಬದವರಾಗಲಿ ಭಯಪಡುವ ಅಗತ್ಯ ಇಲ್ಲ, ಇದರಿಂದ ಶೇ 99 ರಷ್ಟು ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ, ಆತ್ಮಸ್ಥೈರ್ಯದಿಂದ ಇರಬೇಕು ಶಸ್ತ್ರ ಚಿಕಿತ್ಸೆಯ ನಂತರ ರೋಗಿಗಳೊಂದಿಗೆ ವೈದ್ಯರು ಹಾಗೂ ಶುಶ್ರೂಷಕಿಯರು ನಿರಂತರ ಸಂಪರ್ಕ ಸಾಧಿಸಿ  ಕಾಳಜಿ ವಹಿಸುತ್ತಾರೆ ಎಂದರು. 


ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ವಾದಿರಾಜ ಕುಲಕರ್ಣಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮೂಳೆ ಚಿಕಿತ್ಸೆ ವಿಭಾಗದ , ಡಾ.ಸುಮನ್, ಡಾ.ನವೀನ್, ಡಾ.ಸಂತೋಷ್, ಫಲ್ಮನಾಜಿಸ್ಟ್ ಡಾ.ಅಮಿತಾಶ್, ಆಶಾ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ರೋಗಿಗಳು , ಸಾರ್ವಜನಿಕರು ಹಾಜರಿದ್ದರು. ಶ್ರೀಮತಿ ರಾಜೇಶ್ವರಿ ಪ್ರಾರ್ಥಿಸಿದರು, ಮಂಜಪ್ಪ ನಿರೂಪಿಸಿದರು.

ಸಂಪೂರ್ಣ ಕತ್ತರಿಸಿದ ಕೈಯನ್ನು ಯಶಸ್ವಿಯಾಗಿ ಮರುಜೋಡಿಸಿದ ಸರ್ಜಿ ಆಸ್ಪತ್ರೆ ವೈದ್ಯರು



ಸುದ್ದಿಲೈವ್/ಶಿವಮೊಗ್ಗ 


ಎರಡು ತುಂಡಾಗಿದ್ದ ಕೈಗೆ ಶಸ್ತ್ರ ಚಿಕಿತ್ಸೆ ನಡೆಸಿ, ಮರು ಜೋಡಿಸುವ ಮೂಲಕ ಅಪರೂಪದ ಸಾಧನೆ ಮಾಡುವಲ್ಲಿ ಇಲ್ಲಿನ ಸರ್ಜಿ ಸೂಪರ್ ಸ್ಪೆಷಾಲಿಟಿ ತಜ್ಞ ವೈದ್ಯರ ತಂಡ ಯಶಸ್ಸು ಸಾಧಿಸಿ ರೋಗಿಗೆ ಮರು ಜೀವನವನ್ನು ಕಲ್ಪಿಸಿದೆ.


ಜಿಲ್ಲೆಯ ಸಾಮಿಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಕಾರ್ಮಿಕರೊಬ್ಬರ ಕೈ ಆಕಸ್ಮಿಕವಾಗಿ ಮರ ಕೊಯ್ಯುವ ಯಂತ್ರಕ್ಕೆ ಸಿಲುಕಿ ಎರಡು ತುಂಡಾಗಿತ್ತು. ಸಂಪೂರ್ಣ ಕತ್ತರಿಸಿದ ಮುಂಗೈಯನ್ನು ಐಸ್ ಬಾಕ್ಸ್ ನಲ್ಲಿ ಇಟ್ಟುಕೊಂಡು ರೋಗಿಯು ಆಸ್ಪತ್ರೆಯ ಅಪಘಾಥ ವಿಭಾಗಕ್ಕೆ ದಾಖಲಾಗಿದ್ದರು. 



ಆಸ್ಪತ್ರೆಯಲ್ಲಿ ಸತತವಾಗಿ 7 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದು, ಮುಂಗೈನ ಮಾಂಸಖಂಡ , ಮೂಳೆ ಹಾಗೂ ನರಗಳನ್ನು ಯಶಸ್ವಿಯಾಗಿ ಮರು ಜೋಡಿಸಿ ರೋಗಿಗೆ ಹೊಸ ಬದುಕು ಕೊಟ್ಟಿದ್ದಾರೆ. ರೋಗಿಗೆ ಉತ್ತಮ ಆರೈಕೆ ಮಾಡಿ ಒಂದು ವಾರದ ಬಳಿಕ ಡಿಸ್ಚಾರ್ಜ್ ಮಾಡಲಾಗಿತ್ತು, ಆನಂತರ  ಕಾಲ ಕಾಲಕ್ಕೆ ತಪಾಸಣೆ ನಡೆಸಿ, ಇದೀಗ  ಕೈ ಚಲನವಲನ ಚೆನ್ನಾಗಿದ್ದು, ರೋಗಿಯು ಚೇತರಿಸಿಕೊಂಡಿದ್ದಾರೆ. 


ಸರ್ಜಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ.ಚೇತನ್ ಹಾಗೂ ಮೂಳೆ ರೋಗ ತಜ್ಞರಾದ ಡಾ.ಮಂಜುನಾಥ್ , ವೈದ್ಯಕೀಯ ಅಧೀಕ್ಷಕ ಹಾಗೂ ಅರಿವಳಿಕೆ ತಜ್ಞರಾದ ಡಾ.ವಾದಿರಾಜ ಕುಲಕರ್ಣಿ ಮತ್ತು ಡಾ.ಮೂರ್ಕಣಪ್ಪ, ಡಾ.ಸಂತೋಷ್, ಡಾ. ಅರ್ಜುನ್  ಅವರ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.


ತುಂಡಾದ ಕೈ ಮರು ಜೋಡಣೆ , ಹೇಗೆ ಸಾಧ್ಯ :


ಅಪಘಾತ ಅಥವಾ ದುರಂತದಲ್ಲಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ಕತ್ತರಿಸಿದಾಗ ಅಯ್ಯೋ ಜೀವನ ಮುಗಿದೇ ಹೋಯ್ತು ಎಂದು ಚಿಂತಾಕ್ರಾಂತರಾಗುವುದಕ್ಕಿಂತ ಆ ಕ್ದಣ ಸ್ವಲ್ಪ ಯೋಚಿಸಿ ಮುಂಜಾಗ್ರತಾ ಕ್ರಮಗಳನ್ನು ಕ್ರಮ ಕೈಗೊಂಡರೆ ಮತ್ತೆ ಹೊಸ ಬದಕನ್ನು ಕಂಡುಕೊಳ್ಳಬಹುದು.  


ಅವಘಡ ಸಂಭವಿಸಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ತುಂಡಾಗಿದ್ದರೆ ಭಯಪಡದೇ ಆತ್ಮಸ್ಥೈರ್ಯದೊಂದಿಗೆ ತುಂಡಾದ ಭಾಗವನ್ನು ಪ್ಲಾಸ್ಟಿಕ್ ಕವರ್ ನೊಂದಿಗೆ  ಐಸ್ ಬಾಕ್ಸ್ ನಲ್ಲಿಟ್ಟು 6 ಗಂಟೆಯೊಳಗೆ ಆಸ್ಪತ್ರೆಗೆ ತಂದರೆ ಶಸ್ತ್ರ ಚಿಕಿತ್ಸೆ ಮಾಡಿ ಮರು ಜೋಡಿಸಲು ಸಾದ್ಯವಿದೆ, ಆದರೆ ಇದು ಬಹಳಷ್ಟು ಜನರಿಗೆ ಸಾಧ್ಯವಾಗುವುದಿಲ್ಲ. ಘಟನೆ ನಡೆದಾಗ ಭಯ ಭೀತರಾಗಿ ಕಟ್ ಆದ ಭಾಗವನ್ನು ತರದೇ ಮರೆತು ಆಸ್ಪತ್ರೆಗೆ ಬರುವ ಸಾಧ್ಯತೆಗಳೇ ಹೆಚ್ಚು. ಇಲ್ಲವೆ ಬಹಳ ತಡವಾಗಿ ಬಂದರೆ ತುಂಡಾದ ಭಾಗದ ಮಾಂಸ ಖಂಡಗಳು ಕೊಳೆತಂತಾಗುತ್ತವೆ, ಜೀವಕೋಶಗಳು ಸಾಯುತ್ತವೆ, 


ಹಾಗಾಗಿ ಚಿಕಿತ್ಸೆ ಮಾಡಿದರೂ ಯಶಸ್ವಿ ಆಗುವುದಿಲ್ಲ. ಆದರೆ ಈ ಘಟನೆಯಲ್ಲಿ ರೋಗಿಯು ಎಚ್ಚೆತ್ತುಕೊಂಡು ಸಕಾಲಕ್ಕೆ ತುಂಡಾದ ಕೈಯೊಂದಿಗೆ ಬಂದಿದ್ದರಿಂದ 7 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಮರು ಜೋಡಿಸಲು ಸಾಧ್ಯವಾಗಿದೆ. ತುಂಡಾದ ಭಾಗಗಳನ್ನು ಯಾವುದೇ ಕಾರಣಕ್ಕೂ ನೇರವಾಗಿ ನೀರಿನಲ್ಲಿ ಅಥವಾ ಐಸ್ ಬಾಕ್ಸ್ ನೊಳಗೆ ಇಟ್ಟುಕೊಂಡು ಬರಬಾರದು. 


ಬದಲಾಗಿ ಪ್ಲಾಸ್ಟಿಕ್ ಕವರ್ ನಲ್ಲಿಟ್ಟು ಐಸ್ ಬಾಕ್ಸ್ ನಲ್ಲಿಟ್ಟು ತರಬೇಕು, ಹೀಗೆ ಮಾಡಿದಾಗ ಜೀವಕೋಶಗಳು ಸಾಯುವುದಿಲ್ಲ, ಅಂಗಾಂಗಳ ಮರು ಜೋಡಣೆ ಮಾಡುವ ಸೌಕರ್ಯ ಹಾಗೂ ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಘಟಕವನ್ನು ಸರ್ಜಿ ಆಸ್ಪತ್ರೆಯು ಹೊಂದಿದೆ.

ಗುರುವಾರ, ಆಗಸ್ಟ್ 22, 2024

ಯಾಕೆ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕೊಳಗಾಗುತ್ತಿಲ್ಲ?



ಸುದ್ದಿಲೈವ್/ಶಿವಮೊಗ್ಗ


ನಗರದಲ್ಲಿನ ಬೀದಿ ನಾಯಿಗಳಿಗೆ ಸಂತಾನಹರಣ ಆಪರೇಷನ್ ಆರಂಭವಾಗಿದೆ. ಕಳೆದ ಒಂದು ತಿಂಗಳಿಂದ 35 ವಾರ್ಡ್ ಗಳಲ್ಲಿ ಬೀದಿ ನಾಯಿಗಳನ್ನ ಹಿಡಿದು ಸಂತಾನ ಹರಣ ಮಾಡಲಾಗುತ್ತಿದೆ. ಇದು ಇನ್ನೂ 15 ದಿನ ಮುಂದು ವರೆಯಲಿದೆ. 


ಬೀದಿನಾಯಿಗಳ ಹಾವಳಿ ಹೆಚ್ಚಾದ ಬೆನ್ನಲ್ಲೇ ಪಾಲಿಕೆಯು ಆಪರೇಷನ್ ಆರಂಭಿಸಿದೆ. ನಾಯಿಗಳನ್ನ ಸಾಯಿಸಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಅವಕಾಶವಿದೆ. ಇದೊಂದೇ ಮಾರ್ಗವನ್ನ ಪಾಲಿಕೆ ಅನುಸರಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಸಂತಾನ ಹರಣ ಚಿಕಿತ್ಸೆಗೆ ಪಾಲಿಕೆ ಮುಂದಾಗಿವೆ. 


ಸಂತಾನ ಹರಣಕ್ಕೆ ನಾಯಿಯ ಸಂಖ್ಯೆ ಎಷ್ಟಿದೆ ಎಂಬುದನ್ನ ಲೆಕ್ಕಾಚಾರ ಹಾಕಿ ಕಾರ್ಯಾಚರಣೆ ನಡೆಸಲಾಗುತ್ತದೆ.ನಗರದ ಜನಸಂಖ್ಯೆಗೂ ಬೀದಿ ನಾಯಿಗಳ ಸಂಖ್ಯೆಗೂ  ಅನುಗುಣವಾಗಿ ಲೆಕ್ಕಾಚಾರ ಹಾಕಲಾಗುತ್ತದೆ. ಇಡೀ ದೇಶದ ಸಂಖ್ಯೆಯು 2011 ರಲ್ಲಿ ಜನಸಂಖ್ಯೆ ಲೆಕ್ಕಾಚಾರ ಮಾಡಲಾಗಿದೆ. ನಿಯಮದ ಪ್ರಕಾರ ಪ್ರತಿ 10 ವರ್ಷಕ್ಕೆ ಜನಸಂಖ್ಯೆ ಲೆಕ್ಕಾಚಾರ ಹಾಕಬೇಕು. ಆದರೆ 2011 ರಲ್ಲಿ ಜನ ಸಂಖ್ಯೆ ಎಣಿಸಲಾಗಿದ್ದು ಇದುವರೆಗೂ ಲೆಕ್ಕಾಚಾರ ಹಾಕಿಲ್ಲ. 


ಜನಸಂಖ್ಯೆಗೆ ಅನುಗುಣವಾಗಿ ಶೇ.2 ರಷ್ಟು ನಾಯಿಗಳ ಸಂಖ್ಯೆ ಇರಲಿದೆ ಎಂಬ ಲೆಕ್ಕ ಹಾಕಲಾಗುತ್ತದೆ. 2011 ರಲ್ಲಿ ಶಿವಮೊಗ್ಗ ನಗರದ ಜನ ಸಂಖ್ಯೆಯ ಲೆಕ್ಕಾಚಾರದ ಪ್ರಕಾರ 4-6 ಸಾವಿರ ನಾಯಿಗಳಿವೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಈಗ 13 ವರ್ಷ ಕಳೆದಿದ್ದು ಜನಸಂಖ್ಯೆಯ ಲೆಕ್ಕಾಚಾರವೇ ಇಲ್ಲವಾದುದ್ದರಿಂದ ನಾಯಿಗಳ ಸಂಖ್ಯೆಯೂ ಅಂದಾಜಿಸಲಾಗಿದೆ. ಅದರ  ಪ್ರಕಾರ ಈಗ 10 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು ಇರಬಹುದು ಎಂಬ ಅಂದಾಜಿನ ಲೆಕ್ಕಾಚಾರ ಹಾಕಲಾಗಿದೆ. 


ಇದರಿಂದ ಬೀದಿ ನಾಯಿಗಳ ಪಕ್ಕಾ ಲೆಕ್ಕಾಚಾರ ಸಿಕ್ತಾ ಇಲ್ಲ. ಅಲ್ಲದೆ ಈ ನಾಯಿಗಳ ಸಂತಾನ ಹರಣದಲ್ಲಿ ಈಗಿನ ಅಂದಾಜು ಪ್ರಕಾರ 1 ಪರ್ಸೆಂಟ್ ನಾಯಿಗಳ ಸಂತಾನ ಹರಣವಾಗಿದೆ. ಈ ಬೀದಿ ನಾಯಿಗಳ ಸಂತಾನ ಹರಣ ಕಾರ್ಯಾಚರಣೆ ವರ್ಷಕ್ಕೊಮ್ಮೆ ನಡೆಯುತ್ತದೆ. ಈ ವರ್ಷಕ್ಕೊಮ್ಮೆ ನಡೆಯುವಷ್ಟರಲ್ಲಿ ಉಳಿದ ಸಂತಾನ ಹರಣಕ್ಕೆ ಒಳಗಾಗದ 99% ನಾಯಿಗಳು ಮತ್ತೆ ಮರಿ ಹಾಕುವುದರಿಂದ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 


ಈ ಕಾರಣದಿಂದ ಪಾಲಿಕೆಗಳು ತಮ್ಮ ನಿಯಮಗಳನ್ನ ಬದಲಾಯಿಸಿಕೊಳ್ಳದಿದ್ದರೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲಿದೆ. ಅದೂ ಅಲ್ಲದೆ ನಗರದ ಸುತ್ತಮುತ್ತಲಿನ ಗ್ರಾಮಪಂಚಾಯಿತಿಗೆ ಬೀದಿ ನಾಯಿಗಳಿಗೆ ಸಂತಾನ ಹರಣ ನಡೆಸಲು  ಪಾಲಿಕೆಗೆ ಸಿಕ್ಕಂತೆ ಅನುದಾನ ಸಿಗಲ್ಲ. ಹೀಗಾಗಿ ಈ ಗ್ರಾಪಂಗಳು ನಾಯಿಗಳನ್ನ ಹಿಡಿದು ಪಾಲಿಕೆಯ ಗಡಿಗಳಿಗೆ ಬಿಟ್ಟು ಹೋಗುವುದರಿಂದ ನಗರದಲ್ಲಿನ ನಾಯಿಗಳ ಸಂಖ್ಯೆ ಮತ್ತೆ ದುಪ್ಪಟ್ಟಾಗುತ್ತಿವೆ.


ಇದರಿಂದ ಪ್ರತಿ ಮೂರು ತಿಂಗಳಿಗೆ ಬೀದಿ ನಾಯಿಗಳ ಸಂತಾನ ಹರಣ ಕಾರ್ಯಕ್ರಮ ಹಮ್ಮಿಕೊಳ್ಳದಿದ್ದರೆ ಬೀದಿ ನಾಯಿಗಳ ಹಾವಳಿ ಉಲ್ಬಣವಾಗುವುದರಲ್ಲಿ ಎರಡು ಮಾತಿಲ್ಲ.